March 2022

ಬೆಳ್ತಂಗಡಿ: ಭೀಕರ ಅಪಘಾತ| ಸಹೋದರರು ಸ್ಥಳದಲ್ಲೇ ದುರ್ಮರಣ

ಸಮಗ್ರ ನ್ಯೂಸ್: KSRTC ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸಹೋದರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು ವೇಣೂರು ಸಮೀಪದ ನಂದಿಬೆಟ್ಟದಲ್ಲಿನಡೆದಿದೆ. ಸಿರಾಜ್,ಸಾದಿಕ್ ಮೃತಪಟ್ಟ ಸಹೋದರರು ಎಂದು ಗುರುತಿಸಲಾಗಿದೆ. ಇವರು ಬಂಡಾಡ್ ರಝಾಕ್ ಮಾಸ್ಟರ್ ಅವರ ಮಕ್ಕಳು ಎಂದು ತಿಳಿದು ಬಂದಿದೆ. ಬೆಳ್ತಂಗಡಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ KSRTC ಬಸ್ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಯುವಕರಿಬ್ಬರು ಮೃತಪಟ್ಟಿದ್ದಾರೆ.

ಬೆಳ್ತಂಗಡಿ: ಭೀಕರ ಅಪಘಾತ| ಸಹೋದರರು ಸ್ಥಳದಲ್ಲೇ ದುರ್ಮರಣ Read More »

ಬಾಂಗ್ಲಾದೇಶ: ರಾಧಾಕಾಂತ ದೇವಾಲಯ ನೆಲಸಮ| 200 ಮಂದಿಯಿಂದ ಏಕಕಾಲಕ್ಕೆ ದಾಳಿ ನಡೆಸಿ ಲೂಟಿ

ಸಮಗ್ರ ನ್ಯೂಸ್: ಢಾಕಾದ ವಾರಿಯ 222 ಲಾಲ್ ಮೋಹನ್ ಸಹಾ ಬೀದಿಯಲ್ಲಿರುವ ಇಸ್ಕಾನ್ ರಾಧಾಕಾಂತ ದೇವಾಲಯದ ಮೇಲೆ 200ಕ್ಕೂ ಹೆಚ್ಚು ಜನರು ಗುರುವಾರ ದಾಳಿ ನಡೆಸಿ, ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೇ ಲೂಟಿ ಮಾಡಿರೋದಾಗಿ ತಿಳಿದು ಬಂದಿದೆ. ವರದಿಗಳ ಪ್ರಕಾರ, ಸುಮಂತ್ರ ಚಂದ್ರ ಶ್ರವಣ್, ನಿಹಾರ್ ಹಲ್ದಾರ್, ರಾಜೀವ್ ಭದ್ರಾ ಸೇರಿದಂತೆ ಅನೇಕ ಜನರು ದಾಳಿಯಲ್ಲಿ ಗಾಯಗೊಂಡಿದ್ದಾರೆ. ಗುಂಪಿನ ನೇತೃತ್ವವನ್ನು ಹಾಜಿ ಶಫಿವುಲ್ಲಾ ವಹಿಸಿದ್ದರು ಎಂದು ತಿಳಿದುಬಂದಿದೆ. ಕಳೆದ ವರ್ಷವೂ ಇದೇ ದೇವಾಲಯದ ಮೇಲೆ ದಾಳಿ ನಡೆಸಲಾಗಿತ್ತು. ಆಗ

ಬಾಂಗ್ಲಾದೇಶ: ರಾಧಾಕಾಂತ ದೇವಾಲಯ ನೆಲಸಮ| 200 ಮಂದಿಯಿಂದ ಏಕಕಾಲಕ್ಕೆ ದಾಳಿ ನಡೆಸಿ ಲೂಟಿ Read More »

ಮಾ.20: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ಮಡಂತ್ಯಾರು ಶಾಖೆ ಉದ್ಘಾಟನೆ

ಸಮಗ್ರ ನ್ಯೂಸ್: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ 17ನೇ ಮಡಂತ್ಯಾರು ಶಾಖೆಯು ಮಡಂತ್ಯಾರಿನಲ್ಲಿ ಮಾ.20ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 1997ರಲ್ಲಿ ಗೌಡರ ಸೇವಾ ಸಂಘ ಸುಳ್ಯ ಇವರಿಂದ ಪ್ರವರ್ತಿಸಲ್ಪಟ್ಟ ಸಂಘವು 435 ಜನರಿಂದ ಪ್ರಾರಂಭವಾಗಿ, ಪ್ರಸ್ತುತ 14261 ಜನ ವಿವಿಧ ವರ್ಗದ ಸದಸ್ಯರಿದ್ದು, ರೂ.3.50 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ. ಸಂಘದಲ್ಲಿ ರೂ.120.00 .ಕೋಟಿಗೂ ಮಿಕ್ಕಿ ಠೇವಣಿಯದ್ದು, ರೂ.103.00 ಕೋಟಿಗೂ ಮಿಕ್ಕಿ ವಿವಿಧ ಸಾಲಗಳನ್ನು ಸದಸ್ಯರಿಗೆ

ಮಾ.20: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ಮಡಂತ್ಯಾರು ಶಾಖೆ ಉದ್ಘಾಟನೆ Read More »

ಸುಳ್ಯ/ಪುತ್ತೂರು: ‘ದಿ ಕಾಶ್ಮೀರ ಪೈಲ್ಸ್’ ಸಿನಿಮಾ ಉಚಿತ ಪ್ರದರ್ಶನಕ್ಕೆ ಶಾಸಕರಿಂದ ವ್ಯವಸ್ಥೆ

ಸಮಗ್ರ ನ್ಯೂಸ್: ದೇಶದಲ್ಲಿ ಭಾರೀ ಸಂಚಲನ ಮೂಡಿಸಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರಿ ಫೈಲ್ಸ್’ ಚಲನಚಿತ್ರವನ್ನು ಸುಳ್ಯದ ಸಂತೋಷ್ ಚಿತ್ರ ಮಂದಿರ ಹಾಗೂ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುಳ್ಯದಲ್ಲಿ ಸಚಿವ ಅಂಗಾರ ಹಾಗೂ ಪುತ್ತೂರಿನಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಉಚಿತವಾಗಿಸಿನಿಮಾ ತೋರಿಸಲು ವ್ಯವಸ್ಥೆ ಮಾಡಲಾಗಿದೆ. ಸಚಿವ ಎಸ್. ಅಂಗಾರ ನೇತೃತ್ವದಲ್ಲಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ಮಾ.19 ರಂದು ಸುಳ್ಯದ ಸಂತೋಷ್ ಚಿತ್ರಮಂದಿರದಲ್ಲಿ 4

ಸುಳ್ಯ/ಪುತ್ತೂರು: ‘ದಿ ಕಾಶ್ಮೀರ ಪೈಲ್ಸ್’ ಸಿನಿಮಾ ಉಚಿತ ಪ್ರದರ್ಶನಕ್ಕೆ ಶಾಸಕರಿಂದ ವ್ಯವಸ್ಥೆ Read More »

ಕಡಬ: ಸೀಬೆ ಮರದಿಂದ ಬಿದ್ದು ಬಾಲಕ ಸಾವು

ಸಮಗ್ರ ನ್ಯೂಸ್: ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಸೀಬೆ ಮರ ಹತ್ತಲು ಹೋಗಿ ಉರುಳಿ ಬಿದ್ದು ಮೃತಪಟ್ಟ ಘಟನೆ ಕಡಬ ತಾಲೂಕಿನ ದೋಳ್ಪಾಡಿ ಬಳಿ ಮಾ.17ರ ಸಂಜೆ ನಡೆದಿದೆ. ಎಡಮಂಗಲ ಸಮೀಪದ ದೋಳ್ಪಾಡಿ ಮರಕ್ಕಡ ಮನೆಯ ದಿವಾಕರ ಗೌಡರವರ ಪುತ್ರ ಉಲ್ಲಾಸ್ ಡಿ.ಎಂ (8 ವ.) ಮೃತ ಬಾಲಕ. ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಉಲ್ಲಾಸ್, ಎಂದಿನಂತೆ ಶಾಲೆಗೆ ಹೋಗಿ ಸಂಜೆ ಮನೆಗೆ ಹಿಂತಿರುಗಿದ್ದಾನೆ. ಮನೆಗೆ ಬಂದ ಬಳಿಕ ಮನೆ

ಕಡಬ: ಸೀಬೆ ಮರದಿಂದ ಬಿದ್ದು ಬಾಲಕ ಸಾವು Read More »

ಹಿಜಾಬ್ ಕುರಿತು ಕೋರ್ಟ್ ಮೆಟ್ಟಿಲೇರಿದವರು ಭಯೋತ್ಪಾದಕರಂತೆ! – ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಮುಖಂಡ

ಸಮಗ್ರ ನ್ಯೂಸ್: ಶಾಲಾ-ಕಾಲೇಜ್ ಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯರು ಉಗ್ರ ಸಂಘಟನೆಯ ಸದಸ್ಯರು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು ಆರೋಪಿಸಿದ್ದಾರೆ. ಹೈಕೋರ್ಟ್ ತೀರ್ಪಿನ ವಿರುದ್ಧ ಮಾತನಾಡಿದ ಆರು ವಿದ್ಯಾರ್ಥಿನಿಯರು ದೇಶ ವಿರೋಧಿಗಳು ಮತ್ತು ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂದು ಉಡುಪಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಯಶ್ಪಾಲ್ ಸುವರ್ಣ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿಜಾಬ್ ಕುರಿತು ಕೋರ್ಟ್ ಮೆಟ್ಟಿಲೇರಿದವರು ಭಯೋತ್ಪಾದಕರಂತೆ! – ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಮುಖಂಡ Read More »

ಪಿಎಫ್ ಮೇಲೆ ತೆರಿಗೆ ಹೊರೆ| ಎ.1ರಿಂದಲೇ ನಿಯಮ ಜಾರಿ

ಸಮಗ್ರ ನ್ಯೂಸ್: ನೌಕರರ ಭವಿಷ್ಯ ನಿಧಿ(ಇಪಿಎಫ್) ದೇಣಿಗೆ ಮೇಲೆ 2.5 ಲಕ್ಷ ರೂ. ಮೇಲ್ಪಟ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಏಪ್ರಿಲ್ 1 ರಿಂದ ನಿಯಮ ಜಾರಿಗೆ ಬರಲಿದೆ. ಪಿಎಫ್ ಖಾತೆಗಳನ್ನು ತೆರಿಗೆ ಖಾತೆ ಮತ್ತು ತೆರಿಗೆ ರಹಿತ ದೇಣಿಗೆ ಖಾತೆಗಳೆಂದು ವರ್ಗೀಕರಣ ಮಾಡಲಾಗುತ್ತದೆ. ಖಾಸಗಿ ಉದ್ಯೋಗಿಗಳು 5 ಲಕ್ಷ ರೂ. ಪಿಎಫ್ ಖಾತೆಗೆ ಜಮಾ ಮಾಡಿದರೆ, 2.5 ಲಕ್ಷ ರೂಪಾಯಿ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಸರ್ಕಾರಿ ಉದ್ಯೋಗಿಗಳು ಪಿಎಫ್ ಖಾತೆ ಜನರಲ್ ಪಿಎಫ್ ಆಗಿದ್ದು,

ಪಿಎಫ್ ಮೇಲೆ ತೆರಿಗೆ ಹೊರೆ| ಎ.1ರಿಂದಲೇ ನಿಯಮ ಜಾರಿ Read More »

“ಬಣ್ಣಗಳಲ್ಲವೇ ಬದುಕನ್ನು ತುಂಬುವುದು” | ಪ್ರಕೃತಿಯ ರಂಗಿಗೆ ಹೋಳಿಯೇ ಬರಬೇಕು|

ಸಮಗ್ರ ವಿಶೇಷ: ರಸ್ತೆಯ ತುಂಬೆಲ್ಲಾ ಮರದಿಂದ ಉದುರಿದ ಹೂಗಳ ರಾಶಿ. ಪಕಳೆ ಕಳಚಿ ಬಿದ್ದ ಒಂದೊಂದು ಹೂವು ಕೂಡಾ ಪ್ರಕೃತಿಯ ರಂಗನ್ನು ಹೆಚ್ಚಿಸಿದೆ. ಮರಗಳು ಎಲೆಗಳ ಉದುರಿಸಿ ಬಣ್ಣದ ಹೂಗಳ ಗೊಂಚಲ ಸುರಿಸುತ್ತಿವೆ. ಇನ್ನೇನು ಕೆಲ ದಿನಗಳಲ್ಲಿ ಬರುವ ನವಯುಗಾದಿಯ ಸ್ವಾಗತಿಸಲು ರೆಡಿಯಾದಂತೆ ಕಾಣುತ್ತಿವೆ. ಅರೆ! ಇದೇನಿದು? ಎನಿಸುತ್ತಿರುವಾಗ ನೆನಪಾದದ್ದು ರಂಗಿನ ಹಬ್ಬ ‘ಹೋಳಿ’. ಕಾಮದಹನ, ಹೋಳಿ ಹುಣ್ಣಿಮೆ, ಮುಂತಾಗಿ ಕರೆಯುವ ಈ ಹಬ್ಬ ಭಾರತದ ಉದ್ದಗಲಕ್ಕೂ ಆಚರಿಸುವ ಬಣ್ಣದ ಓಕುಳಿಯ ಜಾತ್ರೆ. ಹಿರಿ ಕಿರಿದೆನ್ನದೆ ಪ್ರತೀ

“ಬಣ್ಣಗಳಲ್ಲವೇ ಬದುಕನ್ನು ತುಂಬುವುದು” | ಪ್ರಕೃತಿಯ ರಂಗಿಗೆ ಹೋಳಿಯೇ ಬರಬೇಕು| Read More »

ಹಿಜಾಬ್ ವಿವಾದದಲ್ಲಿ ‌ಪರೀಕ್ಷೆ ತಪ್ಪಿಸಿಕೊಂಡರೆ ಮತ್ತೆ ಬರೆಯಲು ಅವಕಾಶವಿಲ್ಲ – ಸಚಿವ ಮಾಧುಸ್ವಾಮಿ

ಸಮಗ್ರ ನ್ಯೂಸ್: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡರೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಚಿವ ಜೆ. ಮಾಧುಸ್ವಾಮಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರಘುಪತಿ ಭಟ್, ಹಿಜಾಬ್ ಸಂಘರ್ಷದ ವೇಳೆ ಪರೀಕ್ಷೆಯಿಂದ ವಂಚಿತರಾದವರಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಕೊಡಬೇಕು. ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಕೋರ್ಟ್ ತೀರ್ಪು ಬಂದ ಬಳಿಕವೂ ಕೆಲ ಕಾಲೇಜಿನಲ್ಲಿ ವಿವಾದ ಮುಂದುವರೆದಿದೆ. ಅನಗತ್ಯ ವಿವಾದ

ಹಿಜಾಬ್ ವಿವಾದದಲ್ಲಿ ‌ಪರೀಕ್ಷೆ ತಪ್ಪಿಸಿಕೊಂಡರೆ ಮತ್ತೆ ಬರೆಯಲು ಅವಕಾಶವಿಲ್ಲ – ಸಚಿವ ಮಾಧುಸ್ವಾಮಿ Read More »

ಪ್ರಬಲ ಭೂಕಂಪಕ್ಕೆ ತತ್ತರಿಸಿದ ಜಪಾನ್| ಸೂರ್ಯೋದಯದ ನಾಡಲ್ಲಿ ಜನಜೀವನ ದುಸ್ಥರ

ಸಮಗ್ರ ನ್ಯೂಸ್: ಬುಧವಾರ ರಾತ್ರಿ ಉತ್ತರ ಜಪಾನ್‌ ನ ಫುಕುಶಿಮಾ ಕರಾವಳಿಯಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೂ 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪ್ರಬಲ ಭೂಕಂಪದಿಂದ ಹಲವು ನಗರಗಳಲ್ಲಿ ವಿದ್ಯುತ್ ವ್ಯವಸ್ಥೆ ಕಡಿತಗೊಂಡಿದೆ ಎಂದು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಅಕ್ಷಾಂಶ 37.7 ಮತ್ತು ಪೂರ್ವ ರೇಖಾಂಶ 141.7ರ 60 ಕಿಮೀ ಆಳದಲ್ಲಿ, ಬುಧವಾರ ಸ್ಥಳೀಯ ಕಾಲಮಾನ ರಾತ್ರಿ 11.36ರ ಸುಮಾರಿಗೆ ಕಂಪನ ಸಂಭವಿಸಿದೆ.

ಪ್ರಬಲ ಭೂಕಂಪಕ್ಕೆ ತತ್ತರಿಸಿದ ಜಪಾನ್| ಸೂರ್ಯೋದಯದ ನಾಡಲ್ಲಿ ಜನಜೀವನ ದುಸ್ಥರ Read More »