Ad Widget .

ಮಡಂತ್ಯಾರ್: ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 17ನೇ ನೂತನ ಶಾಖೆ ಉದ್ಘಾಟನೆ| “ಗ್ರಾಮೀಣ ಭಾಗದ ಆರ್ಥಿಕ ಶಕ್ತಿಯಾಗಿ ಪ್ರೇರಣೆ – ಹರೀಶ್ ಪೂಂಜಾ

Ad Widget . Ad Widget .

ಸಮಗ್ರ ನ್ಯೂಸ್: ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಗ್ರಾಮೀಣ ಭಾಗದಲ್ಲಿ ಆರಂಭಗೊಂಡು‌ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು. ಅವರು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿ ಆರಂಭಗೊಂಡ ಸೊಸೈಟಿಯ ನೂತನ 17ನೇ ಶಾಖೆಯ ಉದ್ಘಾಟನೆ ನಡೆಸಿ ಮಾತನಾಡುತ್ತಿದ್ದರು.

Ad Widget . Ad Widget .

ಸೊಸೈಟಿಯು ಗ್ರಾಮೀಣ ಭಾಗದಲ್ಲಿ ಆರ್ಥಿಕ ಸದೃಢತೆಯನ್ನು ಹುಟ್ಟುಹಾಕಿದೆ. ರಾಜ್ಯದಲ್ಲಿ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ಸಂಸ್ಥೆ ಇಂದು ಹಲವರಿಗೆ ಪ್ರೇರಣೆಯಾಗಿದೆ. ಮಡಂತ್ಯಾರ್ ಶಾಖೆ ಉತ್ತಮವಾದ ವ್ಯವಹಾರ ಮಾಡಿ ಆರ್ಥಿಕ ಶಕ್ತಿಯಾಗಿ ಬೆಳೆಯಲಿ, ಸಹಕಾರ ಕ್ಷೇತ್ರಕ್ಕೆ ಮಾರ್ಗದರ್ಶಿಯಾಗಲಿ ಎಂದು ಹಾರೈಸಿದರು.

ಪ್ರಥಮ ಪಾಲು ಪತ್ರ ವಿತರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್   ಧರ್ಮಸ್ಥಳ ಇದರ ಪ್ರಾದೇಶಿಕ ನಿರ್ದೇಶಕ ವಿವೇಕ್’ ವಿನ್ಸೆಂಟ್ ಪಾಯಸ್, ಪ್ರಥಮ ಸಾಲ ಪತ್ರದ ಮಂಜೂರಾತಿಯನ್ನು ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕಿ(ಪ್ರಭಾರ)  ಶ್ರೀಮತಿ ಸುಕನ್ಯ, ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷೆ ಶಶಿಪ್ರಭ ವಿತರಿಸಿದರು.‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಚ್ಚಿನ ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದುಗ್ಗಪ್ಪ ಗೌಡ ಪೊಸಂದೋಡಿ, ಜೆ.ಎಂಜೆ ಕಾಂಪ್ಲೆಕ್ಸ್ ಕಟ್ಟಡದ ಮಾಲಕ ಜಾನ್ ಕ್ರಾಸ್ತಾ , ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಟಿ ವಿಶ್ವನಾಥ, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರುಗಳಾದ  ಪಿ.ಎಸ್ ಗಂಗಾಧರ, ದಿನೇಶ್‌ ಮಡಪ್ಪಾಡಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಲತಾ ಮಾವಜಿ, ನಿತ್ಯಾನಂದ ಮುಂಡೋಡಿ, ನವೀನ್ ಕುಮಾರ್ ಜಾಕೆ, ಹೇಮಚಂದ್ರ ಐ ಕೆ, ದಾಮೋದರ ಎನ್ ಎಸ್, ನಾರಾಯಣ ಗೌಡ ಕೆ.ಸಿ, ಸದಾನಂದ ಕೆ.ಸಿ, ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *