ಮತ್ತೆ ಏರಿಕೆಯ ಹಾದಿಯಲ್ಲಿ ತೈಲಬೆಲೆ| ದಿನ ಬಿಟ್ಟು ದಿನ 80 ಪೈಸೆ ಹೆಚ್ಚಳ|

Ad Widget ... ..

ಸಮಗ್ರ ನ್ಯೂಸ್: 137 ದಿನಗಳ ನಂತರ ಎರಡು ದಿನಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು. ಮೊದಲ ದಿನ 80 ಪೈಸೆ ಮತ್ತು ಎರಡನೇ ದಿನ 80 ಪೈಸೆಯಷ್ಟು ಏರಿಕೆ ಕಂಡಿದ್ದ ತೈಲ ದರ ಮೂರನೇ ದಿನ ಪರಿಷ್ಕರಣೆಯಾಗಿರಲಿಲ್ಲ.

Ad Widget

ಇದೀಗ ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 80 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ ಗೆ 97.81 ರೂ., ಡೀಸೆಲ್ 89.07 ರೂ., ಇದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ 112.51 ರೂ. ಮತ್ತು ಡೀಸೆಲ್ ದರ 96.70 ರೂ. ಇದೆ.

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 103.67 ರೂ., ಡೀಸೆಲ್ ಬೆಲೆ 93.71 ರೂ.(76 ಪೈಸೆ ಹೆಚ್ಚಾಗಿದೆ)

ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.34 ರೂ.(84 ಪೈಸೆ ಹೆಚ್ಚಾಗಿದೆ), ಡೀಸೆಲ್ ಬೆಲೆ 91.42 ರೂ.(80 ಪೈಸೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 102.26 ಆಗಿದ್ದರೆ ಡೀಸೆಲ್ ದರ ರೂ. 86.58 ಆಗಿದೆ. ನಿಧಾನವಾಗಿ ತೈಲಬೆಲೆ ಏರಿಕೆಯಾಗುತ್ತಿರುವುದಕ್ಕೆ ರಷ್ಯಾ-ಉಕ್ರೇನ್ ಬಿಕ್ಕಟ್ಟು ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *