Ad Widget .

ಡಿಸಿಸಿ ಬ್ಯಾಂಕ್ ನಲ್ಲಿ ರಾಜಕೀಯ ಚದುರಂಗಕ್ಕೆ ಅಂಕುಶ| ಅಪೆಕ್ಸ್ ಬ್ಯಾಂಕ್ ಜೊತೆ ವಿಲೀನಕ್ಕೆ ಚಿಂತನೆ| ಶೀಘ್ರದಲ್ಲೇ ಆಡಳಿತಾಧಿಕಾರಿಗಳ ನೇಮಕ

Ad Widget . Ad Widget .

ಸಮಗ್ರ ನ್ಯೂಸ್: ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕುಗಳನ್ನು ಅಪೆಕ್ಸ್ ಬ್ಯಾಂಕ್ ಜೊತೆ ವಿಲೀನ ಮಾಡಲು ಕೇಂದ್ರ ಸರಕಾರ ಮುಂದಾಗಿದ್ದು, ಇವುಗಳಲ್ಲಿ ನಡೆಯುತ್ತಿದ್ದ ರಾಜಕೀಯ ಮೇಲಾಟಗಳಿಗೆ ಅಂಕುಶ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಒಂದು ವರ್ಷದ ಹಿಂದೆಯೇ ಎಲ್ಲ ರಾಜ್ಯಗಳಿಗೂ ಕೇಂದ್ರ ಸರಕಾರದ ಸಹಕಾರಿ ಸಚಿವಾಲಯದಿಂದ ಸುತ್ತೋಲೆ ಕಳುಹಿಸಿದ್ದು, ಕೇರಳ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಅನುಷ್ಠಾನಗೊಂಡ ಇದು ಇನ್ನು ಕರ್ನಾಟಕದಲ್ಲಿ ಕೂಡಾ ನಡೆಯಲಿದೆ.

Ad Widget . Ad Widget .

ಕೇಂದ್ರ ಸರಕಾರದ ಸಹಕಾರಿ ಸಚಿವಾಲಯದಿಂದ ಸುತ್ತೋಲೆ ಕಳುಹಿಸಿದ್ದು, ಕೇರಳ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಅನುಷ್ಠಾನ ಆಗಿದೆ. ಆದರೆ ಬಿಜೆಪಿ ಆಡಳಿತ ಇರುವ ಕರ್ನಾಟಕದಲ್ಲಿ ಇದರ ಜಾರಿ ಆಗದಿರುವುದು ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಕೇಂದ್ರದಲ್ಲಿ ಸಹಕಾರಿ ಮತ್ತು ಕಾರ್ಪೊರೇಟ್ ಸಚಿವಾಲಯವನ್ನು ಹೊಂದಿರುವ ಅಮಿತ್ ಷಾ, ಕರ್ನಾಟಕ ಸರಕಾರದ ಬಳಿಯಿಂದ ವರದಿ ಕೇಳಿದ್ದಾರೆ. ಈ ನಡುವೆ ಎಪ್ರಿಲ್ 1ರಂದು ಅಮಿತ್ ಷಾ ಬೆಂಗಳೂರಿಗೆ ಬರಲಿದ್ದಾರೆ ಎನ್ನಲಾಗುತ್ತಿದ್ದು, ಅಷ್ಟರಲ್ಲಿ ಈ ಬಗ್ಗೆ ವರದಿ ತಯಾರು ಮಾಡಲು ರಾಜ್ಯ ಸರಕಾರ ಮುಂದಾಗಿದೆ. ಕಳೆದ ಮಾ.13ರಂದು ಸಿಎಂ ಬೊಮ್ಮಾಯಿ ಮತ್ತು ಮುಖ್ಯ ಕಾರ್ಯದರ್ಶಿಯವರು ತುರ್ತು ಸಭೆ ನಡೆಸಿದ್ದು, ವಿಲೀನ ಪ್ರಕ್ರಿಯೆ ಕೇರಳದಲ್ಲಿ ಯಾವ ರೀತಿ ಮಾಡಲಾಗಿದೆ ಎಂಬ ಬಗ್ಗೆ ವರದಿ ಪಡೆಯಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಸಹಕಾರಿ ಸಚಿವ ಸೋಮಶೇಖರ್, ವಿಲೀನ ಪ್ರಕ್ರಿಯೆ ಬಗ್ಗೆ ಅಧ್ಯಯನ ನಡೆಸಲು ರಾಜ್ಯದಿಂದ ಕೇರಳಕ್ಕೆ ಅಧಿಕಾರಿಗಳ ತಂಡ ತೆರಳಲಿದ್ದಾರೆ. ಅಧ್ಯಯನ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಸದ್ಯ ಸಹಕಾರಿ ವಲಯದಲ್ಲಿ ಮೂರು ಹಂತಗಳಿದ್ದು, ಕೃಷಿ ಪತ್ತಿನ ಸಹಕಾರಿ ಸಂಘಗಳು, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕುಗಳು ಮತ್ತು ಅಪೆಕ್ಸ್ ಬ್ಯಾಂಕು ಇದೆ. ಇಲ್ಲಿ ಡಿಸಿಸಿ ಬ್ಯಾಂಕಿನ ನಿರ್ವಹಣೆಗಾಗಿ ಸೊಸೈಟಿಗಳಿಂದ ಹೆಚ್ಚುವರಿಯಾಗಿ 1 ಶೇಕಡಾ ನಿರ್ವಹಣಾ ವೆಚ್ಚವನ್ನು ಪಡೆಯಲಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಮಧ್ಯವರ್ತಿ ಕೆಲಸ ಮಾಡುವ ಡಿಸಿಸಿ ಬ್ಯಾಂಕನ್ನು ಇಲ್ಲವಾಗಿಸಲು ವಿಲೀನ ಪ್ರಕ್ರಿಯೆಗೆ ಸರಕಾರ ಮುಂದಾಗಿದೆ. ಇದರ ಪ್ರಕಾರ, ಮುಂದೆ ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಸೊಸೈಟಿಗಳು ಮತ್ತು ಅಪೆಕ್ಸ್ ಬ್ಯಾಂಕುಗಳು ಮಾತ್ರ ಇರಲಿವೆ. ಡಿಸಿಸಿ ಬ್ಯಾಂಕಿನ ಶಾಖೆಗಳು ನೇರವಾಗಿ ಅಪೆಕ್ಸ್ ಬ್ಯಾಂಕ್ ಕಾರ್ಯ ವ್ಯಾಪ್ತಿಗೆ ಬರಲಿವೆ. ಈ ಮೂಲಕ ರಾಜ್ಯ ಸರಕಾರದಿಂದ ಸಾಲಮನ್ನಾ ಸೇರಿ ವಿವಿಧ ಯೋಜನೆಗಳಡಿ ಸೊಸೈಟಿಗಳಿಗೆ ಜಾರಿಯಾಗುವ ಅನುದಾನದ ಹಣವನ್ನು ಡಿಸಿಸಿ ಬ್ಯಾಂಕುಗಳು ಮಧ್ಯದಲ್ಲಿ ಹಿಡಿದಿಡುವುದು ತಪ್ಪಲಿದೆ.

ಡಿಸಿಸಿ ಬ್ಯಾಂಕುಗಳಿಗೆ ಆಡಳಿತಾಧಿಕಾರಿ ನೇಮಕ

ಈ ನಿಟ್ಟಿನಲ್ಲಿ ಆಯಾ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕುಗಳ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನುವುದನ್ನು ಅರಿಯಲು ರಾಜ್ಯ ಸರಕಾರದಿಂದ ಐಎಎಸ್ ದರ್ಜೆಯ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಶಿವಮೊಗ್ಗ, ಬೆಳಗಾವಿ ಸೇರಿ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಆಡಳಿತಾಧಿಕಾರಿ ನೇಮಕ ಆಗಿದೆ. ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಇನ್ನೂ ಆಡಳಿತಾಧಿಕಾರಿ ನೇಮಕ ಆಗಿಲ್ಲ. ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಸ್ವತಃ ಆಡಳಿತಾಧಿಕಾರಿ ನೇಮಕ ಆಗದಂತೆ ಉನ್ನತ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮಂಗಳೂರಿನ ಡಿಸಿಸಿ ಬ್ಯಾಂಕಿಗೆ ಸದ್ಯದಲ್ಲೇ ಆಡಳಿತಾಧಿಕಾರಿ ನೇಮಕ ಆಗಲಿದ್ದು, ಇಲ್ಲಿನ ಅವ್ಯವಹಾರ, ಸ್ವಸಹಾಯ ಗುಂಪುಗಳಿಗೆ ಕಾನೂನು ಉಲ್ಲಂಘಿಸಿ ನೀಡುತ್ತಿರುವ ಹಣದ ಬಗ್ಗೆಯೂ ಅಧಿಕಾರಿ ರಾಜ್ಯ ಸರಕಾರಕ್ಕೆ ವರದಿ ನೀಡಲಿದ್ದಾರೆ. ಒಟ್ಟಿನಲ್ಲಿ ಇನ್ನು ಆರು ತಿಂಗಳಲ್ಲಿ ವಿಲೀನ ಪ್ರಕ್ರಿಯೆ ಮುಗಿಯಲಿದೆ.

Leave a Comment

Your email address will not be published. Required fields are marked *