March 2022

ಬೆಳ್ತಂಗಡಿ: ಉಕ್ರೇನ್ – ರಷ್ಯಾ ಬಿಕ್ಕಟ್ಟು| ಅಪಾಯದ ಸ್ಥಿತಿಯಲ್ಲಿ ಉಜಿರೆಯ ವೈದ್ಯ ವಿದ್ಯಾರ್ಥಿನಿ

ಸಮಗ್ರ ನ್ಯೂಸ್: ಉಕ್ರೇನ್‌ನ ಕಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರೂ ಬಂಕರ್ ನಲ್ಲಿ ಅಡಗಿಕೊಂಡಿದ್ದು ಅಪಾಯದ ಸ್ಥಿತಿಯಲ್ಲಿದ್ದಾರೆ. ಉಜಿರೆಯ ಟಿ.ಬಿ ಕ್ರಾಸ್ ನಿವಾಸಿ ದಿ. ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ಅವರೇ ಯುದ್ಧಗ್ರಸ್ಥ ಉಕ್ರೇನ್ ನಾಡಿನಲ್ಲಿ ಪ್ರಾಣಾಪಾಯ ಎದುರಿಸುತ್ತಿರುವ ವಿದ್ಯಾರ್ಥಿನಿ. ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ […]

ಬೆಳ್ತಂಗಡಿ: ಉಕ್ರೇನ್ – ರಷ್ಯಾ ಬಿಕ್ಕಟ್ಟು| ಅಪಾಯದ ಸ್ಥಿತಿಯಲ್ಲಿ ಉಜಿರೆಯ ವೈದ್ಯ ವಿದ್ಯಾರ್ಥಿನಿ Read More »

ಉಡುಪಿ: ರಾಜ್ಯ ಹೆಮ್ಮೆಪಡುವಂತೆ ಮೇಕೆದಾಟು ಯೋಜನೆ ಜಾರಿ – ಸಚಿವ ಕೋಟ

ಸಮಗ್ರ ನ್ಯೂಸ್ : ಕಾಂಗ್ರೆಸ್‌ ನಾಯಕರು ಖುಷಿಯಾಗುವಂತೆ, ರಾಜ್ಯವೇ ಹೆಮ್ಮೆ ಪಡುವಂತೆ ಮೇಕೆದಾಟು ಯೋಜನೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತರಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾತನಾಡಿದ ಸಚಿವರು, ಮೇಕೆದಾಟು ಯೋಜನೆ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದ್ದು ಕಾನೂನು ತಜ್ಞರ ಜತೆ ಚರ್ಚಿಸಿ ಶೀಘ್ರ ಇತ್ಯರ್ಥಗೊಳಿಸಲಾಗುವುದು. ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ರಾಜಕೀಯ ಪ್ರೇರಿತ ಮೇಕೆದಾಟು ಪಾದಯಾತ್ರೆ ಬಿಟ್ಟು ರಾಜ್ಯದ

ಉಡುಪಿ: ರಾಜ್ಯ ಹೆಮ್ಮೆಪಡುವಂತೆ ಮೇಕೆದಾಟು ಯೋಜನೆ ಜಾರಿ – ಸಚಿವ ಕೋಟ Read More »

ಮತ್ತೆ ತೈಲ‌ಬೆಲೆ ಏರಿಕೆ ಬರೆ| ಪ್ರತೀ ಲೀಟರ್ ಗೆ 9 ರೂ‌ ಏರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಪಂಚರಾಜ್ಯ ಚುನಾವಣೆ ಮುಗಿದ ತಕ್ಷಣವೇ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 110 ಡಾಲರ್‌ ತಲುಪಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಚ್ಚಾ ತೈಲದ ದರ ಈ ಪ್ರಮಾಣಕ್ಕೆ ಮುಟ್ಟಿದೆ. ಇದಕ್ಕೆ ಅನುಗುಣವಾಗಿ ಇಲ್ಲಿಯೂ ದರ ಏರಿಕೆ ಮಾಡಲಾಗುತ್ತಿತ್ತು. ಆದರೆ, ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಇರುವುದರಿಂದ ತೈಲ ಕಂಪನಿಗಳು ಬೆಲೆ ಏರಿಕೆಯನ್ನು ತಡೆಹಿಡಿದಿವೆ. ಆದರೆ, ಇನ್ನು ನಾಲ್ಕೈದು

ಮತ್ತೆ ತೈಲ‌ಬೆಲೆ ಏರಿಕೆ ಬರೆ| ಪ್ರತೀ ಲೀಟರ್ ಗೆ 9 ರೂ‌ ಏರಿಕೆ ಸಾಧ್ಯತೆ Read More »

ನಾಳೆ(ಮಾ.04) ರಾಜ್ಯ ಬಜೆಟ್| ಸಿಎಂ ಬೊಮ್ಮಾಯಿಯಿಂದ ಚೊಚ್ಚಲ ಬಜೆಟ್ ಮಂಡನೆ|

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದು, ಅವರು ತಮ್ಮ ಮೊದಲ ಬಜೆಟ್ ನಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಮಾರ್ಚ್ 4ರಂದು ಮಧ್ಯಾಹ್ನ 12.30ಕ್ಕೆ 2022-23ರ ರಾಜ್ಯ ಬಜೆಟ್ ಅನ್ನು ವಿಧಾನಮಂಡಲದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಲಿದ್ದಾರೆ. ಹಾಲಿನ ಪ್ರೋತ್ಸಾಹಧನ ಹೆಚ್ಚಳ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ ಮಹತ್ವದ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸುವ ನಿರೀಕ್ಷೆ ಇದೆ.

ನಾಳೆ(ಮಾ.04) ರಾಜ್ಯ ಬಜೆಟ್| ಸಿಎಂ ಬೊಮ್ಮಾಯಿಯಿಂದ ಚೊಚ್ಚಲ ಬಜೆಟ್ ಮಂಡನೆ| Read More »

2023ರಿಂದ ದೇಶದಲ್ಲಿ 5ಜಿ ಮೇನಿಯಾ| ಶೀಘ್ರದಲ್ಲೇ ತರಂಗಾಂತರ ಹಂಚಿಕೆ – ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಮುಂದಿನ ವರ್ಷದೊಳಗಾಗಿ ದೇಶದಲ್ಲಿ 5ಜಿ ಮೊಬೈಲ್‌ ಸೇವೆ ಆರಂಭಕ್ಕೆ ಅಗತ್ಯವಿರುವ ತರಂಗಾಂತರಗಳ ಹರಾಜನ್ನು ಇದೇ ವರ್ಷ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು. ನವದೆಹಲಿಯಲ್ಲಿ ನಡೆದ ‘ತಂತ್ರಜ್ಞಾನ ಆಧಾರಿತ ಅಭಿವೃದ್ಧಿ’ ಎಂಬ ವಿಷಯ ಕುರಿತ ವೆಬಿನಾರ್‌ನಲ್ಲಿ ಅವರು ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. 5ಜಿ ತಂತ್ರಜ್ಞಾನದಿಂದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಸಾಕಷ್ಟು ವೇಗ ಸಿಗಲಿದೆ. ವೈದ್ಯ ವಿಜ್ಞಾನದಲ್ಲಿಯೂ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದ್ದು, ವೈದ್ಯಕೀಯ ಸಾಧನಗಳ ಉತ್ಪಾದನೆಗೂ ಗಮನ ಹರಿಸಬೇಕು’

2023ರಿಂದ ದೇಶದಲ್ಲಿ 5ಜಿ ಮೇನಿಯಾ| ಶೀಘ್ರದಲ್ಲೇ ತರಂಗಾಂತರ ಹಂಚಿಕೆ – ಪ್ರಧಾನಿ ಮೋದಿ Read More »

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ| ಪರೀಕ್ಷೆ ದಿನಾಂಕ ಮುಂದೂಡಿದ ಪಿಯು ಬೋರ್ಡ್

ಸಮಗ್ರ ನ್ಯೂಸ್. ಕಾಂ : ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಬದಲಾವಣೆಯಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತೊಂದು ಪರೀಕ್ಷಾ ದಿನಾಂಕದ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ದ್ವಿತೀಯ ಪಿಯು ಹಾಗೂ ಜೆಇಇ ಪರೀಕ್ಷೆಯು ಒಟ್ಟಿಗೆ ಬಂದ ಕಾರಣ ಪರೀಕ್ಷೆ ದಿನಾಂಕ ಮುಂದೂಡಿಕೆ ಮಾಡಲಾಗಿದೆ. ಏಪ್ರಿಲ್ 22 ರಿಂದ ಮೇ 11ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆಕ್ಷೇಪಣೆ ಸಲ್ಲಿಸಲು ಮಾರ್ಚ್ 5ರ ವರೆಗೆ ಅವಕಾಶ ನೀಡಿರೋದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ| ಪರೀಕ್ಷೆ ದಿನಾಂಕ ಮುಂದೂಡಿದ ಪಿಯು ಬೋರ್ಡ್ Read More »

ಪಾಸ್ ಪೋರ್ಟ್ ಇಲ್ಲದೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೊಳಗಾದ ಮಂಗಳೂರು ವಿದ್ಯಾರ್ಥಿನಿ!

ಸಮಗ್ರ ನ್ಯೂಸ್: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಮಂಗಳೂರು ಮೂಲದ ವಿದ್ಯಾರ್ಥಿನಿ ಅನೈನಾ ಅನ್ನಾ ಪಾಸ್ ಪೋರ್ಟ್ ಇಲ್ಲದೆ ಸಂಕಷ್ಟಕ್ಕೊಳಗಾಗಿದ್ದಾರೆ. ಉಕ್ರೇನ್ ನಲ್ಲಿ ರಷ್ಯಾದ ದಾಳಿ ಮುಂದುವರಿದಿದ್ದು, ಯುದ್ಧಪೀಡಿತ ದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಆದರೆ ಮಂಗಳೂರಿನ ದೇರೆಬೈಲು ಮೂಲದ ಅನೈನಾ ಅವರ ಪಾಸ್ ಪೋರ್ಟ್ ಏಜೆಂಟರ ಬಳಿ ಇದ್ದು, ಅವರಿಗೆ ಕರೆ ಮಾಡಿದರೆ ಅವರು ಇರುವಲ್ಲಿಗೆ ತೆರಳಿ ಪಾಸ್ ಪೋರ್ಟ್ ಪಡೆದುಕೊಳ್ಳುವಂತೆ ಹೇಳಿದ್ದಾರೆ. ಆದರೆ ಅವರಿರುವ ಸ್ಥಳದಲ್ಲಿ ದಾಳಿ ನಡೆಯುತ್ತಿರುವುದರಿಂದ

ಪಾಸ್ ಪೋರ್ಟ್ ಇಲ್ಲದೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೊಳಗಾದ ಮಂಗಳೂರು ವಿದ್ಯಾರ್ಥಿನಿ! Read More »

ಮಂಗಳೂರು: ನಗರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ| ಮೂವರು ಪಿಂಪ್ ಗಳು ಅಂದರ್|

ಸಮಗ್ರ‌ ನ್ಯೂಸ್ : ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂದೂರ್ ವೆಲ್ ನ ಅಪಾರ್ಟ್‌ಮೆಂಟ್ ವೊಂದರ ಫ್ಲಾಟ್’ನಲ್ಲಿ ಗ್ರಾಹಕರಿಗೆ ವೇಶ್ಯಾವಾಟಿಕೆ ದಂಧೆಗೆ ಯುವತಿಯರನ್ನು ಹಾಗೂ ಮಹಿಳೆಯರನ್ನು ಒದಗಿಸುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳು ವಿಟ್ಲದ ಪರ್ತಿಪಾಡಿಯ ಕೆ.ಪಿ. ಹಮೀದ್(54), ನಂದನಪುರ ನಾಗಬ್ರಹ್ಮ ಕಟ್ಟೆಯ ಅನುಪಮ ಶೆಟ್ಟಿ(46), ವಾಸುಕಿ ನಗರ ಎಕ್ಕೂರಿನ ನಿಶ್ಮಿತ(23) ಎಂದು ತಿಳಿದು ಬಂದಿದೆ. ಮಂಗಳೂರು ನಗರದ ಪೂರ್ವ( ಕದ್ರಿ ) ಪೊಲೀಸ್ ಠಾಣಾ ವ್ಯಾಪ್ತಿಯ

ಮಂಗಳೂರು: ನಗರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ| ಮೂವರು ಪಿಂಪ್ ಗಳು ಅಂದರ್| Read More »

ಉಡುಪಿ: ಸ್ಕೂಟರ್ ಗೆ ಬಸ್ಸ್ ಢಿಕ್ಕಿ ಹೊಡೆದು ತಂದೆ-ಮಗಳು ಸಾವು

ಸಮಗ್ರ ನ್ಯೂಸ್: ಕೇರಳ ಸಾರಿಗೆ ಸಂಸ್ಥೆ ಬಸ್ ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ಸಾವನ್ನಪ್ಪಿರುವ ಘಟನೆ ಸಂತೆಕಟ್ಟೆ ಬಳಿ ನಡೆದಿದೆ. ಮೃತರನ್ನು ಗಣೇಶ್ ಪೈ (58) ಹಾಗೂ ಮಗಳು ಗಾಯತ್ರಿ ಪೈ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯಿಂದ ಬಸ್ ನಲ್ಲಿ ಆಗಮಿಸಿದ್ದ ಮಗಳನ್ನು ಕರೆದುಕೊಂಡು ಹೋಗಲು ತನ್ನ ಸ್ಕೂಟರ್ ನಲ್ಲಿ ಬಸ್ ನಿಲ್ದಾಣಕ್ಕೆ ತಂದೆ ಬಂದಿದ್ದರು. ಮಗಳ ಜೊತೆ ಸ್ಕೂಟರ್‌ನಲ್ಲಿ ಸಂತೆಕಟ್ಟೆ‌ ಜಂಕ್ಷನ್ ನಲ್ಲಿ ರಸ್ತೆ ದಾಟುತ್ತಿದ್ದಾಗ ಉಡುಪಿಯಿಂದ ಕೊಲ್ಲೂರು ಕಡೆ ತೆರಳುತ್ತಿದ್ದ ಕೇರಳ

ಉಡುಪಿ: ಸ್ಕೂಟರ್ ಗೆ ಬಸ್ಸ್ ಢಿಕ್ಕಿ ಹೊಡೆದು ತಂದೆ-ಮಗಳು ಸಾವು Read More »

ಸುಳ್ಯ: ಕಟ್ಟಿಂಗ್ ಮೆಷಿನ್ ತಾಗಿ ಕಾರ್ಮಿಕ ಸಾವು

ಸಮಗ್ರ ನ್ಯೂಸ್: ಕಟ್ಟಡ ಕಾಮಗಾರಿ ನಡೆಸುತ್ತಿದ್ದ ವೇಳೆ ಕಬ್ಬಿಣ ತುಂಡರಿಸುವು ಮೆಷಿನ್ ತಾಗಿ ಗಂಭೀರ ಗಾಯಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಐವರ್ನಾಡಿನಿಂದ ವರದಿಯಾಗಿದೆ. ಐವರ್ನಾಡು ನಾಟಿಕೇರಿ ನಿವಾಸಿ ದಯಾನಂದ (36) ಮೃತಪಟ್ಟ ದುರ್ದೈವಿ. ಕಬ್ಬಿಣ ಕಟ್ಟ್ ಮಾಡುವ ವೇಳೆ ಮೆಷಿನ್ ತೊಡೆಯ ಭಾಗಕ್ಕೆ ತಾಗಿ ಗಂಭೀರ ಗಾಯಗೊಂಡ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಕ್ತಸ್ರಾವದಿಂದ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸುಳ್ಯ: ಕಟ್ಟಿಂಗ್ ಮೆಷಿನ್ ತಾಗಿ ಕಾರ್ಮಿಕ ಸಾವು Read More »