Ad Widget .

ದೇವನಹಳ್ಳಿ ಬಳಿ ಭೀಕರ ರಸ್ತೆ ದುರಂತ| ಲಾರಿ ಚಾಲಕ ಸಜೀವ ದಹನ

Ad Widget . Ad Widget .

ಸಮಗ್ರ ನ್ಯೂಸ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ‌ ರಾಷ್ಟ್ರೀಯ ಹೆದ್ದಾರಿ 7ರ ಭುಕ್ತಿ ಡಾಬಾದ ಮುಂದೆ ನಸುಕಿನ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

Ad Widget . Ad Widget .

ಎರಡು ಲಾರಿಗಳ ನಡುವೆ ಡಿಕ್ಕಿ ಆದ ಪರಿಣಾಮ ಬೆಂಕಿ ಹೊತ್ತಿಕೊಂಡು ಓರ್ವ ಚಾಲಕ ಜೀವಂತವಾಗಿ ದಹನವಾಗಿದ್ದಾನೆ.

ಭುಕ್ತಿ ಡಾಬಾ ಮುಂದೆ ಇದ್ದ ರಸ್ತೆ ವಿಭಜಕಕ್ಕೆ ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಸಿಮೆಂಟ್ ಹೊತ್ತಿದ್ದ ಲಾರಿವೊಂದು ರಭಸದಿಂದ ಡಿವೈಡರ್‌ಗೆ ಗುದ್ದಿದ ಪರಿಣಾಮ ಡಿವೈಡರ್ ದಾಟಿ ಬೆಂಗಳೂರಿನಿಂದ‌ ಚಿಕ್ಕಬಳ್ಳಾಪುರ ಮಾರ್ಗವಾಗಿ ಸಾಗುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಲಾರಿಗೆ ಬೆಂಕಿ ಹತ್ತಿಕೊಂಡಿದ್ದು, ಚಾಲಕ ಸಜೀವವಾಗಿ ಸುಟ್ಟುಹೋಗಿದ್ದಾನೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *