Ad Widget .

ವಿದ್ಯಾರ್ಥಿಯೊಂದಿಗೆ ಸಂಸಾರ ತೂಗಿದ ಶಿಕ್ಷಕಿ!; 17ರ ಬಾಲಕನೊಂದಿಗೆ ಮದುವೆಯಾದ ಟೀಚರಮ್ಮ|

Ad Widget . Ad Widget .

ಸಮಗ್ರ ನ್ಯೂಸ್: ಗುರುವೆಂದರೆ ಮಕ್ಕಳಿಗೆ ಸರಿ-ತಪ್ಪುಗಳ ವಿವೇಚನೆಯ ಪಾಠ ಮಾಡುತ್ತಾ ಬದುಕಿನ ದಾರಿ ತೋರುವ ದೇವರು. ಆದರೆ ಇಲ್ಲೊಬ್ಬ ಶಿಕ್ಷಕಿ ಮಾಡಬಾರದ್ದು ಮಾಡಿ ಜೈಲು ಸೇರಿದ್ದಾಳೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಬ್ಬನನ್ನು ಪ್ರೀತಿಸಿ ಬೇರೆಡೆಗೆ ಕರೆದೊಯ್ದು ದೇವಸ್ಥಾನದಲ್ಲಿ ಮದ್ವೆ ಆಗಿದ್ದಾಳೆ!

Ad Widget . Ad Widget .

ಹೌದು, ಇಂತಹದ್ದೊಂದು ವಿಲಕ್ಷಣ ಘಟನೆ ನಡೆದದ್ದು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ. ವಿದ್ಯಾರ್ಥಿಯನ್ನು ಕರೆದೊಯ್ದು ಮದ್ವೆಯಾದ ಶಿಕ್ಷಕಿ ಹೆಸರು ಶರ್ಮಿಳಾ. ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. 11ನೇ ತರಗತಿ ಓದುತ್ತಿದ್ದ 17 ವರ್ಷದ ಬಾಲಕ ಮಾರ್ಚ್​ 5ರಂದು ಕಾಲೇಜಿಗೆ ಹೋದವ ವಾಪಸ್​ ಮನೆಗೆ ಬಂದಿರಲಿಲ್ಲ. ಮಗನಿಗಾಗಿ ಹಲವೆಡೆ ಹುಡುಕಾಡಿದ ಪಾಲಕರು ಆತಂಕಗೊಂಡು ಪೊಲೀಸ್​ ಠಾಣೆಯಲ್ಲಿ ಮಿಸ್ಸಿಂಗ್​ ಕೇಸ್​ ದಾಖಲಿಸಿದ್ದರು.

ದೂರಿನ ಜಾಡು ಹಿಡಿದು ತನಿಖೆ ನಡೆಸಲು ಶಾಲೆಗೆ ಪೊಲೀಸರು ಬಂದಾಗ, ಮಾ.5ರಿಂದ ಶಿಕ್ಷಕಿ ಶರ್ಮಿಳಾ ಕೂಡ ಶಾಲೆಗೆ ಬರುತ್ತಿಲ್ಲ ಎಂಬುದು ಗೊತ್ತಾಗಿದೆ. ಈ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಶಿಕ್ಷಕಿ ಶರ್ಮಿಳಾ ಜತೆ ಬಾಲಕ ಮನೆಯಲ್ಲಿ ಗಂಟೆಗಟ್ಟಲೇ ಫೋನ್​ನಲ್ಲಿ ಮಾತಾಡುತ್ತಿದ್ದ ಎಂಬ ಮಾಹಿತಿಯನ್ನ ಆತನ ಪಾಲಕರು ಹೇಳಿದ್ದರು. ಅತ್ತ ಬಾಲಕನ ಮತ್ತು ಶಿಕ್ಷಕಿ ಇಬ್ಬರ ಮೊಬೈಲ್​ ಕೂಡ ಸ್ವಿಚ್ಡ್​ ಆಫ್​ ಆಗಿತ್ತು. ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಶಿಕ್ಷಕಿಯ ಸಂಬಂಧಿ, ಸ್ನೇಹಿತರ ಮನೆಗಳನ್ನೂ ಹುಡುಕಾಡುತ್ತಿದ್ದರು. ಆದರೂ ಅವರೆಲ್ಲಿದ್ದಾರೆ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ.

ಪ್ರೀತಿಯ ಬಲೆಗೆ ವಿದ್ಯಾರ್ಥಿಯನ್ನು ಬೀಳಿಸಿಕೊಂಡ ಶಿಕ್ಷಕಿ, ತಂಜಾವೂರಿಗೆ ಆತನನ್ನು ಕರೆದೊಯ್ದು ಕೆಲ ದಿನ ಅಲ್ಲೇ ನೆಲೆಸಿದ್ದಳು. ತಂಜಾವೂರಿನ ದೇವಸ್ಥಾನದಲ್ಲೇ ಬಾಲಕನ್ನು ಮದುವೆ ಆಗಿ ಸ್ನೇಹಿತೆಯ ಮನೆಯಲ್ಲಿ ವಾಸವಿದ್ದಳು. ಇತ್ತೀಚಿಗೆ ತಿರುಚಿಗೆ ಬಂದು ಮನೆಯಲ್ಲಿದ್ದರು. ಹಳೇ ಸಿಮ್​ ತೆಗೆದು ಹೊಸ ಸಿಮ್​ ಹಾಕಿ ಮೊಬೈಲ್​ ಆನ್​ ಮಾಡುತ್ತಿದ್ದಂತೆ ಪೊಲೀಸರಿಗೆ ಇವರಿಬ್ಬರೂ ಎಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿದ್ದು, ಮಾ.24ರಂದು ಪೊಲೀಸರು ಶಿಕ್ಷಕಿಯನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಿದ್ದಾರೆ. ಬಾಲಕನನ್ನು ಬಾಲಮಂದಿರದಲ್ಲಿ ಇರಿಸಲಾಗಿದೆ.

Leave a Comment

Your email address will not be published. Required fields are marked *