Ad Widget .

ಮಂಗಳೂರು: ನಿಲ್ಲಿಸಿದ್ದ ಕಾರು ನಿಂತಲ್ಲೇ ದಗದಗ|

Ad Widget . Ad Widget .

ಮಂಗಳೂರು: ನಿಲ್ಲಿಸಿದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾದ ಘಟನೆ ಶಕ್ತಿನಗರದ ಬಳಿ ಮಾ.28ರ ಮಂಗಳವಾರ ರಾತ್ರಿ ನಡೆದಿದೆ.

Ad Widget . Ad Widget .

ಮಹಿಳೆಯೊಬ್ಬರು ಶಕ್ತಿನಗರದಲ್ಲಿ ತನ್ನ ಸ್ವಿಫ್ಟ್ ಕಾರು ನಿಲ್ಲಿಸಿ ತನ್ನ ಮೊಬೈಲನ್ನು ಕಾರಿನೊಳಗಿಟ್ಟು ವಿಹಾರಕ್ಕೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿ ಸ್ಥಳದಲ್ಲಿ ಬೆಂಕಿ ಕಾಣಿಸಿತು. ತಕ್ಷಣ ಅವರು ಸ್ಥಳೀಯರಿಗೆ ತಿಳಿಸಿದ್ದು, ಮಾಹಿತಿ ಪಡೆದ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗವು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.

https://youtube.com/shorts/mttB4Lyb82U?feature=share

Leave a Comment

Your email address will not be published. Required fields are marked *