ನಡುರಸ್ತೆಯಲ್ಲೇ ಹೊತ್ತಿಉರಿದ ಕಾರು| ಚಾಲಕ ಸಜೀವ ದಹನ
ಸಮಗ್ರ ನ್ಯೂಸ್ : ನಡುರಸ್ತೆಯಲ್ಲಿ ಕಾರೊಂದು ಹೊತ್ತಿ ಉರಿದು ವ್ಯಕ್ತಿಯೊಬ್ಬರು ಸಜೀವ ದಹನವಾಗಿರುವ ಘೋರ ದುರಂತ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ನೈಸ್ ರಸ್ತೆಯ ಚನ್ನಸಂದ್ರದ ಬಳಿ ನಡು ರಸ್ತೆಯಲ್ಲಿ ಕಾರೊಂದು ಧಗಧಗ ಹೊತ್ತಿ ಉರಿದಿದೆ. ಕೂಡಲೇ ಸ್ಥಳೀಯರು ನೈಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ನೈಸ್ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಕಾರಿನಲ್ಲಿದ್ದ ದರ್ಶನ್ (40) ಸುಟ್ಟು ಕರಕಲಾಗಿದ್ದು, ಆರ್. ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡುರಸ್ತೆಯಲ್ಲೇ ಹೊತ್ತಿಉರಿದ ಕಾರು| ಚಾಲಕ ಸಜೀವ ದಹನ Read More »