Ad Widget .

ಮತ್ತೆ ಜನಸಾಮಾನ್ಯರಿಗೆ ತೈಲ ಬೆಲೆ ಹೊರೆ| ಗೃಹಿಣಿಯರ ಕಾಸಿಗೆ ಕತ್ತರಿ| ಪೆಟ್ರೋಲ್, ಗ್ಯಾಸ್ ದರದಲ್ಲಿ ಏರಿಕೆ

Ad Widget . Ad Widget .

ಸಮಗ್ರ ನ್ಯೂಸ್: ಜನಸಾಮಾನ್ಯರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಈಗಾಗಲೇ ಅಡುಗೆ ಎಣ್ಣೆ ಸೇರಿದಂತೆ ಇತರೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್‌ ಕೊಟ್ಟಿದೆ. ಇಂದಿನಿಂದ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದೆ.

Ad Widget . Ad Widget .

2021ರ ಅಕ್ಟೋಬರ್‌ ನಂತರ ಇದೇ ಮೊದಲ ಬಾರಿಗೆ ದೇಸೀ LPG ಸಿಲಿಂಡರ್ ದರ ಏರಿಕೆಯಾಗಿದೆ.
ಸುಮಾರು ನಾಲ್ಕೂವರೆ ತಿಂಗಳ ನಂತರ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ. ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ 80 ಪೈಸೆಯಷ್ಟು ಹೆಚ್ಚಳವಾಗಿರುವುದಾಗಿ ವರದಿಯಾಗಿದೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ದರ ₹96.21, ಪ್ರತಿ ಲೀಟರ್‌ ಡೀಸೆಲ್‌ಗೆ ₹87.47; ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ₹110.78, ಡೀಸೆಲ್‌ ₹94.94; ಕೋಲ್ಕತ್ತದಲ್ಲಿ ಪೆಟ್ರೋಲ್‌ ₹102.16 ಮತ್ತು ಡೀಸೆಲ್‌ ₹90.62; ಚೆನ್ನೈನಲ್ಲಿ ಪೆಟ್ರೋಲ್‌ ದರ ₹102.16, ಡೀಸೆಲ್‌ ದರ ₹92.19 ಆಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‌ಗೆ ₹101.42 ಮತ್ತು ಡೀಸೆಲ್‌ಗೆ 85.80 ತಲುಪಿದೆ.

2021ರ ನವೆಂಬರ್‌ 2ರ ನಂತರ ಇದೇ ಮೊದಲ ಬಾರಿಗೆ ಇಂಧನ ದರದಲ್ಲಿ ಹೆಚ್ಚಳ ಮಾಡಲಾಗಿದೆ.

Leave a Comment

Your email address will not be published. Required fields are marked *