March 2022

ಮಂಗಳೂರು: ಕ್ರಿಕೆಟ್ ಕಾಮೆಂಟರಿ ನಿರ್ವಹಿಸಿ ಹಿಂದುರಿಗಿದ ಬಾಲಕನ ಶವ ನದಿಯಲ್ಲಿ ಪತ್ತೆ

ಸಮಗ್ರ‌ ನ್ಯೂಸ್: ಭಾನುವಾರದಂದು ನಾಪತ್ತೆಯಾಗಿದ್ದ ಬಾಲಕನ ಶವ ಫೆ.28 ರ ಸೋಮವಾರ ಇಲ್ಲಿನ ಹೊಯಿಗೆ ಬಜಾರ್ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಖಾಸಗಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ದೃಶ್ಯಾಂತ್ (16) ಮೃತಪಟ್ಟವನು. ಇಲ್ಲಿನ ಮಹಾಕಾಳಿ ಪಡ್ಪು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ದೃಶ್ಯಾಂತ್ ಹೋಗಿ ಭಾನುವಾರ ಮಧ್ಯಾಹ್ನ 3.30ರವರೆಗೆ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ನಿರ್ವಹಿಸುತ್ತಿದ್ದ. ಪಂದ್ಯ ಮುಗಿಯುತ್ತಿದ್ದಂತೆ ಆತನ ಸ್ನೇಹಿತರು ಪಂದ್ಯ ಮುಗಿಸಿ ತೆರಳಿದ್ದರು. ಆದರೆ ದೃಶ್ಯಾಂತ್ ಮಾತ್ರ ಮನೆ ತಲುಪಿಲ್ಲರಲಿಲ್ಲ. ಆತನ ಸ್ನೇಹಿತರು, ಸಂಬಂಧಿಕರು […]

ಮಂಗಳೂರು: ಕ್ರಿಕೆಟ್ ಕಾಮೆಂಟರಿ ನಿರ್ವಹಿಸಿ ಹಿಂದುರಿಗಿದ ಬಾಲಕನ ಶವ ನದಿಯಲ್ಲಿ ಪತ್ತೆ Read More »

ಅವಳಿ ಮಕ್ಕಳಿಗೆ ಜನ್ಮನೀಡಿದ ನಟಿ‌ ಅಮೂಲ್ಯ

ಸಮಗ್ರ ನ್ಯೂಸ್: ಚಿತ್ತಾರ ಬೆಡಗಿ, ನಟಿ ಅಮೂಲ್ಯ ಇಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ . ಮಕ್ಕಳು ಹಾಗೂ ತಾಯಿ ಅಮೂಲ್ಯ ಅವರು ಆರೋಗ್ಯವಾಗಿದ್ದಾರೆ ಎಂದು ಅಮೂಲ್ಯ ಅವರ ಪತಿ ಜಗದೀಶ್ ಆರ್ ಚಂದ್ರ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅಮೂಲ್ಯ ಅವರ ಪತಿ ಜಗದೀಶ್ ಆರ್ ಚಂದ್ರ ಈ ಸಂತೋಷದ ಸುದ್ದಿಯ ಬಗ್ಗೆ ಬರೆದುಕೊಂಡಿದ್ದಾರೆ . ದಂಪತಿಗಳ ಈ ಪಯಣದಲ್ಲಿ ಜತೆ ನಿಂತ ಎಲ್ಲರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ .

ಅವಳಿ ಮಕ್ಕಳಿಗೆ ಜನ್ಮನೀಡಿದ ನಟಿ‌ ಅಮೂಲ್ಯ Read More »

ಸುಳ್ಯ: ವಾಕಿಂಗ್ ತೆರಳುತ್ತಿದ್ದಾತನಿಗೆ ವಾಹನ ಢಿಕ್ಕಿ| ಗಂಭೀರ ಗಾಯಗೊಂಡಾತ ಆಸ್ಪತ್ರೆಯಲ್ಲಿ ಸಾವು|

ಸಮಗ್ರ ನ್ಯೂಸ್: ಮುಂಜಾನೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಂಭೀರಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಸಂಪಾಜೆಯಲ್ಲಿ ನಡೆದಿದೆ.ಮೃತಪಟ್ಟವರನ್ನು ಸರೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಸಂಪಾಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್ ಹೋಗುತ್ತಿದ್ದ ಸರೋಜ್ ಕುಮಾರ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಕಲ್ಲುಗುಂಡಿಯಲ್ಲಿ ಯಕ್ಷಗಾನ ಮುಗಿಸಿ ದಾರಿಯಲ್ಲಿ ಹೋಗುತ್ತಿದ್ದ ಕೆಲವರು ರಕ್ತದ ಮಡವಿನಲ್ಲಿ ಬಿದ್ದ ಸರೋಜ ಕುಮಾರ್ ನೋಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ

ಸುಳ್ಯ: ವಾಕಿಂಗ್ ತೆರಳುತ್ತಿದ್ದಾತನಿಗೆ ವಾಹನ ಢಿಕ್ಕಿ| ಗಂಭೀರ ಗಾಯಗೊಂಡಾತ ಆಸ್ಪತ್ರೆಯಲ್ಲಿ ಸಾವು| Read More »

ರಾಷ್ಟ್ರಧ್ವಜಕ್ಕೆ ಅವಮಾನ| ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು|

ಸಮಗ್ರ ನ್ಯೂಸ್: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಆರ್.ಎಸ್.ಎಸ್. ಪ್ರಮುಖ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳಿಗೆ ಗ್ರಾಮದ ದೇವಂದಬೆಟ್ಟು ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿ ಭಾಷಣ ಮಾಡಿರುವ ಜತೆಗೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಮಾಜದ ಶಾಂತಿ ಕದಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ

ರಾಷ್ಟ್ರಧ್ವಜಕ್ಕೆ ಅವಮಾನ| ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು| Read More »

ಎಲ್ ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆ| 2 ಸಾವಿರ ಗಡಿ ದಾಟಿದ ಅನಿಲ ದರ

ಸಮಗ್ರ ನ್ಯೂಸ್: ಮಾರ್ಚ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌.ಪಿ.ಜಿ. ಸಿಲಿಂಡರ್‌ ಗಳ ಬೆಲೆಯನ್ನು 105 ರೂ. ಹೆಚ್ಚಿಸಲಾಗಿದೆ. ಇದರೊಂದಿಗೆ ಮಂಗಳವಾರದಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,012 ರೂ.ಆಗಲಿದೆ. 5 ಕೆಜಿ ಸಿಲಿಂಡರ್ ಬೆಲೆಯೂ 27 ರೂ.ನಷ್ಟು ಏರಿಕೆಯಾಗಿದೆ. ಈಗ ದೆಹಲಿಯಲ್ಲಿ 5 ಕೆಜಿ ಸಿಲಿಂಡರ್ ಬೆಲೆ 569 ರೂ. ಆಗಲಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಯಾವುದೇ ಹೆಚ್ಚಳವಿಲ್ಲ. ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ

ಎಲ್ ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆ| 2 ಸಾವಿರ ಗಡಿ ದಾಟಿದ ಅನಿಲ ದರ Read More »

ನವದೆಹಲಿ: ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಹಾರಾಟ ನಿರ್ಬಂಧ ವಿಸ್ತರಣೆ

ಸಮಗ್ರ ನ್ಯೂಸ್: ಕೋವಿಡ್‌ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ಆದರೆ, ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ವಿಶೇಷ ಪ್ರಯಾಣಿಕ ವಿಮಾನಗಳು 2020ರ ಜುಲೈ ತಿಂಗಳಿನಿಂದ ಸುಮಾರು 45 ದೇಶಗಳಿಗೆ ಭಾರತದಿಂದ ಸಂಚಾರ ನಡೆಸುತ್ತಿವೆ. ಏರ್‌ ಬಬಲ್‌ ವ್ಯವಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಮಾನಗಳಿಗೆ ಮತ್ತು ಡಿಜಿಸಿಎ ಅನುಮತಿ ಪಡೆದ ಸರಕು ಸಾಗಣೆಯ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಈ ನಿರ್ಬಂಧ

ನವದೆಹಲಿ: ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಹಾರಾಟ ನಿರ್ಬಂಧ ವಿಸ್ತರಣೆ Read More »