March 2022

ವಾಯುಭಾರ ಕುಸಿತ; ಎರಡು ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಾಳೆಯಿಂದ ಎರಡು ದಿನಗಳ ಕಾಲ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದ ಪರಿಣಾಮದಿಂದಾಗಿ, ಮಾರ್ಚ್ 7 ಹಾಗೂ 8 ರಂದು ರಾಜ್ಯದಲ್ಲಿ ಮಳೆ ಆಗಲಿದೆ. ಕಳೆದೆರಡು ತಿಂಗಳಿನಿಂದ ಇದ್ದ ಒಣ ಹವೆ ಕೊನೆಗೊಳ್ಳುತ್ತಿದ್ದು, ಮಾರ್ಚ್ 7ರಂದು ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಕೊಡಗು, ಹಾಸನದಲ್ಲಿ ಗುಡುಗು ಸಹಿತ ಮಳೆಯಾಗುವ […]

ವಾಯುಭಾರ ಕುಸಿತ; ಎರಡು ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ Read More »

2022 ರ ಐಪಿಎಲ್ ವೇಳಾಪಟ್ಟಿ ಪ್ರಕಟ| ಮಾ.26 ರಿಂದ ಪಂದ್ಯಾರಂಭ|

ಸಮಗ್ರ ನ್ಯೂಸ್: ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಟಾಟಾ ಐಪಿಎಲ್ 2022 ರ ಪಂದ್ಯದ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಹಣಾಹಣಿಯೊಂದಿಗೆ 2022 ರ ಐಪಿಎಲ್ ನ 15 ನೇ ಸೀಸನ್ ಮಾರ್ಚ್ 26 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಮಾರ್ಚ್ 27 ರಂದು, ಲೀಗ್ ತನ್ನ ಮೊದಲ ಡಬಲ್ ಹೆಡರ್ ಅನ್ನು ಪ್ರದರ್ಶಿಸಲಿದೆ, ಬ್ರಬೋರ್ನ್ ನಲ್ಲಿ ಡೇ ಆಟದೊಂದಿಗೆ ಪ್ರಾರಂಭವಾಗಲಿದೆ,

2022 ರ ಐಪಿಎಲ್ ವೇಳಾಪಟ್ಟಿ ಪ್ರಕಟ| ಮಾ.26 ರಿಂದ ಪಂದ್ಯಾರಂಭ| Read More »

ಚರ್ನೋಬಿಲ್ ವಶಪಡಿಸಿಕೊಂಡ ರಷ್ಯಾ| ಅಣುಸ್ಥಾವರಗಳೇ ರಷ್ಯಾ ಟಾರ್ಗೆಟ್|

ಸಮಗ್ರ ನ್ಯೂಸ್: ರಷ್ಯಾ ಸೇನೆ ಉಕ್ರೇನ್​ನ ಮತ್ತೊಂದು ಅಣುಸ್ಥಾವರವೊಂದನ್ನು ವಶಕ್ಕೆ ಪಡೆದಿದ್ದು, ಝೆಪೋರಿಝಿಯಾ ಬಳಿಕ ಚೆರ್ನೋಬಿಲ್ ಅಣುಸ್ಥಾವರ ವಶಕ್ಕೆ ಪಡೆದಿದೆ.ಸದ್ಯ ಚೆರ್ನೋಬಿಲ್ ಅಣುಸ್ಥಾವರ ಕಾರ್ಯ ನಿರ್ವಹಿಸುತ್ತಿಲ್ಲ, ಆದರೆ ಅಲ್ಲಿನ್ನೂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಚೆರ್ನೋಬಿಲ್​ ಬೆನ್ನಲ್ಲೇ ರಷ್ಯಾ ಸೇನೆಯು ಮತ್ತೊಂದು ಅಣುಸ್ಥಾವರ ಮೇಲೆ ಕಣ್ಣು ಇಟ್ಟಿದ್ದು, ಒಂದೊಂದೇ ಅಣುಸ್ಥಾವರ ವಶಕ್ಕೆ ಪಡೆಯುತ್ತಿದೆ. ಇದೇ ವೇಳೆ ಉಕ್ರೇನ್ ಚೆರ್ನೊಬೆಲ್ ನಲ್ಲಿ ಅಣುಬಾಂಬ್ ಉತ್ಪಾದಿಸಲು ಪ್ರಯತ್ನಿಸುತ್ತಿದೆ ಎಂದು ರಷ್ಯಾ ಮಾಧ್ಯಮವೊಂದು ವರದಿ ಮಾಡಿದೆ.

ಚರ್ನೋಬಿಲ್ ವಶಪಡಿಸಿಕೊಂಡ ರಷ್ಯಾ| ಅಣುಸ್ಥಾವರಗಳೇ ರಷ್ಯಾ ಟಾರ್ಗೆಟ್| Read More »

“ಮಂಗಳೂರಿನಲ್ಲಿ ಬೀಳಲಿದೆಯಂತೆ‌ ಮತ್ತೊಂದು ಹೆಣ”| ಹಿಜಾಬ್ ಗಲಾಟೆ ಬೆನ್ನಲ್ಲೇ ವಿರೋಧಿಸಿದ ವಿದ್ಯಾರ್ಥಿಗೆ ಶ್ರದ್ಧಾಂಜಲಿ ಕೋರಿದ ಕಿಡಿಗೇಡಿಗಳು

ಸಮಗ್ರ ನ್ಯೂಸ್: ಮಂಗಳೂರಿನ ರಥಬೀದಿಯಲ್ಲಿರುವ ಡಾ.ಪಿ, ದಯಾನಂದ, ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್ ಧರಿಸಿ ಪ್ರವೇಶಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ, ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಪ್ರಶ್ನಿಸಿ ಗೊಂದಲಗೊಂಡ ಬೆನ್ನಲ್ಲೇ ವಿರೋದಿಸಿದ ವಿದ್ಯಾರ್ಥಿ ಹೆಸರಲ್ಲಿ ಕಿಡಿಗೇಡಿಗಳು ಶ್ರಧ್ದಾಂಜಲಿ ಪೋಸ್ಟ್ ಮಾಡಿದ್ದಾರೆ. ವಿದ್ಯಾರ್ಥಿ ಸಾಯಿ ಸಂದೇಶ ಎಂಬಾತ ಹಿಜಾಬ್ ಧಾರಣೆ ಪ್ರಶ್ನಿಸಿ ವಿರೋಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತನ ವಿರುದ್ಧ ಇನ್ಸ್ಟಾಗ್ರಾಂ ನಲ್ಲಿ ಫೊಟೋ ಹಾಕಿ ಶ್ರದ್ಧಾಂಜಲಿ ಸಾಯಿ ಸಂದೇಶ

“ಮಂಗಳೂರಿನಲ್ಲಿ ಬೀಳಲಿದೆಯಂತೆ‌ ಮತ್ತೊಂದು ಹೆಣ”| ಹಿಜಾಬ್ ಗಲಾಟೆ ಬೆನ್ನಲ್ಲೇ ವಿರೋಧಿಸಿದ ವಿದ್ಯಾರ್ಥಿಗೆ ಶ್ರದ್ಧಾಂಜಲಿ ಕೋರಿದ ಕಿಡಿಗೇಡಿಗಳು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಮನುಷ್ಯನ ಜೀವನದಲ್ಲಿನ ಪ್ರತಿನಿತ್ಯದ ಘಟನೆಗಳಿಗೆ ಜನ್ಮರಾಶಿಗಳು, ನಕ್ಷತ್ರಗಳು ಕಾರಣವಾಗಿರುತ್ತವೆ. ಜೀವನದ ಆಗುಹೋಗುಗಳನ್ನು ರಾಶಿ ಹಾಗೂ ನಕ್ಷತ್ರಗಳೇ ನಿರ್ಧರಿಸುತ್ತವೆ ಎಂಬುದು ಪರಂಪರಾಗತ ನಂಬಿಕೆ. ಈ ಹಿನ್ನೆಲೆಯಲ್ಲಿ ನಾವು ರಾಶಿಗಳಲ್ಲಿನ ಬದಲಾವಣೆಗಳ ಕುರಿತು ಭವಿಷ್ಯ ತಿಳಿದುಕೊಳ್ಳುವುದು ಅವಶ್ಯಕ. ಈ ವಾರ ಹನ್ನೆರಡು ರಾಶಿಗಳ ಗೋಚಾರಫಲ, ಸಮಸ್ಯೆ ಹಾಗೂ ಪರಿಹಾರಗಳನ್ನು ತಿಳಿದುಕೊಳ್ಳೋಣ. ಮೇಷ ರಾಶಿ: ಮನಸ್ಸಿಗೆ ಒಂದು ರೀತಿಯ ಸಂತೋಷ ಇರುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಡುವಳಿಕೆಯಿಂದ ಜನರ ಮನಸ್ಸನ್ನು ಗೆದ್ದು ಕಾರ್ಯಸಾಧನೆ ಮಾಡುವಿರಿ. ಸ್ಥಿರಾಸ್ತಿಯ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಆಕ್ಷೇಪಾರ್ಹ ಪೋಸ್ಟ್ ಮಾಡಿದ ಮಂಗಳೂರು ಮುಸ್ಲಿಂ ಪೇಜ್ ಕುರಿತು ಸಿಐಡಿ‌ ತನಿಖೆ

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವೂ ಸೇರಿದಂತೆ ವಿವಾದಾತ್ಮಕ, ಆಕ್ಷೇಪಾರ್ಹ ಬರಹಗಳನ್ನು ಪೋಸ್ಟ್ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದ ಆರೋಪದ ಮೇಲೆ ಮಂಗಳೂರು ಮುಸ್ಲಿಂ ಫೇಸ್​​ಬುಕ್ ಖಾತೆ ಕುರಿತಾದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ಮಂಗಳೂರು ಮುಸ್ಲಿಂ ಪೇಜ್​​​​ನಲ್ಲಿ ಹತ್ಯೆಯಾದ ಹರ್ಷನ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಿದ್ದಲ್ಲದೆ ಸುದ್ದಿವಾಹಿನಿಯ ನಿರೂಪಕರು, ರಾಜ್ಯದ ಸಚಿವರ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಲಾಗಿತ್ತು ಎನ್ನಲಾಗುತ್ತಿದೆ. ಆದ್ದರಿಂದ ಈ ಪೋಸ್ಟ್‌ ಬಗ್ಗೆ ಮಂಗಳೂರು ಪೊಲೀಸರು

ಆಕ್ಷೇಪಾರ್ಹ ಪೋಸ್ಟ್ ಮಾಡಿದ ಮಂಗಳೂರು ಮುಸ್ಲಿಂ ಪೇಜ್ ಕುರಿತು ಸಿಐಡಿ‌ ತನಿಖೆ Read More »

ಸುಳ್ಯ: ಪ್ರತಿಷ್ಟಿತ ಕಾಲೇಜೊಂದರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ| ಆರೋಪಿ ಕೈಗೆ ಕೋಳ ಬಿಗಿದ ಪೊಲೀಸರು|

ಸಮಗ್ರ ನ್ಯೂಸ್ : ಪುತ್ತೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಳ್ಯ ತಾಲೂಕಿನ ಐವರ್ನಾಡು ಮೂಲದ ರಕ್ಷಿತ್ ಎಂಬಾತನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ದ ಐಪಿಸಿ ಕಲಂ 354 A , 506 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈತ ಸಂಘಟನೆಯೊಂದರ ಸಂಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದು ಬಂದಿದೆ. ಸಂತ್ರಸ್ತೆ ಅಪ್ರಾಪ್ತೆಯಾಗಿದ್ದು, ಬಾಲಕಿಯನ್ನು ಆರೋಪಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸಂತ್ರಸ್ತ ಬಾಲಕಿಯು ಸುಳ್ಯದ ಪ್ರತಿಷಿತ

ಸುಳ್ಯ: ಪ್ರತಿಷ್ಟಿತ ಕಾಲೇಜೊಂದರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ| ಆರೋಪಿ ಕೈಗೆ ಕೋಳ ಬಿಗಿದ ಪೊಲೀಸರು| Read More »

ಮಾಸ್ಕೋ: ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

ಸಮಗ್ರ ನ್ಯೂಸ್: ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ ಭಾಗಶಃ ಕೈವಶಪಡಿಸಿಕೊಂಡಿರುವ ರಷ್ಯಾ ಶನಿವಾರ ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಿದೆ. ಯುದ್ಧ ಘೋಷಣೆ ಮಾಡಿ 11 ದಿನಗಳ ಬಳಿಕ ರಷ್ಯಾ ಈ ನಿರ್ಧಾರವನ್ನು ಇಂದು ಬೆಳಗ್ಗೆ 6 ಗಂಟೆಗೆ ಘೋಷಿಸಿದೆ. ನಾಗರಿಕರನ್ನು ತೆರವುಗೊಳಿಸಲು ಅನುಕೂಲವಾಗುವಂತೆ ಮಾನವೀಯ ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ರಷ್ಯಾ ತಿಳಿಸಿದೆ. ಉಭಯ ದೇಶಗಳ ನಡುವೆ 2 ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಯುದ್ಧದ 10 ದಿನವಾದ ಇಂದು ಬೆಳಗ್ಗೆ 10ರಿಂದ ಕದನ

ಮಾಸ್ಕೋ: ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ Read More »

ಬೆಳ್ತಂಗಡಿ: ಉಕ್ರೇನ್ ನಲ್ಲಿ‌ ಸಿಲುಕಿದ್ದ ಹೀನಾ ದೆಹಲಿಗೆ ವಾಪಾಸ್

ಸಮಗ್ರ ನ್ಯೂಸ್: ಯುದ್ಧ ಭೂಮಿ ಉಕ್ರೇನ್ ಖಾರ್ಕಿವ್ ನಲ್ಲಿ ಸಿಲುಕಿದ್ದ ವೈದ್ಯಕೀಯ ವಿದ್ಯಾರ್ಥಿನಿ ಹೀನಾ ಫಾತಿಮಾ ದೆಹಲಿ ಆಗಮಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ನ ದಿ.ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ಹೀನಾ ಫಾತಿಮಾ ನಿನ್ನೆ ರಾತ್ರಿ ಪೋಲಂಡ್ ವಿಮಾನ ಮೂಲಕ ಇಂದು ಬೆಳಗ್ಗೆ 7 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದ್ದು, ಇನ್ನೂ ದೆಹಲಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಗಮಿಸಿ ನಂತರ ತನ್ನ ಉಜಿರೆ ಮನೆ ಸೇರಲಿದ್ದಾರೆ ಎಂದು ಹೀನಾ ಫಾತೀಮಾ ತಾಯಿ

ಬೆಳ್ತಂಗಡಿ: ಉಕ್ರೇನ್ ನಲ್ಲಿ‌ ಸಿಲುಕಿದ್ದ ಹೀನಾ ದೆಹಲಿಗೆ ವಾಪಾಸ್ Read More »

ಹೊಸದಿಲ್ಲಿ: ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿ ಬ್ಯಾಗಲ್ಲಿ ಬುಲೆಟ್

ಸಮಗ್ರ ನ್ಯೂಸ್: ಉಕ್ರೇನ್‌ನಿಂದ ಗುರುವಾರ ದಿಲ್ಲಿಗೆ ವಾಪಸಾದ ಕೇರಳ ಮೂಲದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಬುಲೆಟ್‌ ಪತ್ತೆಯಾಗಿದೆ. ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸಿಐಎಸ್‌ಎಫ್ ನ ಸಿಬಂದಿ ವಿದ್ಯಾರ್ಥಿಯ ಬ್ಯಾಗ್‌ ಅನ್ನು ತಪಾಸಣೆ ನಡೆಸಿದ ವೇಳೆ ಗುಂಡು ಪತ್ತೆಯಾಯಿತು. ತತ್‌ಕ್ಷಣ ಸಿಐಎಸ್‌ಎಫ್ ಅಧಿಕಾರಿಗಳು ವಿದ್ಯಾರ್ಥಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದರು. ದಿಲ್ಲಿಯಿಂದ ಏರ್‌ ಏಷ್ಯಾ ವಿಮಾನ ಮೂಲಕ ಗುರುವಾರವೇ ಈ ವಿದ್ಯಾರ್ಥಿ ಕೇರಳಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಯುದ್ಧಪೀಡಿತ ಪ್ರದೇಶದಿಂದ ತಾಯ್ನಾಡಿಗೆ ವಾಪಸಾದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗುಂಡು ಪತ್ತೆಯಾಗಿರುವುದು ಭಾರೀ ಕುತೂಹಲಕ್ಕೆ

ಹೊಸದಿಲ್ಲಿ: ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿ ಬ್ಯಾಗಲ್ಲಿ ಬುಲೆಟ್ Read More »