March 2022

ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ| ಪತಿಯ ನೆನೆದು‌ ಕಣ್ಣೀರಾದ ಅಶ್ವಿನಿ

ಸಮಗ್ರ ನ್ಯೂಸ್: ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ, ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಪತ್ನಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು, ಮರಣೋತ್ತರವಾಗಿ ಪುನೀತ್ ರಾಜ್ ಕುಮಾರ್ ಗೆ ನೀಡಲಾದ ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಈ ಬಳಿಕ ಪುನೀತ್ ನೆನೆದು ಕಣ್ಣೀರಿಟ್ಟರು. ಈ ಬಗ್ಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂಬುದಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಸಂದರ್ಭದಲ್ಲಿ, ಪುನೀತ್ ಪತ್ನಿ ಅಶ್ವಿನಿ ಮಾತನಾಡಿ, ಅಂದು ಪುನೀತ್ […]

ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ| ಪತಿಯ ನೆನೆದು‌ ಕಣ್ಣೀರಾದ ಅಶ್ವಿನಿ Read More »

ಡಿಸಿಸಿ ಬ್ಯಾಂಕ್ ನಲ್ಲಿ ರಾಜಕೀಯ ಚದುರಂಗಕ್ಕೆ ಅಂಕುಶ| ಅಪೆಕ್ಸ್ ಬ್ಯಾಂಕ್ ಜೊತೆ ವಿಲೀನಕ್ಕೆ ಚಿಂತನೆ| ಶೀಘ್ರದಲ್ಲೇ ಆಡಳಿತಾಧಿಕಾರಿಗಳ ನೇಮಕ

ಸಮಗ್ರ ನ್ಯೂಸ್: ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕುಗಳನ್ನು ಅಪೆಕ್ಸ್ ಬ್ಯಾಂಕ್ ಜೊತೆ ವಿಲೀನ ಮಾಡಲು ಕೇಂದ್ರ ಸರಕಾರ ಮುಂದಾಗಿದ್ದು, ಇವುಗಳಲ್ಲಿ ನಡೆಯುತ್ತಿದ್ದ ರಾಜಕೀಯ ಮೇಲಾಟಗಳಿಗೆ ಅಂಕುಶ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಒಂದು ವರ್ಷದ ಹಿಂದೆಯೇ ಎಲ್ಲ ರಾಜ್ಯಗಳಿಗೂ ಕೇಂದ್ರ ಸರಕಾರದ ಸಹಕಾರಿ ಸಚಿವಾಲಯದಿಂದ ಸುತ್ತೋಲೆ ಕಳುಹಿಸಿದ್ದು, ಕೇರಳ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಅನುಷ್ಠಾನಗೊಂಡ ಇದು ಇನ್ನು ಕರ್ನಾಟಕದಲ್ಲಿ ಕೂಡಾ ನಡೆಯಲಿದೆ. ಕೇಂದ್ರ ಸರಕಾರದ ಸಹಕಾರಿ ಸಚಿವಾಲಯದಿಂದ ಸುತ್ತೋಲೆ ಕಳುಹಿಸಿದ್ದು, ಕೇರಳ ಮತ್ತು ಜಾರ್ಖಂಡ್ ರಾಜ್ಯದಲ್ಲಿ

ಡಿಸಿಸಿ ಬ್ಯಾಂಕ್ ನಲ್ಲಿ ರಾಜಕೀಯ ಚದುರಂಗಕ್ಕೆ ಅಂಕುಶ| ಅಪೆಕ್ಸ್ ಬ್ಯಾಂಕ್ ಜೊತೆ ವಿಲೀನಕ್ಕೆ ಚಿಂತನೆ| ಶೀಘ್ರದಲ್ಲೇ ಆಡಳಿತಾಧಿಕಾರಿಗಳ ನೇಮಕ Read More »

ಮತ್ತೆ ಜನಸಾಮಾನ್ಯರಿಗೆ ತೈಲ ಬೆಲೆ ಹೊರೆ| ಗೃಹಿಣಿಯರ ಕಾಸಿಗೆ ಕತ್ತರಿ| ಪೆಟ್ರೋಲ್, ಗ್ಯಾಸ್ ದರದಲ್ಲಿ ಏರಿಕೆ

ಸಮಗ್ರ ನ್ಯೂಸ್: ಜನಸಾಮಾನ್ಯರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಈಗಾಗಲೇ ಅಡುಗೆ ಎಣ್ಣೆ ಸೇರಿದಂತೆ ಇತರೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್‌ ಕೊಟ್ಟಿದೆ. ಇಂದಿನಿಂದ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದೆ. 2021ರ ಅಕ್ಟೋಬರ್‌ ನಂತರ ಇದೇ ಮೊದಲ ಬಾರಿಗೆ ದೇಸೀ LPG ಸಿಲಿಂಡರ್ ದರ ಏರಿಕೆಯಾಗಿದೆ.ಸುಮಾರು ನಾಲ್ಕೂವರೆ ತಿಂಗಳ ನಂತರ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ. ಪ್ರತಿ ಲೀಟರ್‌

ಮತ್ತೆ ಜನಸಾಮಾನ್ಯರಿಗೆ ತೈಲ ಬೆಲೆ ಹೊರೆ| ಗೃಹಿಣಿಯರ ಕಾಸಿಗೆ ಕತ್ತರಿ| ಪೆಟ್ರೋಲ್, ಗ್ಯಾಸ್ ದರದಲ್ಲಿ ಏರಿಕೆ Read More »

ಬೆಂಗಳೂರು: 6 ರಿಂದ 8ನೇ ತರಗತಿ ಬೋಧಕರ ಹುದ್ದೆಗೆ ನೇಮಕಾತಿ ಅಧಿಸೂಚನೆ ಪ್ರಕಟ| ಇಲ್ಲಿದೆ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ) ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಂದರೆ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು [ಸಾರ್ವಜನಿಕ ಶಿಕ್ಷಣ ಇಲಾಖೆ] [ನೇಮಕಾತಿ] [ವಿಶೇಷ] ನಿಯಮಗಳು – 2022 ಸಂ:ಇಪಿ 89 ಪಿಬಿಎಸ್ 2021(ಭಾಗ-1) ದಿನಾಂಕ:22-02-2022 ರ ನಿಯಮಗಳನ್ವಯ ಆಯ್ಕೆ ಮಾಡಲು ಈ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ನೇಮಕಾತಿಗೆ ಅರ್ಜಿ ಸಲ್ಲಿಸಲು

ಬೆಂಗಳೂರು: 6 ರಿಂದ 8ನೇ ತರಗತಿ ಬೋಧಕರ ಹುದ್ದೆಗೆ ನೇಮಕಾತಿ ಅಧಿಸೂಚನೆ ಪ್ರಕಟ| ಇಲ್ಲಿದೆ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ Read More »

‘ಅಸಾನಿ ಎಫೆಕ್ಟ್’; ರಾಜ್ಯದಲ್ಲಿ ಭಾರೀ ಮಳೆ ಸಂಭವ, ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯ ಹವಾಮಾನ ಇಲಾಖೆ ಸೋಮವಾರ ಸಂಜೆ ನೀಡಿದ ತನ್ನ ಮುನ್ಸೂಚನೆಯಲ್ಲಿ, ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಗುರುವಾರದವರೆಗೆ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬಂಗಾಳಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಸೋಮವಾರದಿಂದ ಗುರುವಾರದವರೆಗೆ ಮಳೆ ಸುರಿಯಲಿದೆ. ಗುರುವಾರ ಮತ್ತು ಶುಕ್ರವಾರ

‘ಅಸಾನಿ ಎಫೆಕ್ಟ್’; ರಾಜ್ಯದಲ್ಲಿ ಭಾರೀ ಮಳೆ ಸಂಭವ, ಅಲರ್ಟ್ ಘೋಷಣೆ Read More »

ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದ ಕರ್ನಾಟಕ ಸರ್ಕಾರ| ಉಕ್ರೇನ್ ನಿಂದ ಮರಳಿದ ವೈದ್ಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಸಮಗ್ರ ನ್ಯೂಸ್: ದೇಶದಲ್ಲೇ ಮೊದಲ ಬಾರಿಗೆ ಸರ್ಕಾರದಿಂದ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಾಗಿದೆ. ಯುದ್ಧಪೀಡಿತ ಉಕ್ರೇನ್ ನಿಂದ ವಾಪಸಾದ ವೈದ್ಯ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. ರಾಜ್ಯದ 60 ವೈದ್ಯಕೀಯ ಕಾಲೇಜುಗಳಲ್ಲಿ 700 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಶಿಕ್ಷಣದ ವಿಧಾನ, ಅಧಿಕೃತ ಮಾನ್ಯತೆ ನಿರ್ಧಾರಕ್ಕೆ ಉನ್ನತ ಸಮಿತಿ ರಚಿಸಲಾಗುತ್ತದೆ. ರಷ್ಯಾ -ಉಕ್ರೇನ್ ಯುದ್ಧದಿಂದ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ವಿದ್ಯಾರ್ಥಿಗಳನ್ನು ಅಧಿಕೃತವಾಗಿ ನೋಂದಣಿ

ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದ ಕರ್ನಾಟಕ ಸರ್ಕಾರ| ಉಕ್ರೇನ್ ನಿಂದ ಮರಳಿದ ವೈದ್ಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ Read More »

ವಿಧಾನಸಭೆ ಅಧಿವೇಶನದಲ್ಲಿ ಸಚಿವರು ಗೈರು| ಯಡಿಯೂರಪ್ಪ ಬಿಟ್ರೆ ಇನ್ಯಾರಿಗೂ ಜವಾಬ್ದಾರಿ ಇಲ್ಲ – ಸಿದ್ದರಾಮಯ್ಯ

ಸಮಗ್ರ ನ್ಯೂಸ್: ವಿಧಾನಸಭೆಯ ಕಲಾಪದ ಸಂದರ್ಭದಲ್ಲಿ ಸಚಿವರು ಗೈರಾಗಿರುವುದನ್ನ ಪ್ರಶ್ನಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಬಿಟ್ರೆ ಇನ್ಯಾರಿಗೂ ಜವಾಬ್ದಾರಿ ಇಲ್ಲ, ಅವರನ್ನೇ ಮುಂದೆ ಕೂಡಿಸಿ ಎಂದು ಹೇಳಿದ್ದಾರೆ. ಸಚಿವರ ಗೈರಿಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದಸ್ಯರು ಚರ್ಚೆ ಮಾಡುವಾಗ ಸಚಿವರು ಬರಬೇಕು. ಸಚಿವರು ಇಲ್ಲದಿದ್ದರೆ ಬೇರೆ ಸಚಿವರು ಬರೆದುಕೊಳ್ಳಬೇಕು. ಇಲ್ಲದಿದ್ದರೆ ಸಚಿವರು ಹೇಗೆ ಉತ್ತರ ಕೊಡ್ತಾರೆ? ಎಂದು ಪ್ರಶ್ನಿಸಿದರು. ಸದಸ್ಯರು ಮಾತಾಡೋದನ್ನು ಸಚಿವರು ಬರೆದುಕೊಂಡು ಉತ್ತರ ಕೊಡಬೇಕು. ಈ ವೇಳೆ ಯಡಿಯೂರಪ್ಪ ಹೊಗಳಿದ ವಿಪಕ್ಷ ನಾಯಕ

ವಿಧಾನಸಭೆ ಅಧಿವೇಶನದಲ್ಲಿ ಸಚಿವರು ಗೈರು| ಯಡಿಯೂರಪ್ಪ ಬಿಟ್ರೆ ಇನ್ಯಾರಿಗೂ ಜವಾಬ್ದಾರಿ ಇಲ್ಲ – ಸಿದ್ದರಾಮಯ್ಯ Read More »

ದಕ್ಷಿಣ ಚೀನಾ: 133 ಜನರಿದ್ದ ಪ್ರಯಾಣಿಕ ವಿಮಾನ ಪತನ| ಎಲ್ಲರೂ ಸಾವನ್ನಪ್ಪಿರುವ ಶಂಕೆ

ಸಮಗ್ರ ನ್ಯೂಸ್: ದಕ್ಷಿಣ ಚೀನಾದ ಗುವಾಂಗ್ಕ್ಸಿ ಪ್ರದೇಶದಲ್ಲಿ 133 ಜನರನ್ನು ಹೊತ್ತು ಸಾಗುತ್ತಿದ್ದಂತ 737 ವಿಮಾನವೊಂದು ಪತನಗೊಂಡಿದೆ. ಈ ಮೂಲಕ 133 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ದಕ್ಷಿಣ ಚೀನಾದ ಕುನ್ಮಿಂಗ್ನಿಂದ ಗುವಾಂಗ್ಝೌಗೆ 133 ಪ್ರಯಾಣಿಕರನ್ನು ಹೊತ್ತ ಚೀನಾ ಈಸ್ಟರ್ನ್ ಏರ್ಲೈನ್ಸ್ ವಿಮಾನವು ಗುವಾಂಗ್ಕ್ಸಿ ಪ್ರದೇಶದಲ್ಲಿ ಪತನಗೊಂಡಿರುವುದಾಗಿ ವರದಿಗಳು ತಿಳಿಸಿವೆ. ಅಪಘಾತಕ್ಕೀಡಾದ ಜೆಟ್ ಬೋಯಿಂಗ್ 737 ವಿಮಾನವಾಗಿದ್ದು, ಸಾವುನೋವುಗಳ ಸಂಖ್ಯೆ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ

ದಕ್ಷಿಣ ಚೀನಾ: 133 ಜನರಿದ್ದ ಪ್ರಯಾಣಿಕ ವಿಮಾನ ಪತನ| ಎಲ್ಲರೂ ಸಾವನ್ನಪ್ಪಿರುವ ಶಂಕೆ Read More »

ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ| ಇಬ್ಬರು ಸಜೀವ ದಹನ

ಸಮಗ್ರ ನ್ಯೂಸ್: ಸಮೀಪದ ಫಕೀರ್ನಕಟ್ಟೆಯಲ್ಲಿದ್ದ ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸಜೀವ ದಹನಗೊಂಡ ಘಟನೆ ಇಂದು ನಡೆದಿದೆ. ರಜಾಕ್ ಮಲ್ಲಾರ್ ಹಾಗೂ ಅಂಗಡಿಯ ಪಾಲುದಾರರಾದ ಚಂದ್ರನಗರದ ರಜಬ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನೋರ್ವ ಪಾಲುದಾರ ಹಸನಬ್ಬ ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗಡಿಯಲ್ಲಿ ಗುಜರಿಗೆ ಬಂದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಾಪು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ

ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ| ಇಬ್ಬರು ಸಜೀವ ದಹನ Read More »

ಮಂಗಳೂರು: ಹಿಜಾಬ್ ಹಾಕಲೇಬೇಕೆಂದರೆ ಮುಸ್ಲಿಂ ರಾಷ್ಟ್ರಗಳಿಗೆ ಹೋಗಲಿ – ಕಲ್ಲಡ್ಕ

ಸಮಗ್ರ ನ್ಯೂಸ್: ಹಿಜಾಬ್ ಬೇಕು ಎನ್ನುವ ಎಸ್‍ಡಿಪಿಐಗೆ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಗೆ ಹಿಜಾಬ್ ಹಾಕಿಸುವ ತಾಕತ್ತು ಇದೆಯೇ? ಹಿಜಾಬ್ ಹಾಕಲೇಬೇಕೆಂದು ಮುಸ್ಲಿಮರಿಗೆ ಇದ್ದರೆ ಅವರು ಮುಸ್ಲಿಂ ರಾಷ್ಟ್ರಗಳಿಗೆ ಹೋಗಲಿ. ಹೈಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳದ ಬ್ಯಾರಿಗಳೊಂದಿಗೆ ಸ್ನೇಹ ಬೆಳೆಸುವ ಮೊದಲು ಆಲೋಚನೆ ಮಾಡಬೇಕಾಗಿದೆ. ಹಿಜಾಬ್ ವಿಚಾರದಲ್ಲಿ ಮುಸಲ್ಮಾನರು ನ್ಯಾಯಾಲಯ, ಸಂವಿಧಾನ ಕಡೆಗಣಿಸಿ ಅಗತ್ಯ ಸೇವೆಯನ್ನು ಬಂದ್ ಮಾಡಿದರು. ಇವರು ಹಿಂದೂಗಳ ಜತೆ ಮಾಡುವುದು ಡೋಂಗಿ ದೋಸ್ತಿ ಎಂದು ಆರೆಸೆಸ್ಸ್ ಮುಖಂಡ‌ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು. ವಿಶ್ವ

ಮಂಗಳೂರು: ಹಿಜಾಬ್ ಹಾಕಲೇಬೇಕೆಂದರೆ ಮುಸ್ಲಿಂ ರಾಷ್ಟ್ರಗಳಿಗೆ ಹೋಗಲಿ – ಕಲ್ಲಡ್ಕ Read More »