Ad Widget .

ನಾನು ಮಂಚಕ್ಕೆ ಮಹಿಳೆಯರನ್ನ ನೇರವಾಗಿ ಕರೀತೀನಿ | ನಾಲಿಗೆ ಹರಿಬಿಟ್ಟ ಖ್ಯಾತ ನಟ

Ad Widget . Ad Widget .

ಸಮಗ್ರ ನ್ಯೂಸ್: ಮಲಯಾಳಂನ ಜನಪ್ರಿಯ ನಟ ವಿನಾಯಕನ್ ಅವರು ಲೈಂಗಿಕ ಸಂಬಂಧದ ಬಗ್ಗೆ ಮಾತನಾಡುವ ಮೂಲಕ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾರೆ. ಮೀಟೂ ಚಳುವಳಿಯನ್ನು ನಾನು ಅರ್ಥಮಾಡಿಕೊಂಡಿಲ್ಲ, ಅದರ ಅರ್ಥ ಮಹಿಳೆಯರನ್ನು ದೈಹಿಕ ಸಂಬಂಧದ ಬಗ್ಗೆ ಕೇಳುವುದೇ ಎಂದು ಹೇಳುವ ಮೂಲಕ ಮಹಿಳೆಯರ ಕೆಂಗಣ್ಣಿಗೆ ವಿನಾಯಕನ್​ ಗುರಿಯಾಗಿದ್ದಾರೆ.

Ad Widget . Ad Widget .

ತಮಿಳಿನಲ್ಲಿ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ವಿನಾಯಕನ್​ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.

ನಟಿ ನವ್ಯಾ ನಾಯರ್​ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್​ ಮಾಡುತ್ತಿರುವ ವಿ.ಕೆ. ಪ್ರಕಾಶ್​ ನಿರ್ದೇಶನದ ‘ಒರುಥಿ’ ಚಿತ್ರದ ಪ್ರಚಾರದ ವೇಳೆ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಕೇಳುವುದು ‘ಮೀ ಟೂ’ ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಮುಗಿಸಿದರು.

Leave a Comment

Your email address will not be published. Required fields are marked *