Ad Widget .

ಬೆಂಗಳೂರು: 6 ರಿಂದ 8ನೇ ತರಗತಿ ಬೋಧಕರ ಹುದ್ದೆಗೆ ನೇಮಕಾತಿ ಅಧಿಸೂಚನೆ ಪ್ರಕಟ| ಇಲ್ಲಿದೆ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

Ad Widget . Ad Widget .

ಸಮಗ್ರ ನ್ಯೂಸ್: ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ) ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಂದರೆ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು [ಸಾರ್ವಜನಿಕ ಶಿಕ್ಷಣ ಇಲಾಖೆ] [ನೇಮಕಾತಿ] [ವಿಶೇಷ] ನಿಯಮಗಳು – 2022 ಸಂ:ಇಪಿ 89 ಪಿಬಿಎಸ್ 2021(ಭಾಗ-1) ದಿನಾಂಕ:22-02-2022 ರ ನಿಯಮಗಳನ್ವಯ ಆಯ್ಕೆ ಮಾಡಲು ಈ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

Ad Widget . Ad Widget .

ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನ ಅಂದರೆ ದಿನಾAಕ:22/04/2022ಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳಿಂದ ನಿಗದಿಪಡಿಸಿರುವ ಅರ್ಜಿ ನಮೂನೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಇತರೆ ಬೇರೆ ಯಾವುದೇ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಟಿಪ್ಪಣಿ: 1) ಈ ಅಧಿಸೂಚನೆಯು ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ನಿಯಮಗಳು, ಆದೇಶಗಳು ಮತ್ತು ತಿದ್ದುಪಡಿಗಳಿಗೆ
ಒಳಪಟ್ಟಿರುತ್ತದೆ.
2) ಈಗ ಅಧಿಸೂಚಿಸಿರುವ ಹುದ್ದೆಗ¼ À ಸಂಖ್ಯೆ ಮತ್ತು ವರ್ಗೀಕರಣವು ಬದಲಾವಣೆಗೆ ಒಳ್ಳಪಟ್ಟಿರುತ್ತದೆ.
01] ಆಯ್ಕೆಗೆ ಅರ್ಹತೆ: ಆಯ್ಕೆಗೆ ಅರ್ಹತೆ ಪಡೆಯಲು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು:

  1. ಸರ್ಕಾರದ ಆದೇಶ ಸಂಖ್ಯೆ : ಇಪಿ 89 ಪಿಬಿಎಸ್ 2021 (ಭಾಗ-1) ದಿನಾಂಕ:22-02-2022ರಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆ
    ಹಾಗೂ ವಯೋಮಿತಿಯನ್ನು ಹೊಂದಿರತಕ್ಕದ್ದು.
  2. ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಕೆ.ಎ.ಆರ್.ಟಿ.ಇ.ಟಿ/ಸಿ.ಟಿ.ಇ.ಟಿ-ಪೇಪರ್-2ರಲ್ಲಿ – ಸಾಮಾನ್ಯ, 2ಎ, 2ಬಿ, 3ಎ ಮತ್ತು 3ಬಿ ಗೆ ಸೇರಿದ
    ಅಭ್ಯರ್ಥಿಗಳು ಶೇಕಡಾ 60 ಹಾಗೂ ಪ-ಜಾತಿ, ಪ-ವರ್ಗ, ಪ್ರವರ್ಗ-1 ಮತ್ತು ವಿಕಲಚೇತನ ಗುಂಪಿಗೆ ಸೇರಿದ ಅಭ್ಯರ್ಥಿಗಳು ಶೇಕಡಾ 55
    ಅಂಕಗಳನ್ನು ಗಳಿಸಿರಬೇಕು) ಅರ್ಹತೆ ಗಳಿಸಿರಬೇಕು.
  3. ಹುದ್ದೆಯ ನೇಮಕಾತಿಗಾಗಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧಾt ಪರೀಕ್ಷೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
  4. ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-2 (ವಿಷಯ ಸಾಮರ್ಥ್ಯ) ರಲ್ಲಿ ಕನಿಷ್ಠ ಶೇ.45 ರಷ್ಟು ಅಂಕಗ¼ನ ÀÄ್ನ ಪಡೆಯಬೇಕು.
  5. ಸ್ಪರ್ಧಾತ್ಮಕ ಪರೀಕ್ಷೆಯ ಭಾಷಾ ಸಾಮರ್ಥ್ಯ ಪರೀಕ್ಷೆ (ಪತ್ರಿಕೆ-3) ರಲ್ಲಿ ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಪಡೆಯಬೇಕು.
  6. ಅಭ್ಯರ್ಥಿಗಳು ಆಧಾರ್ ನೋಂದಣಿ ಸಂಖ್ಯೆಯನ್ನು ಹೊಂದಿರತಕ್ಕದ್ದು.

02] ನಿಗದಿತ ಅರ್ಜಿ ನಮೂನೆ ಸಲ್ಲಿಸುವ ವಿಧಾನ:
ಅಭ್ಯರ್ಥಿಯು ಆನ್‌ಲೈನ್ [[ON-LINE]] ಮೂಲಕವೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್
[[http://schooleducation.kar.nic.in] ಮುಖಾಂತರ ಅರ್ಜಿ ಸಲ್ಲಿಸಬೇಕು. ಇತರೆÀ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ
ಇರುವುದಿಲ್ಲ. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವ ಮೊದಲು USER Name and Password ನ್ನು ನಮೂದಿಸಿ
ನೊಂದಾಯಿಸಿಕೊಳ್ಳಬೇಕು. ನಂತರ ಅರ್ಜಿಯಲ್ಲಿ ವಿವರಗಳನ್ನು ತುಂಬಲು ನೊಂದಾಯಿಸಿದ USಇಖ USER Name and Password ಆಗಬೇಕು. ಅರ್ಜಿ ಭರ್ತಿ ಮಾಡಿದ ನಂತರ ನಿಗದಿತ ಶುಲ್ಕ ಪಾವತಿಸಬೇಕು.
ಸೂಚನೆ: 1. ಅರ್ಜಿ ಶುಲ್ಕವನ್ನು ‘ ‘ ಮೂಲಕ ಅಂದರೆ ಅಥವಾ ಬ್ಯಾಂಕ್ ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕಿನಲ್ಲಿ ಮಾತ್ರ ಚಲನ್ ಮೂಲಕ ಶುಲ್ಕ ಪಾವತಿಸುವುದು) ಮೂಲಕವೇ ಪಾವತಿಸತಕ್ಕದ್ದು. ಇನ್ಯಾವುದೇ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ. ಅನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು. ಒಮ್ಮೆ ಪರೀಕ್ಷಾ ಶುಲ್ಕವನ್ನು ಪಾವತಿಸಿದ ನಂತರ ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ. ಹಾಗೂ ಸದರಿ ಶುಲ್ಕವನ್ನು ಇತರೆ ಯಾವುದೇ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ.

ಅರ್ಜಿಯನ್ನು ಸಲ್ಲಿಸುವ (Submit) ಮುನ್ನ ಭರ್ತಿ ಮಾಡಿರುವ ಎಲ್ಲಾ ಮಾಹಿತಿಗಳು ಸರಿಯಾಗಿರುವುದನ್ನು ಖಚಿತ ಪಡಿಸಿಕೊಳ್ಳಬೇಕು

 ಅಭ್ಯರ್ಥಿಗಳು ಒಂದೇ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದಲ್ಲಿ ಯಾವ ನೊಂದಣ/ಅರ್ಜಿ ಸಂಖ್ಯೆಯಲ್ಲಿ ಪರೀಕ್ಷೆ ತೆಗೆದುಕೊಂಡಿರುತ್ತಾರೋ ಆ ಅರ್ಜಿಯನ್ನು ಮಾತ್ರ ಅಂತಿಮವಾಗಿ ಪರಿಗಣಿಸಲಾಗುವುದು.. ಆದರೆ ಅಭ್ಯರ್ಥಿಯು ಎಲ್ಲಾ ಪತ್ರಿಕೆಗಳನ್ನು ಒಂದೇ ನೊಂದಣಿ/ಅರ್ಜಿ ಸಂಖ್ಯೆಯಲ್ಲಿ ಉತ್ತರಿಸಿರಬೇಕು.
 ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
 ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಭರ್ತಿ ಮಾಡಬೇಕಾಗಿದ್ದು, ಈ ಬಗ್ಗೆ ಮಾರ್ಗಸೂಚಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ
ಪ್ರಕಟಿಸಲಾಗುವುದು.
 ಅಭ್ಯರ್ಥಿಯು ಒಂದೇ ಅರ್ಜಿಯಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ, ಆ ಎರಡೂ ಹುದ್ದೆಗಳಿಗೆ ಯಾವುದಕ್ಕೆ ಪ್ರಥಮ ಹಾಗೂ ದ್ವಿತೀಯ ಆದ್ಯತೆ ಬಯಸುವರು ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು.
 ಈ ಅಧಿಸೂಚನೆಗೆ ಅನುಸಾರವಾಗಿ ಸಲ್ಲಿಸಿದ ಅರ್ಜಿಯನ್ನು ಇಲಾಖೆಯು ನಡೆಸುವ ಇತರೆ ಅಧಿಸೂಚನೆಗಳ ಆಯ್ಕೆ ಪರೀಕ್ಷೆಗಳಿಗೆ
ಪರಿಗಣಿಸಲಾಗುವುದಿಲ್ಲ.
 ಅರ್ಜಿ ಶುಲ್ಕ ಪಾವತಿಸಿದ ನಂತರ ಅಭ್ಯರ್ಥಿಯು ಅರ್ಜಿಯ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳುವುದು. ಮುದ್ರಿತ ಅರ್ಜಿಯಲ್ಲಿನ ಅರ್ಜಿ ಸಂಖ್ಯೆ ಈ ನೇಮಕಾತಿಯ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಅವಶ್ಯಕವಾಗಿರುವುದರಿಂದ ಅರ್ಜಿಯ ಸಂಖ್ಯೆಯನ್ನು/ಮುದ್ರಿತ ಅರ್ಜಿ ಪ್ರತಿಯನ್ನು ಅಭ್ಯರ್ಥಿಯು ಕಡ್ಡಾಯವಾಗಿ ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಕೊಳ್ಳಬೇಕು.
 ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವಾಗ ಅಭ್ಯರ್ಥಿಗೆ ನೀಡಿರುವ ನೋಂದಣಿ ಸಂಖ್ಯೆ ನಮೂದಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶಪತ್ರವನ್ನು
ಇಲಾಖಾ ವೆಬ್‌ಸೈಟ್ http://schooleducation.kar.nic.in ಡೌನ್‌ಲೋಡ್ ಮಾಡಿಕೊಳ್ಳಬೇಕು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ನಿಗದಿಪಡಿಸಿದ ಅವಧಿಯನ್ನು ಇಲಾಖಾ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು.

03] ಅರ್ಜಿ ಸಲ್ಲಿಸಲು ಪಾವತಿಸಬೇಕಾದ ಶುಲ್ಕ:
ಪರಿಶಿಷ್ಠ ಜಾತಿ / ಪರಿಶಿಷ್ಠ ವರ್ಗ / ಪ್ರವರ್ಗ-1 /ಅಂಗವಿಕಲ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿ ರೂ 625 ಎರಡು ಹುದ್ದೆಗೆ ಅರ್ಜಿ 1250 02 ಇತರೆ ಎಲ್ಲಾ ಅಭ್ಯರ್ಥಿಗಳಿಗೆ 1250 2500 ಅರ್ಜಿ ಒಂದೇ ಆದರೂ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಹೆಚ್ಚಿನ ಅರ್ಜಿ ಸಲ್ಲಿಸಲು ಇಚ್ಛಿಸುವವರು ಪರೀಕ್ಷಾ ಶುಲ್ಕವನ್ನು ಮೇಲ್ಕಾಣಿಸಿದ ಖಾಖ್ತೆಯಲ್ಲಿರುವಂತೆ ಪಾವತಿಸಬೇಕು.

02 ಇತರೆ ಎಲ್ಲಾ ಅಭ್ಯರ್ಥಿಗಳಿಗೆ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿ 1250 ಎರಡು ಹುದ್ದೆಗೆ ಅರ್ಜಿ 2500

ಅರ್ಜಿ ಒಂದೇ ಆದರೂ ಒಂದಕ್ಕಿಂತ À ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಪರೀಕ್ಷಾ ಶುಲ್ಕವನ್ನು ಮೇಲ್ಕಾಣಿಸಿದ ಖಾಖ್ತೆಯಲ್ಲಿರುವಂತೆ ಪಾವತಿಸಬೇಕು.
04] ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22/04/2022
05] ವಿವಿಧ ವಿಷಯ ಹಾಗೂ ಮಾಧ್ಯಮದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಬಗ್ಗೆ:
 ಎಲ್ಲಾ ವಿಷಯ ಹಾಗೂ ಮಾಧ್ಯಮದ ಹುದ್ದೆಗಳಿಗೆ ಒಂದೇ ಅರ್ಜಿ ನಮೂನೆಯನ್ನು ನಿಗದಿಪಡಿಸಿದೆ.
 ಅಭ್ಯರ್ಥಿಗಳು ಅರ್ಹರಿದಲ್ಲಿ, ಒಂದೇ ಅರ್ಜಿಯಲ್ಲಿ ಒಂದಕ್ಕಿಂತ ಹೆಚ್ಚು ವಿಷಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ, ಹುದ್ದೆಗಳಿಗೆ ತಮ್ಮ ಆದ್ಯತೆಯನ್ನು ನಮೂದಿಸಬೇಕು .
 ಪತ್ತಿಕೆ-É 2ನ್ನು ಯಾವ ಬೋಧನಾ ಮಾಧ್ಯಮದ ಹುದ್ದೆಗೆ ಆಯ್ಕೆ ಬಯಸುತ್ತಾರೋ, ಆ ಭಾಷಾ ಮಾಧ್ಯಮದಲ್ಲಿ ಅಥವಾ ಆಂಗ್ಲಾ ಭಾಶೆಯಲ್ಲಿ ಉತ್ತರಿಸಬೇಕು ಹಾಗೂ ಎಲ್ಲಾ ಪ್ರಶ್ನೆಗಳಿಗೆ ಕಡ್ಡಾಯವಾಗಿ ಆಯ್ದ ಒಂದೇ ಭಾಷಾ ಮಾಧ್ಯಮದಲ್ಲಿ ಉತ್ತರಿಸಬೇಕು. ಪತ್ರಿಕೆ-2ನ್ನು ಯಾವ ಮಾಧ್ಯಮದಲ್ಲಿ ಉತ್ತರಿಸಲಾಗುವುದು ಎಂಬುದನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು.
06 ] ಭರ್ತಿ ಮಾಡಲು ಉದ್ದೇಶಿಸಿದ ಹುದ್ದೆಗಳ ವಿವರ: ಅನುಬಂಧ-1 ರಲ್ಲಿ ನೀಡಲಾಗಿದೆ. ಮತ್ತು ಅನುಬಂಧ 2 ರಲ್ಲಿ ನೀಡಲಾಗಿದೆ.
07] ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ )ಹುದ್ದೆಗಳಿಗೆ ಸಂಬಂಧಿಸಿದಂತೆ,
ವೇತನ ಶ್ರೇಣಿ:- ರೂ. 27650 -52650 [ರೂ.27650 -650 -29600 -750 -32600 -850 -36000 -950 -39800 -1100- 46400 -1250 – 52650]
08] ಶೈಕ್ಷಣಿಕ ವಿದ್ಯಾರ್ಹತೆ (ವೃಂದ ಮತ್ತು ನೇಮಕಾತಿಯ ವಿಶೇಷ ನಿಯಮಗಳು -2022) ಪ್ರತಿ ವಿಷಯ ಹಾಗೂ ಮಾಧ್ಯಮದ ಹುದ್ದೆಗೆ ಸಂಬಂಧಿಸಿದಂತೆ ಅಭ್ಯರ್ಥಿಯು ಉಲ್ಲೇಖ 02 ರ ವೃಂದ ಮತ್ತು ನೇಮಕಾತಿ ವಿಶೇಷ ನಿಯಮಗಳು 2022ರಲ್ಲಿ ನಿಗದಿಗೊಳಿಸಲಾಗಿರುವ ವಿದ್ಯಾರ್ಹತೆ ಹೊಂದಿರಬೇಕು. ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8) ವೃಂದದ ಹುದ್ದೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ಅರ್ಹತೆಗಳು:
(1) ಪದವಿಯಲ್ಲಿ ಒಟ್ಟಾರೆಯಾಗಿ ಕನಿಷ್ಟ (ಸರಾಸರಿ) ಶೇ.50 ಅಂಕಗಳೊAದಿಗೆ ಉತ್ತೀರ್ಣ ಹಾಗೂ ಪ್ರಾಥಮಿಕ ಶಿಕ್ಷಣದಲ್ಲಿ 2 ವರ್ಷಗಳ ಡಿಪ್ಲೊಮಾ ಅಥವಾ ಡಿಪ್ಲೋಮಾದಲ್ಲಿ ವಿಶೇಷ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಪದವಿಯಲ್ಲಿ ಒಟ್ಟಾರೆಯಾಗಿ ಕನಿಷ್ಟ (ಸರಾಸರಿ) ಶೇ.50 ಅಂಕಗಳೊAದಿಗೆ ಉತ್ತೀರ್ಣ ಹಾಗೂ ಶಿಕ್ಷಣ ವಿಷಯದಲ್ಲಿ ಅಥವಾ ವಿಶೇಷ ಶಿಕ್ಷಣದಲ್ಲಿ ಪದವಿ ಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಒಟ್ಟಾರೆಯಾಗಿ ಕನಿಷ್ಟ (ಸರಾಸರಿ) ಶೇ.50 ಅಂಕಗಳೊAದಿಗೆ ಪದವಿ ಪೂರ್ವ ಶಿಕ್ಷಣ ಹಾಗೂ 4 ವರ್ಷಗಳ ಪ್ರಾಥಮಿಕ ಶಿಕ್ಷಣ ವಿಷಯದಲ್ಲಿ ಪದವಿ ಅಥವಾ 4 ವರ್ಷಗಳ ಶಿಕ್ಷಣ ವಿಷಯದ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಪರಂತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರೆ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ-1 ಅಥವಾ ಅಂಗವಿಕಲ ಅಭ್ಯರ್ಥಿಗಳ ನೇಮಕಾತಿಗಾಗಿ ಅಂಕಗಳನ್ನು ಪದವಿ ಅಥವಾ ಪದವಿಪೂರ್ವ ಶಿಕ್ಷಣದಲ್ಲಿ ಕನಿಷ್ಠ (ಸರಾಸರಿ) ಶೇ.45 ರಷ್ಠು ನಿಗದಿಪಡಿಸಿದೆ.
ಮತ್ತು (2) ಭಾರತ ಸರ್ಕಾರ ಅಥವಾ ಕರ್ನಾಟಕ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯ ಪತ್ರಿಕೆ-2 ರಲ್ಲಿ ಅರ್ಹತೆಗಳಿಸಿರಬೇಕು. ಮತ್ತು

(3) ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಪರಿಷತ್ತಿನ (National Council for Teacher Education) ವ್ಯಾಪ್ತಿಯ ನಿಯಮಗಳಿಂದ ಕಾಲ ಕಾಲಕ್ಕೆ ಸೂಚಿಸಲಾದ ಯಾವುದೇ ಹೆಚ್ಚಿನ ಅಥವಾ ಹೆಚ್ಚುವರಿ ವಿದ್ಯಾರ್ಹತೆ.
ಟಿಪ್ಪಣಿ:-ಮೇಲ್ಕಾಣಿಸಿದ ವಿದ್ಯಾರ್ಹತೆಗಳಿಗೆ ಸಂಬಂಧಿಸಿದಂತೆ,.
i) ನಾಲ್ಕು ವರ್ಷಗಳ ಸಂಯುಕ್ತ ಶಿಕ್ಷಕರ ಪದವಿಯನ್ನು ಹೊಂದಿದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಐಚ್ಛಿಕ ವಿಷಯಗಳನ್ನು 03 ವರ್ಷವೂ
ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕೆಂಬ ಷರತ್ತು ಅನ್ವಯಿಸುವುದಿಲ್ಲ.
ii) ‘ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೋಮಾ ಅಥವಾ ಪದವಿ ಕೋರ್ಸ್” ಅಥವಾ ಬಿ.ಇಡಿ ಕೋರ್ಸ್ ಪಡೆದಿದ್ದಲ್ಲಿ ಎನ್.ಸಿ.ಟಿ.ಇ
ಯಿಂದ ಮಾನ್ಯತೆ ಪಡೆದಿದ್ದಲ್ಲಿ ಮಾತ್ರ ಪರಿಗಣಿಸಲಾಗುವುದು.
iii) ವಿಶೇಷ ಶಿಕ್ಷಣ ((Special Education) ಪದವಿ ಪಡೆದಿದ್ದಲ್ಲಿ ರಿಹ್ಯಾಬಿಲಿಟೇಶನ್ ಕೌನ್ಸಿಲ್ ಆಫ್ ಇಂಡಿಯಾದಿAದ
((Rehabilitation Council of India) ಮಾನ್ಯತೆ ಪಡೆದಿರಬೇಕು.
(4) ವಿದ್ಯಾರ್ಹತೆ: ಪ್ರತಿ ವಿಷಯ ಹಾಗೂ ಮಾದ್ಯಮದ ಹುದ್ದೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ವಿವರಗಳು ಕೆಳಗಿನಂತೆ ಇರುತ್ತವೆ.
I. ಪದವೀಧರ ಪ್ರಾಥಮಿಕ ಶಿಕ್ಷಕ (ಭಾಷೆ -ಆಂಗ್ಲ)
Graduate Primary Teacher for Class 6 to 8 (Language – English)
(ಚಿ) ಪದವಿಯಲ್ಲಿ ಆಂಗ್ಲ ಭಾಷೆಯನ್ನು ಐಚ್ಚಿಕ ವಿಷಯವಾಗಿ ಮೂರು ವರ್ಷವೂ ಅಧ್ಯಯನ ಮಾಡಿರಬೇಕು ಮತ್ತು
ಕನ್ನಡ/ಹಿಂದಿ/ಮರಾಠಿ/ಉರ್ದು/ತೆಲುಗು/ತಮಿಳು/ಮಲೆಯಾಳಂ/ಕೊಂಕಣಿ/ಸಂಸ್ಕ್ರತ/ಇತಿಹಾಸ/ಅರ್ಥಶಾಸ್ತ್ರ/ರಾಜ್ಯಶಾಸ್ತ್ರ/ ಭೂಗೋಳಶಾಸ್ತ್ರ/ಸಮಾಜಶಾಸ್ತ್ರ
ಈ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಮೂರು ವರ್ಷವು ಐಚ್ಚಿಕ ವಿಷಯವಾಗಿ ಅದ್ಯs ಯನ ಮಾಡಿರಬೇಕು.
(b) ಪದವಿಯಲ್ಲಿ ಒಟ್ಟಾರೆಯಾಗಿ ಕನಿಷ್ಠ (ಸರಾಸರಿ) ಶೇ. 50 ರಷ್ಟು ಅಂಕಗಳನ್ನು ಪಡೆದಿರಬೇಕು.
ಪರಂತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರೆ ಹಿಂದುಳಿದ ವರ್ಗ 1 ಪೈಕಿ ಪ್ರವರ್ಗ 1/ವಿಕಲಚೇತನರಿಗೆ ನಿಗದಿಪಡಿಸಿರುವ ಪದವಿ ಅಥಾವ ಪದವಿಪೂರ್ವ ಶಿಕ್ಷಣದಲ್ಲಿ ಕನಿಷ್ಠ (ಸರಾಸರಿ) ಶೇ.45 ರಷ್ಠು ಅಂಕಗಳನ್ನು ಪಡೆದಿರಬೇಕು.
ಮತ್ತು
(ಛಿ) ಶಿಕ್ಷಕ ಶಿಕ್ಷಣದಲ್ಲಿ ಡಿಪ್ಲೋಮಾ ಅಥವಾ ಶಿಕ್ಷಣ ಪದವಿಯಲ್ಲಿ ಅಥಾವ À ಭಾಷಾ ವಿಷಯದಲ್ಲಿ ಬೋಧನಾ ಅಭ್ಯಾಸ/ಬೋಧನಾ ವಿಧಾನವನ್ನು (Practice Teaching /Method 0F Teaching) ಅಭ್ಯಾಸ ಮಾಡಿರಬೇಕು.

II. ಪದವೀಧರ ಪ್ರಾಥಮಿಕ ಶಿಕ್ಷಕ [ಗಣಿತ ಮತ್ತು ವಿಜ್ಞಾನ] Graduate Primary Teacher for Class 6 to 8 (Maths & Science) ಪದವೀಧರ ಪ್ರಾಥಮಿಕ ಶಿಕ್ಷಕ (ಗಣಿತ ಮತ್ತು ವಿಜ್ಞಾನ) ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು :
(ಚಿ) ಪದವಿಯಲ್ಲಿ ಗಣಿತ, ಭೌತಶಾಸ್ತ್ರ ವಿಷಯಗಳನ್ನು ಐಚ್ಛಿಕ ವಿಷಯವಾಗಿ ಮೂರೂ ವರ್ಷ ಕಡ್ಡಾಯವಾಗಿ ಅಭ್ಯಾಸ ಮಾಡಿದ ಪದವೀಧರರು ಈ ವಿಷಯಗಳ (ಗಣಿತ & ಭೌತಶಾಸ್ತ್ರ) ಜೊತೆಗೆ ರಸಾಯನಶಾಸ್ತ್ರ ಗಣಕಶಾಸ್ತ್ರ / ಎಲೆಕ್ಟ್ರಾನಿಕ್ಸ್/ ಸಂಖ್ಯಾಶಾಸ್ತ/ ಭೂಗರ್ಭಶಾಸ್ತ್ರ ಇವುಗಳಲ್ಲಿ ಯಾವುದಾದರು ಒಂದು ವಿಷಯವನ್ನು ಐಚ್ಛಿಕ ವಿಷಯವನ್ನಾಗಿ 3ನೇ ವಿಷಯವಾಗಿ ಪದವಿಯಲ್ಲಿ ಅಭ್ಯಾಸ ಮಾಡಿರಬೇಕು. ಅಥವಾ ವಾಸ್ತು ಶಿಲ್ಪದ ಪದವೀಧರರಲ್ಲದ ಇಂಜಿನಿಯರಿಂಗ್ ಪದವೀಧರರು ಪ್ರಥಮ ಮೂರು/ನಾಲ್ಕು ಸೆಮಿಸ್ಟರ್‌ಗಳಲ್ಲಿ ಗಣಿತ ಮತ್ತು ಉಳಿದ ಸೆಮಿಸ್ಟರ್‌ಗಳಲ್ಲಿ ಅನ್ವಯಿಕ ಗಣಿತ ಅಭ್ಯಾಸ ಮಾಡಿರಬೇಕು.

(b) ಪದವಿಧರರು ಒಟ್ಟಾರೆಯಾಗಿ ಕನಿಷ್ಟ (ಸರಾಸರಿ) ಶೇಕಡಾ 50 ರಷ್ಟು ಅಂಕಗಳನ್ನು ಪಡೆದಿರಬೇಕು/ಇಂಜಿನಿಯರಿಂಗ್‌ ಪದವಿಧರರು ಪ್ರತ್ಯೇಕವಾಗಿ ಗಣಿತ ಮತ್ತು ಅನ್ವಯಿಕ ಗಣಿತ ವಿಷಯದಲ್ಲಿ ಕನಿಷ್ಟ (ಸರಾಸರಿ) ಶೇ 50 ರಷ್ಟು ಅಂಕಗಳನ್ನು ಒಟ್ಟಾರೆಯಾಗಿ ಗಳಿಸಿರಬೇಕು. ಪರಂತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ / ಇತರೆ ಹಿಂದುಳಿದ ವಿದ್ಯಾರ್ಥಿಗಳ ಪೈಕಿ-1/ವಿಕಲಚೇತನರಿಗೆ ನಿಗದಿಪಡಿಸಿರುವ ಪದವಿ ಅಥವಾ ಪದವಿಪೂರ್ವ ಶಿಕ್ಷಣದಲ್ಲಿ ಕನಿಷ್ಠ (ಸರಾಸರಿ) ಶೇ.45 ರಷ್ಠು ಅಂಕಗಳನ್ನು ಪಡೆದಿರಬೇಕು.

ಮತ್ತು
(ಛಿ) ಈ ಮೇಲಿನ ಮೂರು ವಿಷಯಗಳ ಪೈಕಿ ಕನಿಷ್ಟ ಒಂದು ವಿಷಯದಲ್ಲಿ ಶಿಕ್ಷಕ ಶಿಕ್ಷಣದಲ್ಲಿ ಡಿಪ್ಲೊಮಾ ಅಥವಾ ಶಿಕ್ಷಣ ಪದವಿಯಲ್ಲಿ ಬೋಧನಾ ಅಭ್ಯಾಸ/ಬೋದನಾ ವಿಧಾನವನ್ನು (Practice Teaching /Method 0F Teaching) ಅಭ್ಯಾಸ ಮಾಡಿರಬೇಕು ಪದವೀಧರ ಪ್ರಾಥಮಿಕ ಶಿಕ್ಷಕ [ಜೀವವಿಜ್ಞಾನ] Graduate Primary Teacher for Class 6 to 8 (Biological Science)
(ಈ ಹುದ್ದೆಯನ್ನು ಅಧಿಕ ವಿಜ್ಞಾನ ಹುದ್ದೆಗಳನ್ನು ಹೊಂದಿರುವ ಶಾಲೆಗಳಲ್ಲಿ ವಿದ್ಯಾರ್ಥಿ ಶಿಕ್ಷಕರ ಅನುಪಾತಕ್ಕೆ ಅನುಸಾರ ಎರಡನೇ
ಹುದ್ದೆಯಾಗಿ ಹೊಂದಬಹುದು.)

(ಈ ಹುದ್ದೆಯನ್ನು ಒಂದಕ್ಕಿಂತ ಅಧಿಕ ವಿಜ್ಞಾನ ಹುದ್ದೆಗಳನ್ನು ಹೊಂದಿರುವ ಶಾಲೆಗಳಲ್ಲಿ ವಿದ್ಯಾರ್ಥಿ ಶಿಕ್ಷಕರ ಅನುಪಾತಕ್ಕೆ ಅನುಸಾರ ಎರಡನೇ ಹುದ್ದೆಯಾಗಿ ಹೊಂದಬಹುದು.)
ಪದವೀಧರ ಪ್ರಾಥಮಿಕ ಶಿಕ್ಷಕ (ಜೀವವಿಜ್ಞಾನ) ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು :
(ಚಿ) ಪದವಿಯಲ್ಲಿ ರಸಾಯನಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಮೂರು ವರ್ಷವೂ ಕಡ್ಡಾಯವಾಗಿ ಅಭ್ಯಾಸ ಮಾಡಿದ ಪದವೀಧರರು ಮತ್ತು ರಸಾಯನಶಾಸ್ತçದ ಜೊತೆಗೆ ಸಸ್ಯಶಾಸ್ತ್ರ / ಪ್ರಾಣಿಶಾಸ್ತ್ರ /ರೇಷ್ಮೆ ಕೃಷಿ/ ಪರಿಸರ ವಿಜ್ಞಾನ / ತಳಿಶಾಸ್ತ್ರ /ಜೈವಿಕ ತಂತ್ರಜ್ಞಾನ /ಸೂಕ್ಷö್ಮ ಜೀವಿಶಾಸ್ತ್ರ ಇವುಗಳಲ್ಲಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳನ್ನಾಗಿ ಪದವಿಯಲ್ಲಿ ಮೂರು ವರ್ಷವೂ ಅಭ್ಯಾಸ ಮಾಡಿರಬೇಕು.
(b) ಪದವಿಯಲ್ಲಿ ಒಟ್ಟಾರೆಯಾಗಿ ಕನಿಷ್ಟ (ಸರಾಸರಿ) ಶೇ 50 ರಷ್ಟು ಅಂಕಗಳನ್ನು ಪಡೆದಿರಬೇಕು. ಪರಂತು ಪರಿ ಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ-1/ವಿಕಲಚೇತನ ತನರಿಗೆ ನಿಗದಿಪಡಿಸಿರುವ ಪದವಿ ಅಥವಾ ಪದವಿಪೂರ್ವ ಶಿಕ್ಷಣದಲ್ಲಿ ಕನಿಷ್ಠ (ಸರಾಸರಿ) ಶೇ.45 ರಷ್ಠು ಅಂಕಗಳನ್ನು ಪಡೆದಿರಬೇಕು.

ಮತ್ತು
(ಛಿ) ಶಿಕ್ಷಕ ಶಿಕ್ಷಣ ವಿಷಯದಲ್ಲಿ ಡಿಪ್ಲೊಮಾ ಅಥವಾ ಶಿಕ್ಷಣ ಪದವಿಯಲ್ಲಿ ಈ ಮೂರು ವಿಷಯಗಳ ಪೈಕಿ ಕನಿಷ್ಟ ಒಂದು ವಿಷಯದಲ್ಲಿ
ಬೋಧನಾ ಅಭ್ಯಾಸ/ಭೋಧನ (Practice Teaching/ Method Of teaching) ಅಭ್ಯಾಸ ಮಾಡಿರಬೇಕು.
III. ಪದವೀಧರ ಪ್ರಾಥಮಿಕ ಶಿಕ್ಷಕ (6ರಿಂದ 8ನೇ ತರಗತಿ) [ಸಮಾಜ ಪಾಠಗಳು]
Graduate Primary Teacher for Class 6 to 8 (Social Studies) ಪದವೀಧರ ಪ್ರಾಥಮಿಕ ಶಿಕ್ಷಕ (ಸಮಾಜ ಪಾಠಗಳು) ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು:
(ಚಿ) ಮೂರು ವರ್ಷಗಳ ಪದವಿಯಲ್ಲಿ ಸಮಾಜ ಪಾಠ ಸಮೂಹ ವಿಷಯಗಳಾದ ಇತಿಹಾಸ/ ಅರ್ಥಶಾಸ್ತ/ ಭೂಗೋಳ ಶಾಸ್ತç/ ರಾಜ್ಯಶಾಸ್ತ
/ಸಮಾಜಶಾಸ್ತ ಇವುಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಅಭ್ಯಾಸ ಮಾಡಿರಬೇಕು.

ಪದವೀಧರ ಪ್ರಾಥಮಿಕ ಶಿಕ್ಷಕ (ಸಮಾಜ ಪಾಠಗಳು) ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು:
(ಚಿ) ಮೂರು ವರ್ಷಗಳ ಪದವಿಯಲ್ಲಿ ಸಮಾಜ ಪಾಠ ಸಮೂಹ ವಿಷಯಗಳಾದ ಇತಿಹಾಸ/ ಅರ್ಥಶಾಸ್ತ್ರ / ಭೂಗೋಳ ಶಾಸ್ತ್ರ / ರಾಜ್ಯಶಾಸ್ತ್ರ /sಸಮಾಜಶಾಸ್ತ್ರ ಇವುಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಅಭ್ಯಾಸ ಮಾಡಿರಬೇಕು.
ಅಥವಾ

(b) ಪದವಿಯಲ್ಲಿ ಸಮಾಜ ಪಾಠ ಸಮೂಹ ವಿಷಯಗಳಾದ ಇತಿಹಾಸ/ ಅರ್ಥಶಾಸ್ತ್ರ
ç/ ಭೂಗೋಳ ಶಾಸ್ತ್ರ / ರಾಜ್ಯಶಾಸ್ತ್ರ/ಸಮಾಜ ಶಾಸ್ತ್ರಳ ಪೈಕಿ
ಒಂದು ವಿಷಯವನ್ನು ಐಚ್ಚಿಕ ವಿಷಯವನ್ನಾಗಿ ಮೂರು ವರ್ಷಗಳು ಅಭ್ಯಾಸ ಮಾಡಿರಬೇಕು ಮತ್ತು ಭಾಷಾ ಸಮೂಹ ವಿಷಯಗಳಾದ ಕನ್ನಡ/ ಆಂಗ್ಲ ಹಿಂದಿ/ ಮರಾಠಿ/ ಉರ್ದು/ ತೆಲುಗು / ತಮಿಳು / ಕೊಂಕಣಿ/ ಮಲೆಯಾಳಂ /ಸಂಸ್ಕ್ರುತ
ಇವುಗಳ ಪೈಕಿ ಒಂದು ಭಾಷೆಯನ್ನು ಐಚ್ಚಿಕವಾಗಿ ಅಭ್ಯಾಸ ಮಾಡಿರಬೇಕು.
ಮತ್ತು
(ಛಿ) ಪದವಿಯಲ್ಲಿ ಒಟ್ಟಾರೆಯಾಗಿ ಕನಿಷ್ಟ (ಸರಾಸರಿ) ಶೇ.50 ರಷ್ಟು ಅಂಕಗಳನ್ನು ಪಡೆದಿರಬೇಕು.
ಪರಂತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರೆ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ-1/ವಿಕಲಚೇತನರಿಗೆ ನಿಗದಿಪಡಿಸಿರುವ ಪದವಿ ಅಥವಾ ಪದವಿಪೂರ್ವ ಶಿಕ್ಷಣದಲ್ಲಿ ಕನಿಷ್ಠ (ಸರಾಸರಿ) ಶೇ.45 ರಷ್ಠು ಅಂಕಗಳನ್ನು ಪಡೆದಿರಬೇಕು. ಮತ್ತು (ಜ) ಶಿಕ್ಷಕ ಶಿಕ್ಷಣ ವಿಷಯದಲ್ಲಿ ಡಿಪ್ಲೊಮಾ ಅಥವಾ ಶಿಕ್ಷಣ ಪದವಿಯಲ್ಲಿ ಸಮಾಜ ಪಾಠ ಸಮೂಹ ವಿಷಯಗಳ ಪೈಕಿ ಕನಿಷ್ಟ ಪಕ್ಷ
ಒಂದು ವಿಷಯದಲ್ಲಿ ಬೋಧನಾ ಅಭ್ಯಾಸ/ಬೋಧನಾ ವಿಧಾನವನ್ನು (Practice Teaching/ Method Of teaching)
ಅಭ್ಯಾಸ ಮಾಡಿರಬೇಕು.
(e) ಶಾಲಾ ಪಠ್ಯವಸ್ತುವಿನಲ್ಲಿ ಅಳವಡಿಸಿಕೊಂಡಿರುವ ಕನಿಷ್ಠ ಎರಡು ವಿಷಯಗಳನ್ನು ಪದವಿಯಲ್ಲಿ ಐಚ್ಛಿಕವಾಗಿ
ಅಭ್ಯಾಸ ಮಾಡಿರುವುದನ್ನು ಪರಿಗಣಿಸಿ ನಿಯಮಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

ಸಾಮಾನ್ಯ ಸೂಚನೆಗಳು:-

  1. 6 ರಿಂದ 8ನೇ ತರಗತಿಗಳ ಶಾಲೆಗಳಿಗೆ ನೇಮಕವಾಗುವ ಪದವೀಧರ ಪ್ರಾಥಮಿಕ ಶಿಕ್ಷಕರ ಕಾರ್ಯಭಾರದ
    ಹೊಂದಾಣಿಕೆಗೆ ಅದೇ ಶಾಲೆಯ ಅಥವಾ ಹತ್ತಿರದ ಶಾಲೆಯ ತರಗತಿಗಳಿಗೆ ಅವರು ನೇಮಕಾತಿ ಹೊಂದಿರುವ
    ವಿಷಯದ ಜೊತೆಗೆ ಯಾವುದೇ ಇತರೆ ವಿಷಯಗಳ ಬೋಧನೆ ಮಾಡಲು ಸೂಚಿಸಬಹುದು.
  2. ಆಂಗ್ಲ ಮತ್ತು ಸಮಾಜ ವಿಜ್ಞಾನ ವಿಷಯಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎರಡೂ
    ಹುದ್ದೆಗಳಿಗೆ ಆಯ್ಕೆಯಾದಲ್ಲಿ ಪ್ರಥಮ ಆಧ್ಯತೆ ನೀಡಿದ ಹುದ್ದೆಗೆ ಮಾತ್ರ ಪರಿಗಣಿಸಲಾಗುವುದು.
  3. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನಿಗದಿತ ವಿದ್ಯಾರ್ಹತೆ ಪಡೆಯಲು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ
    ಕಾಯುತ್ತಿರುವ ಅಭ್ಯರ್ಥಿಗಳು ಅರ್ಹರಾಗುವುದಿಲ್ಲ. ಆನ್‌ಲೈನ್ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ
    ದಿನಾಂಕ: 22/04/2022 ರೊಳಗೆ ವಿದ್ಯಾರ್ಹತೆಯ ಅಂಕಪಟ್ಟಿ ಹಾಗೂ ಇತರೆ ಎಲ್ಲ ಅಗತ್ಯ ಸರ್ಟಿಫಿಕೇಟ್‌ಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು.

9] ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಟ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು.
[ಅ] ಕನಿಷ್ಠ 21 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.
[ಆ] ಗರಿಷ್ಠ ವಯೋಮಿತಿ:
ಸಾಮಾನ್ಯ ವರ್ಗ 42 ವರ್ಷ
2ಎ, 2ಬಿ, 3ಎ, 3ಬಿ 45 ವರ್ಷ
ಪ.ಜಾ / ಪ.ಪಂ / ಪ್ರವರ್ಗ-1 / ವಿಕಲಚೇತನ
ಅಭ್ಯರ್ಥಿಗಳಿಗೆ 47 ವರ್ಷ

10] ಮೆರಿಟ್ ನಿರ್ಧರಿಸುವ ವಿಧಾನ:
6-8 ನೇ ತರಗತಿ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ಆಯ್ಕೆ ಪ್ರಾಧಿಕಾರವು ನೇಮಕಾತಿ ವಿಷಯವಾರು ಮತ್ತು ಮಾಧ್ಯಮವಾರು ಹಾಗೂ ವರ್ಗವಾರು ಅಧಿಸೂಚಿಸಿದ ಹುದ್ದೆಗಳಿಗೆ ಅನುಸಾರವಾಗಿ ಪರೀಕ್ಷೆ, ಶಿಕ್ಷಕರ ಅರ್ಹತಾ (ಟಿ.ಇ.ಟಿ) ಪರೀಕ್ಷೆ, ಪದವಿ ಶಿಕ್ಷಣ ಮತು ಶಿಕ್ಷಕರ ಶಿಕ್ಷಣ ಕೋರ್ಸ್ನಲ್ಲಿ ಪಡೆದ ಶೇಕಡವಾರುಅಂಕಗಳನ್ನು ಆಧರಿಸಿ ಈ ಕೆಳಗೆ ವಿವರಿಸಿದಂತೆ ವೆಯ್ಟೇಜ್ ((weightage)) ಉಪಯೋಗಿಸಿ, ಲೆಕ್ಕ ಹಾಕಿ ಅಂದಾಜು Derived percentage ಲೆಕ್ಕ ಹಾಕಿ ಅದರ ಆಧಾರದ ಮೇಲೆ ಪ್ರತ್ಯೇಕವಾಗಿ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.

ಅDerived percentageಲೆಕ್ಕ ಹಾಕಲು ಅಭ್ಯರ್ಥಿಯು ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಶನ್ ಅಥವಾ ಬಿ.ಇಡಿ ಅಥವಾ ಡಿಪ್ಲೊಮಾ ಇನ್ ಸ್ಪೆಷಲ್ ಎಜುಕೇಶನ್ ಅಥವಾ ಬಿ.ಇಡಿ (ಸ್ಪೆಷಲ್ ಎಜುಕೇಶನ್) ವಿದ್ಯಾರ್ಹತೆ ಹೊಂದಿದ್ದು ಕೆಳಕಂಡತೆ
ವೆಯಿಟೇಜ್ ((weightage))ನ್ನು ಪರಿಗಣಿಸಲಾಗುವುದು.
1 ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ 0.50
2 ಟಿ.ಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳ 0.20
3 ಪದವಿಯಲ್ಲಿ ಪಡೆದ ಅಂಕಗಳ 0.20
4 ಶಿಕ್ಷಕರ ಶಿಕ್ಷಣ ಕೋರ್ಸ್ನಲ್ಲಿ ಪಡೆದ ಅಂಕಗಳ 0.10

ಆ) Derived percentageಲೆಕ್ಕ ಹಾಕಲು ಅಭ್ಯರ್ಥಿಯು ನಾಲ್ಕು ವರ್ಷಗಳ ಶಿಕ್ಷಕರ ಶಿಕ್ಷಣ ಪದವಿಯನ್ನು ಹೊಂದಿದ್ದಲ್ಲಿ ಶೇಕಡಾವಾರು
ಅಂಕಗಳಿಗಾಗಿ ವೆಯಿಟೇಜ್‌ನ್ನು ಈ ಮುಂದಿನಂತೆ ಪರಿಗಣಿಸಲಾಗುವುದು
1 ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ 0.50
2 ಟಿ.ಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳ 0.20
3 ನಾಲ್ಕು ವರ್ಷಗಳ ಬಿ.ಎಲ್.ಇಡಿ, ಅಥವಾ ಬಿಎ/ಬಿಎಸ್ಸಿಇಡಿ ಅಥವಾ ಬಿಎಇಡಿ
ಅಥವಾ ಬಿಎಸ್ಸಿಇಡಿ. ಪದವಿಯಲ್ಲಿ ಪಡೆದ ಅಂಕಗಳ 0.30

ಮೇಲೆ ಹೇಳಿದ ಪ್ರಕಾರ ವೆಯಿಟೇಜ್ ((weightage)ನ್ನು ಲೆಕ್ಕ ಹಾಕಿದಾಗ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮಾನವಾದ (Derived percentages) ಅಂಕಗಳನ್ನು ಪಡೆದಲ್ಲಿ ವಯಸ್ಸನ್ನು ಆಧರಿಸಿ ವಯಸ್ಸಿನಲ್ಲಿ ಹಿರಿಯರಾದವರನ್ನು ಮೆರಿಟ್ ಪಟ್ಟಿಯಲ್ಲಿ ವಯಸ್ಸಿನಲ್ಲಿ ಕಿರಿಯರಿಗಿಂತ ಮೊದಲು ಪರಿಗಣಿಸಲಾಗುವುದು

11] ಹುದ್ದೆಗಳ ಮೀಸಲಾತಿ :
(1) ಹುದ್ದೆಗಳ ಮೀಸಲಾತಿಯು ಕರ್ನಾಟಕ ಸಿವಿಲ್ ಸರ್ವೀಸಸ್ [ಜನರಲ್ ರೆಕ್ರೊಟ್‌ಮೆಂಟ್] ರೂಲ್ಸ್ 1977ರ ನಿಯಮ-9 ರಲ್ಲಿನ
ಪ್ರಮಾಣಾನುಸಾರ ಮತ್ತು ಕಾಲಕಾಲಕ್ಕೆ ಹೊರಡಿಸಲಾಗುವ ಕಾನೂನುಗಳು, ನಿಯಮಗಳು ಹಾಗೂ ಕೆಳಕಂಡ ಜಾರಿಯಲ್ಲಿರುವ
ಸರ್ಕಾರದ ಆದೇಶಗಳನ್ನು ಒಳಗೊಂಡಂತೆ ಇರುತ್ತವೆ.
i. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ವ್ಯಕ್ತಿಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳು
ii. ಕರ್ನಾಟಕ ಗ್ರಾಮೀಣ ಅಭ್ಯರ್ಥಿಗಳಿಗಾಗಿ (ರಾಜ್ಯ ಸಿವಿಲ್ ಸೇವೆಗಳಲ್ಲಿ) ನೇಮಕಾತಿ ಅಥವಾ ಹುದ್ದೆಗಳ ಮೀಸಲಾತಿ ಅಧಿನಿಯಮ 2000
iii. ಕರ್ನಾಟಕ ಸಿವಿಲ್ ಸೇವೆ (ಸಾಮಾನ್ಯ ನೇಮಕಾತಿ) ನಿಯಮಗಳು-1977 ನಿಯಮ-9 ರ ಪ್ರಕಾರ ವಿಕಲಚೇತನರು ಹಾಗೂ ಮಾಜಿ ಸೈನಿಕರು,
ನಿUದಿÀ ಪಡಿಸಿದ ಪ್ರಮಾಣzಲಿÀ ್ಲ
iv. ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 252 ಎಸ್‌ಆರ್‌ಆರ್ 2020 (ಪಿ-1), ದಿನಾಂಕ: 07-07-2021 ರನ್ವಯ ಯೋಜನಾ ನಿರಾಶ್ರಿತ
ಅಭ್ಯರ್ಥಿಗಳಿಗೆ, ನಿಗದಿಪಡಿಸಿದ ಪ್ರಮಾಣ.
v. ಪ್ರತಿ ಪ್ರವರ್ಗಗಳಲ್ಲಿ ಶೇಕಡ 50ಕ್ಕಿಂತ ಕಡಿಮೆ ಇಲ್ಲದಂತೆ ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು. .
vi. ಪ್ರತಿ ಪ್ರವರ್ಗದಲ್ಲಿಯೂ ಶೇಕಡಾ 1 ಕ್ಕಿಂತ ಕಡಿಮೆ ಇಲ್ಲದಂತೆ ಹುದ್ದೆಗಳನ್ನು ತೃತೀಯ ಲಿಂಗದ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.

13] ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ:
ಸ್ಪರ್ಧಾತ್ಮಕ
ಪರೀಕ್ಷೆಯ ಮೌಲ್ಯಮಾಪನ ಮುಕ್ತಾಯವಾದ ನಂvರ À ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಹಾಗೂ ಈ ಬU್ಗ ೆ ದಿನಪತ್ರಿಕೆಗಳಲ್ಲಿ ಮಾಹಿತಿಯನ್ನು ನೀಡಲಾಗುವುದು. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ತಮ್ಮ ಲಾಗಿನ್ ಮೂಲಕ

14] ಅಭ್ಯರ್ಥಿಗಳ ಮಾಹಿತಿ ಸಂಬAಧ ಆಕ್ಷೇಪಣೆ ಸ್ವೀಕರಿಸಿ ದಾಖಲಿಸುವುದು:
ಅಭ್ಯರ್ಥಿಯು ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳು, ಅರ್ಹತಾದಾಯಕ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳು, ತಿಳಿದುಕೊಳ್ಳಬಹುದಾಗಿದೆ. ಗಳಿಸಿದ ಅಂಕಗಳು ಮತ್ತು ಆಯ್ಕೆಗೆ ನಿಗದಿಪಡಿಸಿದ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಅಭ್ಯರ್ಥಿಯು ಆನಲೈನ್ ಅರ್ಜಿಯಲ್ಲಿ ಕ್ಲೇಮು ಮಾಡಿರುವ ಮೀಸಲಾತಿ ವಿವರಗಳನ್ನು ಒಳಗೊಂಡ ಪೂರ್ಣ ಮಾಹಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಈ ಮಾಹಿತಿಗಳನ್ನು ವೆಬ್‌ಸ್ಯಟ್ ನಲ್ಲಿ ಪ್ರಕಟಿಸಿದ ನಂತರ ನಿಗದಿತ ಸಮಯ ನೀಡಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಅಭ್ಯರ್ಥಿಯು ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ದಾಖಲಿಸಿದ ಶೈಕ್ಷಣಿಕ ಮಾಹಿತಿಯಲ್ಲಿ ವ್ಯತ್ಯಾಸವಾಗಿದ್ದಲ್ಲಿ ಮಾತ್ರ ನಿಗದಿತ ನಮೂನೆಯಲ್ಲಿ ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. ಆದರೆ, ಮೂಲ ಅರ್ಜಿಯಲ್ಲಿ ದಾಖಲಿಸದಿರುವ ಯಾವುದೇ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ. ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಅಭ್ಯರ್ಥಿಗಳು ನೀಡಿದ ಶೈಕ್ಷಣಿಕ ದಾಖಲೆಗಳ ಆಧಾರದ ಮೇಲೆ ಪರಿಷ್ಕರಿಸಿ, ಪುನಃ ಸಾರ್ವಜನಿಕ ಶಿಕ್ಷಣ ಇಲಾಖಾ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಲಾಗುವುದು

15] ತಾತ್ಕಾಲಿಕ ಪಟ್ಟಿ ಪ್ರಕಟಿಸುವ ಮುನ್ನ ದಾಖಲಾತಿಗಳ ಪರಿಶೀಲನೆ:
(1) ಅಭ್ಯರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ, ಟಿ.ಇಟಿ, ಪದವಿ ಪರೀಕ್ಷೆ ಹಾಗೂ ಶಿಕ್ಷಕರ ಶಿಕ್ಷಣ ಕೋರ್ಸ್ಗಳಲ್ಲಿ ಗಳಿಸಿರುವ ಅಂಕಗಳನ್ನು ಪರಿಗಣಿಸಿ derived percentage ಲೆಕ್ಕಹಾಕಲಾಗುವುದು.
(2) ಮೆರಿಟ್ ಆಧಾರದ ಮೇಲೆ ಅರ್ಹರಾದ ಹಾಗೂ ಕ್ಲೇಮು ಮಾಡಿರುವ ಮೀಸಲಾತಿಯನುಸಾರ ಅಧಿಸೂಚಿತ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ
ಎರಡರಷ್ಟರವರೆಗಿನ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ದಾಖಲಾತಿಗಳ ಪರಿಶೀಲನೆಯ ಉದ್ದೇಶಕ್ಕಾಗಿ ಕರೆಯಲಾಗುವುದು.
(3) ಅಂತಹ ಅಭ್ಯರ್ಥಿಗಳ ವಿವರವನ್ನು ಇಲಾಖಾ ವೆಬ್‌ಸೈಟ್ http://schooleducation.kar.nic.in ನಲ್ಲಿ ಪ್ರಕಟಿಸಲಾಗುವುದು. ಹಾಗೂ ದಿನಪತ್ರಿಕೆಗಳಲ್ಲಿ ಮಾಹಿತಿಯ ಪ್ರಕಟಣೆ ನೀಡಲಾಗುವುದು.
(4) ಎಲ್ಲಾ ಅಭ್ಯರ್ಥಿಗಳು ತಮ್ಮ ವಿವರಗಳನ್ನು ಅವರ ಲಾಗಿನ್ ಮೂಲಕ ಪರಿಶೀಲಿಸಿಕೊಳ್ಳಬಹುದು. ಇದಕ್ಕೆ ಸಂಬAಧಿಸಿದAತೆ ಆಕ್ಷೇಪಣೆಗಳಿದ್ದಲ್ಲಿ
ನಿಗದಿತ ನಮೂನೆಯಲ್ಲಿ ನಿಗದಿತ ದಿನಾಂಕದೊಳಗೆ ಆಯ್ಕೆ ಪ್ರಾಧಿಕಾರಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು.
(5) ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮಾಹಿತಿಯನ್ನು ಮಾತ್ರ ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ. ಶೈಕ್ಷಣಿಕ ಮಾಹಿತಿಯನ್ನು ಹೊರತುಪಡಿಸಿ ಉಳಿದ ಯಾವುದೇ ಮಾಹಿತಿಯನ್ನು ಬದಲಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ.
(6) ಮೂಲದಾಖಲಾತಿ/ಪ್ರಮಾಣಪತ್ರಗಳ ಪರಿಶೀಲನೆಯ ಸಮಯದಲ್ಲಿ ಅಭ್ಯರ್ಥಿಗಳ ಆಧಾರ್ ಗುರುತಿನಕಾರ್ಡ್‌ ಪರಿಶೀಲನೆಗೆ ಒಳಪಡಿಸಲಾಗುವುದು. ಅದರಲ್ಲಿ ಅಭ್ಯರ್ಥಿಯ ನೈಜತೆ ದೃಢಪಡದೇ ಇದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.
16] ಆಯ್ಕೆ ಪಟ್ಟಿ ತಯಾರಿಸುವ ವಿಧಾನ:
ಆಯ್ಕೆ ಪಟ್ಟಿಯನ್ನು ಅರ್ಹತೆ ಮತ್ತು ಮೀಸಲಾತಿ ಆದಾs ರದ ಮೇಲೆ ತಯಾರಿಸಲಾಗುತ್ತದೆ. ಅರ್ಹತೆ ಮತ್ತು
ಮೀಸಲಾತಿ ಬಗ್ಗೆ ವಿವರಗಳನ್ನು ಈಗಾಗಲೇ ನೀಡಿದೆ. ಆಯ್ಕೆ ಪಟ್ಟಿಯನ್ನು ಎರಡು ಹಂತಗಳಲ್ಲಿ ತಯಾರಿಸಲಾಗುತ್ತದೆ.
 ಮೊದಲ ಹಂತ: ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಣೆ ಹಾಗೂ ಆಕ್ಷೇಪಣೆಗಳ ಆಹ್ವಾನ.
 ಎರಡನೇ ಹಂತ: ಮೂಲ ಪ್ರಮಾಣ ಪತ್ರಗಳ ಪರಿಶೀಲನೆ ಮತ್ತು ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ.

ಆಯ್ಕೆ ಪಟ್ಟಿ : (1)ಮೂಲದಾಖಲಾತಿಗಳ/ಪ್ರಮಾಣ ಪತ್ರಗಳ ಪರಿಶೀಲನೆಯ ನಂತರ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ಸರಿಪಡಿಸಲು ಕೋರಿ ಬಂದ ಆಕ್ಷೇಪಣೆಗಳ ಪರಿಶೀಲನಾ ಕಾರ್ಯ ಮುಗಿದ ನಂತರ ಆಯ್ಕೆ ಪ್ರಾಧಿಕಾರವು ಅಧಿಸೂಚಿಸಿದ ಹುದ್ದೆಗಳ ಸಂಖ್ಯೆಗೆ ಸಮನಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.
(2) ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಅಂತಿಮ
ದಿನಾAಕವನ್ನು ನಿಗದಿಪಡಿಸಲಾಗುತ್ತದೆ. ಈ ಬಗ್ಗೆ ಸೂಚನೆಯನ್ನು ಇಲಾಖಾ ವೆಬ್‌ಸೈಟ್ ಮತ್ತು ದಿನಪತ್ರಿಕೆಗಳಲ್ಲಿ ನೀಡಲಾಗುತ್ತದೆ. ವೈಯಕ್ತಿಕವಾಗಿ
ಈ ಬಗ್ಗೆ ಯಾವುದೇ ಸೂಚನೆ ನೀಡುವುದಿಲ್ಲ.
(3) ಯಾವುದೇ ಅಭ್ಯರ್ಥಿಯು ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಛಿಸಿದಲ್ಲಿ ನಿಗದಿತ ದಿನಾಂಕದೊಳಗೆ ಆಯ್ಕೆ ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಯಾವುದೇ ಅಭ್ಯರ್ಥಿ ಆಕ್ಷೇಪಣೆಗಳನ್ನು ಸಲ್ಲಿಸದಿದ್ದಲ್ಲಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಯಾವುದೇ ರೀತಿಯ ಪರಿಹಾರಕ್ಕೆ ಅರ್ಹತೆ ಪಡೆಯುವುದಿಲ್ಲ. ಹಾಗೂ ಅಂತಿಮ ಆಯ್ಕೆಪಟ್ಟಿಯ ಪ್ರಕಟಣೆಯ ನಂತರ ಮತ್ತೆ ಅವರ ಅರ್ಹತೆಯ ಪರಿಶೀಲನೆಗಾಗಲೀ ಅಥವಾ ಇನ್ನಾವುದೇ ಬಗೆಯ ಪರಿಹಾರಕ್ಕಾಗಲೀ
ಅವಕಾಶವಿರುವುದಿಲ್ಲ

(5) ಆಯ್ಕೆ ಪ್ರಾಧಿಕಾರವು ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳು ಯಾವ ನಿರ್ದಿಷ್ಟ ಹುದ್ದೆಗೆ ಆಯ್ಕೆಯನ್ನು ಬಯಸುತ್ತಾರೋ
ಸಾಧ್ಯವಾದಷ್ಟು ಮಟ್ಟಿಗೆ ಅಂತಹ ಆಯ್ಕೆಯನ್ನು ಪರಿಗಣಿಸಲಾಗುವುದು.
(6) ಮೇಲ್ಕಂಡ ವಿಧಾನದಲ್ಲಿ ಸಿದ್ಧಪಡಿಸಲಾದ ಮುಖ್ಯಪಟ್ಟಿಯಲ್ಲಿ ಸೇರಲ್ಪಟ್ಟ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿಯ ಕ್ರಮ ಸಂಖ್ಯೆಯ ಅನುಕ್ರಮವಾಗಿ ಅಗತ್ಯವಿರುವ ಪರಿಶೀಲನೆಯ ನಂತರ ಎಲ್ಲಾ ರೀತಿಯಲ್ಲೂ ಅರ್ಹರಾದ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವುದು.
ಸೂಚನೆ : ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುವ ಮೊದಲು ಪ್ರತಿ ಅಭ್ಯರ್ಥಿಯ ಮೂಲ ದಾಖಲೆ / ಪ್ರಮಾಣ ಪತ್ರಗಳನ್ನು ಪರಿಶೀಲನೆಗೆ ಸಲ್ಲಿಸಬೇಕೆಂದು
ಪ್ರಕಟಣೆಯಲ್ಲಿ ತಿಳಿಸಲಾಗಿರುತ್ತದೆ. ಅದರಂತೆ ಅಭ್ಯರ್ಥಿಗಳು ಮೂಲ ದಾಖಲೆ / ಪ್ರಮಾಣ ಪತ್ರಗಳು ಅರ್ಜಿಯ ಪ್ರತಿ ಮತ್ತು ಗುರುತಿನ ಪತ್ರದ ಪ್ರತಿ, ಆಧಾರ್ ಸಂಖ್ಯೆ ಸಹಿತ ಪರಿಶೀಲನೆಗೆ ಸಲ್ಲಿಸಬೇಕು.ಈ ಬಗ್ಗೆ ಸೂಚನೆಯನ್ನು ಇಲಾಖಾ ವೆಬ್‌ಸೈಟ್ ಮತ್ತು ದಿನಪತ್ರಿಕೆಗಳಲ್ಲಿ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ಈ ಬಗ್ಗೆ ವೈಯಕ್ತಿಕವಾಗಿ ಸೂಚನೆ ನೀಡಲಾಗುವುದಿಲ್ಲ. ಮೂಲ ದಾಖಲೆ / ಪ್ರಮಾಣ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವ /ದಾಖಲಾತಿಗಳ ಪರಿಶೀಲನೆಗೆ ಗೈರುಹಾಜರಾಗುವ / ಅಪೂರ್ಣ ದಾಖಲೆಗಳನ್ನು ಸಲ್ಲಿಸಿರುವ / ಆಧಾರ್ ಸಂಖ್ಯೆಯ ನೈಜತೆ ಖಾತ್ರಿಯಾಗದ ಅಭ್ಯರ್ಥಿಗಳು ಅಂತಿಮ ಆಯ್ಕೆಪಟ್ಟಿಯಲ್ಲಿ ತಮ್ಮ ಅವಕಾಶವನ್ನು ಕಳೆದುಕೊಳ್ಳುತ್ತಾರೆ.
17] ಹೆಚ್ಚುವರಿ ಪಟ್ಟಿ:
ಅ. ಆಯ್ಕೆ ಪ್ರಾಧಿಕಾರವು ನೇಮಕಾತಿ ಅಧಿಸೂಚನೆಯಲ್ಲಿಪ್ರಕಟಸಿದಹುದ್ದೆಗಳ ಸಂಖ್ಯೆಯ ಶೇಕಡ 20 ರಷ್ಟನ್ನು ಮೀರದಂತೆ ಮುಖ್ಯ ಪಟ್ಟಿಯಲ್ಲಿಲ್ಲದ
ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಸದರಿ ಪಟ್ಟಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗುವುದು ಮತ್ತು ಈ ಪಟ್ಟಿಯು ಅದೇ ಹುದ್ದೆಗೆ ಮುಂದಿನ ನೇಮಕಾತಿ ಅಧಿಸೂಚನೆ ಹೊರಡಿಸುವವರೆಗೆ ಅಥವಾ 2 ವರ್ಷಗಳ ಅವಧಿ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಚಾಲ್ತಿಯಲ್ಲಿರುv್ತದ ೆ. ಆ. ಒಂದುವೇಳೆ ಮುಖ್ಯಪಟ್ಟಿಯಲ್ಲಿರುವ ಯಾವುದಾದರು ಅಭ್ಯರ್ಥಿಗಳು ನೇಮಕಾತಿಯನ್ನು ಕಡೆಗಣಿಸಿದಲ್ಲಿ ಅಥವಾ ನೇಮಕಾತಿಗೆ
ಅನರ್ಹರೆಂದು ಕಂಡುಬAದಲ್ಲಿ ಅಂತಹ ಅಭ್ಯರ್ಥಿಗಳ ಬದಲಿಗೆ ಅದೇ ಪ್ರವರ್ಗದಲ್ಲಿ, ನೇಮಕಾತಿಗೆ ಅಧಿಸೂಚಿಸಿದ ಹುದ್ದೆಗಳನ್ನು ಮೀರದಂತೆ, ಹೆಚ್ಚುವರಿ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

18] ¸ಧೃಡತ್ಮಕ ಪರೀಕ್ಷೆಯ ವಿವರಗಳು: ಪರೀಕ್ಷೆಯ ಹೆಸರು: ಪದವೀಧರ ಪ್ರಾಥಮಿಕ ಶಿಕ್ಷಕ ನೇಮಕಾತಿ ಪರೀಕ್ಷೆ – 2022 ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕೇತರ
ಪ್ರದೇಶದಹುದ್ದೆಗಳ ಸ ರ್ಕಾರಿ ಆದೇಶ ಸಂಖ್ಯೆ: ಇಪಿ 100, ಪಿಬಿಎಸ್ 2022ಬೆಂಗಳೂರು ದಿ: 08.03.2022 ರಂತೆ ಜಿಲ್ಲಾ ಹಂತದ
ಪರೀಕ್ಷೆಗಳನ್ನು ರಾಜ್ಯಾದಂತ ಏಕಕಾಲಕ್ಕೆ ನಡೆಸಲಾಗುವುದು. ಕಲ್ಯಾಣ ಕರ್ನಾಟಕ ಶೇ.20 ಮಿಕ್ಕುಳಿದ ಹುದ್ದೆಗೆಳಿಗೆ ಮತ್ತು ಬೆಂಗಳೂರು ಬಿ.ಬಿ.ಎಂ.ಪಿ.ವ್ಯಾಪ್ತಿಯ ಕಲ್ಯಾಣ-ಕರ್ನಾಟಕ ರಾಜ್ಯ ಮಟ್ಟದ ಸ್ಥಳೀಯ ವೃಂದದ ಶೇಕಡಾ 8 ಹೊರತು ಶೇಕಡಾ 92 ಹುದ್ದೆಗಳಿಗೆ ಮತ್ತು ಇತರೆ ಜಿಲ್ಲೆಗಳ ಶೇಕಡಾ100 ಹುದ್ದೆಗಳಿಗೆ ಹಾಗೂ ಕಲ್ಯಾಣ ಕರ್ನಾಟಕ ಶೇ80 ಸ್ಥಳೀಯ ವೃಂದದ ಹುದ್ದೆಗೆಳಿಗೆ ಮತ್ತು ಬೆಂಗಳೂರು ಬಿ.ಬಿ.ಎಂ.ಪಿ.ವ್ಯಾಪ್ತಿಯ ಕಲ್ಯಾಣ-ಕರ್ನಾಟಕ ರಾಜ್ಯ ಮಟ್ಟದ ಸ್ಥಳೀಯ
ವೃಂದದ ಶೇ8 ಹುದ್ದೆಗಳಿಗೆ ಸ್ವರ್ಧಾತ್ಮಕ ಪರೀಕ್ಷೆ.
ಪರೀಕ್ಷೆ ನಡೆಸುವ ದಿನಾಂಕ 21/05/2022 ಮತ್ತು 22/05/2022
ಪರೀಕ್ಷಾ ಅವಧಿ ಹಾಗೂ ಸಮಯ:
ದಿನಾಂಕ: 21/05/2022
ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.00 ಗಂಟೆ ( ಪೇಪರ್-1)
(ಬಹು ಆಯ್ಕೆ ಪ್ರಶ್ನೆಗಳು)
ದಿನಾಂಕ: 21/05/2022
ಮಧ್ಯಾಹ್ನ 2.30 ರಿಂದ 5.30 ಗಂಟೆ.( ಪೇಪರ್-2)
ಆಂಗ್ಲ ಭಾಷಾ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ 2.30 ರಿಂದ 3.30 ರವರೆಗೆ ಬಹು ಆಯ್ಕೆ ಪರೀಕ್ಷೆ
3.30 ರಿಂದ 5.30ರವರೆಗೆ ವಿವರಣಾತ್ಮಕ ಪರೀಕ್ಷೆ)
ದಿನಾಂಕ: 22/05/2022
ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 01.00 (É ಪೇಪರ್-2)
ಗಣಿತ ಮತ್ತು ವಿಜ್ಞಾನ/ಜೀವವಿಜ್ಞಾನ/ ಸಮಾಜ ಪಾಠಗಳು ಶಿಕ್ಷಕರ ಹುದ್ದೆಗೆ ಅರ್ಜಿಸಲ್ಲಿಸಿರುವ
ಅಭ್ಯರ್ಥಿಗಳಿಗೆ (10.00 ರಿಂದ 11.00 ರವರೆಗೆ ಬಹು ಆಯ್ಕೆ ಪರೀಕ್ಷೆ,
11.00 ರಿಂದ 01.00 ರವರೆಗೆ ವಿವರಣಾತ್ಮಕ ಪರೀಕ್ಷೆ)
ದಿನಾಂಕ:22/05/2022
ಮಧ್ಯಾಹ್ನ 2.30 ರಿಂದ 04.30 ರವರೆಗೆ.( ಪೇಪರ್-3) (ವಿವರಣಾತ್ಮಕ ಪರೀಕ್ಷೆ)
ಅರ್ಜಿ ಸಲ್ಲಿಸಿದ ಮಾಧ್ಯಮದ ಭಾಷಾ ಸಾಮರ್ಥ್ಯ ಪರೀಕ್ಷೆ
ಸೂಚನೆ: ಪದವೀಧರ ಪ್ರಾಥಮಿಕ ಶಿಕ್ಷಕ(6ರಿಂದ 8ನೇತರಗತಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವರು ಪೇಪರ್-1 ಮತ್ತು ಪೇಪರ್-2 ಎರಡಕ್ಕೂ ಕಡ್ಡಾಯವಾಗಿ ಹಾಜರಾಗಬೇಕು. ಪೇಪರ್-2ರಲ್ಲಿ ಕಡ್ಡಾಯವಾಗಿ ಶೇ.45 ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು

ಪೇಪರ್-3 ಕ್ಕೆ ಆಂಗ್ಲ ಭಾಷಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕು. ಹಾಗೂ ಕನಿಷ್ಟ ಶೇ 50 ಅಂಕಗಳನ್ನು ಗಳಿಸಬೇಕು. ಈ ಎಲ್ಲಾ ಪೇಪರ್‌ಗಳಲ್ಲಿ ಗಳಿಸಿದ ಅಂಕಗಳನ್ನು ಮೆರಿಟ್‌ಗೆ
ಪರಿಗಣಿಸಲಾಗುವುದು.
19] ಪ್ರಶ್ನೆ ಪತ್ರಿಕೆಯಲ್ಲಿನ ವಿಷಯ ಹಾಗೂ ಅಂಕಗಳು:
ಸ್ಪರ್ಧಾತ್ಮಕ ಪರೀಕ್ಷೆಯ ಪ್ರತಿ ಪತ್ರಿಕೆಗೆ ಕೋಷ್ಠಕದಲ್ಲಿ ಸೂಚಿಸಿರುವಂತೆ ಅಂಕಗಳನ್ನು ನಿಗದಿಪಡಿಸಲಾಗಿದೆ.
ವಿಷಯ ಮತ್ತು ನಿಗದಿಪಡಿಸಿರುವ ಗರಿಷ್ಠ ಅಂಕಗಳ ವಿಂಗಡಣೆ ಕೆಳಗಿನಂತಿದೆ
ಪೇಪರ್-1
ಬಹು ಆಯ್ಕೆಯ ಪ್ರಶ್ನೆಗಳು(ಒಎಂಆರ್ ಶೀಟ್‌ನಲ್ಲಿ ಉತ್ತರಿಸಬೇಕಾದ ಪರೀಕ್ಷೆ)
ಕ್ರ.ಸಂ ವಿಷಯ ಅಂಕಗಳು
01 ಸಾಮಾನ್ಯ ಕನ್ನಡ ಭಾಷೆ 25
02 ಸಾಮಾನ್ಯ ಆಂಗ್ಲ ಭಾಷೆ 25
03 ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು 25
04 ಶೈಕ್ಷಣಿಕ ಮನೋವಿಜ್ಞಾನ ಮತ್ತು ವಿಕಸನ + ಬೋಧನಾ ವಿಧಾನ 50
05 ಮೌಲ್ಯಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ 15
06 ಗಣಕ ಯಂತ್ರ ಪ್ರಬುದ್ದತೆ ಬಗ್ಗೆ 10
ಒಟ್ಟು 150

ವಿಷಯ ಮತ್ತು ನಿಗದಿಪಡಿಸಿರುವ ಗರಿಷ್ಠ ಅಂಕಗಳ ವಿಂಗಡಣೆ
ಪೇಪರ್-2 ಭಾಷೆ-ಆಂಗ್ಲ , ಗಣಿತ & ವಿಜ್ಞಾನ, ಜೀವ ವಿಜ್ಞಾನ ಹಾಗೂ ಸಮಾಜಪಾಠಗಳು ಶಿಕ್ಷಕರಿಗೆ ಮಾತ್ರ
ಕ್ರ.ಸಂ ವಿಷಯ ಅಂಕಗಳು
01 ಆಯಾ ವಿಷಯದ ಜ್ಞಾನ – ಬಹು ಆಯ್ಕೆಯ ಪ್ರಶ್ನೆಗಳು (ಓಎಂಆರ್ ಶೀಟ್‌ನಲ್ಲಿ ಉತ್ತರಿಸಬೇಕು) 50
02 ಆಯಾ ವಿಷಯದ ಜ್ಞಾನ – ಬಹು ಆಯ್ಕೆಯ ಪ್ರಶ್ನೆಗಳು (ಓಎಂಆರ್ ಶೀಟ್‌ನಲ್ಲಿ ಉತ್ತರಿಸಬೇಕು) 100
ಪತ್ರಿಕೆ -2ರಲ್ಲಿ ಕನಿಷ್ಟ ಶೇ.45 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ

& ವಿಜ್ಞಾನ ಹಾಗು ಸಮಾಜಪಾಠಗಳು ಶಿಕ್ಷಕರಿಗೆ ಮಾತ್ರ
ಕ್ರ.ಸಂ ವಿಷಯ ಅಂಕಗಳು
01 ಆಯಾ ಭೋಧನÀ ಭಾಷಾ ಸಾಮರ್ಥ್ಯ – ವಿವರತ್ಮಕ ಪರೀಕ್ಷೆ
ಅಭ್ಯರ್ಥಿಗಳು ನಿರ್ದಿಷ್ಟಪಡಿಸಿದ ಬೋಧನಾ ಮಾಧ್ಯಮದಲ್ಲಿ ಬೋಧಿಸಲು ಹೊಂದಿರುವ ಭಾಷಾ
ಬಳಕೆಯ ಸಾಮರ್ಥ್ಯÀ ð, ಗ್ರಹಿಸುವಿಕೆ ಶಬ್ಧ ಭಂಡಾರ ಮತ್ತು ಬರವಣಿಗೆಯೆ ಸಾಮಾರ್ಥ್ಯಗಳನ್ನು

ಪರೀಕ್ಷಿಸಲಾಗುವುದು. 100 ಒಟ್ಟು 100
ಪತ್ರಿಕೆ -3ರಲ್ಲಿ ಕನಿಷ್ಟ ಶೇ.50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.

ಸೂಚನೆ: ಅಭ್ಯರ್ಥಿಗಳು ಮೇಲೆ ನಿಗದಿಪಡಿಸಿದ ಕನಿಷ್ಟ ಅಂಕಗಳನ್ನು ಗಳಿಸದೇ ಇದ್ದಲ್ಲಿ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಎಲ್ಲಾ ಪತ್ರಿಕೆಗಳಲ್ಲಿ ಗಳಿಸಿದ ಅಂಕಗ ಮೆರಿಟ್ ನಿರ್ಧರಿಸಲು ಪರಿಗಣಿಸಲಾಗುವುದು. ಆಂಗ್ಲ, ಭಾಷೆ-ಆಂಗ್ಲ ವಿಷಯದ ಹುದ್ದೆಗಳಿಗೆÉ ಪೇಪರ್-1 ಮತ್ತು ಪೇಪರ್-2 ರಲ್ಲಿ ಗಳಿಸಿದ
ಅಂಕಗಳನ್ನು ಪರಿಗಣಿಸಲಾಗುವುದು ಗಣಿತ ಮತ್ತು ವಿಜ್ಞಾನ, ಜೀವವಿಜ್ಞಾನ ಹಾಗೂ ಸಮಾಜ ಪಾಠಗಳ ವಿಷಯಗ¼ಳ ಹುದ್ದೆಗೆ À ಪೇಪರ್-1, ಪೇಪರ್-2 ಮತ್ತು ಪೇಪರ್-3ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು. ಪೇಪರ್-3 ರ ಪತ್ರಿಕೆಯು ಭಾಷಾ ಶಿಕ್ಷಕರು-ಆಂಗ್ಲ ಇವರಿಗೆ ಅನ್ವಯಿಸುವುದಿಲ್ಲ.
2 0] ಪರೀಕ್ಷಾ ವಿಷಯಗಳಿಗೆ ನಿಗದಿಪಡಿಸಿರುವ ಪಠ್ಯವಸ್ತು:
ಪ್ರಶ್ನೆಗಳ ವ್ಯಾಪ್ತಿ ಹಾಗೂ ಸ್ವರೂಪ

ಅ. ಪ್ರಶ್ನೆಗಳನ್ನು ನಿಗದಿಪಡಿಸಲಾಗಿರುವ ಪಠ್ಯವಸ್ತುವಿನ (ಸಿಲಬಸ್) ವ್ಯಾಪ್ತಿಯಲ್ಲಿ ಬರುತ್ತದೆ. ತರಗತಿ 6 ರಿಂದ ಪಿ.ಯು.ಸಿ ಮಟ್ಟದ ಜ್ಞಾ ವಿವರವಾದ ಪಠ್ಯವಸ್ತು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಆ. ಪೇಪರ್-1 ರ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳು ವಸ್ತುನಿಷ್ಠವಾಗಿದ್ದು ಪ್ರತಿ ಪ್ರಶ್ನೆಗೆ ಒಂದು ಅಂಕ ನಿಗದಿಪಡಿಸಿದೆ. ಪ್ರತಿ
ಪ್ರಶ್ನೆ ನಾಲ್ಕು ಉತ್ತರಗಳನ್ನು ಹೊಂದಿದ್ದು, ಇವುಗಳಲ್ಲಿ ಒಂದು ಸರಿ ಉತ್ತರವಾಗಿರುತ್ತದೆ. ಉತ್ತರಗಳನ್ನು ‘ಓ.ಎಂ.ಆರ್’ ಶೀಟಿನಲ್ಲಿ
ಗುರುತಿಸುವುದು.
ಇ. ಪೇಪರ್ -1 ಮತ್ತು ಪೇಪರ್ -2ರ ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಇರುತ್ತವೆ ಹಾಗೂ ಮಾದ್ಯಮವಾರು ಅಧಿಸೂಚಿತ
ಹುದ್ದೆಗಳ ಮಾದ್ಯಮದಲ್ಲಿ ಇರುತ್ತದೆ.
ಈ. ಪೇಪರ್-2ರ ಪ್ರಶ್ನೆಪತ್ರಿಕೆಯಲ್ಲಿ ಎರಡು ಭಾಗಗಳಿದ್ದು ಮೊದಲ ಭಾಗದಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಗಳನ್ನು ‘ಓ.ಎಂ.ಆರ್ ‘
ಶೀಟಿನಲ್ಲಿ ಗುರುತಿಸುವುದು ಹಾಗೂ ಎರಡನೇ ಭಾಗದಲ್ಲಿ ವಿವರಣಾತ್ಮಕ ಉತ್ತರವನ್ನು ಪರೀಕ್ಷಾ ಕೇಂದ್ರದಲ್ಲಿ ನೀಡುವ ಉತ್ತರ ಪುಸ್ತಿಕೆಯಲ್ಲಿ ಬರೆಯಬೇಕಾಗುತ್ತದೆ. ಪೇಪರ್-2ರ ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನು ಅಭ್ಯರ್ಥಿಯು ಆಯ್ಕೆ ಬಯಸುವ ಹುದ್ದೆಯ
ಬೋಧನಾ ಮಾಧ್ಯಮದಲ್ಲಿ ಅಥವಾ ಆಂಗ್ಲ ಭಾಷೆಯಲ್ಲಿ ಉತ್ತರಿಸಬೇಕು.
ಉ. ಪೇಪರ್-3 ರ ಪ್ರಶ್ನೆ ಪತ್ರಿಕೆ ವಿವರಣಾತ್ಮಕ ಮಾದರಿಯಾಗಿದ್ದು, ಅಭ್ಯರ್ಥಿಯು ಆಯ್ಕೆ ಬಯಸುವ ವಿಷಯದ ಹುದ್ದೆಯ ಬೋಧನಾ
ಮಾಧ್ಯಮದ ಭಾಷೆಯಲ್ಲಿಯೇ ಉತ್ತರಿಸಬೇಕು.

21] ಪ್ರಮುಖವಾದ ಸೂಚನೆಗಳು

  1. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಿಗದಿತ ಅರ್ಜಿಯನ್ನು ಮಾತ್ರ ಸಲ್ಲಿಸಬೇಕು
  2. ನಿಗದಿತ ನಮೂನೆಯಲ್ಲಿ ಸಲ್ಲಿಸದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಮತ್ತು ಆಯ್ಕೆಗೆ ಪರಿಗಣಿಸುವುದಿಲ್ಲ.
  3. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆನ್‌ಲೈನ್‌ ಮೂಲಕವೇ ಪಡೆಯತಕ್ಕದ್ದು
    4 ಅಭ್ಯುರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಾಜರಾದ ಮಾತ್ರಕ್ಕೆ ಅಭ್ಯರ್ಥಿ ಆಯ್ಕೆಗೆಅರ್ಹತೆ ಪಡೆಯುವುದಿಲ್ಲ. ಇದರ
    ಜೊತೆಗೆ ಆಯಾಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿರತಕ್ಕದ್ದು.
  4. ಅರ್ಜಿಗಳನ್ನು ದಿನಾಂಕ:23-03-2022 ರಿಂದ ದಿನಾಂಕ: 22-04-2022 ರೊಳಗೆ ಆನ್‌ಲೈನ್ ಮೂಲಕವೇ ಸಲ್ಲಿಸ¨ ಬೇಕುನಿಗದಿತ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂಚೆ ಮೂಲಕ ಅಥವಾ ಇನ್ನಾವುದೇ ಮಾರ್ಗದಲ್ಲಿ
    ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

ಹೆಚ್ಚಿನ ವಿವರಗಳಿಗೆ ಇಲಾಖೆಯ ವೆಬ್‌ಸೈಟ್ http://schooleducation.kar.nic.in ರಲ್ಲಿ ನೀಡಿರುವ ಸೂಚನೆಗಳನ್ನು ಗಮನಿಸಬೇಕು.
ಹಾಗೂ ಯಾವುದೇ ಹೆಚ್ಚಿನ ಸ್ಪಷ್ಟೀಕರಣಕ್ಕೆ ಆಯಾ ಜಿಲ್ಲೆಯು ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾ ಉಪನಿರ್ದೇಶಕರು [ಆಡಳಿತ], ಇವರ ಕಛೇರಿಯನ್ನು ಸಂಪರ್ಕಿಸಬಹುದು.

Leave a Comment

Your email address will not be published. Required fields are marked *