ಸಮಗ್ರ ನ್ಯೂಸ್: ಸಿಆರ್‌ಪಿಎಫ್ ಬಂಕರ್ ಮೇಲೆ ಬುರ್ಕಾದಾರಿ ಮಹಿಳೆಯೊಬ್ಬರು ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದ ಸಿಆರ್‌ಪಿಎಫ್ ಬಂಕರ್ ಬಳಿ ಬರ್ಕಾ ಧರಿಸಿದ ಮಹಿಳೆ ಬಂದಿದ್ದಾರೆ. ಆ ಅಪರಿಚಿತ ಮಹಿಳೆ ತನ್ನ ಬ್ಯಾಗ್‍ನಿಂದ ಪೆಟ್ರೋಲ್ ಬಾಂಬ್ ತೆಗೆದು ಸಿಆರ್‌ಪಿಎಫ್ ಬಂಕರ್ ಮೇಲೆ ಎಸೆದಿದ್ದಾಳೆ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಕಿ ಉರಿಯಲು ಪ್ರಾರಂಭಿಸಿದ ಬಳಿಕ ಅಲ್ಲಿದ್ದ ಪಾದಾಚಾರಿಗಳು ಓಡಿ ಹೋಗಿದ್ದಾರೆ. ಕೆಲವರು ಬಕೆಟ್‍ನಲ್ಲಿ ನೀರನ್ನು ತಂದು ಬೆಂಕಿಯನ್ನು ನಂದಿಸಲು ಮುಂದಾದರು.
ನಿನ್ನೆ ಸೋಪೋರ್‌ನಲ್ಲಿ ಸಿಆರ್‌ಪಿಎಫ್ ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಮಹಿಳೆಯನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಆಕೆಯನ್ನು ಬಂಧಿಸುತ್ತೇವೆ ಎಂದು ಐಜಿಪಿ ಕಾಶ್ಮೀರ ವಿಜಯ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.