Ad Widget .

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ| 5 ಹಿರಿಯ ಸಾಹಿತಿಗಳಿಗೆ ಗೌರವ ಪುರಸ್ಕಾರ

ಸಮಗ್ರ ನ್ಯೂಸ್: ಕರ್ನಾಟಕ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆ ಪರಿಗಣಿಸಿ 5 ಜನ ಹಿರಿಯ ಸಾಹಿತಿಗಳಿಗೆ ಗೌರವ ಪ್ರಶಸ್ತಿ ನೀಡಲಾಗಿದೆ.

Ad Widget . Ad Widget .

ಗೌರವ ಪ್ರಶಸ್ತಿ ಪುರಸ್ಕೃತರು: ಜಿನದತ್ತ ದೇಸಾಯಿ, ಡಾ. ನಾ. ಮೊಗಸಾಲೆ , ಡಾ. ಸರಸ್ವತಿ ಚಿಮ್ಮಲಗಿ, ಪ್ರೊ.ಬಸವರಾಜ ಕಲ್ಗುಡಿ, ಶ್ರೀ ಯಲ್ಲಪ್ಪ. ಕೆ.ಕೆ ಪುರ.

Ad Widget . Ad Widget .

10 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2021ನೇ ವರ್ಷದ ಸಾಹಿತ್ಯ ಶ್ರೀ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿ ವಿಜೇತರ ಹೆಸರುಗಳು ಇಂತಿವೆ.

ಡಾ.ಚಂದ್ರಕಲಾ ಬಿದರಿ, ಪ್ರೊ.ಎಂ.ಎನ್ ವೆಂಕಟೇಶ್,ಡಾ.ಚನ್ನ ಬಸವಯ್ಯ ಹಿರೇಮಠ, ಡಾ. ಮ. ರಾಮಕೃಷ್ಣ ,ಅಬ್ದುಲ್ ರಶೀದ್, ಡಾ. ವೈ.ಎಂ.ಭಜಂತ್ರಿ, ಜೋಗಿ (ಗಿರೀಶ್ ರಾವ್ ಹತ್ವಾರ್), ಮೈಸೂರು ಕೃಷ್ಣಮೂರ್ತಿ ,ಗಣೇಶ ಅಮೀನಗಡ ಮತ್ತು ಆಲೂರು ದೊಡ್ಡನಿಂಗಪ್ಪ. ಗೌರವ ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ,ಶಾಲು, ಹಾರ ಮತ್ತು ಪ್ರಮಾಣ ಪತ್ರವನ್ನು ಹೊಂದಿರಲಿದೆ. ಈ ಬಾರಿ ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 5 ಪ್ರಶಸ್ತಿ, ಸೃಜನೇತರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 3 ಪ್ರಶಸ್ತಿ,ಸಾಹಿತ್ಯ ಪಾರಿಚಾರಿಕೆಗೆ 1 ಹಾಗೂ ಹೊರನಾಡಿನ ಸಾಧಕರಿಗೆ 1 ಪ್ರಶಸ್ತಿಯಂತೆ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಲಾಗಿದೆ. ಸಾಹಿತ್ಯ ಶ್ರೀ ಪ್ರಶಸ್ತಿಯು 25000 ನಗದು, ಫಲಕ,ಶಾಲು, ಹಾರ ಮತ್ತು ಪ್ರಮಾಣಪತ್ರವನ್ನು ಹೊಂದಿರಲಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಪ್ರಶಸ್ತಿ ಪ್ರಕಟಿಸಲಾಗಿದೆ.

2020ರಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳಿಗೆ ಅತ್ಯುತ್ತಮ ಕೃತಿ ಬಹುಮಾನ ನೀಡಲಾಗಿದೆ.

Leave a Comment

Your email address will not be published. Required fields are marked *