March 2022

21ದಿನಗಳ ಬಳಿಕ ತಾಯ್ನಾಡಿಗೆ ತಲುಪಿದ ನವೀನ್ ಪಾರ್ಥಿವ ಶರೀರ

ಸಮಗ್ರ ನ್ಯೂಸ್: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ 21 ದಿನಗಳ ನಂತರ ತಾಯ್ನಾಡಿಗೆ ತಲುಪಿದೆ. ದುಬೈ ಮೂಲಕ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ನವೀನ್ ಪಾರ್ಥಿವ ಶರೀರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಸಂಸದ ಶಿವಕುಮಾರ್ ಉದಾಸಿ, ಸಚಿವ ಡಾ.ಕೆ.ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಂತಿಮ ದರ್ಶನ ಪಡೆದರು. ಮೃತ ನವೀನ್ ಅಣ್ಣ ಹರ್ಷ ಸೇರಿದಂತೆ ಗ್ರಾಮಸ್ಥರು ಪಾರ್ಥಿವ […]

21ದಿನಗಳ ಬಳಿಕ ತಾಯ್ನಾಡಿಗೆ ತಲುಪಿದ ನವೀನ್ ಪಾರ್ಥಿವ ಶರೀರ Read More »

“ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ” – ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬಹಿರಂಗ ಕೊಲೆ ಬೆದರಿಕೆಯೊಡ್ಡಿದ ಇಸ್ಲಾಮಿಕ್ ಸಂಘಟನೆ

ಸಮಗ್ರ ನ್ಯೂಸ್: “ಹಿಜಾಬ್‌ ಇಸ್ಲಾಂನ ಅತ್ಯಗತ್ಯ ಭಾಗವಲ್ಲ’ ಎಂದು ತೀರ್ಪು ನೀಡಿರುವ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ತಮಿಳುನಾಡಿನ ಇಸ್ಲಾಮಿಕ್‌ ಸಂಘಟನೆಯೊಂದು ಬಹಿರಂಗವಾಗಿಯೇ ಕೊಲೆ ಬೆದರಿಕೆ ಹಾಕಿದೆ. ಮಧುರೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ತಮಿಳುನಾಡು ತೌಹೀದ್‌ ಜಮಾತ್‌(ಟಿಎನ್‌ಟಿಜೆ) ಸಂಘಟನೆಯ ನಾಯಕ ಕೊವಾಯಿ ಆರ್‌. ರೆಹಮತುಲ್ಲಾ, “ಮುಂದೊಂದು ದಿನ ಹಿಜಾಬ್‌ ತೀರ್ಪು ಕೊಟ್ಟ ಆ ನ್ಯಾಯಮೂರ್ತಿಗಳಿಗೆ ಏನಾದರೂ ಆದರೆ, ಅದಕ್ಕೆ ಅವರೇ ಹೊಣೆಗಾರರು ಹೊರತು ನಾವಲ್ಲ’ ಎಂದು ಹೇಳಿದ್ದರು. ಹಾಗೆಯೇ ಈ ರೀತಿ ಬೆದರಿಕೆ ಹಾಕಿದ್ದಕ್ಕೆ ನಮ್ಮನ್ನು ಜೈಲಿಗೆ ಹಾಕುವುದಾದರೆ ಅದನ್ನು

“ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ” – ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬಹಿರಂಗ ಕೊಲೆ ಬೆದರಿಕೆಯೊಡ್ಡಿದ ಇಸ್ಲಾಮಿಕ್ ಸಂಘಟನೆ Read More »

ಸುಳ್ಯ: ಸಂಪಾಜೆಯಲ್ಲಿ ಮಚ್ಚು ತೋರಿಸಿ ಮನೆ ದರೋಡೆ| ಭಾರೀ ಪ್ರಮಾಣದ ನಗ-ನಗದು ಕಳವು|

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತೀ ದೊಡ್ಡ ದರೋಡೆ ಪ್ರಕರಣವೊಂದು ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಿನ್ನೆ ರಾತ್ರಿ 8.30ಕ್ಕೆ ನಡೆದಿದೆ. ಮಾರಕಾಸ್ತ್ರ ಸಜ್ಜಿತ ದರೋಡೆಕೋರರ ತಂಡ ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಅವರ ಅಂಬಾಶ್ರಮ ಮನೆಗೆ ನುಗ್ಗಿ ಮನೆಮಂದಿಯನ್ನು ಮಚ್ಚು ಹಿಡಿದು ಬೆದರಿಸಿ 100 ಗ್ರಾಂ. ಚಿನ್ನ ಹಾಗೂ 1.50 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸಂಪಾಜೆಯಲ್ಲಿ ದೇವರ ಪೂಜಾ ಕಾರ್ಯ, ಜ್ಯೋತಿಷ್ಯ ಶಾಸ್ತ್ರದಲ್ಲಿ ಅಂಬರೀಶ್ ಭಟ್ ಅವರ ಕುಟುಂಬ

ಸುಳ್ಯ: ಸಂಪಾಜೆಯಲ್ಲಿ ಮಚ್ಚು ತೋರಿಸಿ ಮನೆ ದರೋಡೆ| ಭಾರೀ ಪ್ರಮಾಣದ ನಗ-ನಗದು ಕಳವು| Read More »

ಡಾ ಅನುರಾಧಾ ಕುರುಂಜಿಗೆ ರಾಷ್ಟ್ರೀಯ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ

ಸಮಗ್ರ ನ್ಯೂಸ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕಿ, ಜೆಸಿ ವಲಯ ತರಬೇತುದಾರರಾಗಿರುವ ಡಾ. ಅನುರಾಧಾ ಕುರುಂಜಿಯವರು ನವದೆಹಲಿಯ ಅಚೀವರ್ಸ್ ಅಸೋಸಿಯೇಷನ್ ಫಾರ್ ಹೆಲ್ತ್ ಅಂಡ್ ಎಜ್ಯುಕೇಷನ್ ಗ್ರೋತ್ ಸಂಸ್ಥೆಯ ಪ್ರೈಡ್ ಆಫ್ ಇಂಡಿಯಾ ಅವಾರ್ಡ್ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ 2022 ನೇ ಸಾಲಿನ‌ ಈ ಪ್ರಶಸ್ತಿಗೆ ಡಾ ಅನುರಾಧಾ ಕುರುಂಜಿಯವರನ್ನು ಆಯ್ಕೆ ಮಾಡಲಾಗಿದೆ. ಇವರು ಕುರುಂಜಿ ಪದ್ಮಯ್ಯ ಗೌಡ ಮತ್ತು ಸೀತಮ್ಮ ದಂಪತಿಗಳ ಪುತ್ರಿ. ಮತ್ತು

ಡಾ ಅನುರಾಧಾ ಕುರುಂಜಿಗೆ ರಾಷ್ಟ್ರೀಯ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ Read More »

ಮುಂದೊಮ್ಮೆ ಕೇಸರಿ ಧ್ವಜವೇ ರಾಷ್ಟ್ರಧ್ವಜವಾದೀತು- ಕಲ್ಲಡ್ಕ ಪ್ರಭಾಕರ ಭಟ್

ಸಮಗ್ರ ನ್ಯೂಸ್: ಮುಂದೊಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜವಾದೀತು ಎಂದು RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಕುತ್ತಾರಿನಲ್ಲಿ ನಡೆದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಸಮಾರೋಪ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯಿಂದ ಭಾರತದ ರಾಷ್ಟ್ರಧ್ವಜ ಇಬ್ಭಾಗವಾಯಿತು. ಮುಂದೊಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜವಾದೀತು. ಇದು ಯಾಕೆ ಅಂತ ನಾನು ಈ ಬಗ್ಗೆ ಸ್ಪಷ್ಟೀಕರಣ ಕೊಡ್ತೇನೆ. ಈ ಮೂರು ಬಣ್ಣಗಳ ರಾಷ್ಟ್ರಧ್ವಜವನ್ನು

ಮುಂದೊಮ್ಮೆ ಕೇಸರಿ ಧ್ವಜವೇ ರಾಷ್ಟ್ರಧ್ವಜವಾದೀತು- ಕಲ್ಲಡ್ಕ ಪ್ರಭಾಕರ ಭಟ್ Read More »

ಪಠ್ಯಪುಸ್ರಕದಲ್ಲಿ ಭಗವದ್ಗೀತೆ ತರಲ್ಲ – ಮಾಧುಸ್ವಾಮಿ

ಸಮಗ್ರ ನ್ಯೂಸ್: ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದ ಯಾವ ಪ್ರಸ್ತಾಪವೂ ಸರಕಾರದ ಮುಂದೆ ಇಲ್ಲ. ಪ್ರಸ್ತಾಪವೇ ಇಲ್ಲವೆಂದ ಮೇಲೆ ಚರ್ಚೆ ಯಾಕೆ? ಈ ಬಗ್ಗೆ ಶಿಕ್ಷಣ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಉಳಿದ ವಿಚಾರ ನನಗೆ ಗೊತ್ತಿಲ್ಲ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನವನ್ನು ಈ ವಾರ ಮೊಟಕುಗೊಳಿಸುವುದಿಲ್ಲ. ಮಾರ್ಚ್ 30 ರವರೆಗೆ ಅಧಿವೇಶನ ನಡೆಯುತ್ತದೆ. ಯಾವುದೇ ಕಾರಣಕ್ಕೂ ಸದನ ಮೊಟಕು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಭಗವದ್ಗೀತೆಯನ್ನು ಮುಂದಿನ ವರ್ಷದಿಂದ ಪಠ್ಯದಲ್ಲಿ

ಪಠ್ಯಪುಸ್ರಕದಲ್ಲಿ ಭಗವದ್ಗೀತೆ ತರಲ್ಲ – ಮಾಧುಸ್ವಾಮಿ Read More »

ಮಡಂತ್ಯಾರ್: ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 17ನೇ ನೂತನ ಶಾಖೆ ಉದ್ಘಾಟನೆ| “ಗ್ರಾಮೀಣ ಭಾಗದ ಆರ್ಥಿಕ ಶಕ್ತಿಯಾಗಿ ಪ್ರೇರಣೆ – ಹರೀಶ್ ಪೂಂಜಾ

ಸಮಗ್ರ ನ್ಯೂಸ್: ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಗ್ರಾಮೀಣ ಭಾಗದಲ್ಲಿ ಆರಂಭಗೊಂಡು‌ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು. ಅವರು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿ ಆರಂಭಗೊಂಡ ಸೊಸೈಟಿಯ ನೂತನ 17ನೇ ಶಾಖೆಯ ಉದ್ಘಾಟನೆ ನಡೆಸಿ ಮಾತನಾಡುತ್ತಿದ್ದರು. ಸೊಸೈಟಿಯು ಗ್ರಾಮೀಣ ಭಾಗದಲ್ಲಿ ಆರ್ಥಿಕ ಸದೃಢತೆಯನ್ನು ಹುಟ್ಟುಹಾಕಿದೆ. ರಾಜ್ಯದಲ್ಲಿ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ಸಂಸ್ಥೆ ಇಂದು ಹಲವರಿಗೆ ಪ್ರೇರಣೆಯಾಗಿದೆ. ಮಡಂತ್ಯಾರ್ ಶಾಖೆ ಉತ್ತಮವಾದ ವ್ಯವಹಾರ ಮಾಡಿ ಆರ್ಥಿಕ ಶಕ್ತಿಯಾಗಿ ಬೆಳೆಯಲಿ,

ಮಡಂತ್ಯಾರ್: ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 17ನೇ ನೂತನ ಶಾಖೆ ಉದ್ಘಾಟನೆ| “ಗ್ರಾಮೀಣ ಭಾಗದ ಆರ್ಥಿಕ ಶಕ್ತಿಯಾಗಿ ಪ್ರೇರಣೆ – ಹರೀಶ್ ಪೂಂಜಾ Read More »

ಮಂಗಳೂರು: ನೈತಿಕ ಪೊಲೀಸ್ ಗಿರಿಗೆ ಬಂದವರಿಗೆ ಮುಖಭಂಗ| ಅನ್ಯಧರ್ಮೀಯ ಜೋಡಿ ಎಂದು ತಿಳಿದು ಪ್ರಶ್ನಿಸಲು ಬಂದವರು ಪೇಚುಮೋರೆ ಹಾಕಿಹೊದರು

ಸಮಗ್ರ ನ್ಯೂಸ್: ಖಾಸಗಿ ಬಸ್​ಒಂದರಲ್ಲಿ ಬಿಹಾರದ ಯುವಕನ ಜೊತೆಗೆ ಮಹಿಳೆಯೊಬ್ಬಳು ಪ್ರಯಾಣಿಸುತ್ತಿದ್ದು, ಇವರನ್ನು ನೋಡಿದ ಕೆಲವರಿಗೆ ತಲೆಯಲ್ಲಿ ಮತೀಯ ವಿಚಾರ ಬಂದಿದೆ. ಇವರಿಬ್ಬರನ್ನು ಅನ್ಯಮತೀಯ ಜೋಡಿ ಎಂದು ಬಸ್ ತಡೆದವರಿಗೇ ಕೊನೆಗೆ ತಾವು ತಪ್ಪು ತಿಳಿದಿರುವುದು ಅರಿವಿಗೆ ಬಂದಿರುವ ಘಟನೆ ಶುಕ್ರವಾರ ಮಂಗಳೂರಿನ ಗುರುಪುರದಲ್ಲಿ ನಡೆದಿದೆ. ಮಂಗಳೂರಿನ ವಿವಾಹಿತ ಮಹಿಳೆಯೊಬ್ಬಳು ಬಿಹಾರದ ಗೆಳೆಯನೊಂದಿಗೆ ಬಸ್​ನಲ್ಲಿ ಸಂಚರಿಸುತ್ತಿದ್ದಳು. ಮೂಡುಬಿದಿರೆಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್​ನಲ್ಲಿದ್ದ ಯುವಕ ಮತ್ತು ಗೃಹಿಣಿಯನ್ನು ನೋಡಿದವರು ಅವರು ಅನ್ಯಮತೀಯ ಜೋಡಿ ಎಂದು ಗುರುಪುರದ ಹಿಂದೂ ಸಂಘಟನೆಯ

ಮಂಗಳೂರು: ನೈತಿಕ ಪೊಲೀಸ್ ಗಿರಿಗೆ ಬಂದವರಿಗೆ ಮುಖಭಂಗ| ಅನ್ಯಧರ್ಮೀಯ ಜೋಡಿ ಎಂದು ತಿಳಿದು ಪ್ರಶ್ನಿಸಲು ಬಂದವರು ಪೇಚುಮೋರೆ ಹಾಕಿಹೊದರು Read More »

ಕೌಟುಂಬಿಕ ಕಲಹ; ತಂದೆಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಮಗ

ಸಮಗ್ರ ನ್ಯೂಸ್: ಶನಿವಾರ ತಡರಾತ್ರಿ ನಡೆದ ಭೀಕರ ದುರ್ಘಟನೆಯಲ್ಲಿ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಗೋಪಾಡಿಯಲ್ಲಿ ತಂದೆಯನ್ನು ಸ್ವಂತ ಮಗನೇ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಗೋಪಾಡಿ ಗ್ರಾಮದ ಹಾಲಾಡಿ ಮನೆ ನಿವಾಸಿ ನರಸಿಂಹ ಮರಕಾಲ (74) ಮೃತ ವ್ಯಕ್ತಿ. ಇವರ ಮಗ ರಾಘವೇಂದ್ರ (36) ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಕೌಟುಂಬಿಕ ಕಲಹ; ತಂದೆಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಮಗ Read More »

ಅತಿವೇಗದ ಚಾಲನೆ| ಮರಕ್ಕೆ ಡಿಕ್ಕಿ ಹೊಡೆದು ಕಾರು ಬೆಂಕಿಗಾಹುತಿ| ಮೂವರು ಸ್ಪಾಟ್ ಓಟ್

ಸಮಗ್ರ ನ್ಯೂಸ್: ಅತಿವೇಗದಿಂದ ಚಲಿಸುತ್ತಿದ್ದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು‌ ಬೆಂಕಿಗಾಹುತಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿರುವ ಬಸ್ ಡಿಪೋ ಸಮೀಪದಲ್ಲಿ ಶನಿವಾರ ಸಂಭವಿಸಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗದಗ ನಗರದ ದರ್ಶನ್ ರಾಜ್ ಪುರೋಹಿತ್ (22), ಶೌಖತ್ ಅಲಿ ಖಾನ್ (23), ಮೈಪೂಸ್ ಆಲಂ (22) ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೊಹಮ್ಮದ್ ಮುಲ್ಲಾ ಅವರಿಗೆ ರೋಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅತಿವೇಗದ ಚಾಲನೆ| ಮರಕ್ಕೆ ಡಿಕ್ಕಿ ಹೊಡೆದು ಕಾರು ಬೆಂಕಿಗಾಹುತಿ| ಮೂವರು ಸ್ಪಾಟ್ ಓಟ್ Read More »