Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಪ್ರತಿಯೊಬ್ಬರ ಭವಿಷ್ಯದ ಮೇಲೆ ಪ್ರಭಾವ ಬೀರುವ ಚಂದ್ರನು ಇಂದು ಸ್ಥಾನ ಬದಲಾವಣೆ ಮಾಡಲಿದ್ದಾನೆ. ಚಂದ್ರನು ಇಂದು ಕನ್ಯಾರಾಶಿಯಿಂದ ತುಲಾ ರಾಶಿಯಲ್ಲಿ ಸಾಗುತ್ತಾನೆ. ಚಂದ್ರನ ಈ ಬದಲಾವಣೆಯಿಂದಾಗಿ ದ್ವಾದಶ ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಉಂಟಾಗುತ್ತದೆ. ವಿವಿಧ ರಾಶಿಗಳ ಈ ವಾರದ ಭವಿಷ್ಯ ಹೇಗಿದೆ ತಿಳಿದುಕೊಳ್ಳೋಣ ಬನ್ನಿ.

Ad Widget . Ad Widget .

ಮೇಷ ರಾಶಿ: ಈ ರಾಶಿಯವರಿಗೆ ಅನಗತ್ಯ ಸುತ್ತಾಟದಿಂದ ದೇಹಾಲಸ್ಯವಾಗಬಹುದು. ಕೆಲವರಿಗೆ ಉದ್ಯೋಗ ನಿಮಿತ್ತ ದೂರ ಪ್ರಯಾಣ ಅಥವಾ ವಿದೇಶ ಪ್ರಯಾಣ ಮಾಡಬೇಕಾಗಬಹುದು. ಹೀಗಾಗಿ ವೈಯಕ್ತಿಕ ಆರೋಗ್ಯದ ಬಗ್ಗೆ ಗಮನವಿರಲಿ. ಈ ವಾರ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಇನ್ನು ಯುವತಿಯರಿಗೆ ಉತ್ತಮ ಅವಕಾಶಗಳು ತೆರೆದುಕೊಳ್ಳುವ ಸಂಭವವಿದ್ದರೆ, ಅತ್ತ ನೌಕರಿಯಲ್ಲಿರುವ ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು.

Ad Widget . Ad Widget .

ವೃಷಭ ರಾಶಿ: ಈ ವಾರ ನೀವು ಕುಟುಂಬ ಸದಸ್ಯರೊಡನೆ ಧಾರ್ಮಿಕ ಸ್ಥಳಗಳಿಗಾಗಿ ಪ್ರಯಾಣ ಬೆಳೆಸುವಿರಿ. ಆದರೆ ಹೊಸದಾಗಿ ಕಟ್ಟುತ್ತಿರುವ ಮನೆಯ ಕೆಲಸ ಪೂರ್ಣಗೊಳ್ಳದೇ ಚಿಂತೆ ಆಗಬಹುದು. ಇನ್ನು ಆತ್ಮೀಯರ ಸಲಹೆಯಿಂದ ಕೆಲವು ವಿಪತ್ತಿನಿಂದ ಪಾರಾಗುವಿರಿ. ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ.

ಕೆಲವು ನೌಕರಸ್ಥರಿಗೆ ಬಿಡುವಿಲ್ಲದ ಕೆಲಸಗಳಿಂದಾಗಿ ಅವರ ಸಂಗಾತಿಯ ಕೋಪಕ್ಕೆ ಗುರಿಯಾಗಬಹುದು. ಆದರೂ ನಿಮ್ಮ ಸಂಗಾತಿಗಾಗಿ ಹೊಸ ವಸ್ತುಗಳನ್ನು ಖರೀದಿಸುವಿರಿ. ಆಸ್ತಿ ವಿವಾದ ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

ಮಿಥುನ ರಾಶಿ: ಈ ರಾಶಿಯವರ ಕೈ ಕೆಳಗಿನ ಕೆಲಸಗಾರರು ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಎಚ್ಚರಿಕೆ ವಹಿಸಬೇಕು. ಈ ವಾರ ಧನಾಗಮನ ಸಾಮಾನ್ಯವಾಗಿರುತ್ತದೆ. ಕೃಷಿಕರಿಗೆ ಹೆಚ್ಚಿನ ವರಮಾನ ಒದಗಿಬರುವ ಸಾಧ್ಯತೆ ಇದೆ. ಕುಟುಂಬದವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಸಂಗಾತಿ ಕಡೆಯವರ ಶುಭ ಕಾರ್ಯಕ್ರಮಗಳಿಗೆ ಹೋಗಿ ಬರುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ: ಈ ವಾರ ಈ ರಾಶಿಯವರ ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಹೀಗಾಗಿ ನಿಮ್ಮ ಯೋಜನೆಗಳನ್ನು ಪ್ರಾಮುಖ್ಯತೆಗೆ ಅನುಗುಣವಾಗಿ ಜಾರಿಗೊಳಿಸಿರಿ. ಸ್ತ್ರೀಯರೊಡನೆ ಹಣಕಾಸಿನ ವ್ಯವಹಾರ ಮಾಡುವಾಗ ಸಾಕಷ್ಟು ಎಚ್ಚರವಿರಲಿ. ದೂರವಾಗಿದ್ದ ಬಂಧುಗಳನ್ನು ಹತ್ತಿರ ಮಾಡಿಕೊಳ್ಳುವಿರಿ. ಇನ್ನು ಬರಹಗಾರರಿಗೆ ಹಾಗೂ ಸಾಹಿತಿಗಳಿಗೆ ಸನ್ಮಾನ ದೊರೆಯುವ ಸಾಧ್ಯತೆ ಇದೆ. ನಿಮ್ಮ ಮನೆಯಲ್ಲಿ ಬೆಳೆದ ಮಕ್ಕಳಿದ್ದರೆ ಅವರೊಂದಿಗೆ ವಾದ-ಪ್ರತಿವಾದ ಮಾಡದೇ ಸುಮ್ಮನಿರಿ.

ಸಿಂಹ ರಾಶಿ: ಈ ವಾರ ನಿಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಹಾಯ ದೊರೆತು ಕಾರ್ಯಸಾಧನೆ ಆಗುವುದು. ದೃಢ ನಿರ್ಧಾರಗಳಿಂದ ಮಾಡಿದ ವ್ಯವಹಾರಗಳಲ್ಲಿ ಸಾಕಷ್ಟು ಲಾಭವಿರುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಗೆ ಮೀರಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪನ್ಮೂಲ ಕ್ರೋಢೀಕರಣ ಮಾಡುವಿರಿ.

ದೊಡ್ಡ ಹಣಕಾಸಿನ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿಗಳಿಗೆ ಪದೋನ್ನತಿ ಸಿಗುವ ಸಾಧ್ಯತೆ ಇದೆ. ದಿನನಿತ್ಯದ ಕೆಲಸಗಳಲ್ಲಿ ಬೇರೆಯವರಿಗೆ ಸಹಾಯ ಮಾಡುವಿರಿ. ಕೆಲವು ಅರೆಕಾಲಿಕ ನೌಕರರಿಗೆ ನೌಕರಿ ಕಾಯಂ ಆಗುವ ಸಾಧ್ಯತೆಗಳಿವೆ. ಸಹಕಾರಿ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಹೆಸರು ಮಾಡುವ ಯೋಗವಿದೆ.

ಕನ್ಯಾ ರಾಶಿ: ಈ ರಾಶಿಯವರು ಪ್ರೀತಿ ಪ್ರೇಮ ಪ್ರಕರಣಗಳಲ್ಲಿ ಯಶಸ್ಸನ್ನು ಕಾಣಬಹುದು. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ. ಆದರೆ ವಿದೇಶಿ ವ್ಯವಹಾರ ಮಾಡುವಾಗ ಬಹಳ ಎಚ್ಚರವಿರಲಿ. ಬಂಧು ಬಾಂಧವರೊಡನೆ ನಿಮ್ಮ ನಡವಳಿಕೆಯಿಂದ ನಿಷ್ಠುರವನ್ನು ತಂದು ಕೊಳ್ಳುವಿರಿ.

ಈ ವಾರ ಗಣ್ಯರ ಪರಿಚಯದಿಂದ ನಿಮ್ಮ ಕಾರ್ಯ ಸಾಧನೆ ಆಗುತ್ತದೆ. ಬಂಧುಗಳ ಮಧ್ಯಪ್ರವೇಶದಿಂದ ಆಸ್ತಿ ವಿವಾದಗಳು ಬಗೆಹರಿಯುತ್ತವೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಪ್ರಗತಿ ಇರುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಇನ್ನು ಉದರ ಸಂಬಂಧಿ ಕಾಯಿಲೆ ಕಾಡಬಹುದು ಎಚ್ಚರ.

ತುಲಾ ರಾಶಿ: ಈ ವಾರ ನಿಮಗೆ . ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಮಕ್ಕಳಿಂದ ನಿಮಗೆ ಧನಸಹಾಯ ಸಿಗುವ ಸಾಧ್ಯತೆ ಇದೆ. ಇನ್ನು ನೀವು ಕಣ್ಣಿನ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕು. ಕೆಲವೊಂದು ಕೆಲಸಗಳಲ್ಲಿ ನಿಮ್ಮ ಕುಯುಕ್ತಿ ಬಯಲಾಗಿ ಮುಜುಗರ ಪಡುವ ಸಂದರ್ಭವಿದೆ.

ರಾಜಕೀಯ ನಾಯಕರುಗಳ ಸಹಾಯದಿಂದ ನಿಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವಿರಿ. ಪೊಳ್ಳು ಆಶ್ವಾಸನೆಗಳನ್ನು ನೀಡಿದ ಕೆಲವು ರಾಜಕಾರಣಿಗಳು ಸಾರ್ವಜನಿಕರ ಆಕ್ರೋಶವನ್ನು ಎದುರಿಸಬೇಕಾದೀತು. ನೀವು ನೂತನ ವಾಹನದ ಖರೀದಿಗೆ ಗಮನ ಹರಿಸುವಿರಿ.

ವೃಶ್ಚಿಕ ರಾಶಿ: ಈ ವಾರ ಈ ರಾಶಿಯವರ ಧನಾದಾಯ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ತೆರೆದುಕೊಳ್ಳುತ್ತವೆ. ಗೃಹ ನಿರ್ಮಾಣ ಅಥವಾ ಖರೀದಿ ಮಾಡುವ ಸಾಧ್ಯತೆ ಇದೆ. ರಾಜಕೀಯದಲ್ಲಿ ಹಂತ-ಹಂತವಾಗಿ ಮೇಲೇರುವ ಸಾಧ್ಯತೆ ಇದೆ. ಖರೀದಿ ಮತ್ತು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಉತ್ತಮ ಲಾಭವಿರುತ್ತದೆ. ಬುದ್ಧಿಜೀವಿಗಳು ವಿಪರೀತ ಮಾತನಾಡಿ ಮುಜುಗರಕ್ಕೆ ಒಳಗಾಗುವರು.

ಧನು ರಾಶಿ: ಈ ರಾಶಿಯವರಿಗೆ ವೈಯಕ್ತಿಕ ಸಮಸ್ಯೆಗಳು ಪರಿಹಾರವಾಗಿ ಮನಸ್ಸು ಪ್ರಶಾಂತಗೊಳ್ಳುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಧನ್ಯತೆಯನ್ನು ಕಾಣುವಿರಿ. ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಅಗತ್ಯ. ತಂದೆ-ತಾಯಿಗಳಿಗೆ ಮಕ್ಕಳ ಸಲುವಾಗಿ ದೂರದ ಊರು ಅಥವಾ ವಿದೇಶಕ್ಕೆ ಹೋಗುವ ಯೋಗವಿದೆ.

ವಿದೇಶಿ ಕಂಪನಿಯೊಂದರಲ್ಲಿ ದೊಡ್ಡ ಮಟ್ಟದ ಕೆಲಸ ನಿರ್ವಹಿಸುವ ಸಾಧ್ಯತೆ ಇದೆ. ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗಿ ಆರ್ಥಿಕ ಮಟ್ಟ ಸುಧಾರಿಸುತ್ತದೆ. ಗಮನವಿಟ್ಟು ಮಾಡಿದ ಕೆಲಸಗಳಲ್ಲಿ ಉತ್ತಮ ಯಶಸ್ಸು ದೊರೆಯುತ್ತದೆ.

ಮಕರ ರಾಶಿ: ಈ ವಾರ ನೀವು ಹಣಕಾಸಿನ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ. ಯಾರಿಗೂ ಸಾಲ ಕೊಡುವುದು ಬೇಡ. ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಇರಲಿ. ಕುಟುಂಬ ಸಮಸ್ಯೆಗಳಿಗೆ ಕುಳಿತು ಆಲೋಚಿಸಿ ಪರಿಹಾರ ಕಂಡುಕೊಳ್ಳುವಿರಿ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಉತ್ತಮ ಯಶಸ್ಸನ್ನು ಕಾಣುವಿರಿ. ಕಚೇರಿ ಕೆಲಸಗಳಲ್ಲಿ ಉತ್ತಮ ಹೆಸರನ್ನು ಪಡೆಯುವಿರಿ. ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವಿರಿ.

ಕುಂಭ ರಾಶಿ: ಈ ರಾಶಿಯ ಯುವಕರ ವೈಯಕ್ತಿಕ ವಿಚಾರಗಳು ಹೊರಬರುವ ಸಾಧ್ಯತೆ ಇದೆ, ಎಚ್ಚರ ವಹಿಸಿರಿ. ಮನೆ ಬದಲಾವಣೆಯ ವಿಚಾರ ಮುನ್ನೆಲೆಗೆ ಬರುತ್ತದೆ. ಶತ್ರುಗಳು ಸೃಷ್ಟಿಸುವ ಸಂಚುಗಳಲ್ಲಿ ಸಿಕ್ಕಿಬೀಳದಂತೆ ಎಚ್ಚರ ವಹಿಸಿರಿ. ನ್ಯಾಯಾಲಯದಲ್ಲಿನ ಕಟ್ಟಳೆಗಳ ಬಗ್ಗೆ ದೃಢನಿರ್ಧಾರ ತೆಗೆದುಕೊಂಡಲ್ಲಿ ಸಾಕಷ್ಟು ಒಳಿತನ್ನು ಕಾಣಬಹುದು. ಕೆಲವೊಂದು ಋಣಪರಿಹಾರವಾಗಿ ಮನಸ್ಸು ಸಂತೃಪ್ತಿಗೊಳ್ಳುತ್ತದೆ.

ಮೀನ ರಾಶಿ: ಈ ವಾರ ನೀವು ಭೂ ಖರೀದಿ ಮಾಡಬಹುದು. ನಿಮ್ಮ ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ನೆನೆಗುದಿಗೆ ಬಿದ್ದಿದ್ದ ವಿಷಯವೊಂದು ಹೊರಬಂದು ನಿಮ್ಮ ಗೌರವಕ್ಕೆ ಧಕ್ಕೆಯಾಗಬಹುದು. ನೌಕರಿಯಲ್ಲಿರುವವರಿಗೆ ಬೇಸರವಾಗುವ ಸಾಧ್ಯತೆಗಳಿವೆ ಹಾಗೂ ಮನಸ್ಸಿಗೆ ಅಹಿತಕರವೆನಿಸುವ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ. ಈ ವಾರ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ಹೀಗಾಗಿ ಎಚ್ಚರಿಕೆ ವಹಿಸುವುದು ಒಳಿತು.

Leave a Comment

Your email address will not be published. Required fields are marked *