ಸಮಗ್ರ ನ್ಯೂಸ್: ಮುಸ್ಲಿಂ ಅಂಗಡಿಗಳಲ್ಲಿ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಹಿಂದೂ ಪರ ಸಂಘಟನೆಗಳು ಚಿಂತನೆ ನಡೆಸಿದೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಅಂಗಡಿಯಲ್ಲಿ ಖರೀದಿ ನಿಷೇಧ ಹೇರಲಾಗಿದ್ದು, ಜಾತ್ರೆ, ಮಹೋತ್ಸವ ಇತರೆ ಸಮಾರಂಭಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ನಿಷೇಧಿಸಲಾಗಿದೆ. ಕರಾವಳಿಯ ಹಲವು ಪ್ರಮುಖ ಜಾತ್ರಾ ಮಹೋತ್ಸವಗಳಲ್ಲಿ ಮುಸಲ್ಮಾನರ ಅಂಗಡಿ, ಮಳಿಗೆಗಳಿಗೆ ನಿಷೇಧ ಹೇರಲಾಗಿದ್ದು, ಧರ್ಮಯುದ್ಧ ವ್ಯಾಪಾರಕ್ಕೂ ಯುದ್ಧವಾಗಿ ಪರಿವರ್ತನೆಗೊಂಡಿದೆ.
ಮುಸ್ಲಿಂ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ವಸ್ತುಗಳ ಖರೀದಿ ಮಾಡಬಾರದು ಅಂತ ಹಿಂದೂ ಪರ ಸಂಘಟನೆಗಳು ಕರೆ ಕೊಟ್ಟಿದ್ದು, ಈಗ ಮತ್ತೊಂದು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಬಹುತೇಕ ಮಾಲ್, ಅಂಗಡಿಗಳಲ್ಲಿ ಮುಸ್ಲಿಂ ಸಿಂಬಲ್ ಇರೋ ಹಲಾಲ್ ವಸ್ತುಗಳನ್ನು ಖರೀದಿ ಗೆ ಬ್ರೇಕ್ ಹಾಕಲು ಚಿಂತನೆ ನಡೆಸಲಾಗಿದ್ದು, ಮುಖ್ಯವಾಗಿ ಮಾಂಸ, ಕೋಳಿ ಅಂಗಡಿಗಳಲ್ಲಿ ಖರೀದಿಗೆ ನಿಷೇಧ ಹಾಕಲು ಮುಂದಾಗಿದ್ದು, ಮುಸ್ಲಿಂ ವ್ಯಾಪಾರಿಗಳು ಕೋಳಿ ಅಥವಾ ಕುರಿ ಬಲಿ ಕೊಡುವಾಗ ಹಲಾಲ್ ಸೂತ್ರವನ್ನು ಅನುಸರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಲಾಲ್ ಮಾಂಸ, ಕೋಳಿ ಕೊಳ್ಳದಿರಲು ಹಿಂದೂಗಳಿಗೆ ಕರೆ ಕೊಡಲಾಗಿದೆ.
ಒಟ್ಟಾರೆ ಕೋಮುದ್ವೇಷ ರಾಜ್ಯದ ಉದ್ದಗಲಕ್ಕೂ ಪಸರಿಸುತ್ತಿದ್ದು, ಸರ್ವಜನಾಂಗದ ಶಾಂತಿಯ ತೋಟ ಕೋಮು ವೈಷಮ್ಯಕ್ಕೆ ಬಲಿಯಾಗುತ್ತಿರುವುದು ದುರದೃಷ್ಟಕರ.