Ad Widget .

ಕದ್ರಿ ಮಂಜುನಾಥನ ಕಾಣಿಕೆಗೆ ಟ್ರಸ್ಟಿಯಿಂದಲೇ ಕನ್ನ| ಆಡಳಿತ ಸಮಿತಿಯವರೇ ಅಧಿಕಾರಿಯ ರಕ್ಷಣೆಗೆ ನಿಂತರಾ?| ಕುಪ್ಪಸದೊಳಗೆ ಸೇರಿತ್ತು 500ರ ಬಂಡಲ್!

Ad Widget . Ad Widget .

ಸಮಗ್ರ ನ್ಯೂಸ್: ಕದ್ರಿ ಮಂಜುನಾಥ ಕ್ಷೇತ್ರದ ಕಾಣಿಕೆ ಹುಂಡಿಗೆ ಸರಕಾರದಿಂದ ನೇಮಕವಾದ ಟ್ರಸ್ಟಿಯೇ ಕನ್ನ ಹಾಕಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆಶ್ಚರ್ಯವೆಂದರೆ ‘ದೇವಸ್ಥಾನಗಳ ಹುಂಡಿಗೆ ಹಣ ಹಾಕಬೇಡಿ ಅದು ಹಜ್ ಯಾತ್ರೆಗೆ ಬಳಕೆಗುತ್ತದೆ’ ಎಂದು ಪ್ರಚಾರ ಮಾಡಿ ಗೆದ್ದಿರುವವವರೇ ಶಿಫಾರಸು ಮಾಡಿರುವ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಮಹಿಳಾ ಟ್ರಸ್ಟಿ ಈ ಕೆಲಸ ಮಾಡಿದ್ದಾರೆ. ಇಂಥವರ ರಾಜೀನಾಮೆ ಪಡೆದು ಹೊರ ಹಾಕುವ ಬದಲು ರಕ್ಷಿಸುವ ಕಾರ್ಯವನ್ನು ಆಡಳಿತ ಸಮಿತಿಯೇ ಮಾಡುತ್ತಿದೆ.

Ad Widget . Ad Widget .

ಸಮಿತಿ ಧೋರಣೆಗೆ ಸಂಘ ಪರಿವಾರದ ಬೆಂಬಲದಿಂದ ಆಯ್ಕೆಯಾದ ಟ್ರಸ್ಟಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಈ ಕುರಿತು ತನಿಖೆ ನಡೆಸುವಂತೆ ದೇವಸ್ಥಾನದ ಆಡಳಿತಾಧಿಕಾರಿಗೆ ದೂರು ನೀಡಿದ್ದಾರೆ. ಆದರೆ, ಅವರ ಬಾಯಿಯನ್ನು ಹೈಕಮಾಂಡ್ ಮುಚ್ಚಿಸಿದೆ. ಫೆ. 24ರಂದು ದೇವಸ್ಥಾನದ ಕಾಣಿಕೆ ಡಬ್ಬಿ ಹಣದ ಲೆಕ್ಕಾಚಾರ ನಡೆದಿತ್ತು. ಇದಾದ ಎರಡು ದಿನಗಳ ಬಳಿಕ ಟ್ರಸ್ಟಿಯೊಬ್ಬರಿಗೆ ಅನಾಮಧೇಯ ಮಹಿಳೆಯ ಕರೆ ಬಂದಿದ್ದು, ಅದರಲ್ಲಿ 500 ರು. ನೋಟುಗಳನ್ನು ಮಹಿಳಾ ಟ್ರಸ್ಟಿ ಬ್ರೌಸ್ ಒಳಗೆ ತುರುಕಿಸುತ್ತಿರುವುದನ್ನು ನೋಡಿದ್ದೇನೆ ಎಂದು ನಾನು ಹೇಳಿದ್ದರು. ಬೇಕಾದರೆ ಸಿ.ಸಿ. ಕ್ಯಾಮೆರಾ ಪರಿಶೀಲಿಸಿ ಎಂದು ಸಲಹೆ ನೀಡಿದ್ದರು. ಬಳಿಕ ಟ್ರಸ್ಟಿಗಳು ಸೇರಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಶಂಕಿತ ಆರೋಪಿ ಮಹಿಳಾ ಟ್ರಸ್ಟಿ ನೋಟಿನ ಬಂಡಲ್‌ಗಳಲ್ಲಿ ಒಂದನ್ನು ಬ್ಯಾಗ್‌ಗೆ ಹಾಕುತ್ತಿರುವ ದೃಶ್ಯ ಕಂಡು ಬಂದಿತ್ತು.

ಈ ಕುರಿತು ತಕ್ಷಣ ವ್ಯವಸ್ಥಾಪನ ಆಡಳಿತ ಸಮಿತಿ ತುರ್ತು ಸಭೆ ಕರೆಯಲಾಯಿತು. ಸಭೆಯಲ್ಲಿ ವಾದ- ವಿವಾದ ನಡೆದು ರಾಜೀನಾಮೆ ನೀಡುವುದಾಗಿ ಮಹಿಳಾ ಟ್ರಸ್ಟಿ ಒಪ್ಪಿದ್ದರು. ವಾರ ಕಳೆದರೂ ರಾಜೀನಾಮೆ ನೀಡದ ಹಿನ್ನೆಲೆ ಆಕ್ರೋಶಗೊಂಡಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಬಳಿಕ ಮುಜರಾಯಿ ಇಲಾಖೆ ಪಿಎಸ್ ಎಂದು ಹೇಳಿಕೊಂಡದವರು ಕದ್ರಿ ಕ್ಷೇತ್ರದ ಆಡಳಿತಾಧಿಕಾರಿಗೆ ಕರೆ ಮಾಡಿ ತನಿಖೆ ನಡೆಸುವಂತೆ ಮೌಖಿಕವಾಗಿ ಹೇಳಿರು ವುದು ದೇವಸ್ಥಾನದ ಅಂಗಣದೊಳಗೆ ಸುದ್ದಿಯಾಗಿತ್ತು. ಬಳಿಕ ಟ್ರಸ್ಟಿ ಬೆಂಬಲಕ್ಕೆ ಸಮಿತಿ ಅಧ್ಯಕ್ಷರು ಮತ್ತು ಶಿಫಾರಸು ಮಾಡಿದ ಪಕ್ಷದ ಅಧ್ಯಕ್ಷರು ಬೆಂಬಲವಾಗಿ ನಿಂತ ಕಾರಣ ವಿಚಾರಣೆ ನಿಂತ ನೀರಾಗಿತ್ತು.

ಸದ್ಯಕ್ಕೆ ಈ ಕಳ್ಳತನದ ಕುರಿತು ಎಲ್ಲರೂ ಮೌನಕ್ಕೆ ಶರಣಾಗಿರುವುದು ಆಡಳಿತ ಮತ್ತು ಅಧಿಕಾರಿಗಳ ನಡುವಿನ ಜುಗಲ್ ಬಂದಿ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

Leave a Comment

Your email address will not be published. Required fields are marked *