March 2022

ಉಡುಪಿ: ಪವರ್ ಮ್ಯಾನ್ ಗಳಿಗೆ ಜೀವವಿಮೆ‌ ಮೌಲ್ಯ ಹೆಚ್ಚಳ – ಸಚಿವ ಸುನಿಲ್ ಕುಮಾರ್

ಸಮಗ್ರ ನ್ಯೂಸ್: ರಾಜ್ಯದ ಪವರ್ ಮನ್ ಗಳ ಜೀವವಿಮೆ ಪರಿಹಾರ ಮೊತ್ತವನ್ನು 25 ಲಕ್ಷ ರೂ.ನಿಂದ 50 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಪವರ್ ಮ್ಯಾನ್ ಗಳು ವಿದ್ಯುತ್ ಅಪಘಾತದಲ್ಲಿ ಮೃತಪಟ್ಟರೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಈ ಜೀವ ಪರಿಹಾರ ಮೊತ್ತವನ್ನು 50 ಲಕ್ಷ ರೂ.ಗೆ ಹೆಚ್ಚಿಸಲಾಗುವುದು. ಗುಜರಾತ್ ಮಾದರಿಯಲ್ಲಿ ರಾಜ್ಯದ ಎಲ್ಲ ವಿದ್ಯುತ್ ಕಂಪನಿಗಳನ್ನು ಒಳಗೊಂಡ ಹೋಲ್ಡಿಂಗ್ ಕಂಪನಿ ನಿರ್ಮಾಣ ಪ್ರಸ್ತಾವನೆ ಇದೆ. ಇಲಾಖೆಯ […]

ಉಡುಪಿ: ಪವರ್ ಮ್ಯಾನ್ ಗಳಿಗೆ ಜೀವವಿಮೆ‌ ಮೌಲ್ಯ ಹೆಚ್ಚಳ – ಸಚಿವ ಸುನಿಲ್ ಕುಮಾರ್ Read More »

ರಷ್ಯಾ- ಉಕ್ರೇನ್ ಮಹಾಯುದ್ಧ| 13 ಮಕ್ಕಳು ಸೇರಿದಂತೆ 136 ಮಂದಿಯ ಪ್ರಾಣ ಹರಣ|

ಸಮಗ್ರ ನ್ಯೂಸ್ : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಏಳನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ದಾಳಿಗೆ ಉಕ್ರೇನ್ ಕೂಡ ನಿರಂತರವಾಗಿ ತಕ್ಕ ಉತ್ತರ ನೀಡುತ್ತಿದೆ. ರಷ್ಯಾ ದಾಳಿಯಲ್ಲಿ 13 ಮಕ್ಕಳು ಸೇರಿದಂತೆ ಕನಿಷ್ಠ 136 ಜನರು ಸತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿಕೊಂಡಿದೆ, ಫೆಬ್ರವರಿ 24 ರ ಗುರುವಾರ ದಿಂದ ಮಾರ್ಚ್ 1 ರವರೆಗೆ ದಾಳಿಗೆ ಉಕ್ರೇನ್ ನಲ್ಲಿ 13 ಮಕ್ಕಳು ಸೇರಿದಂತೆ ಕನಿಷ್ಠ 136 ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ ಈ ಹಿಂದೆ,

ರಷ್ಯಾ- ಉಕ್ರೇನ್ ಮಹಾಯುದ್ಧ| 13 ಮಕ್ಕಳು ಸೇರಿದಂತೆ 136 ಮಂದಿಯ ಪ್ರಾಣ ಹರಣ| Read More »

ಸುಳ್ಯ: ಆ್ಯಸಿಡ್ ಸೇವಿಸಿ‌ ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ರಬ್ಬರ್ ಗೆ ಬಳಸುವ ಆ್ಯಸಿಡ್ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೆಂಜಾಳ‌ ಎಂಬಲ್ಲಿಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ರಬ್ಬರ್ ಗೆ ಬಳಸುವ ಆ್ಯಸಿಡ್ ಕುಡಿದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ

ಸುಳ್ಯ: ಆ್ಯಸಿಡ್ ಸೇವಿಸಿ‌ ಯುವಕ ಆತ್ಮಹತ್ಯೆ Read More »

ಧರ್ಮಸ್ಥಳ: ಪಾದಯಾತ್ರಿ ನೇತ್ರಾವತಿಯಲ್ಲಿ ಮುಳುಗಿ ಸಾವು

ಸಮಗ್ರ ನ್ಯೂಸ್: ಚಿಕ್ಕಮಗಳೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಬಂದ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಧರ್ಮಸ್ಥಳದ ನೇತ್ರಾವತಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಗೌದನಹಳ್ಳಿ ನಿವಾಸಿ ಚಂದ್ರಶೇಖರ್(40) ಮೃತ ದುರ್ದೈವಿ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಚಂದ್ರಶೇಖರ್, ಸ್ನೇಹಿತನಾದ ವೆಂಕಟೇಶ್ ಜೊತೆ ಧರ್ಮಸ್ಥಳಕ್ಕೆ ಚಾರ್ಮಾಡಿ ಘಾಟ್ ಮೂಲಕ ಪಾದಯಾತ್ರೆ ಮಾಡಿಕೊಂಡು ಇಂದು ಧರ್ಮಸ್ಥಳ ನೇತ್ರಾವತಿಗೆ ಬಂದಿದ್ದಾರೆ.ಈ ವೇಳೆ ಸ್ನಾನ ಮಾಡಲು ನದಿಗೆ ಇಳಿದಿದ್ದು ಈಜಲು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಧರ್ಮಸ್ಥಳ

ಧರ್ಮಸ್ಥಳ: ಪಾದಯಾತ್ರಿ ನೇತ್ರಾವತಿಯಲ್ಲಿ ಮುಳುಗಿ ಸಾವು Read More »

ಪ್ರೀತಿಯ ಬಲೆಯಲ್ಲಿ ಬಿದ್ದ ಸಂಬಂಧಿಗಳು| ಚಿಕ್ಕಮ್ಮನನ್ನೇ ಮದುವೆಯಾದ ಯುವಕ!!

ಸಮಗ್ರ ಡಿಜಿಟಲ್ ಡೆಸ್ಕ್: ಪ್ರೀತಿಗೆ ಯಾವುದೇ ಕಂಡೀಷನ್ಸ್ ಇಲ್ಲ. ಸುಮ್ಮನೆ ಹಾಗೆಯೇ ಪ್ರೀತಿ ಆಗಿಬಿಡುತ್ತದೆ. ಮತ್ತೆ ಕಾಣಿಸುವ ಸರಿ ತಪ್ಪುಗಳೆಲ್ಲವೂ ನಂತರ ನಗಣ್ಯ. ಇತ್ತೀಚೆಗ ಝಾರ್ಕಂಡ್​ನಲ್ಲಿ ಇಂಥದ್ದೇ ಪ್ರೇಮ ಪ್ರಸಂಗ ನಡೆದಿದೆ. ಇವರ ಪ್ರೇಮವೋ, ಸಂಬಂಧವೋ ಎರಡವೂ ವಿಚಿತ್ರವಾಗಿದೆ. ಅಮ್ಮನ ಸ್ಥಾನದಲ್ಲಿರುವ ಚಿಕ್ಕಮ್ಮನನ್ನೇ ಈತ ಮದುವೆಯಾಗಿದ್ದಾನೆ. ಅದೆಂಥಾ ಪ್ರೀತಿಯೋ ಇವರಿಗೆ ತಮ್ಮ ನಡುವಿನ ಸಂಬಂಧ ಕೂಡಾ ಪ್ರೀತಿಗಿಂತ ದೊಡ್ಡದಲ್ಲ ಎಂದು ಸಾಬೀತು ಮಾಡಿದ್ದಾರೆ ಈ ಜೋಡಿ. ಈ ಯುವಕನಿಗೆ ಅಪ್ಪನೇ ಅಣ್ಣನೂ ಆಗಿಬಿಟ್ಟಿದ್ದಾನೆ. ತಾಯಿಯ ತಂಗಿಯನ್ನು ಈ

ಪ್ರೀತಿಯ ಬಲೆಯಲ್ಲಿ ಬಿದ್ದ ಸಂಬಂಧಿಗಳು| ಚಿಕ್ಕಮ್ಮನನ್ನೇ ಮದುವೆಯಾದ ಯುವಕ!! Read More »

ಅಡುಗೆ ಎಣ್ಣೆಗೂ ಕಾಡಿದ ಯುದ್ಧ ಭೀತಿ| ಸ್ಥಗಿತಗೊಂಡ ಆಮದು; ಏರಿದ ಬೆಲೆ

ಸಮಗ್ರ ನ್ಯೂಸ್: ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಪ್ರತಿಯಾಗಿ ದಿಂಡುಗಲ್‌ನಲ್ಲಿ ಅಡುಗೆ ಎಣ್ಣೆಯ ಬೆಲೆ ತೀವ್ರವಾಗಿ ಏರಿದೆ. ಹೀಗಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಅಪಾಯವಿದೆ. ಭಾರತಕ್ಕೆ ಸುಮಾರು 70 ಪ್ರತಿಶತ ಅಡುಗೆ ಸೂರ್ಯಕಾಂತಿ ಎಣ್ಣೆ ಉಕ್ರೇನ್‌ನಿಂದ ಮತ್ತು 20 ಪ್ರತಿಶತ ರಷ್ಯಾದಿಂದ ಆಮದಾಗುತ್ತಿದ್ದು, ಇವು ಈಗ ಸ್ಥಗಿತಗೊಂಡಿವೆ. ಇದರಿಂದ ಅಡುಗೆಗೆ ಬಳಸಬಹುದಾದ ರಿಫೈನ್ಡ್ ಎಣ್ಣೆ, ತಾಳೆ ಎಣ್ಣೆ, ಸೀಮೆಎಣ್ಣೆ ಬೆಲೆ ಗಗನಕ್ಕೇರಿದೆ. 15 ಕೆಜಿ ತೂಕದ ಸೂರ್ಯಕಾಂತಿ ಎಣ್ಣೆಯ ಟಿನ್ ಉಕ್ರೇನ್‌ನಲ್ಲಿ ಯುದ್ಧದ ಮೊದಲು 2,150 ಕ್ಕೆ

ಅಡುಗೆ ಎಣ್ಣೆಗೂ ಕಾಡಿದ ಯುದ್ಧ ಭೀತಿ| ಸ್ಥಗಿತಗೊಂಡ ಆಮದು; ಏರಿದ ಬೆಲೆ Read More »

ಶಿವ ಶಿವ ಎಂದರೆ ಭಯವಿಲ್ಲ| ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೇರಪ್ರಸಾರ|

ಸಮಗ್ರ ನ್ಯೂಸ್: ನಾಡಿನೆಲ್ಲೆಡೆ ಮಹಾ ಶಿವರಾತ್ರಿ ‌ವೈಭವ ಮನೆಮಾಡಿದೆ. ಎಲ್ಲೆಲ್ಲೂ ಶಿವ ನಾಮ ಸ್ಮರಣೆ, ಜಾಗರಣೆಗಳು ಆರಂಭವಾಗಿದೆ. ಪ್ರಸಿದ್ಧ ಯಾತ್ರಾಸ್ಥಳ, ಧರ್ಮದ ನೆಲೆವೀಡು ಮಂಜುನಾಥ ಸನ್ನಿಧಿ ಧರ್ಮಸ್ಥಳದಲ್ಲಿ ಶಿವರಾತ್ರಿ ‌ಜಾಗರಣೆ ಹಾಗೂ ಉತ್ಸವಾದಿ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಿವೆ. ಶ್ರೀ ಕ್ಷೇತ್ರದಿಂದ ನೇರಪ್ರಸಾರವನ್ನು ಇಲ್ಲಿ‌ ವೀಕ್ಷಿಸಿ…

ಶಿವ ಶಿವ ಎಂದರೆ ಭಯವಿಲ್ಲ| ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೇರಪ್ರಸಾರ| Read More »

ಉಕ್ರೇನ್ ಬಿಕ್ಕಟ್ಟಿನಲ್ಲಿ ಕನ್ನಡಿಗ ವಿದ್ಯಾರ್ಥಿ ಸಾವು| ಕಂಬನಿ ಮಿಡಿದ‌ ಪ್ರಧಾನಿ ಮೋದಿ|

ಸಮಗ್ರ ನ್ಯೂಸ್: ಯೂಕ್ರೇನ್​ನಲ್ಲಿ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಸಾವಿಗೀಡಾದ ಕರ್ನಾಟಕದ ವಿದ್ಯಾರ್ಥಿ, ಹಾವೇರಿ ಜಿಲ್ಲೆಯ ನವೀನ್ ಗ್ಯಾನಗೌಡರ ಅವರ ಸಾವನ್ನಪ್ಪಿದ್ದು, ವಿದ್ಯಾರ್ಥಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಯೂಕ್ರೇನ್​ನಲ್ಲಿ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಯುವಕ ಬಲಿಯಾದ ಎಂಬುದು ತಿಳಿದು ಬರುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೃತನ ತಂದೆಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರ

ಉಕ್ರೇನ್ ಬಿಕ್ಕಟ್ಟಿನಲ್ಲಿ ಕನ್ನಡಿಗ ವಿದ್ಯಾರ್ಥಿ ಸಾವು| ಕಂಬನಿ ಮಿಡಿದ‌ ಪ್ರಧಾನಿ ಮೋದಿ| Read More »

ಮಂಗಳೂರು: ಹಳೆಯಂಗಡಿ ತೋಕೂರು ಪ್ರದೇಶದಲ್ಲಿ ವಾಮಾಚಾರ ಶಂಕೆ|ಮುಖ್ಯರಸ್ತೆಯಲ್ಲೇ ರಾತ್ರಿ ಕೋಳಿ ಬಲಿ, ಲಿಂಬೆಹುಳಿ, ಕುಂಬಳಕಾಯಿ ಪ್ರಯೋಗ|

ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ, ಇಂದಿರಾನಗರ, ತೋಕೂರು ಪ್ರದೇಶದಲ್ಲಿ ಸಂಜೆಯಾದರೆ ಸಾಕು ವಾಮಾಚಾರಿಗಳು ಸಕ್ರಿಯವಾಗುತ್ತಿದ್ದು ಇವರ ಹಾವಳಿಯಿಂದ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಗಿದೆ. ಈ ಬಗ್ಗೆ ಪೊಲೀಸರಿಗೆ ಮೌಖಿಕ ದೂರು ನೀಡಲಾಗಿದ್ದು ರಾತ್ರಿ ವೇಳೆ ಗಸ್ತು ಬಿಗಿಗೊಳಿಸುವಂತೆ ಆಗ್ರಹ ವ್ಯಕ್ತವಾಗಿದೆ. ತೋಕೂರು ಬಸ್ ನಿಲ್ದಾಣ ಪರಿಸರ, ಕೆರೆಕಾಡು ಬೆಳ್ಳಾಯರು ಮುಖ್ಯರಸ್ತೆಯಲ್ಲಿ ರಾತ್ರಿ ವೇಳೆ ಕೋಳಿ ಬಲಿ ನೀಡುವುದು, ಲಿಂಬೆಹುಳಿ, ಕುಂಬಳಕಾಯಿ ಕಡಿಯುವುದು ಇತ್ಯಾದಿ ವಾಮಾಚಾರ ಪ್ರಯೋಗ ನಡೆಸುತ್ತಿದ್ದು ಸ್ಥಳೀಯರು ಬೆಳಗ್ಗೆ ನಡೆದಾಡಲು ಭಯಪಡುವ ಸ್ಥಿತಿ ಎದುರಾಗಿದೆ.

ಮಂಗಳೂರು: ಹಳೆಯಂಗಡಿ ತೋಕೂರು ಪ್ರದೇಶದಲ್ಲಿ ವಾಮಾಚಾರ ಶಂಕೆ|ಮುಖ್ಯರಸ್ತೆಯಲ್ಲೇ ರಾತ್ರಿ ಕೋಳಿ ಬಲಿ, ಲಿಂಬೆಹುಳಿ, ಕುಂಬಳಕಾಯಿ ಪ್ರಯೋಗ| Read More »

ಉಪ್ಪಿನಂಗಡಿ: ಕೆಂಪು ಕಲ್ಲಿನ ಅಟ್ಟಿ ಮಗುಚಿಬಿದ್ದು 3 ವರುಷದ ಮಗು ಸಾವು

ಸಮಗ್ರ ನ್ಯೂಸ್: ಮನೆಯಂಗಳದಲ್ಲಿ ಇರಿಸಿದ್ದ ಕೆಂಪು ಕಲ್ಲಿನ ಅಟ್ಟಿ ಮಗುಚಿ ಬಿದ್ದು ಮೂರೂವರೆ ವರ್ಷ ಪ್ರಾಯದ ಗಂಡು ಮಗುವೊಂದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಬಾಯ್ತಾರು ಎಂಬಲ್ಲಿ ಫೆ.28ರಂದು ಸಂಜೆ ನಡೆದಿದೆ. ಅಶ್ರಫ್ ಮತ್ತು ಸಮೀಮಾ ದಂಪತಿಯ ಮಗ ಮೊಹಮ್ಮದ್ ನೌಶೀರ್ ಮೃತ ಮಗು. ಕಟ್ಟಡ ನಿರ್ಮಾಣಕ್ಕೆ೦ದು ಮನೆಯಂಗಳದಲ್ಲಿ ತಂದಿರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿಯ ಬಳಿ ಮಗು ನೌಶೀರ್ ಆಟವಾಡುತ್ತಿದ್ದ ವೇಳೆ ಕಲ್ಲಿನ ಅಟ್ಟಿಯು ಮಗುಚಿ ಆತನ ಮೇಲೆಯೇ ಬಿದ್ದಿತ್ತು ಎಂದು

ಉಪ್ಪಿನಂಗಡಿ: ಕೆಂಪು ಕಲ್ಲಿನ ಅಟ್ಟಿ ಮಗುಚಿಬಿದ್ದು 3 ವರುಷದ ಮಗು ಸಾವು Read More »