ಮಾ.26 ರಿಂದ ಕುಕ್ಕೆ ಸುಬ್ರಹ್ಮಣ್ಯ- ತಿರುಪತಿ ಬಸ್‌ ನೂತನ ಸಂಚಾರ ಆರಂಭ

Ad Widget ... ..

ಸಮಗ್ರ ನ್ಯೂಸ್: ಪವಿತ್ರ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಿಂದ ತಿರುಪತಿಗೆ ಯಾತ್ರೆ ಕೈಗೊಳ್ಳುವ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ‌ ನಿಗಮವು ನೂತನವಾಗಿ ರಾಜಹಂಸ ಬಸ್ ಸೌಲಭ್ಯವನ್ನು ಪ್ರಾರಂಭಿಸಿದ್ದು ಮಾ.26ರಿಂದ ಚಾಲನೆ ದೊರೆಯಲಿದೆ.

Ad Widget

ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ನೂತನ ಬಸ್ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ. ಪ್ರತಿದಿನ ಸುಬ್ರಹ್ಮಣ್ಯದಿಂದ ತಿರುಪತಿಗೆ ಸೌಲಭ್ಯವಿದ್ದು ಕುಕ್ಕೆ ಸುಬ್ರಹ್ಮಣ್ಯದಿಂದ ರಾತ್ರಿ 9:00ಕ್ಕೆ ಹೊರಡುವ ಬಸ್ ಹಾಸನ, ಬೆಂಗಳೂರು, ಚಿತ್ತೂರು ಮೂಲಕ ಪ್ರಯಾಣಿಸಿ ಬೆಳಿಗ್ಗೆ 10:30ಕ್ಕೆ ತಿರುಪತಿಗೆ ತಲುಪಲಿದೆ. ತಿರುಪತಿಯಿಂದ ಸಂಜೆ 4:00 ಗಂಟೆಗೆ ಹೊರಡುವ ಬಸ್ ಇದೇ ಮಾರ್ಗವಾಗಿ ಬೆಳಗ್ಗೆ 05:45ಕ್ಕೆ ಕುಕ್ಕೆಸುಬ್ರಹ್ಮಣ್ಯಕ್ಕೆ ತಲುಪಲಿದೆ. ಕುಕ್ಕೆ ಸುಬ್ರಹ್ಮಣ್ಯದಿಂದ ತಿರುಪತಿಗೆ ರೂ. 910/- ಪ್ರಯಾಣ ದರವನ್ನು‌ ನಿಗಮವು ನಿಗದಿಗೊಳಿಸಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *