Ad Widget .

‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ಲಿಂಕ್ ಮೊಬೈಲ್ ಗೆ ಬಂದರೆ ಎಚ್ಚರ| ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಬೀಳುತ್ತೆ ಕನ್ನ

Ad Widget . Ad Widget .

ಸಮಗ್ರ ನ್ಯೂಸ್: ಭಾರೀ ಸುದ್ದಿಯಲ್ಲಿರುವ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಉಚಿತವಾಗಿ ತೋರಿಸುವ ನೆಪದಲ್ಲಿ ಮೊಬೈಲ್​ಗೆ ಲಿಂಕ್​ ಕಳುಹಿಸಿ ವಂಚನೆ ಮಾಡಲಾಗುತ್ತಿದ್ದು, ಈ ಬಗ್ಗೆ ಸೈಬರ್​ ಭದ್ರತ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Ad Widget . Ad Widget .

ವಂಚಕರು ಮೊಬೈಲ್​ಗೆ ಲಿಂಕ್​ ಕಳುಹಿಸಿ ಅದರಲ್ಲಿ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾವನ್ನ ಉಚಿತವಾಗಿ ವೀಕ್ಷಿಸಬಹುದು ಎಂಬ ಮೆಸೆಜ್​ ಇರುತ್ತದೆ. ಈ ಲಿಂಕ್​ ಅನ್ನು ಕ್ಲಿಕ್​ ಮಾಡಿದಾಗ ಮೊಬೈಲ್​ ಫೋನ್​ಗೆ ವೈರಸ್​​ ಡೌನ್​ಲೋಡ್​ ಆಗುತ್ತದೆ. ಮಾಲ್​ವೇರ್ ಎಂಬ ವೈರಸ್​​ ಮೂಲಕ ಮೊಬೈಲ್​ ಸಂಖ್ಯೆಗೆ ಲಿಂಕ್​ ಆಗಿರುವ ಖಾತೆಯಿಂದ ಹಣವನ್ನ ದೋಚುತ್ತಾರೆ. ಮಂಗಳೂರಿನಲ್ಲಿ ಕೆಲವರು ಈಗಾಗಲೇ ಇಂತಹ ಲಿಂಕ್​ಗಳನ್ನ ಬಳಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸೈಬರ್​ ಭದ್ರತ ತಜ್ಞರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *