March 2022

ಹಿಜಾಬ್ ವಿವಾದವನ್ನು ಪ್ರಚೋದಿಸುತ್ತೀರಾ? ಹಾಗಿದ್ರೆ ಹುಷಾರ್; ಗೃಹಸಚಿವರು ಏನೇಳ್ತಾರೆ ಗೊತ್ತಾ?

ಸಮಗ್ರ ನ್ಯೂಸ್: ಹಿಜಾಬ್ ವಿವಾದವನ್ನು ಮುಂದುವರಿಸುವ, ಪ್ರಚೋದಿಸುವ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಹಿಜಾಬ್ ವಿವಾದಕ್ಕೆ ಪ್ರಚೋದನೆ ನೀಡುವ ಸಂಘಟನೆಗಳ ಚಟುವಟಿಕೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ, ಅವುಗಳನ್ನು ನಿಷೇಧಿಸುವ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಸಂಘಟನೆಗಳು ಮಕ್ಕಳನ್ನು ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸುವ ಮಟ್ಟಕ್ಕೆ ಇಳಿದಿದ್ದಾರೆ. ಪೋಷಕರು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ. […]

ಹಿಜಾಬ್ ವಿವಾದವನ್ನು ಪ್ರಚೋದಿಸುತ್ತೀರಾ? ಹಾಗಿದ್ರೆ ಹುಷಾರ್; ಗೃಹಸಚಿವರು ಏನೇಳ್ತಾರೆ ಗೊತ್ತಾ? Read More »

ಪಂಚರಾಜ್ಯ ಚುನಾವಣೆ ಸೋಲು| ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಿಗೆ ‘ಪಂಚ್’ಕಜ್ಜಾಯ

ಸಮಗ್ರ ನ್ಯೂಸ್: ಪಂಚ ರಾಜ್ಯಗಳ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ನಾಯಕತ್ವದಲ್ಲಿ ಭಾರಿ ಬದಲಾವಣೆಯಾಗಲಿದೆ ಅನ್ನೋ ಲೆಕ್ಕಾಚಾರ ಉಲ್ಟಾ ಆಗಿತ್ತು. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸೋನಿಯಾ ಗಾಂಧಿ ಹಾಗೂ ಗಾಂಧಿ ಪರಿವಾರದಿಂದಲೇ ಕಾಂಗ್ರೆಸ್ ಶಕ್ತವಾಗಿ ಮುನ್ನಡೆಸಲು ಸಾಧ್ಯ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಯಾರೂ ಕೂಡ ಸೋಲಿನ ಹೊಣೆ ಹೊತ್ತಿರಲಿಲ್ಲ. ಇದೀಗ ಐದು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರನ್ನು ಚುನಾವಣಾ ಸೋಲಿಗೆ ಹೊಣೆಯಾಗಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೇರಿದಂತೆ ಐದು

ಪಂಚರಾಜ್ಯ ಚುನಾವಣೆ ಸೋಲು| ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಿಗೆ ‘ಪಂಚ್’ಕಜ್ಜಾಯ Read More »

ಮೂವರ ಸಾವಿಗೆ ಕಾರಣವಾಯ್ತು ಕಾಡುಹಂದಿ..!

ಸಮಗ್ರ ನ್ಯೂಸ್ ಡೆಸ್ಕ್: ಜಿಲ್ಲೆಯ ಐಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ದುರ್ಮರಣಕ್ಕೀಡಾಗಿದ್ದಾರೆ. ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿ ಒಟ್ಟು 6 ಮಂದಿ ಇದ್ದರು. ಇವರು ಬೆಂಗಳೂರಿನಿಂದ ದಾವಣಗೆರೆ, ದುರ್ಗದೇವಿ ಜಾತ್ರೆಗಾಗಿ ತೆರಳುತ್ತಿದ್ದರು. ಈ ವೇಳೆ ಐಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾಡುಹಂದಿಗೆ ಕಾರು ಡಿಕ್ಕಿ ಆಗಿದೆ. ಬಳಿಕ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ರವಿಚಂದ್ರ, ವಿಜಯ್ ಕುಮಾರ್ ಇಬ್ಬರ ಗುರುತು ಪತ್ತೆ

ಮೂವರ ಸಾವಿಗೆ ಕಾರಣವಾಯ್ತು ಕಾಡುಹಂದಿ..! Read More »

ರಾಜ್ಯದಲ್ಲಿ ಮತ್ತೆ ಮಳೆ ನಿರೀಕ್ಷೆ| ನಾಳೆಯಿಂದ(ಮಾ.17) ಮೂರು ದಿನ ಪೂರ್ವ ಮುಂಗಾರು ಮಳೆ

ಸಮಗ್ರ ನ್ಯೂಸ್ ಡೆಸ್ಕ್: ನಾಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರದಲ್ಲಿ ವಾಯುಭಾರ ಕುಸಿತದ ಪರಿಣಾಮ ಮಾರ್ಚ್ 17 ರಿಂದ 3 ದಿನ ದಕ್ಷಿಣ ಒಳನಾಡು ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಾರ್ಚ್ 17 ಕ್ಕೆ ಮೈಸೂರು, ಕೊಡಗು ಜಿಲ್ಲೆಯಲ್ಲಿ ಮಳೆಯಾಗಲಿದೆ. ಮಾರ್ಚ್ 18 ರಂದು ಮೈಸೂರು, ಕೊಡಗು, ಚಿಕ್ಕಮಗಳೂರು

ರಾಜ್ಯದಲ್ಲಿ ಮತ್ತೆ ಮಳೆ ನಿರೀಕ್ಷೆ| ನಾಳೆಯಿಂದ(ಮಾ.17) ಮೂರು ದಿನ ಪೂರ್ವ ಮುಂಗಾರು ಮಳೆ Read More »

ಸುಳ್ಯ: ಹಿಜಾಬ್ ಕುರಿತ ತೀರ್ಪಿಗೆ ಮತಾಂಧನಿಂದ ದರ್ಪ| ಜಾಲತಾಣದಲ್ಲಿ ಸಂಘಿಗಳ ವಿರುದ್ಧ ಕಿಡಿಕಾರಿದ ಮುಸ್ಲಿಂ ಯುವಕ

ಸಮಗ್ರ ನ್ಯೂಸ್: ಹಿಜಾಬ್ ಧಾರಣೆ ಕುರಿತಂತೆ ಕರ್ನಾಟಕ ಹೈಕೋರ್ಟ್ ಇಂದು ಐತಿಹಾಸಿಕ ತೀರ್ಪು ‌ನೀಡಿದ್ದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ. ಇದರ ಜೊತೆಗೆ ಹಿಜಾಬ್ ಧರಿಸುವುದು ಇಸ್ಲಾಂನ ಕಡ್ಡಾಯ ಭಾಗವಲ್ಲ ಎಂಬ ತೀರ್ಪು ಕೆಲ ಮತಾಂಧ ಶಕ್ತಿಗಳಿಗೆ ಅರಗಿಸಿಕೊಳ್ಳಲಾಗದೇ ಜಾಲತಾಣಗಳಲ್ಲಿ ಕಿಡಿಕಾರುತ್ತಿರುವುದು ಕಂಡುಬಂದಿದೆ. ಈ ತೀರ್ಪಿನ ವಿರುದ್ದ ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಮರುಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ನಡುವೆ ದ.ಕ ಜಿಲ್ಲೆಯ

ಸುಳ್ಯ: ಹಿಜಾಬ್ ಕುರಿತ ತೀರ್ಪಿಗೆ ಮತಾಂಧನಿಂದ ದರ್ಪ| ಜಾಲತಾಣದಲ್ಲಿ ಸಂಘಿಗಳ ವಿರುದ್ಧ ಕಿಡಿಕಾರಿದ ಮುಸ್ಲಿಂ ಯುವಕ Read More »

ಉಡುಪಿ:ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ನೀಡಿ| ನಾವು ಕುರಾನ್ ಫಾಲೋ ಮಾಡುತ್ತೇವೆ ಹೊರತು ಸರಕಾರದ ಆದೇಶವಲ್ಲ ಎಂದ ಹಿಜಾಬ್ ಹೋರಾಟಗಾರ್ತಿಯರು

ಉಡುಪಿ: ನಾವು ನಮ್ಮ ಕುರಾನ್ ಫಾಲೋ ಮಾಡುತ್ತೇವೆ. ನಾವು ಸರಕಾರದ ಆದೇಶ ಅನುಸರಿಸಬೇಕಾಗಿಲ್ಲ. ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ಬೇಕು ಎಂದು ಹಿಜಾವ್ ಹೋರಾಟಗಾರ್ತಿ ಆಲಿಯಾ ಅಸಾದಿ ಹೇಳಿದ್ದಾರೆ. ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಜಾವ್ ಹೋರಾಟಗಾರ್ತಿಯರು, ನಮ್ಮ ಸಂವಿಧಾನ ಹಕ್ಕಿಗಾಗಿ ಮುಂದಿನ ಹೋರಾಟ ಮಾಡುತ್ತೇವೆ. ನಮಗೆ ನ್ಯಾಯ ಸಿಗುವ ಭರವಸೆ ಇತ್ತು. ನಾವು ಹಿಜಬ್ ತೆಗೆದು ತರಗತಿ ಒಳಗೆ ಹೋಗಲ್ಲ. ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಕುರಾನ್ ನಲ್ಲಿ ದೇಹವನ್ನು ಮುಚ್ಚಬೇಕೆಂಬ

ಉಡುಪಿ:ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ನೀಡಿ| ನಾವು ಕುರಾನ್ ಫಾಲೋ ಮಾಡುತ್ತೇವೆ ಹೊರತು ಸರಕಾರದ ಆದೇಶವಲ್ಲ ಎಂದ ಹಿಜಾಬ್ ಹೋರಾಟಗಾರ್ತಿಯರು Read More »

ಸುಪ್ರೀಂ ಮೆಟ್ಟಿಲೇರಿದ ‘ಹಿಜಾಬ್’| ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಅರ್ಜಿದಾರರು

ಸಮಗ್ರ ನ್ಯೂಸ್: ರಾಜ್ಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ ರಾಜ್ಯ ಹೈಕೋರ್ಟ್‌ ನ ತೀರ್ಪು ಪ್ರಶ್ನಿಸಿ, ಸುಪ್ರೀಂ ಕೋರ್ಟ್ʼನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅಭಿಪ್ರಾಯಪಟ್ಟ ಕರ್ನಾಟಕ ಹೈಕೋರ್ಟ್ʼನ ಹಿಜಾಬ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ʼಗೆ ವಿಶೇಷ ರಜೆ ಅರ್ಜಿ ಸಲ್ಲಿಸಲಾಗಿದೆ. ಮೇಲ್ಮನವಿಯನ್ನು ವಿದ್ಯಾರ್ಥಿನಿ ನಿಭಾ ನಾಜ್‌ ಪರ ವಕೀಲ ಅನಾಸ್‌ ತನ್ವೀರ್‌ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ. ‘ಹಿಜಾಬ್ ಧರಿಸುವ ಹಕ್ಕು ‘ಅಭಿವ್ಯಕ್ತಿ’ ವ್ಯಾಪ್ತಿಗೆ ಬರುತ್ತದೆ ಮತ್ತು ಹೀಗಾಗಿ ಸಂವಿಧಾನದ ಅನುಚ್ಛೇದ

ಸುಪ್ರೀಂ ಮೆಟ್ಟಿಲೇರಿದ ‘ಹಿಜಾಬ್’| ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಅರ್ಜಿದಾರರು Read More »

ಹಿಜಾಬ್ ವಿವಾದ| ಅರ್ಜಿದಾರರಿಂದ ಸುಪ್ರೀಂ ಮೊರೆ ಹೋಗಲು ನಿರ್ಧಾರ

ಸಮಗ್ರ ನ್ಯೂಸ್: ಹಿಜಾಬ್ ಧಾರಣೆ ಇಸ್ಲಾಂ ನ ಕಡ್ಡಾಯ ಭಾಗವಲ್ಲ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಾರದು, ಸರ್ಕಾರದ ಸಮವಸ್ತ್ರ ಆದೇಶ ಪಾಲನೆ ಕಡ್ಡಾಯ ವಾಗಬೇಕು ಎಂಬ ಕರ್ನಾಟಕ ಹೈಕೋರ್ಟ್ ನ ತೀರ್ಪು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಗೆ ಮೊರೆ ಹೋಗಲು ನಿರ್ಧರಿಸಿದ್ದಾರೆ. ಹಿಜಾಬ್ ಗೆ ಸಂಬಂಧಿಸಿದ ಎಲ್ಲಾ ರಿಟ್ ಅರ್ಜಿಗಳನ್ನು ರದ್ದುಗೊಳಿಸಿ ಕರ್ನಾಟಕ ತ್ರಿಸದಸ್ಯ ಪೀಠ ಇಂದು ತನ್ನ ತೀರ್ಪು ಪ್ರಕಟಿಸಿದೆ. ಆದರೆ ಈ ತೀರ್ಪು ಪ್ರಶ್ನಿಸಲು ಅರ್ಜಿದಾರರು ನಿರ್ಧರಿಸಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಈ ಕುರಿತು ದಾವೆ

ಹಿಜಾಬ್ ವಿವಾದ| ಅರ್ಜಿದಾರರಿಂದ ಸುಪ್ರೀಂ ಮೊರೆ ಹೋಗಲು ನಿರ್ಧಾರ Read More »

ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ – ಹೈಕೋರ್ಟ್ ತೀರ್ಪು

ಸಮಗ್ರ ನ್ಯೂಸ್: ಹಿಜಾಬ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವವಾದ ತೀರ್ಪು ನೀಡಿದ್ದು ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎ.ಜಿ ನಾವದಗಿ ಈ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರ ವಿಧಿಸಿರುವ ಸಮವಸ್ತ್ರ ಪಾಲನೆ ಮಾಡುವುದು ಕಡ್ಡಾಯ, ಅದನ್ನು ಪ್ರಶ್ನಿಸುವಂತಿಲ್ಲ. ಸರ್ಕಾರದ ಆದೇಶ ಕಡ್ಡಾಯವಾಗಿದೆ ಎಂದು ಪೀಠ ತೀರ್ಪಿತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ

ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ – ಹೈಕೋರ್ಟ್ ತೀರ್ಪು Read More »

ಖ್ಯಾತ ಅಂತಾರಾಷ್ಟ್ರೀಯ ಕಬ್ಬಡ್ಡಿ ಆಟಗಾರನ ಮೇಲೆ ಗುಂಡಿಟ್ಟು ಹತ್ಯೆ

ಸಮಗ್ರ ನ್ಯೂಸ್: ಜಲಂದರ್ ನ ಮಾಲಿಯನ್ ಗ್ರಾಮದಲ್ಲಿ ನಡೆದ ಕಬಡ್ಡಿ ಕಪ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕಬ್ಬಡ್ಡಿ ಆಟಗಾರ ಸಂದೀಪ್ ನಂಗಲ್ ಅವರನ್ನ ಅಪರಿಚಿತ ಹಲ್ಲೆಕೋರರು ಗುಂಡಿಕ್ಕಿ ಕೊಂದಿದ್ದಾರೆ. ಅವರ ತಲೆ ಮತ್ತು ಎದೆಯ ಮೇಲೆ ಸುಮಾರು 20 ಸುತ್ತುಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ಜಲಂಧರ್ ಉಪ ಪೊಲೀಸ್ ಅಧೀಕ್ಷಕ ಲಖ್ವಿಂದರ್ ಸಿಂಗ್ ವರದಿಯನ್ನು ದೃಢಪಡಿಸಿದ್ದಾರೆ. ಕಬಡ್ಡಿ ಆಟಗಾರನಿಗೆ ಎಂಟರಿಂದ ಹತ್ತು ಗುಂಡುಗಳನ್ನ ಪಂಪ್ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಖ್ಯಾತ ಅಂತಾರಾಷ್ಟ್ರೀಯ ಕಬ್ಬಡ್ಡಿ ಆಟಗಾರನ ಮೇಲೆ ಗುಂಡಿಟ್ಟು ಹತ್ಯೆ Read More »