March 2022

ಗೋವಾ ಗದ್ದುಗೆ ಏರಲು ಅವಕಾಶ ಕೋರಿದ ಬಿಜೆಪಿ

ಸಮಗ್ರ ನ್ಯೂಸ್: ಗೋವಾದಲ್ಲಿ ಇಂದು ವಿಧಾನಸಭಾ ಚುನಾವಣೆಯ ಮತದಾನದ ಮತಏಣಿಕೆ ಕಾರ್ಯ ನಡೆಯುತ್ತಿದೆ. ಬಿಜೆಪಿ ಗೆಲುವಿನ ನಗೆಯತ್ತ ಸಾಗುತ್ತಿದ್ದು, 19 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಹಿನ್ನಲೆಯಲ್ಲಿ ಸರ್ಕಾರ ರಚನೆ ಮಾಡೋದಕ್ಕಾಗಿ ಹಕ್ಕು ಮಂಡನೆಗೆ ಅವಕಾಶ ಕೋರಿ, ರಾಜ್ಯಪಾಲರನ್ನು ಇಂದು ಬಿಜೆಪಿ ನಾಯಕರು ಭೇಟಿಯಾಗಲಿದ್ದಾರೆ. 21 ಗೋವಾ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆಯಾಗಿದ್ದು, ಮೂವರು ಪಕ್ಷೇತರರು ಬಿಜೆಪಿಗೆ ಬಲ ತುಂಬಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ 19 ಸ್ಥಾನ ಗೆದ್ದಿರುವ ಬಿಜೆಪಿಗೆ ಗೋವಾ ಗದ್ದುಗೆ ಸರಾಗವಾಗಿದೆ.

ಗೋವಾ ಗದ್ದುಗೆ ಏರಲು ಅವಕಾಶ ಕೋರಿದ ಬಿಜೆಪಿ Read More »

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದವ ಸಾವು

ಸಮಗ್ರ ನ್ಯೂಸ್: ಮನುಷ್ಯನ ಹೃದಯದ ಜಾಗಕ್ಕೆ ಹಂದಿಯ ಹೃದಯವನ್ನು ಕಸಿ ಮಾಡಿಸಿಕೊಂಡಿದ್ದ ಅಮೆರಿಕದ ಮೇರಿಲ್ಯಾಂಡ್‌ನ‌ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜ.7ರಂದು ಆಪರೇಷನ್‌ ಮಾಡಿಸಿಕೊಂಡಿದ್ದ 57 ವರ್ಷದ ಡೇವಿಡ್‌ ಬೆನಟ್‌ 2 ತಿಂಗಳ ಕಾಲ ಹಂದಿಯ ಹೃದಯದ ಸಹಾಯದಿಂದಲೇ ಉಸಿರಾಟ ನಡೆಸಿದ್ದಾರೆ. ಆಪರೇಷನ್‌ ಮಾಡಿರುವ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯ ವೈದ್ಯಕೀಯ ಕೇಂದ್ರವು ಡೇವಿಡ್‌ ಅವರ ಸಾವಿಗೆ ನಿಖರ ಕಾರಣವನ್ನು ಕೊಟ್ಟಿಲ್ಲ. ಹಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದಾಗಿ ತಿಳಿಸಿದೆ. ಮನುಷ್ಯನ ಹೊರೆತು ಬೇರೆ ಪ್ರಾಣಿಯ ಹೃದಯದ ಸಹಾಯದಿಂದ ಹೆಚ್ಚು ದಿನಗಳ ಕಾಲ

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದವ ಸಾವು Read More »

ಪಂಚರಾಜ್ಯ ಕದನ: ಬಿಜೆಪಿ, ಆಪ್ ಮುನ್ನಡೆ

ಸಮಗ್ರ ನ್ಯೂಸ್: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮತಎಣಿಕೆ ಆರಂಭವಾಗುತ್ತಿದ್ದಂತೆ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಬಿಜೆಪಿ ಮುನ್ನಡೆ ಗಳಿಸಿದೆ. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ ಗಳಿಸಿದೆ.

ಪಂಚರಾಜ್ಯ ಕದನ: ಬಿಜೆಪಿ, ಆಪ್ ಮುನ್ನಡೆ Read More »

ನಾಳೆ(ಮಾ.10) ಪಂಚರಾಜ್ಯ ಚುನಾವಣಾ ಫಲಿತಾಂಶ| ಪ್ರತಿಷ್ಟೆಯ ಕದನದಲ್ಲಿ ಗೆಲ್ಲೋರ್ಯಾರು?

ಸಮಗ್ರ ನ್ಯೂಸ್: ಐದು ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಗುರುವಾರ(ಮಾ.೧೦) ನಡೆಯಲಿದ್ದು, ಸಂಜೆ ವೇಳೆ ಪ್ರಸ್ತುತ ನಾಲ್ಕು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧಾರವಾಗಲಿದೆ. ಮಾರ್ಚ್ 10 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮತಗಳ ಎಣಿಕೆಯಲ್ಲಿ ಮೊದಲು ಬ್ಯಾಲೆಟ್ ಪೇಪರ್ ಮತಗಳನ್ನು ಎಣಿಕೆ ಮಾಡಲಾಗುವುದು, ನಂತರ

ನಾಳೆ(ಮಾ.10) ಪಂಚರಾಜ್ಯ ಚುನಾವಣಾ ಫಲಿತಾಂಶ| ಪ್ರತಿಷ್ಟೆಯ ಕದನದಲ್ಲಿ ಗೆಲ್ಲೋರ್ಯಾರು? Read More »

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು

ಸಮಗ್ರ ನ್ಯೂಸ್: 1991ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಏಳು ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೆರಾರಿವಾಲನ್‌ಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ. ಸುಮಾರು 32 ವರ್ಷಗಳಿಂದ ಪೆರಾರಿವಾಲನ್ ಜೈಲಿನಲ್ಲಿರುವುದನ್ನು ಗಮನಿಸಿ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಬಿಆರ್ ಗವಾಯಿ ಅವರನ್ನೊಳಗೊಂಡ ನ್ಯಾಯಪೀಠ ಅವರಿಗೆ ಜಾಮೀನು ನೀಡಿದೆ. ಅರ್ಜಿದಾರರು 30 ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದಾರೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು, ಕೇಂದ್ರದ

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು Read More »

‘ಹಿಂದೂ ಕಾರ್ಯಕರ್ತರಲ್ಲ, ಅವರ ಹೆಂಡ್ತಿ, ಮಕ್ಳೇ ಮುಂದಿನ ಟಾರ್ಗೆಟ್’| ಎಂಎಲ್ಸಿ ಡಿ.ಎಸ್ ಅರುಣ್ ಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ|

ಸಮಗ್ರ ನ್ಯೂಸ್: ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಬೆನ್ನಲ್ಲೇ ಎಂಎಲ್‌ಸಿ ಡಿ.ಎಸ್.ಅರುಣ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಲಾಗಿದೆ. ಫೆ.20ರಂದು ರಾತ್ರಿ ಹರ್ಷನ ಹತ್ಯೆ ಬಳಿಕ ಎಂಎಲ್‌ಸಿ ಡಿ.ಎಸ್.ಅರುಣ್ ಅವರು ಕೃತ್ಯದ ಹಿಂದೆ ಮುಸ್ಲಿಮರು ಇರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಇದರ ಬೆನ್ನಲ್ಲೇ ಅರುಣ್ ಅವರಿಗೆ ಜಾಲತಾಣದ ಮೂಲಕ ಬೆದರಿಕೆ ಸಂದೇಶ ಪೋಸ್ಟ್ ಮಾಡಲಾಗಿದೆ. ಮುಸ್ತಾಕ್ ಅಲಿ ಹೆಸರಿನ ವ್ಯಕ್ತಿಯು ‘ನಿಮ್ಮ ತಲೇಲಿ ಇವತ್ತು ಕೇವಲ ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ. ಆದರೆ ಮುಂದಿನ

‘ಹಿಂದೂ ಕಾರ್ಯಕರ್ತರಲ್ಲ, ಅವರ ಹೆಂಡ್ತಿ, ಮಕ್ಳೇ ಮುಂದಿನ ಟಾರ್ಗೆಟ್’| ಎಂಎಲ್ಸಿ ಡಿ.ಎಸ್ ಅರುಣ್ ಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ| Read More »

ಪುತ್ತೂರು: ಕರ್ತವ್ಯಕ್ಕೆ ಹೊರಟಿದ್ದ ಪೊಲೀಸ್ ಗೆ ‘ಕಾಲನ ಕರೆ’ | ಹೃದಯಾಘಾತದಿಂದ ಸಾವನ್ನಪ್ಪಿದ ಸಂಪ್ಯ ಠಾಣಾ ಪೇದೆ

ಸಮಗ್ರ ನ್ಯೂಸ್; ಕರ್ತವ್ಯಕ್ಕೆ ಹೊರಟು ನಿಂತ ಪೋಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಮಾರ್ಚ್ 9 ರಂದು ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ಸಂಪ್ಯ ಪೋಲೀಸ್ ಠಾಣೆಯ ಸಿಬ್ಬಂದಿ ಗಣೇಶ್ ಹೃದಯಾಘಾತದಿಂದ ಸಾವಿಗೀಡಾದ ಪೇದೆಯಾಗಿದ್ದು, ಕೇರಳ-ಕರ್ನಾಟಕ‌ ಗಡಿಯ ಸ್ವರ್ಗ‌ ಎಂಬಲ್ಲಿ ಗಣೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಕೂಡಾ ಎಂದಿನಂತೆ ಕರ್ತವ್ಯಕ್ಕೆ ಹೊರಟು ನಿಂತಿದ್ದ ಸಂದರ್ಭ‌ ಈ ಘಟನೆ ನಡೆದಿದ್ದು, ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೋಲೀಸ್‌ ಅಧಿಕಾರಿಗಳು ಗಣೇಶ್ ಸಾವಿಗೆ

ಪುತ್ತೂರು: ಕರ್ತವ್ಯಕ್ಕೆ ಹೊರಟಿದ್ದ ಪೊಲೀಸ್ ಗೆ ‘ಕಾಲನ ಕರೆ’ | ಹೃದಯಾಘಾತದಿಂದ ಸಾವನ್ನಪ್ಪಿದ ಸಂಪ್ಯ ಠಾಣಾ ಪೇದೆ Read More »

ಮಂಗಳೂರು: ಮಳೆ ಅವಾಂತರ; ಲಾರಿ ಮೇಲೆ ಬಿದ್ದ ಮರ

ಸಮಗ್ರ ನ್ಯೂಸ್: ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಸ್ಟೇಟ್ ಬ್ಯಾಂಕ್ ಬಳಿಯಿರುವ ರೋಜಾರಿಯೋ ರಸ್ತೆಯಲ್ಲಿ ಬೃಹತ್​ ಗಾತ್ರದ ಮರವೊಂದು ರಸ್ತೆಬದಿ ನಿಂತಿದ್ದ ಲಾರಿ ಮೇಲೆ ಉರುಳಿದೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮರ ಬೀಳುತ್ತಿದ್ದಂತೆ ಚಾಲಕ ಪುರುಷೋತ್ತಮ ಲಾರಿಯಿಂದ ಕೆಳಗೆ ಜಿಗಿದಿದ್ದಾರೆ. ಶಾಲೆ-ಕಾಲೇಜು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಬಿಎಸ್​ಎನ್​ಎಲ್ ಆವರಣದಿಂದ ಕಂಪೌಂಡ್ ಸಮೇತ ಮರ ಉರುಳಿದೆ. ಪಾಂಡೇಶ್ವರ ಅಗ್ನಿಶಾಮಕ ದಳದಿಂದ ಮರ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಮರ ಉರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಮಂಗಳೂರು: ಮಳೆ ಅವಾಂತರ; ಲಾರಿ ಮೇಲೆ ಬಿದ್ದ ಮರ Read More »

ಉಕ್ರೇನ್ ನಿಂದ ರಕ್ಷಿಸಲ್ಪಟ್ಟ ಪಾಕಿಸ್ತಾನಿ ಹುಡುಗಿಯಿಂದ ಮೋದಿಗೆ ಥ್ಯಾಂಕ್ಸ್| ನಮ್ಮವರು ಗುಲಾಬಿ ಕೊಟ್ರೂ ತಗೊಳ್ಳಲ್ವಾ ಮರ್ರೆ..!

ಸಮಗ್ರ ನ್ಯೂಸ್: ಯುದ್ಧಪೀಡಿತ ಉಕ್ರೇನ್ ದೇಶದಿಂದ ಭಾರತೀಯರನ್ನು ಕರೆತರುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಆಪರೇಶನ್ ಗಂಗಾ ಕಾರ್ಯಾಚರಣೆ ಮೂಲಕ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಈ ನಡುವೆ ಕೀವ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಹಾಯದಿಂದ ಪಾಕಿಸ್ತಾನಿ ಹುಡುಗಿ ಅಸ್ಮಾ ಶಫೀಕ್ ಎಂಬ ವಿದ್ಯಾರ್ಥಿನಿಯನ್ನು ಉಕ್ರೇನ್‌ನ ಯುದ್ಧ ವಲಯದಿಂದ ಸ್ಥಳಾಂತರಿಸಲಾಗಿದೆ. ವೀಡಿಯೊವೊಂದರಲ್ಲಿ, ಅವರು “ಬಹಳ ಕಷ್ಟಕರ ಪರಿಸ್ಥಿತಿ” ಯಿಂದ ಪಾರಾಗಲು ಸಹಾಯ ಮಾಡಿದ್ದಕ್ಕಾಗಿ ಭಾರತೀಯ ರಾಯಭಾರ ಕಚೇರಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ

ಉಕ್ರೇನ್ ನಿಂದ ರಕ್ಷಿಸಲ್ಪಟ್ಟ ಪಾಕಿಸ್ತಾನಿ ಹುಡುಗಿಯಿಂದ ಮೋದಿಗೆ ಥ್ಯಾಂಕ್ಸ್| ನಮ್ಮವರು ಗುಲಾಬಿ ಕೊಟ್ರೂ ತಗೊಳ್ಳಲ್ವಾ ಮರ್ರೆ..! Read More »

‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರಿನ ಮೈಕಲ್ ಸಲ್ದಾನ

ಸಮಗ್ರ ನ್ಯೂಸ್: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವ ‘ಆಪರೇಶನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಪೈಲಟ್ ಕ್ಯಾಪ್ಟನ್ ಮೈಕೆಲ್‌ ಸಲ್ಡಾನ ಕೂಡಾ ಇದ್ದಾರೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಪೈಲಟ್ ಆಗಿರುವ ಕ್ಯಾಪ್ಟನ್ ಮೈಕೆಲ್‌ ಸಲ್ಡಾನ ಅವರನ್ನು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ನಿಯೋಜಿಸಲಾಗಿತ್ತು. ಈಗಾಗಲೇ ಅನೇಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರು ತಾಯ್ನಾಡಿಗೆ ಕರೆತಂದಿದ್ದಾರೆ. ಎರಡು ವರ್ಷಗಳ ಹಿಂದೆ ಕೋವಿಡ್‌ -19 ವ್ಯಾಪಕವಾಗಿದ್ದ ಸಂದರ್ಭ ಗಲ್ಫ್ ರಾಷ್ಟ್ರಗಳಲ್ಲಿ ಅನೇಕ ಭಾರತೀಯರು ಸಿಲುಕಿಕೊಂಡಿದ್ದರು. ಆಗಲೂ ಕ್ಯಾಪ್ಟನ್

‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರಿನ ಮೈಕಲ್ ಸಲ್ದಾನ Read More »