March 2022

ಸಂಪಾಜೆ ಮನೆ ದರೋಡೆ ಪ್ರಕರಣ| ನಾಲ್ಕು ಮಂದಿ ಅರೆಸ್ಟ್

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ‌ ಸಂಪಾಜೆಯಲ್ಲಿ ಮಚ್ಚು ತೋರಿಸಿ ಭಾರೀ ಪ್ರಮಾಣದ ನಗನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ಋಷಿಕೇಶ್ ಭಗವಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಂಧಿತರನ್ನು ತಮಿಳುನಾಡು ಮೂಲದ ಕಾರ್ತಿಕ್ (38), ನರಸಿಂಹನ್ (40), ಹಾಸನ ಮೂಲದ ಯಧು ಕುಮಾರ್ (33 ), ದೀಕ್ಷಿತ್ (26) ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಐದು ಮೊಬೈಲ್, ವಾಹನಗಳನ್ನು ವಶ […]

ಸಂಪಾಜೆ ಮನೆ ದರೋಡೆ ಪ್ರಕರಣ| ನಾಲ್ಕು ಮಂದಿ ಅರೆಸ್ಟ್ Read More »

ಉಡುಪಿ: ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ, ಆಮೇಲೆ ಸೌಹಾರ್ದದ ಮಾತಾಡೋಣ- ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ತಾಕೀತು

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ಪ್ರಾರಂಭಗೊಂಡು ಮುಸ್ಲಿಮರೊಂದಿಗಿನ ವ್ಯಾಪಾರಗಳನ್ನು ನಿರ್ಬಂಧಿಸುವವರೆಗೆ ಸಮಾಜದಲ್ಲಿ ಉಂಟಾಗಿರುವ ಕಂದಕಕ್ಕೆ ಪರಿಹಾರ ಕಂಡುಕೊಳ್ಳಲು ಸಹಕರಿಸಬೇಕೆಂದು ಮುಸ್ಲಿಂ ನಿಯೋಗ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮನವಿ ಮಾಡಿತು. ನಿಯೋಗವನ್ನು ಭೇಟಿ ಮಾಡಿದ ಶ್ರೀಗಳು, ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗ ಉಂಟಾಗಿರುವ ಸಮಸ್ಯೆಗಳ ಹಿಂದೆ ಅನೇಕ ವರ್ಷಗಳ ನೋವು ಇದೆ. ಅದಕ್ಕೆ ಕಾರಣ ಯಾರು? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ, ಸಮಾಜದಲ್ಲಿ ಕಾನೂನು

ಉಡುಪಿ: ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ, ಆಮೇಲೆ ಸೌಹಾರ್ದದ ಮಾತಾಡೋಣ- ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ತಾಕೀತು Read More »

ವಿದ್ಯಾರ್ಥಿ ಪರಿಷತ್ ಘಟಕದ ಉದ್ಘಾಟನೆಗೆ ಆಗಮಿಸಿದ ಕಲ್ಲಡ್ಕ ‌ಪ್ರಭಾಕರ ಭಟ್| ‘ಪ್ರಭಾಕರ ಭಟ್ ಗೋ ಬ್ಯಾಕ್’ ಘೋಷಣೆ| ಮಂಗಳೂರು ವಿಶ್ವವಿದ್ಯಾಲಯದಲ್ಲಿ ರೊಚ್ಚಿಗೆದ್ದ ಕ್ಯಾಂಪಸ್ ಫ್ರಂಟ್|

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಪರಿಷತ್ ಘಟಕದ ಉದ್ಘಾಟನೆಗೆ ಕಲ್ಲಡ್ಕ ‌ಪ್ರಭಾಕರ ಭಟ್ ಅವರನ್ನು ಅತಿಥಿ ಆಹ್ವಾನಿಸಿರುವುದನ್ನು ವಿರೋಧಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ( CFI) ಕಾರ್ಯಕರ್ತರು ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ‘ಪ್ರಭಾಕರ ಭಟ್ ಗೋ ಬ್ಯಾಕ್’ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯ ಹಿನ್ನಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ವಿವಿ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಲಾಯಿತು. ‘ದ್ವೇಷ ಭಾಷಣವನ್ನು ನಿರಂತರವಾಗಿ ಮಾಡುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು

ವಿದ್ಯಾರ್ಥಿ ಪರಿಷತ್ ಘಟಕದ ಉದ್ಘಾಟನೆಗೆ ಆಗಮಿಸಿದ ಕಲ್ಲಡ್ಕ ‌ಪ್ರಭಾಕರ ಭಟ್| ‘ಪ್ರಭಾಕರ ಭಟ್ ಗೋ ಬ್ಯಾಕ್’ ಘೋಷಣೆ| ಮಂಗಳೂರು ವಿಶ್ವವಿದ್ಯಾಲಯದಲ್ಲಿ ರೊಚ್ಚಿಗೆದ್ದ ಕ್ಯಾಂಪಸ್ ಫ್ರಂಟ್| Read More »

ಶ್ರೀನಗರ: ಸಿಆರ್‌ಪಿಎಫ್ ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಕಾದಾರಿ ಮಹಿಳೆ

ಸಮಗ್ರ ನ್ಯೂಸ್: ಸಿಆರ್‌ಪಿಎಫ್ ಬಂಕರ್ ಮೇಲೆ ಬುರ್ಕಾದಾರಿ ಮಹಿಳೆಯೊಬ್ಬರು ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದ ಸಿಆರ್‌ಪಿಎಫ್ ಬಂಕರ್ ಬಳಿ ಬರ್ಕಾ ಧರಿಸಿದ ಮಹಿಳೆ ಬಂದಿದ್ದಾರೆ. ಆ ಅಪರಿಚಿತ ಮಹಿಳೆ ತನ್ನ ಬ್ಯಾಗ್‍ನಿಂದ ಪೆಟ್ರೋಲ್ ಬಾಂಬ್ ತೆಗೆದು ಸಿಆರ್‌ಪಿಎಫ್ ಬಂಕರ್ ಮೇಲೆ ಎಸೆದಿದ್ದಾಳೆ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಕಿ ಉರಿಯಲು ಪ್ರಾರಂಭಿಸಿದ ಬಳಿಕ ಅಲ್ಲಿದ್ದ ಪಾದಾಚಾರಿಗಳು ಓಡಿ ಹೋಗಿದ್ದಾರೆ.

ಶ್ರೀನಗರ: ಸಿಆರ್‌ಪಿಎಫ್ ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಕಾದಾರಿ ಮಹಿಳೆ Read More »

ಮಂಗಳೂರು: ನಿಲ್ಲಿಸಿದ್ದ ಕಾರು ನಿಂತಲ್ಲೇ ದಗದಗ|

ಮಂಗಳೂರು: ನಿಲ್ಲಿಸಿದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾದ ಘಟನೆ ಶಕ್ತಿನಗರದ ಬಳಿ ಮಾ.28ರ ಮಂಗಳವಾರ ರಾತ್ರಿ ನಡೆದಿದೆ. ಮಹಿಳೆಯೊಬ್ಬರು ಶಕ್ತಿನಗರದಲ್ಲಿ ತನ್ನ ಸ್ವಿಫ್ಟ್ ಕಾರು ನಿಲ್ಲಿಸಿ ತನ್ನ ಮೊಬೈಲನ್ನು ಕಾರಿನೊಳಗಿಟ್ಟು ವಿಹಾರಕ್ಕೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿ ಸ್ಥಳದಲ್ಲಿ ಬೆಂಕಿ ಕಾಣಿಸಿತು. ತಕ್ಷಣ ಅವರು ಸ್ಥಳೀಯರಿಗೆ ತಿಳಿಸಿದ್ದು, ಮಾಹಿತಿ ಪಡೆದ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗವು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.

ಮಂಗಳೂರು: ನಿಲ್ಲಿಸಿದ್ದ ಕಾರು ನಿಂತಲ್ಲೇ ದಗದಗ| Read More »

ಪುತ್ತೂರು: ಮುಸ್ಲಿಂ ಯುವಕನಿಂದ ಮಾನಭಂಗಕ್ಕೆ ಯತ್ನ

ಸಮಗ್ರ ನ್ಯೂಸ್ : ಆಟೋ ಚಾಲಕನೊಬ್ಬ ತನ್ನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕುಪಿನೋಪಿನಡ್ಕ ನಿವಾಸಿ ಮಹಮ್ಮದ್ ಸಫ್ಘಾನ್ ಅವರು ಪರಿಚಯದ ಮಹಿಳೆಯೊಬ್ಬರನ್ನು ಮಾತನಾಡಲು ಇದೆ ಎಂದು ಹೇಳಿ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾನೆ. ದರ್ಬೆ ಹರ್ಷ ಇಲೆಕ್ಟ್ರಾನಿಕ್ಸ್ ಬಳಿ ತಲುಪುತ್ತಿದ್ದಂತೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು,ಜೀವ ಬೆದರಿಕೆಯೊಡ್ಡಿದ್ದಾನೆ. ಈ ಘಟನೆ ಕುರಿತು ನೊಂದ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರು: ಮುಸ್ಲಿಂ ಯುವಕನಿಂದ ಮಾನಭಂಗಕ್ಕೆ ಯತ್ನ Read More »

”ಹಲಾಲ್ ಒಂದು ಆರ್ಥಿಕ ಜಿಹಾದ್”- ಸಿ.ಟಿ ರವಿ

ಸಮಗ್ರ ನ್ಯೂಸ್: ಕೆಲ ಬಲಪಂಥೀಯ ಸಂಘಟನೆಗಳು ಇದೀಗ ಹಲಾಲ್ ಮಾಂಸದ ನಿಷೇಧಕ್ಕೆ ಒತ್ತಾಯಿಸುತ್ತಿರುವ ನಡುವೆಯೇ, ಹಲಾಲ್ ಆಹಾರ “ಆರ್ಥಿಕ ಜಿಹಾದ್” ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಹಲಾಲ್ ಒಂದು ಆರ್ಥಿಕ ಜಿಹಾದ್. ಅಂದರೆ ಇದನ್ನು ಜಿಹಾದ್ ರೂಪದಲ್ಲಿ ಬಳಸಲಾಗುತ್ತದೆ. ಅಂದರೆ ಮುಸ್ಲಿಮರು ಇತರರ ಜತೆ ವಹಿವಾಟು ನಡೆಸಬಾರದು. ಹಲಾಲ್ ಮಾಂಸವನ್ನೇ ಬಳಸಬೇಕು ಎಂದು ಅವರು ಯೋಚಿಸುವುದಾದರೆ, ಅದನ್ನು ಬಳಸಬಾರದು ಎಂದು ಹೇಳುವುದರಲ್ಲಿ ತಪ್ಪೇನಿದೆ” ಎಂದು ಸುದ್ದಿಗಾರರೊಂದಿಗೆ ಮಾತನಾಡಿದ

”ಹಲಾಲ್ ಒಂದು ಆರ್ಥಿಕ ಜಿಹಾದ್”- ಸಿ.ಟಿ ರವಿ Read More »

ಹರ್ಷ ಕೊಲೆ ಪ್ರಕರಣ| ಎನ್ಐಎ ಯಿಂದ ತನಿಖೆ ಆರಂಭ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಎನ್​ಐಎ ತನಿಖೆ ನೀಡಲಾಗಿತ್ತು. ಇದೀಗ ಎನ್​ಐಎ ತಂಡ ತನ್ನ ತನಿಖೆ ಆರಂಭಿಸಿದೆ. ಫೆಬ್ರವರಿ 20 ರಂದು ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾಗಿತ್ತು. ನಗರದ ಎನ್​ಐಎ ಅಧಿಕಾರಿಗಳು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ತಮ್ಮ ಕಚೇರಿಯಲ್ಲಿ ಕಾರ್ಯ ಆರಂಭಿಸಿದ್ದಾರೆ. ದೊಮ್ಮಲೂರಲ್ಲಿ ಎನ್​ಐಎ ಪ್ರಾದೇಶಿಕ ಕಚೇರಿ ಕಾರ್ಯಾರಂಭವಾಗಿದೆ. ಇದಕ್ಕಾಗಿ ಓರ್ವ ಡಿಐಜಿ, ಒಬ್ಬರು ಎಸ್​ಪಿ, ಇನ್ಸ್​ಪೆಕ್ಟರ್​, ಪಿಎಸ್‌ಐ, ಎಎಸ್‌ಐ,

ಹರ್ಷ ಕೊಲೆ ಪ್ರಕರಣ| ಎನ್ಐಎ ಯಿಂದ ತನಿಖೆ ಆರಂಭ Read More »

ಹಿಜಾಬ್ ಬೇಕು, ಭಗವದ್ಗೀತೆ ಬೇಡ – ನಾಡಿನ ಬುದ್ಧಿಜೀವಿಗಳಿಂದ ಸಿಎಂ ಗೆ ಪತ್ರ

ಸಮಗ್ರ ನ್ಯೂಸ್: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಬೇಕು, ವಸ್ತ್ರ ಸಂಹಿತೆ ಕಡ್ಡಾಯ ಸುತ್ತೋಲೆಯನ್ನು ವಾಪಸ್‌ ಪಡೆಯಬೇಕು, ಧರ್ಮದ ಹೆಸರಿನಲ್ಲಿ ವ್ಯಾಪಾರ ನಿರ್ಬಂಧಕ್ಕೆ ಅವಕಾಶ ನೀಡಬಾರದು, ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಪ್ರಸ್ತಾಪ ಕೈಬಿಡಬೇಕು, ಶಾಂತಿಗೆ ಭಂಗ ತರುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಾಡಿನ ಪ್ರಮುಖ ಸಾಹಿತಿಗಳು ಹಾಗೂ ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಡಾ.ಕೆ. ಮರುಳಸಿದ್ದಪ್ಪ, ಡಾ. ವಿಜಯಾ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಬೊಳುವಾರ ಮಹಮದ್‌ ಕುಂಞ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ರಾಜೇಂದ್ರ

ಹಿಜಾಬ್ ಬೇಕು, ಭಗವದ್ಗೀತೆ ಬೇಡ – ನಾಡಿನ ಬುದ್ಧಿಜೀವಿಗಳಿಂದ ಸಿಎಂ ಗೆ ಪತ್ರ Read More »

ನಿತ್ಯ ಕಾಡುವ ಒಣಕೆಮ್ಮು ಇದೆಯೇ? ಇಲ್ಲಿದೆ ಸರಳ ಆಯುರ್ವೇದ ಪರಿಹಾರ…

ಸಮಗ್ರ ವಿಶೇಷ: ಶೀತ ಕೆಮ್ಮು ಮತ್ತು ಒಣ ಕೆಮ್ಮು ಸಾಧಾರಣವಾಗಿ ಪ್ರತೊಯೊಬ್ಬನನ್ನೂ ಬಾಧಿಸುವ ಖಾಯಿಲೆ. ಶೀತದ ವಿಚಾರದಲ್ಲಿ ಮನುಷ್ಯನಿಗೆ ಎದುರಾಗುವ ಕೆಮ್ಮು, ಮೊದಲು ನೆಗಡಿಯಾಗಿ ಎದೆಯಲ್ಲಿ ಕಫ ಕಟ್ಟಿ ನಂತರ ಕೆಮ್ಮು ಪ್ರಾರಂಭವಾಗುತ್ತದೆ. ಆದರೆ ಒಣ ಕೆಮ್ಮು ಹಾಗಲ್ಲ. ಮೊದಲು ಗಂಟಲು ಕೆರೆತದಿಂದ ಉಂಟಾಗಿ ನಂತರ ಜ್ವರ ಮತ್ತು ಅಲರ್ಜಿಗೆ ಕಾರಣವಾಗುತ್ತದೆ. ನಿರ್ಲಕ್ಷಿಸಿದರೆ ಮುಂದೆ ದೊಡ್ಡ ಅಪಾಯವನ್ನು ಎದುರಿಸಬೇಕಾಗಬಹುದು. ಈ ಒಣಕೆಮ್ಮು ಶಮನಕ್ಕೆ ಮನೆಯಲ್ಲಿ ಮಾಡಿಕೊಳ್ಳಬಹುದಾದ ಸರಳ ಪರಿಹಾರಗಳು ಇಲ್ಲಿವೆ. ಜೇನು: ಇದು ಗಂಟಲಿನಲ್ಲಿ ಒಂದು ಪದರವನ್ನು

ನಿತ್ಯ ಕಾಡುವ ಒಣಕೆಮ್ಮು ಇದೆಯೇ? ಇಲ್ಲಿದೆ ಸರಳ ಆಯುರ್ವೇದ ಪರಿಹಾರ… Read More »