ಬೆಂಬಲಿಗರೊಂದಿಗೆ ಮದ್ಯದಂಗಡಿಗೆ ನುಗ್ಗಿ ಕಲ್ಲೆಸೆದ ಮಾಜಿ ಸಿಎಂ ಉಮಾಭಾರತಿ
ಸಮಗ್ರ ನ್ಯೂಸ್: ಮದ್ಯದಂಗಡಿಗೆ ಬೆಂಬಲಿಗರೊಂದಿಗೆ ನುಗ್ಗಿ ಮಧ್ಯಪ್ರದೇಶದ ಮಾಜಿ ಸಿಎಂ ಉಮಾಭಾರತಿ ಕಲ್ಲೆಸೆದ ಘಟನೆ ನಡೆದಿದೆ. ಭೋಪಾಲ್‌ನ BHEL ಪ್ರದೇಶದ ಆಜಾದ್ ನಗರದಲ್ಲಿ ಉಮಾಭಾರತಿಕಲ್ಲೆಸೆದಾಗ ಮದ್ಯದ ಬಾಟಲಿಗಳು ಒಡೆದಿದೆ. ಉಮಾಭಾರತಿ ಕಲ್ಲೆಸೆದಾಗ ಬೆಂಬಲಿಗರು ʼಜೈ ಶ್ರೀ ರಾಂʼ ಘೋಷಣೆಗಳನ್ನು ಕೂಗಿದ್ದಾರೆ. ಮದ್ಯದಂಗಡಿಗೆ ಕಲ್ಲೆಸೆಯುವ ವಿಡಿಯೋವನ್ನು ಸ್ವತಃ ಉಮಾಭಾರತಿಯೇ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರದೇಶದಲ್ಲಿರುವ ಜನರು ಹಣವನ್ನು ಇಲ್ಲಿಗೆ ಸುರಿಯುತ್ತಿದ್ದಾರೆ, ಹತ್ತಿರದಲ್ಲಿ ದೇವಾಲಯಗಳಿವೆ, ಸಣ್ಣ ಮಕ್ಕಳ ಶಾಲೆಗಳಿವೆ ಎಂದು ಉಮಾಭಾರತಿ ಟ್ವೀಟ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಬೆಂಬಲಿಗರೊಂದಿಗೆ ಮದ್ಯದಂಗಡಿಗೆ ನುಗ್ಗಿ ಕಲ್ಲೆಸೆದ ಮಾಜಿ ಸಿಎಂ ಉಮಾಭಾರತಿ Read More »