March 2022

ಸುಳ್ಯ: ಸಂಪಾಜೆ ಬಳಿ ಹೊಳೆಗೆ ಉರುಳಿದ ಸರ್ಕಾರಿ ಬಸ್ – ನಾಲ್ವರು ಗಂಭೀರ; ಹಲವರು ಜಖಂ

ಸಮಗ್ರ ನ್ಯೂಸ್: ಮಾಣಿ – ಮೈಸೂರು ರಾಷ್ಟೀಯ ಹೆದ್ದಾರಿಯ ಸಂಪಾಜೆ ಗಡಿಕಲ್ಲು ಬಳಿ ಸರಕಾರಿ ಬಸ್ಸೊಂದು ರಸ್ತೆ ಬದಿಯ ಹೊಳೆಗೆ ಉರುಳಿದ ಪರಿಣಾಮ ಬಸ್ಸಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡು 30ಕ್ಕೂ ಹೆಚ್ಚು ಮಂದಿ ಜಖಂಗೊಂಡಿರುವ ಘಟನೆ ನಡೆದಿದೆ. ಧರ್ಮಸ್ಥಳದಿಂದ – ಗುಂಡ್ಲುಪೇಟೆಗೆ ತೆರಳುತ್ತಿದ್ದ ಬಸ್ ಇದಾಗಿದ್ದು, ರಸ್ತೆಯಿಂದ ಹೊಳೆಗೆ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಬಸ್ ನ ಟಯರ್ ಸ್ಪೋಟಗೊಂಡಿದ್ದೇ ಘಟನೆಗೆ ಕಾರಣ […]

ಸುಳ್ಯ: ಸಂಪಾಜೆ ಬಳಿ ಹೊಳೆಗೆ ಉರುಳಿದ ಸರ್ಕಾರಿ ಬಸ್ – ನಾಲ್ವರು ಗಂಭೀರ; ಹಲವರು ಜಖಂ Read More »

ಉಪ್ಪಿನಂಗಡಿ: ಹೈಕೋರ್ಟ್ ತೀರ್ಪಿಗಿಲ್ಲ ಮನ್ನಣೆ| ಹಿಜಾಬ್ ತೆಗೆಯದೇ ತರಗತಿ ಬಹಿಷ್ಕರಿಸಿದ ಮುಸ್ಲಿಂ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್: ಹಿಜಾಬ್ ತೆಗೆದು ತರಗತಿಗೆ ಹಾಜರಾಗಲ್ಲ ಎಂದು ತರಗತಿಯಿಂದ ವಿದ್ಯಾರ್ಥಿಗಳು ಹೊರನಡೆದ ಪ್ರಸಂಗ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿನ್ನೆ ನಡೆದಿದೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಪಾಲಿಸಿ ತರಗತಿಯೊಳಗಡೆ ಹಿಜಾಬ್ ಗೆ ಅವಕಾಶವಿಲ್ಲ ಎಂದು ಪ್ರಿನ್ಸಿಪಾಲ್ ವಿದ್ಯಾರ್ಥಿಗಳಿಗೆ ತಿಳಿಸಿದ್ದು ಹಿಜಾಬ್ ತೆಗೆದು ತರಗತಿಗೆ ಹಾಜರಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ತರಗತಿಯಿಂದ ಹೊರಬರುತ್ತಿದ್ದಂತೆ ಹಿಜಾಬ್ ಇವರನ್ನು ಬೆಂಬಲಿಸಿ ಹಲವಾರು ವಿದ್ಯಾರ್ಥಿಗಳು ಇವರ ಹೋರಾಟಕ್ಕೆ ಬೆಂಬಲ ಸೂಚಿಸಿ ತರಗತಿ ಬಹಿಷ್ಕರಿಸಿದ್ದಾರೆ.

ಉಪ್ಪಿನಂಗಡಿ: ಹೈಕೋರ್ಟ್ ತೀರ್ಪಿಗಿಲ್ಲ ಮನ್ನಣೆ| ಹಿಜಾಬ್ ತೆಗೆಯದೇ ತರಗತಿ ಬಹಿಷ್ಕರಿಸಿದ ಮುಸ್ಲಿಂ ವಿದ್ಯಾರ್ಥಿಗಳು Read More »

ವಂಶ ಪಾರಂಪರ್ಯ ರಾಜಕಾರಣಕ್ಕೆ ಬ್ರೇಕ್ ಹಾಕಿದ ಪ್ರಧಾನಿ‌ ಮೋದಿ| ರಾಜ್ಯ ಬಿಜೆಪಿಯಲ್ಲಿ ತಣ್ಣನೆಯ ಕಂಪನ| “ನಮ್ಗೆ ಟಿಕೆಟ್ ತಪ್ಪುತ್ತಾ ಗುರೂ?”

ಸಮಗ್ರ ನ್ಯೂಸ್: ರಾಷ್ಟ್ರೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಹೇಳಿಕೆ ಬೆನ್ನಲ್ಲೆ ರಾಜ್ಯ ಕೇಸರಿ ಪಡೆಯಲ್ಲಿ ತಣ್ಣನೆಯ ನಡುಕ ಶುರುವಾಗಿದೆ. ಪಕ್ಷದಲ್ಲಿ ವಂಶ ರಾಜಕಾರಣಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟ ಸಂದೇಶ ರವಾನಿಸಿರುವ ಪ್ರಧಾನಿ ಮೋದಿ, ಸಂಸದೀಯ ಪಕ್ಷದ ಸಭೆಯಲ್ಲಿ ಕಠಿಣ ಸಂದೇಶ ರವಾನಿಸಿದ್ದಾರೆ. ಹೀಗಾಗಿ ರಾಜ್ಯ ಕೇಸರಿ ಪಡೆಯಲ್ಲಿ ಆತಂಕ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದಲ್ಲಿ ವಂಶವಾದಕ್ಕೆ ಅವಕಾಶವಿಲ್ಲವೆಂದು

ವಂಶ ಪಾರಂಪರ್ಯ ರಾಜಕಾರಣಕ್ಕೆ ಬ್ರೇಕ್ ಹಾಕಿದ ಪ್ರಧಾನಿ‌ ಮೋದಿ| ರಾಜ್ಯ ಬಿಜೆಪಿಯಲ್ಲಿ ತಣ್ಣನೆಯ ಕಂಪನ| “ನಮ್ಗೆ ಟಿಕೆಟ್ ತಪ್ಪುತ್ತಾ ಗುರೂ?” Read More »

ಶೀಘ್ರದಲ್ಲೇ ದಿ.ಪುನೀತ್ ರಾಜ್‍ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ – ಸಿಎಂ

ಸಮಗ್ರ ನ್ಯೂಸ್: ದಿವಂಗತ ನಟ ಪುನೀತ್ ರಾಜ್ ಕುಮಾರ್ ಗೆ ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಇದೀಗ ಈ ಪ್ರಶಸ್ತಿಯನ್ನು ಶೀಘ್ರವೇ ಪ್ರಧಾನ ಮಾಡೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅಂಗಾಂಗ ದಾನ ಮಾಡುವ ಮೂಲಕ, ಸಾವಿನಲ್ಲೂ ಸಾರ್ಥಕತೆ ಮೆರೆದವರು. ನಮಗೂ ಅವರು ಪ್ರೇರಣೆಯಾದಂತವರು. ಈಗಾಗಲೇ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಅವರ ಕುಟುಂಬಸ್ಥರೊಂದಿಗೆ ಮಾತನಾಡಿ, ಶೀಘ್ರವೇ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ ಎಂಬುದಾಗಿ

ಶೀಘ್ರದಲ್ಲೇ ದಿ.ಪುನೀತ್ ರಾಜ್‍ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ – ಸಿಎಂ Read More »

ಮಾಣಿ – ಮಡಿಕೇರಿ ಹೆದ್ದಾರಿ ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆದೇಶ

ಸಮಗ್ರ ನ್ಯೂಸ್: ಕರಾವಳಿ ನಗರಿ ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಮಾಣಿ- ಪುತ್ತೂರು-ಸಂಪಾಜೆ -ಮಡಿಕೇರಿ ಈಗಿರುವ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಂಗಳವಾರ ಆದೇಶ ನೀಡಿದ್ದಾರೆ. ಸಚಿವರನ್ನು ಭೇಟಿ ಮಾಡಿದ ಸಂಸದ ಹಾಗೂ ರಾಜ್ಯ ಬಿಜೆಪಿ ಅದ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ನೇತೃತ್ವದ ತಂಡದ ಬೇಡಿಕೆ ಸ್ಪಂದಿಸಿದ ಸಚಿವರಿಗೆ ಈಗಿರುವ ಈ ಹೆದ್ದಾರಿಯಲ್ಲಿ ವಾಹನಗಳ

ಮಾಣಿ – ಮಡಿಕೇರಿ ಹೆದ್ದಾರಿ ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆದೇಶ Read More »

ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಕುಬ್ಜತಳಿ ಅಡಿಕೆ| ಮತ್ತಷ್ಟು ಮಾದರಿ ತೋಟದ ನಿರ್ಮಾಣಕ್ಕೆ ಸಿಪಿಸಿಆರ್ ಐ ಹೆಜ್ಜೆ

ಸಮಗ್ರ ನ್ಯೂಸ್: ಸುಮಾರು 15 ವರ್ಷ ಹಿಂದೆ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ ಮೂಲಕ ಅಡಕೆ ಪ್ರಪಂಚಕ್ಕೆ ಪರಿಚಯಗೊಂಡ ಕುಬ್ಜ ತಳಿ ಇದೀಗ ಬೇಡಿಕೆ ಹೆಚ್ಚಿಸಿಕೊಂಡಿದೆ. ವಿಶೇಷ ಯೋಜನೆಯೊಂದರ ಅಡಿಯಲ್ಲಿ ಕುಬ್ಜ ತಳಿಯ ಎರಡು ಮಾದರಿ ತೋಟಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ರೂಪಿಸಲಾಗಿದ್ದು, ಇದೀಗ ಇನ್ನಷ್ಟು ಮಾದರಿ ತೋಟಗಳ ರಚನೆಯತ್ತ ಒಲವು ವ್ಯಕ್ತವಾಗಿದೆ. ವಿಟ್ಲ ಸಿಪಿಸಿಆರ್‌ಐನ ತಳಿ ಅಭಿವೃದ್ಧಿ ವಿಭಾಗದ ವಿಜ್ಞಾನಿ ನಾಗರಾಜ್‌ ಪ್ರಕಾರ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್‌,

ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಕುಬ್ಜತಳಿ ಅಡಿಕೆ| ಮತ್ತಷ್ಟು ಮಾದರಿ ತೋಟದ ನಿರ್ಮಾಣಕ್ಕೆ ಸಿಪಿಸಿಆರ್ ಐ ಹೆಜ್ಜೆ Read More »

ನಾಳೆ(ಮಾ.17) ದೇಶಾದ್ಯಂತ ‘ಜೇಮ್ಸ್’ ಅಬ್ಬರ| ಪುನಿತ್ ಹುಟ್ಟುಹಬ್ಬಕ್ಕೆ ಅಪ್ಪು ಅಭಿನಯದ ಕೊನೆಯ ಚಿತ್ರ ರಿಲೀಸ್

ಸಮಗ್ರ ನ್ಯೂಸ್ ಡೆಸ್ಕ್: ಮಾ.17ರಂದು ಪುನೀತ್​ ರಾಜ್​ ಕುಮಾರ್​ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇಶಾದ್ಯಂತ ಜೇಮ್ಸ್​ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಪ್ಪು ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ನಾಳೆ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​​ ಅವರ 47ನೇ ಹಟ್ಟುಹಬ್ಬವಾಗಿದ್ದು,ಅವರು ನಮ್ಮನ್ನಗಲಿ ನಾಲ್ಕು ತಿಂಗಳುಗಳೇ ಕಳೆದಿವೆ. ಈ ನೋವಿನಲ್ಲೂ ಅಪ್ಪು ಅಭಿಮಾನಿಗಳು ಅವರ ಹುಟ್ಟುಹಬ್ಬದ ಜೊತೆಗೆ ಜೇಮ್ಸ್ ಸಿನಿಮಾ ಬಿಡುಗಡೆ ಜಾತ್ರೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಜೇಮ್ಸ್ ಸಿನಿಮಾದ ಅದ್ಧೂರಿ ಸ್ವಾಗತಕ್ಕೆ ಅಭಿಮಾ‌ನಿಗಳು ಸಜ್ಜುಜೇಮ್ಸ್ ಚಿತ್ರದ ರಿಲೀಸ್ ದಿನವನ್ನು ಹಬ್ಬದಂತೆ

ನಾಳೆ(ಮಾ.17) ದೇಶಾದ್ಯಂತ ‘ಜೇಮ್ಸ್’ ಅಬ್ಬರ| ಪುನಿತ್ ಹುಟ್ಟುಹಬ್ಬಕ್ಕೆ ಅಪ್ಪು ಅಭಿನಯದ ಕೊನೆಯ ಚಿತ್ರ ರಿಲೀಸ್ Read More »

ಸುಳ್ಯ: ನ್ಯಾಯಾಂಗ ತೀರ್ಪು ನಿಂದಿಸಿ ಜಾಲತಾಣಗಳಲ್ಲಿ ಬರವಣಿಗೆ| ಸಂಪಾಜೆಯ ಯುವಕ ಅರೆಸ್ಟ್

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣದಲ್ಲಿ ಹೈಕೋರ್ಟ್ ಹಿಜಾಬ್ ಕುರಿತು ನೀಡಿದ್ದ ಆದೇಶವನ್ನು ಅಸಭ್ಯ ಪದಗಳಿಂದ ಟೀಕಿಸಿದ್ದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಅಬ್ದುಲ್ ಮುತಾಲಿಬ್ (24)ಎಂದು ಗುರುತಿಸಲಾಗಿದೆ. ಹಿಜಾಬ್ ಶಾಲಾ-ಕಾಲೇಜುಗಳಲ್ಲಿ ನಿಷೇಧ ಕುರಿತಂತೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈ ಕೋರ್ಟ್ ನಿನ್ನೆ ಎತ್ತಿ ಹಿಡಿಯುತ್ತಿದ್ದಂತೆ ಈತ ತೀವ್ರ ಅಸಮಾಧಾನಗೊಂಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ನಿಂದನಾತ್ಮಕ ಪದಗಳನ್ನು ಪ್ರಕಟಿಸಿ ಬೈದಿದ್ದ. ಇದು ವೈರಲ್ ಆಗಿತ್ತು. ಈತನ ವಿರುದ್ಧ ಕೊಡಗು ಸಂಪಾಜೆ ಠಾಣೆಯಲ್ಲಿ ದೂರು

ಸುಳ್ಯ: ನ್ಯಾಯಾಂಗ ತೀರ್ಪು ನಿಂದಿಸಿ ಜಾಲತಾಣಗಳಲ್ಲಿ ಬರವಣಿಗೆ| ಸಂಪಾಜೆಯ ಯುವಕ ಅರೆಸ್ಟ್ Read More »

ಹಿಜಾಬ್ ತೀರ್ಪು ವಿರೋದಿಸಿ ನಾಳೆ(ಮಾ.17) ಕರ್ನಾಟಕ ಬಂದ್ ಗೆ ಕರೆ

ಸಮಗ್ರ ನ್ಯೂಸ್: ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ನಿರಾಶದಾಯಕವಾಗಿದ್ದು, ತೀರ್ಪು ವಿರೋಧಿಸಿ ಮಾರ್ಚ್ 17ರಂದು ಕರ್ನಾಟಕ ಬಂದ್ ನಡೆಸಬೇಕು ಎಂದು ಅಮೀರ್ ಎ ಶರೀಯತ್ ಮೌಲಾನಾ ಸಗೀರ್ ಅಹ್ಮದ್ ಕರೆ ನೀಡಿದ್ದಾರೆ. ಮಾರ್ಚ್ 17 ಗುರುವಾರ ಎಲ್ಲರೂ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ತಮ್ಮ ವಿರೋಧವನ್ನು ವ್ಯಕ್ತಿಪಡಿಸಬೇಕು. ನ್ಯಾಯಕ್ಕಾಗಿ ಒತ್ತಾಯಿಸಿ ಈ ಬಂದ್ ಕರೆ ನೀಡಲಾಗಿದ್ದು, ಬಂದ್ ಶಾಂತಿಯುತವಾಗಿಬೇಕು. ಬಲವಂತದ ಬಂದ್ ನಡೆಸಬಾರದು. ಜಾಥಾ, ಮೆರವಣಿಗೆ ಕೂಡ ನಡೆಸಬಾರದು ಎಂದು ಅವರು ಮನವಿ ಮಾಡಿದ್ದಾರೆ.ಹಿಜಾಬ್

ಹಿಜಾಬ್ ತೀರ್ಪು ವಿರೋದಿಸಿ ನಾಳೆ(ಮಾ.17) ಕರ್ನಾಟಕ ಬಂದ್ ಗೆ ಕರೆ Read More »

ಕಾಂಗ್ರೆಸ್ ಕೈ ಹಿಡಿದ ಕಲಾಸಾಮ್ರಾಟ್ ಎಸ್.‌ನಾರಾಯಣ್

ಸಮಗ್ರ ನ್ಯೂಸ್ ಡೆಸ್ಕ್: ಬೆಂಗಳೂರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟನಾಗಿ ಗುರುತಿಸಿಕೊಂಡಿರುವ ಎಸ್​ ನಾರಾಯಣ್ ರಾಜಕೀಯಕ್ಕೆ ಧುಮುಕಿದ್ದಾರೆ. ಇಂದು ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಎಸ್​ ನಾರಾಯಣ್​ ಅಧಿಕೃತವಾಗಿ ಕೈ ಹಿಡಿದಿದ್ದಾರೆ. ಇದೇ ವೇಳೆ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಣ ತಿಮ್ಮಯ್ಯ ಪುರ್ಲೆ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರು.

ಕಾಂಗ್ರೆಸ್ ಕೈ ಹಿಡಿದ ಕಲಾಸಾಮ್ರಾಟ್ ಎಸ್.‌ನಾರಾಯಣ್ Read More »