Ad Widget .

ಮಂಗಳೂರು: ನೈತಿಕ ಪೊಲೀಸ್ ಗಿರಿಗೆ ಬಂದವರಿಗೆ ಮುಖಭಂಗ| ಅನ್ಯಧರ್ಮೀಯ ಜೋಡಿ ಎಂದು ತಿಳಿದು ಪ್ರಶ್ನಿಸಲು ಬಂದವರು ಪೇಚುಮೋರೆ ಹಾಕಿಹೊದರು

Ad Widget . Ad Widget .

ಸಮಗ್ರ ನ್ಯೂಸ್: ಖಾಸಗಿ ಬಸ್​ಒಂದರಲ್ಲಿ ಬಿಹಾರದ ಯುವಕನ ಜೊತೆಗೆ ಮಹಿಳೆಯೊಬ್ಬಳು ಪ್ರಯಾಣಿಸುತ್ತಿದ್ದು, ಇವರನ್ನು ನೋಡಿದ ಕೆಲವರಿಗೆ ತಲೆಯಲ್ಲಿ ಮತೀಯ ವಿಚಾರ ಬಂದಿದೆ.

Ad Widget . Ad Widget .

ಇವರಿಬ್ಬರನ್ನು ಅನ್ಯಮತೀಯ ಜೋಡಿ ಎಂದು ಬಸ್ ತಡೆದವರಿಗೇ ಕೊನೆಗೆ ತಾವು ತಪ್ಪು ತಿಳಿದಿರುವುದು ಅರಿವಿಗೆ ಬಂದಿರುವ ಘಟನೆ ಶುಕ್ರವಾರ ಮಂಗಳೂರಿನ ಗುರುಪುರದಲ್ಲಿ ನಡೆದಿದೆ.

ಮಂಗಳೂರಿನ ವಿವಾಹಿತ ಮಹಿಳೆಯೊಬ್ಬಳು ಬಿಹಾರದ ಗೆಳೆಯನೊಂದಿಗೆ ಬಸ್​ನಲ್ಲಿ ಸಂಚರಿಸುತ್ತಿದ್ದಳು. ಮೂಡುಬಿದಿರೆಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್​ನಲ್ಲಿದ್ದ ಯುವಕ ಮತ್ತು ಗೃಹಿಣಿಯನ್ನು ನೋಡಿದವರು ಅವರು ಅನ್ಯಮತೀಯ ಜೋಡಿ ಎಂದು ಗುರುಪುರದ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು.

ಗುರುಪುರದ ಅಲೈಗುಡ್ಡೆ ಎಂಬಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಬಸ್ ತಡೆದು ಯುವಕ ಮತ್ತು ಮಹಿಳೆಯನ್ನು ಕೆಳಗಿಳಿಸಿದ್ದಾರೆ. ಯುವಕ- ಮಹಿಳೆಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಆಗ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರೆಂದು ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿದುಬಂದಿದೆ.

ಅನ್ಯಮತೀಯ ಜೋಡಿ ಎಂದು‌ ನೈತಿಕ ಪೊಲೀಸ್ ಗಿರಿ ನಡೆಸಲು ಹೋದವರು ಈ ಜೋಡಿ ಒಂದೇ ಸಮುದಾಯದವರೆಂದು ತಿಳಿದು ಬಂದ ಹಾದಿಗೆ ಸುಂಕ ಇಲ್ಲವೆಂಬಂತೆ ಅಲ್ಲಿಂದ ವಾಪಸ್​ ಆಗಿದ್ದಾರೆ.

Leave a Comment

Your email address will not be published. Required fields are marked *