ಸಮಗ್ರ ನ್ಯೂಸ್: ಮುಸ್ಲಿಂ ಯುವಕನೋರ್ವ ಹಿಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ. ಕಿರುಕುಳ ನೀಡಿದ ಯುವಕನನ್ಮು ತಾಲೂಕಿನ ಐತೂರು ಗ್ರಾಮದ ಶಕೀರ್ ಎಂದು ಗುರುತಿಸಲಾಗಿದ್ದು ಪೋಲಿಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೃತ್ಯದ ಕುರಿತು ಕಡಬ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿರುವ ಯುವತಿ, ಶಕೀರ್ ಎಂಬಾತ ಕಳೆದ ಎರಡು ದಿನಗಳಿಂದ ಕಿರುಕುಳ ನೀಡುತ್ತಿದ್ದು, ಮಾ.28ರಂದು ಕಲ್ಲಾಜೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡ ನಿಂತು ಲೈಂಗಿಕ ಕಿರುಕುಳ ನೀಡಿದ್ದಾನೆ, ಕಳೆದೆರಡು ದಿನಗಳಿಂದ ತೊಂದರೆ ಕೊಡುತ್ತಿರುವುದರಿಂದ ಮನೆಯವರಿಗೂ ವಿಷಯ ತಿಳಿಸಿದ್ದು ಆ ಹಿನ್ನೆಲೆಯಲ್ಲಿ ನಾನು ಕಡಬದಿಂದ ಕಲ್ಲಾಜೆ ಹೋಗುವ ವೇಳೆಯಲ್ಲಿ ಮನೆಯವರೂ ಬಂದಿದ್ದು ಇದೇ ವೇಳೆ ಯುವಕ ಮೈ ಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಬಿಡಿಸಲು ಬಂದ ನನ್ನ ಅತ್ತೆಯವರಿಗೂ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಕಡಬ ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂದಿಸಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದ್ದು, ಹಿಂದೂ ಯುವತಿಗೆ ಅನ್ಯಮತಿಯ ಯುವಕನಿಂದ ಲೈಂಗಿಕ ಕಿರುಕುಳ ನೀಡಿದ್ದು ಅತ್ಯಾಚಾರ ಯತ್ನ ಮಾಡಲಾಗಿದೆ, ಯುವಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.