Ad Widget .

ಈ ಒಂಟೆಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! ಹರಾಜಾಗ್ತಿದೆ ಅತಿ ದುಬಾರಿ ಒಂಟೆ|

Ad Widget . Ad Widget .

ಸಮಗ್ರ ಡಿಜಿಟಲ್ ಡೆಸ್ಕ್: ಇಸ್ಲಾಂ ಧರ್ಮದ ಪವಿತ್ರ ತಿಂಗಳು ರಂಜಾನ್‌ ಶುರುವಾಗುವುದರಲ್ಲಿದೆ. ರಂಜಾನ್‌ ಗೂ ಮುನ್ನವೇ ಸೌದಿ ಅರೇಬಿಯಾದಲ್ಲಿ ಒಂಟೆಯೊಂದು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಒಂಟೆಗೆ ಸಿಕ್ಕ ಬೆಲೆ ಕೇಳಿದ್ರೆ ನೀವು ದಿಗ್ಭ್ರಮೆಗೊಳ್ಳೋದು ಗ್ಯಾರಂಟಿ.

Ad Widget . Ad Widget .

ಇದು ಜಗತ್ತಿನ ಅತ್ಯಂತ ದುಬಾರಿ
ಈ ಒಂಟೆಯ ಬೆಲೆ 14 ಕೋಟಿ 23 ಲಕ್ಷ ರೂಪಾಯಿ!. ಸೌದಿ ಅರೇಬಿಯಾದಲ್ಲಿ ಈ ಒಂಟೆಯನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಯ್ತು. ಈ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಒಂಟೆಗೆ ಸಿಕ್ಕ ಆರಂಭಿಕ ಬೆಲೆಯೇ 7 ಮಿಲಿಯನ್‌ ಸೌದಿ ರಿಯಾಲ್‌, ಅಂದ್ರೆ ಸುಮಾರು 10.16 ಕೋಟಿ ರೂಪಾಯಿ. ಹರಾಜಿನಲ್ಲಿ ಒಂಟೆಯನ್ನು ಕೊಂಡುಕೊಂಡವರು ಯಾರು ಅನ್ನೋದನ್ನು ಬಹಿರಂಗಪಡಿಸಿಲ್ಲ. ಪಾರಂಪರಿಕ ಪೋಷಾಕಿನಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದೆ.

ಇದು ಜಗತ್ತಿನ ಅಪರೂಪದ ಒಂಟೆ ಅಂತಾ ಹೇಳಲಾಗ್ತಿದೆ. ಈ ಒಂಟೆ ತನ್ನ ವಿಶೇಷ ಸೌಂದರ್ಯ ಮತ್ತು ಅನನ್ಯತೆಯಿಂದಲೇ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಜಗತ್ತಿನಲ್ಲಿ ಈ ಜಾತಿಯ ಒಂಟೆಗಳು ಬಹಳ ಕಡಿಮೆ. ಸೌದಿ ಅರೇಬಿಯಾದಲ್ಲಿ ಈದ್ ದಿನದಂದು ಒಂಟೆಗಳನ್ನು ಬಲಿ ನೀಡಲಾಗುತ್ತದೆ. ಇಲ್ಲಿ ಜಗತ್ತಿನ ಅತಿ ದೊಡ್ಡ ಒಂಟೆ ಮೇಳವೂ ನಡೆಯುತ್ತದೆ.

Leave a Comment

Your email address will not be published. Required fields are marked *