Ad Widget .

ಎ.6 ಕ್ಕೆ ಕರ್ನಾಟಕದತ್ತ “ನಮೋ”| ಕರುನಾಡಲ್ಲಿ ಚುನಾವಣಾ ದಂಡಯಾತ್ರೆಗೆ ಸಜ್ಜಾದರಾ ಪ್ರಧಾನಿ?

Ad Widget . Ad Widget .

ಸಮಗ್ರ ನ್ಯೂಸ್: ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದು ಉತ್ಸಾಹದಲ್ಲಿರುವ ಕಮಲ ಪಡೆ 2023ರ ರಾಜ್ಯ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಕರುನಾಡಿನಲ್ಲಿ ರಣಕಹಳೆ ಮೊಳಗಿಸಲು ಮೋದಿಯೂ ಸಜ್ಜಾಗಿದ್ದು, ಪ್ರಧಾನಿ ಕರ್ನಾಟಕ ದಂಡಯಾತ್ರೆಗೆ ಮುಹೂರ್ತ ನಿಗದಿಯಾಗಿದೆ.

Ad Widget . Ad Widget .

ಏಪ್ರಿಲ್​ 6ಕ್ಕೆ ಪ್ರಧಾನಿಗಳ ರಾಜ್ಯ ಪ್ರವಾಸ ಆರಂಭವಾಗಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆಗೆ ಪ್ಲಾನ್ ರೂಪಿಸಲಾಗಿದೆ. ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಸಿಎಂ ಬೊಮ್ಮಾಯಿಗೆ ಮಾಹಿತಿ ರವಾನೆಯಾಗಿದ್ದು, ಸಿದ್ಧತೆ ಶುರು ಮಾಡಿಕೊಂಡಿದ್ದಾರೆ. ಏಪ್ರಿಲ್ 1ಕ್ಕೆ ರಾಜ್ಯಕ್ಕೆ ಅಮಿತ್​ ಶಾ ಭೇಟಿ ಕೊಡಲಿದ್ದಾರೆ. ಇದಾದ ಬಳಿಕ ಏಪ್ರಿಲ್ 6ರಂದು ಮೋದಿ ಕರುನಾಡಿನ ಅಖಾಡಕ್ಕೆ ಧುಮುಕಲಿದ್ದಾರೆ. ಅಂದು ಮಿಷನ್​ 2023ರ ಮೊದಲ ಱಲಿ ಉದ್ಘಾಟನೆಗೆ ಮೋದಿ ಕಾತುರರಾಗಿದ್ದಾರೆ. ಹೀಗೆ ಅಮಿತ್​ ಶಾ ಆಗಮನದ ಬೆನ್ನಲ್ಲೇ ಪ್ರಧಾನಿ ರಾಜ್ಯ ಪ್ರವಾಸ ನಡೆಸುತ್ತಿರುವುದು ಕುತೂಹಲದ ಹೆಚ್ಚಿಸಿದೆ.

Leave a Comment

Your email address will not be published. Required fields are marked *