ಸಮಗ್ರ ನ್ಯೂಸ್: ಗರ್ಭಿಣಿ ಆಡೊಂದರ ಮೇಲೆ ಮೂವರು ವಿಕೃತ ಕಾಮಿಗಳು ಲೈಂಗಿಕ ದೌರ್ಜನ್ಯ ನಡೆಸಿಕೊಂಡ ಘಟನೆಯೊಂದು ಕಾಞಂಗಾಡ್ ನಲ್ಲಿ ನಡೆದಿದೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮೂಲದ ಓರ್ವನನ್ನು ಹೊಸದುರ್ಗ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ. ಕಾಞ೦ಗಾಡ್ ನಗರದಲ್ಲಿ ಬುಧವಾರ ಮುಂಜಾನೆ ಈ ಘಟನೆ ನಡೆದಿದೆ. ಕೊಟ್ಟಚ್ಚೇರಿಯ ಹೋಟೆಲೊಂದರ ಹಿಂಬದಿಯಲ್ಲಿ ಈ ಘಟನೆ ನಡೆದಿದೆ.
ಹೋಟೆಲ್ ನಲ್ಲಿ ಸಾಕುತ್ತಿದ್ದ ಒಂದು ಆಡಿನ ಮೇಲೆ ಈ ಕೃತ್ಯ ನಡೆಸಲಾಗಿದೆ. ಸುಮಾರು ನಾಲ್ಕು ತಿಂಗಳ ಆಡಿನ ಮೇಲೆ ದೌರ್ಜನ್ಯ ನಡೆಸಿ ಬಳಿಕ ಕೊಲೆಗೈಯ್ಯಲಾಗಿದೆ. ಮುಂಜಾನೆ ಆಡಿನ ಕಿರುಚಾಟ ಕೇಳಿ ಪರಿಸರವಾಸಿಗಳು ಗಮನಿಸಿದಾಗ ಮೂವರು ಗೋಡೆ ಹಾರಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಂದು ನೋಡಿದಾಗ ಆಡು ಮೃತಪಟ್ಟಿರುವುದು ಕಂಡುಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ತಮಿಳುನಾಡು, ಮೂಲದ ಸೆಂಥಿಲ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.