ಸಮಗ್ರ ನ್ಯೂಸ್: ಕೆಲ ಬಲಪಂಥೀಯ ಸಂಘಟನೆಗಳು ಇದೀಗ ಹಲಾಲ್ ಮಾಂಸದ ನಿಷೇಧಕ್ಕೆ ಒತ್ತಾಯಿಸುತ್ತಿರುವ ನಡುವೆಯೇ, ಹಲಾಲ್ ಆಹಾರ “ಆರ್ಥಿಕ ಜಿಹಾದ್” ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಹಲಾಲ್ ಒಂದು ಆರ್ಥಿಕ ಜಿಹಾದ್. ಅಂದರೆ ಇದನ್ನು ಜಿಹಾದ್ ರೂಪದಲ್ಲಿ ಬಳಸಲಾಗುತ್ತದೆ. ಅಂದರೆ ಮುಸ್ಲಿಮರು ಇತರರ ಜತೆ ವಹಿವಾಟು ನಡೆಸಬಾರದು. ಹಲಾಲ್ ಮಾಂಸವನ್ನೇ ಬಳಸಬೇಕು ಎಂದು ಅವರು ಯೋಚಿಸುವುದಾದರೆ, ಅದನ್ನು ಬಳಸಬಾರದು ಎಂದು ಹೇಳುವುದರಲ್ಲಿ ತಪ್ಪೇನಿದೆ” ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ ಪ್ರಶ್ನಿಸಿದರು.
“ಅವರ ದೇವರಿಗೆ” ನೀಡುವ ಹಲಾಲ್ ಮಾಂಸ ಮುಸ್ಲಿಮರಿಗೆ ಪ್ರೀತಿ. ಆದರೆ ಹಿಂದೂಗಳಿಗೆ ಅದು ಕೆಲವರು ಬಿಟ್ಟ ಆಹಾರ. ಮುಸ್ಲಿಮರಿಂದ ಮಾತ್ರವೇ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಮಾಡುವ ಸಲುವಾಗಿ ಯೋಜಿತವಾಗಿ ಹಲಾಲ್ ಮಾರಾಟ ಮಾಡಲಾಗುತ್ತಿದೆ. ಮುಸ್ಲಿಮರು ಹಿಂದೂಗಳಿಂದ ಮಾಂಸ ಖರೀದಿಸಲು ನಿರಾಕರಿಸುವುದಾದರೆ, ಹಿಂದೂಗಳು ತಮ್ಮಿಂದ ಖರೀದಿಸಬೇಕು ಎಂದು ಏಕೆ ಒತ್ತಾಯಿಸುತ್ತೀರಿ? ಇದನ್ನು ಕೇಳಲು ಜನರಿಗೆ ಯಾವ ಹಕ್ಕು ಇದೆ ಎಂದು ರವಿ ಕೇಳಿದರು.
ವ್ಯಾಪಾರ ಪದ್ಧತಿಗಳು ದ್ವಿಮುಖವಾಗಿರಬೇಕೇ ವಿನಃ ಏಕಮುಖವಾಗಿರಬಾರದು. ಮುಸ್ಲಿಮರು ಹಲಾಲ್ ಹೊರತುಪಡಿಸಿದ ಮಾಂಸ ತಿನ್ನಲು ಒಪ್ಪಿದರೆ, ಬಳಿಕ ಹಿಂದೂಗಳು ಕೂಡಾ ಹಲಾಲ್ ಮಾಂಸ ಬಳಸುತ್ತಾರೆ ಎಂದು ಅವರು ಹೇಳಿದರು.