Ad Widget .

ಮಂಗಳೂರು: ಬಸ್ ರಸ್ತೆಯಲ್ಲಿ ಅಡ್ಡವಾಗಿಟ್ಟು ಸಿಬ್ಬಂದಿಯ ಗುಂಪುಘರ್ಷಣೆ| ನಾಲ್ವರು ಅರೆಸ್ಟ್

Ad Widget . Ad Widget .

ಸಮಗ್ರ ನ್ಯೂಸ್: ಸಮಯ ಪಾಲನೆಯ ವಿಷಯದಲ್ಲಿ ಎರಡು ಬಸ್‌ಗಳನ್ನು ರಸ್ತೆಯಲ್ಲಿ ಅಡ್ಡವಾಗಿಟ್ಟುಕೊಂಡು ಪರಸ್ಪರ ಜಗಳವಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿದ ಆರೋಪದಲ್ಲಿ ಉರ್ವ ಪೊಲೀಸರು ನಾಲ್ಕು ಮಂದಿ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

Ad Widget . Ad Widget .

ಬಸ್ ಸಿಬ್ಬಂದಿಗಳಾದ ಗುಣರಾಜ್ ಶೆಟ್ಟಿ, ಸ್ಟೀವನ್ ನೆಲ್ಸನ್ ನೊರೊನ್ಹಾ, ಧನರಾಜ್ ಮತ್ತು ಶರತ್ ಬಂಧಿತ ಆರೋಪಿಗಳಾಗಿದ್ದಾರೆ.

ನಗರದ ಲೇಡಿಹಿಲ್ ಬಸ್ ನಿಲ್ದಾಣದ ಬಳಿ ಶುಕ್ರವಾರ ಎರಡು ಬಸ್‌ಗಳನ್ನು ಪರಸ್ಪರ ಅಡ್ಡವಾಗಿಟ್ಟು ಚಾಲಕ ಮತ್ತು ನಿರ್ವಾಹಕರು ಬೈದಾಡಿ ತಳ್ಳಾಡುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ

Leave a Comment

Your email address will not be published. Required fields are marked *