ಕೂದಲೆಳೆಯಲ್ಲಿ ಸಾವಿನ ಬಾಯಿಂದ ಪಾರಾದ ಬಾಲಕ| ಮೈ ಜುಂ ಅನಿಸುತ್ತೆ ಈ ದೃಶ್ಯ|

Ad Widget ... ..

ಸಮಗ್ರ ನ್ಯೂಸ್: ಬಾಲಕನೋರ್ವ ಸೈಕಲ್ ತುಳಿದುಕೊಂಡು ಏಕಾಏಕಿ ಮುಖ್ಯ ರಸ್ತೆಗೆ ಪ್ರವೇಶಿಸಿ, ಕೂದಲೆಳೆ ಅಂತರದಲ್ಲಿ ಬಸ್ಸಿನಡಿಗೆ ಬೀಳುವುದು ತಪ್ಪಿ‌ ಸಾವಿನ ಬಾಯಿಂದ ಪಾರಾದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ನಡೆದಿದೆ.

Ad Widget

ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಬಾಲಕ ಮೃತ್ಯುವಿನ ಕೂಪದಿಂದ ಬಚಾವಾಗಿದ್ದಾನೆ.

ಮುಖ್ಯ ರಸ್ತೆಗೆ ಪ್ರವೇಶಿಸಿದ ಬಾಲಕ ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಬೆನ್ನಲ್ಲೇ ಅತಿವೇಗದಲ್ಲಿ ಕೇರಳ ಸಾರಿಗೆ ಬಸ್ಸು ಬಂದಿದ್ದು, ಬಾಲಕನ ಸೈಕಲ್ ಮೇಲೆ ಚಲಿಸಿದೆ. ಆದರೆ ಅದೃಷ್ಟವಶಾತ್ ಬಾಲಕ ಈ ಮೊದಲೇ ರಸ್ತೆಯ ಮತ್ತೊಂದು ಭಾಗಕ್ಕೆ ಎಸೆಯಲ್ಪಟ್ಟದ್ದರಿಂದ ಅತೀ ದೊಡ್ಡ ದುರಂತದಿಂದ ಪಾರಾಗಿದ್ದಾನೆ.

Leave a Comment

Your email address will not be published. Required fields are marked *