Ad Widget .

ಇಂಡಿಯನ್ ಬಾಕ್ಸಾಫೀಸ್ ಉಡೀಸ್ ಮಾಡಿದ KGF 2| ರಿಲೀಸ್ ಗೂ ಮೊದಲೇ ಕೋಟಿ ಕೋಟಿ ಗಳಿಸಿದ ಚಿತ್ರ|

Ad Widget . Ad Widget .

ಸಮಗ್ರ ನ್ಯೂಸ್: KGF 2 ಟ್ರೇಲರ್ ರಿಲೀಸ್ ಆದ 20 ಗಂಟೆಯೊಳಗೆ 109+ ಮಿಲಿಯನ್ ವೀಕ್ಷಕರು ನೋಡಿದ್ದು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಮಾಡಿದೆ. ಕನ್ನಡದಲ್ಲಿ 18 ಮಿಲಿಯನ್ , ಹಿಂದಿಯಲ್ಲಿ 47 ಮಿಲಿಯನ್ , ತೆಲುಗಿನಲ್ಲಿ 17 ಮಿಲಿಯನ್ , ತಮಿಳಿನಲ್ಲಿ 11 ಮಿಲಿಯನ್ , ಮಲಯಾಳಂನಲ್ಲಿ 7 ಮಿಲಿಯನ್ ವೀವ್ಸ್ ಗಳನ್ನು ಪಡೆದಿರುವ ಟ್ರೈಲರ್ ನಿಂದ ಚಿತ್ರತಂಡ ಫುಲ್ ಖುಷ್ ಆಗಿದೆ.

Ad Widget . Ad Widget .

ಈ ಮೂಲಕ ಬ್ಲಾಕ್ ಬಾಸ್ಟರ್ ಇಂಡಿಯಾದ ಎಲ್ಲಾ ಸಿನಿಮಾಗಳ ಹಿಂದಿನ ರೆಕಾರ್ಡ್ ಪೀಸ್ ಪೀಸ್ ಮಾಡಿದೆ.

ಈ ಸಿನಿಮಾದ ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸುತ್ತಿರುವಾಗಲೇ ಮತ್ತೊಂದ್ ಬಿಗ್ ಅಪ್ ಡೇಟ್ ಸಿಕ್ಕಿದೆ. ಅದೇನೆಂದರೆ ಕೆಜಿಎಫ್ 2 ನ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೆ ಸಿನಿಮಾ ಹಿಂದೆ ಡೀಲರ್ ಗಳು ವ್ಯವಹಾರಕ್ಕಾಗಿ ಮುಗಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾದ ತೆಲುಗು ಟಿವಿ ರೈಟ್ಸ್ ಬರೋಬ್ಬರಿ 66 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗುತ್ತಿದ್ದು, ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ‘ಕೆಜಿಎಫ್ 2’ ನ ತೆಲುಗು ಚಿತ್ರದ ಹಕ್ಕನ್ನು 66 ಕೋಟಿಗೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತ ತಮಿಳಿನಲ್ಲಿ 40 ಕೋಟಿಗೆ ರೂಪಾಯಿಗೆ ಸಿನಿಮಾದಟಿವಿ ರೈಟ್ಸ್ ಮಾರಾಟ ಆಗಿದೆ ಎಂದು ಹೇಳಲಾಗುತ್ತಿದ್ದು, ಮತ್ತೊಂದೆಡೆ ಕನ್ನಡದಲ್ಲಿ 100 ಕೋಟಿ ಗಳಿಕೆ ಕಂಡಿರುವ ಮಾಹಿತಿ ಸಿಕ್ಕಿದೆ. ಮೂಲಗಳ ಪ್ರಕಾರ ಸಿನಿಮಾ ರಿಲೀಸ್ ಗೂ ಮುನ್ನವೇ ಸುಮಾರು 250 ಕೋಟಿ ರೂಪಾಯಿ ಗಳಿಸಿರೋದಾಗಿ ಮಾಹಿತಿ ಸಿಕ್ಕಿದೆ. ಈ ಮೂಲಕ ಚಿತ್ರ ಇಡೀ ಭಾರತೀಯ ಚಿತ್ರರಂಗ ತನ್ನತ್ತ ನೋಡುವಂತೆ ಮಾಡಿದೆ.

Leave a Comment

Your email address will not be published. Required fields are marked *