March 2022

ಪಾವಗಡ ಬಳಿ ಖಾಸಗಿ‌ ಬಸ್ ಪಲ್ಟಿ| 8ಕ್ಕೂ ಅಧಿಕ ಮಂದಿ ಸಾವು| ಹಲವರು ಜಖಂ

ಸಮಗ್ರ ನ್ಯೂಸ್: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್​ ಪಲ್ಟಿಯಾದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಪಾವಗಡ ಪಟ್ಟಣದಿಂದ ವೈ.ಎನ್. ಹೊಸಕೋಟೆ ಗ್ರಾಮಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ. ಗಾಯಾಳುಗಳನ್ನು ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ […]

ಪಾವಗಡ ಬಳಿ ಖಾಸಗಿ‌ ಬಸ್ ಪಲ್ಟಿ| 8ಕ್ಕೂ ಅಧಿಕ ಮಂದಿ ಸಾವು| ಹಲವರು ಜಖಂ Read More »

ಸಾವಿನ ನೋವಲ್ಲೂ ಸಾರ್ಥಕತೆ ಮೆರೆದ ನವೀನ್ ಕುಟುಂಬ| ಪಾರ್ಥಿವ ಶರೀರ ಎಸ್.ಎಸ್ ಆಸ್ಪತ್ರೆಗೆ ಹಸ್ತಾಂತರಿಸಲು ನಿರ್ಧಾರ|

ಸಮಗ್ರ ನ್ಯೂಸ್: ಉಕ್ರೇನ್ ನಲ್ಲಿ ಮೃತವಾಗಿರುವ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದೆ. ಬೆಂಗಳೂರಿನಿಂದ ನೇರವಾಗಿ ಹುಟ್ಟೂರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನವೀನ್ ಮೃತದೇಹಕ್ಕೆ ಅಂತಿಮ ವಿಧಿವಿಧಾನಗಳನ್ನು ಸಲ್ಲಿಸಿದ ಬಳಿಕ, ಶವವನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾನ ನೀಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್, ಮಗನ ಮೃತದೇಹ ಸೋಮವಾರ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾವಿನ ನೋವಲ್ಲೂ ಸಾರ್ಥಕತೆ ಮೆರೆದ ನವೀನ್ ಕುಟುಂಬ| ಪಾರ್ಥಿವ ಶರೀರ ಎಸ್.ಎಸ್ ಆಸ್ಪತ್ರೆಗೆ ಹಸ್ತಾಂತರಿಸಲು ನಿರ್ಧಾರ| Read More »

ಮಹಿಳೆಯ ಖಾಸಗಿ‌ ಅಂಗದೊಳಗಿತ್ತು ಗಾಜಿನ ಚೂರು| ಶಸ್ತ್ರಚಿಕಿತ್ಸೆ ನಡೆಸಿದ ‌ವೈದ್ಯರಿಗೆ ಶಾಕ್

ಸಮಗ್ರ ಡಿಜಿಟಲ್ ಡೆಸ್ಕ್: ಶಸ್ತ್ರ ಚಿಕಿತ್ಸೆ ‌ನಡೆಸಿದ ವೈದ್ಯರನ್ನೂ ಬೆಚ್ಚಿ ಬೀಳಿಸಿದಂತಹ ಘಟನೆ ಇದು. ಟ್ಯುನೀಶಿಯಾದ 45 ವರ್ಷದ ಮಹಿಳೆಯೊಬ್ಬಳ ಖಾಸಗಿ ಅಂಗದಲ್ಲಿ 4 ವರ್ಷಗಳಿಂದ ಗಾಜಿನ ಚೂರೊಂದು ಸಿಕ್ಕಿಹಾಕಿಕೊಂಡಿತ್ತು. ಅದನ್ನು ಹೊರತೆಗೆದ ವೈದ್ಯರೇ ಶಾಕ್‌ ಆಗಿದ್ದಾರೆ. ಈ ಮಹಿಳೆಗೆ ಯಾವಾಗಲೂ ಖಾಸಗಿ ಅಂಗದಲ್ಲಿ ತೀವ್ರ ನೋವು ಬರುತ್ತಿತ್ತು. ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತಿತ್ತು. ಕಳೆದ 4 ವರ್ಷಗಳಿಂದ ನೋವು ಉಣ್ಣುತ್ತಿದ್ದ ಮಹಿಳೆ ಕೊನೆಗೂ ತಪಾಸಣೆಗಾಗಿ ವೈದ್ಯರ ಬಳಿ ಹೋಗಿದ್ದಾಳೆ. ಮಹಿಳೆಯ ಖಾಸಗಿ ಅಂಗದಲ್ಲಿ 8

ಮಹಿಳೆಯ ಖಾಸಗಿ‌ ಅಂಗದೊಳಗಿತ್ತು ಗಾಜಿನ ಚೂರು| ಶಸ್ತ್ರಚಿಕಿತ್ಸೆ ನಡೆಸಿದ ‌ವೈದ್ಯರಿಗೆ ಶಾಕ್ Read More »

ಚಲಿಸುತ್ತಿದ್ದ ಕಾರಲ್ಲೇ ಮಹಿಳೆಯ ಅತ್ಯಾಚಾರ!

ಸಮಗ್ರ ನ್ಯೂಸ್: ಹೊಳೆ-ಮೊಹಲ್ಲಾದ ನಿಮಿತ್ತ ಆನಂದಪುರ ಸಾಹಿಬ್‌ ಗೆ ಬಂದ ಮಹಿಳೆ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ನೀಡಿದ ಆನಂದ್‌ಪುರ್ ಸಾಹಿಬ್ ಇನ್‌ಸ್ಪೆಕ್ಟರ್ ಗುರುಪ್ರೀತ್ ಸಿಂಗ್, ಮಾರ್ಚ್ 16 ರಂದು ನವನ್‌ ಶಹರ್ ಬಳಿಯ ಖಟ್ಕರ್‌ ಕಲನ್‌ ನಲ್ಲಿ ಪಂಜಾಬ್‌ನ ನೂತನ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಂಬಂಧಿಸಿದಂತೆ ಟ್ರಾಫಿಕ್ ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿತ್ತು. ಆನಂದಪುರ ಸಾಹಿಬ್ ಕಡೆಯಿಂದ ವೇಗವಾಗಿ ಬರುತ್ತಿದ್ದ ವಾಹನದ ಕಡೆಯಿಂದ

ಚಲಿಸುತ್ತಿದ್ದ ಕಾರಲ್ಲೇ ಮಹಿಳೆಯ ಅತ್ಯಾಚಾರ! Read More »

ಹಿಜಾಬ್ ಧರಿಸಿ ಪರೀಕ್ಷೆ, ತರಗತಿಗೆ ಹಾಜರಾಗಲು ನಿಯಮ ಸಡಿಲಿಕೆ ಇಲ್ಲವೇ ಇಲ್ಲ- ಸಚಿವ ಬಿ.ಸಿ‌ ನಾಗೇಶ್

ಸಮಗ್ರ ನ್ಯೂಸ್: ಹೈಕೋರ್ಟ್ ನೀಡಿದ ತೀರ್ಪಿನ ಅನ್ವಯ ಹಿಜಾಬ್ ಧರಿಸಿ ಶಾಲೆಗೆ ಹಾಜರಾಗಲು ಅಥವಾ ಪರೀಕ್ಷೆಗೆ ಹಾಜರಾಗಲು ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ನೀಡಿದೆ ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮತ್ತೆ ಅವಕಾಶ ಸಡಿಲಿಕೆ ಇರುವುದಿಲ್ಲ. ಇನ್ನು ಮುಂದೆ ಪರೀಕ್ಷೆಯ ವಿಚಾರದಲ್ಲಿ ವಿಶೇಷ ಅವಕಾಶವನ್ನು ನೀಡಲ್ಲ. ಇಷ್ಟು ದಿನ ಕೋರ್ಟ್ ತೀರ್ಪು ಬಂದಿರಲಿಲ್ಲ. ಹೀಗಾಗಿ ಶಿಕ್ಷಣ

ಹಿಜಾಬ್ ಧರಿಸಿ ಪರೀಕ್ಷೆ, ತರಗತಿಗೆ ಹಾಜರಾಗಲು ನಿಯಮ ಸಡಿಲಿಕೆ ಇಲ್ಲವೇ ಇಲ್ಲ- ಸಚಿವ ಬಿ.ಸಿ‌ ನಾಗೇಶ್ Read More »

ಡಾ. ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ‘ಸಹಕಾರ ರತ್ನ‌’ ಪ್ರಶಸ್ತಿ – ಸಚಿವ ಎಸ್.ಟಿ ಸೋಮಶೇಖರ್

ಸಮಗ್ರ ನ್ಯೂಸ್: ಡಾ. ಪುನೀತ್​​ ರಾಜ್​ ಕುಮಾರ್​​ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಅಂತ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ. ಅವರು ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಸರ್ಕಾರದ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದ್ದು, ಈ ನಡುವೆ ಸಹಕಾರ ರತ್ನ ಪ್ರಶಸ್ತಿ ಲಭಿಸಿರುವುದು ಅಪ್ಪು ಅಭಿಮಾನಿಗಳಿಗೆ ಇನ್ನಷ್ಟು ಹರ್ಷ ತಂದಿದೆ.

ಡಾ. ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ‘ಸಹಕಾರ ರತ್ನ‌’ ಪ್ರಶಸ್ತಿ – ಸಚಿವ ಎಸ್.ಟಿ ಸೋಮಶೇಖರ್ Read More »

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಬದಲಿಸಿದ ಪ್ರಕರಣ| ಬಿ ರಿಪೋರ್ಟ್ ಸಲ್ಲಿಸಿದ ಪೊಲೀಸರು| ಮಗುವಿನ ಪೋಷಕರು ಯಾರು?

ಸಮಗ್ರ ನ್ಯೂಸ್: ಕಳೆದ ವರ್ಷ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ‘ಮಗು ಅದಲು ಬದಲು’ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಮಂಗಳೂರು ಉತ್ತರ ಠಾಣಾ(ಬಂದರು) ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪ್ರಯೋಗಾಲಯದಲ್ಲಿ ನಡೆಸಲಾದ ಡಿಎನ್‌ಎ ಪರೀಕ್ಷೆ ವರದಿ ತನಿಖಾಧಿಕಾರಿಯ ಕೈಸೇರಿದ್ದು, ಅದರಲ್ಲಿ ದೂರುದಾರ ಮುಸ್ತಫಾ ಅವರೇ ಮಗುವಿನ ತಂದೆ ಎಂಬುದನ್ನು ವರದಿ ಖಚಿತಪಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ನನಗೆ ಜನಿಸಿದ ಆರೋಗ್ಯವಂತ ಹೆಣ್ಣು ಮಗುವನ್ನು ಬದಲಿಸಿ, ಆಸ್ಪತ್ರೆಯ

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಬದಲಿಸಿದ ಪ್ರಕರಣ| ಬಿ ರಿಪೋರ್ಟ್ ಸಲ್ಲಿಸಿದ ಪೊಲೀಸರು| ಮಗುವಿನ ಪೋಷಕರು ಯಾರು? Read More »

“ನಾಯಕತ್ವ ಬದಲಿಸಿಕೊಳ್ಳಿ, ಇಲ್ಲದಿದ್ದರೆ ಕರ್ನಾಟಕದಲ್ಲೂ ಆಪ್ ನಿಮ್ಮನ್ನ ಗುಡಿಸುತ್ತೆ”| ಮೂರೂ ಪಕ್ಷಗಳಿಗೆ ಎಚ್ಚರಿಕೆ ಇತ್ತ ಲೆಹರ್ ಸಿಂಗ್

ಸಮಗ್ರ ನ್ಯೂಸ್: ‘ರಾಜ್ಯದಲ್ಲಿ ಪ್ರಮುಖವಾಗಿರುವ ಮೂರೂ ಪಕ್ಷಗಳ ನಾಯಕತ್ವ ಬದಲಾವಣೆಯಾಗದಿದ್ದರೆ ಅವುಗಳು ಧೂಳಿಪಟವಾಗುತ್ತವೆ. ದೆಹಲಿ ರೀತಿಯಲ್ಲಿ ಆಮ್ ಆದ್ಮಿ ಪಕ್ಷವು ಎಲ್ಲರನ್ನೂ ಗುಡಿಸುತ್ತದೆ’ ಎಂದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ ಎಚ್ಚರಿಕೆ ನೀಡಿದರು. ವಿಧಾನ ಪರಿಷತ್‌ನಲ್ಲಿ ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೆಹರ್‌ ಸಿಂಗ್‌, ‘ನಾನು 12 ವರ್ಷಗಳಿಂದ ಸದನದಲ್ಲಿದ್ದೇನೆ. ಪಕ್ಷ ನನಗೆ ಎರಡು ಅವಧಿಗೆ ಅವಕಾಶ‌ ನೀಡಿದೆ. ‌ಮತ್ತೆ ನಾನು ಅವಕಾಶ ಕೇಳುವುದಿಲ್ಲ.

“ನಾಯಕತ್ವ ಬದಲಿಸಿಕೊಳ್ಳಿ, ಇಲ್ಲದಿದ್ದರೆ ಕರ್ನಾಟಕದಲ್ಲೂ ಆಪ್ ನಿಮ್ಮನ್ನ ಗುಡಿಸುತ್ತೆ”| ಮೂರೂ ಪಕ್ಷಗಳಿಗೆ ಎಚ್ಚರಿಕೆ ಇತ್ತ ಲೆಹರ್ ಸಿಂಗ್ Read More »

ಶಿವಮೊಗ್ಗ: ಆಲಿಕಲ್ಲು ಸಹಿತ ಭಾರೀ ಮಳೆ| ಹಲವೆಡೆ ಕೃಷಿ ಹಾನಿ

ಸಮಗ್ರ ನ್ಯೂಸ್: ಜಿಲ್ಲೆಯಲ್ಲಿ ಇಂದು ಸುರಿದ ಆಲಿಕಲ್ಲು ಸಹಿತ ಭಾರೀ ಗಾಳಿ ಮಳೆಗೆ ಮಲೆನಾಡು ತತ್ತರಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಾಗರ ತಾಲೂಕಿನ ತ್ಯಾಗರ್ತಿ, ಗೌತಮಪುರ ಹಾಗೂ ಬರೂರು ಗ್ರಾಮ ಪಂಚಾಯತ್​ ವ್ಯಾಪ್ತಿಯ ಭಾಗದಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ ನಿರಂತರವಾಗಿ ಗುಡುಗು ಸಹಿತ ಭಾರೀ ಮಳೆ ಮಳೆಯಾಗಿದೆ. ಸುಮಾರು ಒಂದು ಗಂಟೆ ಸುರಿದ ಮಳೆಗೆ ಕುಡಿಗೇರಿ, ಸಂಪಳ್ಳಿ, ಕೋಟೆಕೊಪ್ಪ ಭಾಗದ ಜನರು ಹೈರಾಣಾಗಿದ್ದಾರೆ. ದಿಢೀರ್ ಸುರಿದ ಮಳೆ ಹಾಗೂ ಗಾಳಿಯ ರಭಸಕ್ಕೆ ಹಲವೆಡೆ ಮರಗಳು ಧರೆಗುರುಳಿದೆ. ಕೃಷಿ

ಶಿವಮೊಗ್ಗ: ಆಲಿಕಲ್ಲು ಸಹಿತ ಭಾರೀ ಮಳೆ| ಹಲವೆಡೆ ಕೃಷಿ ಹಾನಿ Read More »

ಕರಾವಳಿಯಲ್ಲಿ ಮಳೆರಾಯನ ಸಿಂಚನ

ಸಮಗ್ರ ನ್ಯೂಸ್: ವಿಪರೀತ ಸೆಕೆಯಿಂದ ಕಂಗೆಟ್ಟಿದ್ದ ಕರಾವಳಿಗೆ ಮತ್ತೊಂದು ಮಳೆಯ ಸಿಂಚನವಾಗಿದೆ. ಕರಾವಳಿಯ ಬಹುತೇಕ ಕಡೆ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ ಈ ಮಳೆಗೆ ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಯ, ಸುಳ್ಯ, ಕಡಬ, ಪುತ್ತೂರು ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆ ಮಳೆ ಸುರಿದಿದ್ದು, ಇಳೆ ತಂಪಾಗಿದೆ. ಕೃಷಿ ಭೂಮಿ ತಂಪಾಗಿದ್ದು, ಕೃಷಿಕರು ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯಾಧ್ಯಂತ ಮಳೆ ಸಂಭವ: ಇಂದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆಯಾಗುವ

ಕರಾವಳಿಯಲ್ಲಿ ಮಳೆರಾಯನ ಸಿಂಚನ Read More »