Ad Widget .

ಮಹಿಳೆಯ ಖಾಸಗಿ‌ ಅಂಗದೊಳಗಿತ್ತು ಗಾಜಿನ ಚೂರು| ಶಸ್ತ್ರಚಿಕಿತ್ಸೆ ನಡೆಸಿದ ‌ವೈದ್ಯರಿಗೆ ಶಾಕ್

Ad Widget . Ad Widget .

ಸಮಗ್ರ ಡಿಜಿಟಲ್ ಡೆಸ್ಕ್: ಶಸ್ತ್ರ ಚಿಕಿತ್ಸೆ ‌ನಡೆಸಿದ ವೈದ್ಯರನ್ನೂ ಬೆಚ್ಚಿ ಬೀಳಿಸಿದಂತಹ ಘಟನೆ ಇದು. ಟ್ಯುನೀಶಿಯಾದ 45 ವರ್ಷದ ಮಹಿಳೆಯೊಬ್ಬಳ ಖಾಸಗಿ ಅಂಗದಲ್ಲಿ 4 ವರ್ಷಗಳಿಂದ ಗಾಜಿನ ಚೂರೊಂದು ಸಿಕ್ಕಿಹಾಕಿಕೊಂಡಿತ್ತು. ಅದನ್ನು ಹೊರತೆಗೆದ ವೈದ್ಯರೇ ಶಾಕ್‌ ಆಗಿದ್ದಾರೆ.

Ad Widget . Ad Widget .

ಈ ಮಹಿಳೆಗೆ ಯಾವಾಗಲೂ ಖಾಸಗಿ ಅಂಗದಲ್ಲಿ ತೀವ್ರ ನೋವು ಬರುತ್ತಿತ್ತು. ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತಿತ್ತು. ಕಳೆದ 4 ವರ್ಷಗಳಿಂದ ನೋವು ಉಣ್ಣುತ್ತಿದ್ದ ಮಹಿಳೆ ಕೊನೆಗೂ ತಪಾಸಣೆಗಾಗಿ ವೈದ್ಯರ ಬಳಿ ಹೋಗಿದ್ದಾಳೆ.

ಮಹಿಳೆಯ ಖಾಸಗಿ ಅಂಗದಲ್ಲಿ 8 ಸೆಂ.ಮೀ ಉದ್ದದ ಕಲ್ಲು ಸಿಲುಕಿಕೊಂಡಿರೋದು ಸ್ಕ್ಯಾನಿಂಗ್‌ ನಲ್ಲಿ ಪತ್ತೆಯಾಗಿದೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಆ ಕಲ್ಲನ್ನು ಹೊರತೆಗಿದಿದ್ದಾರೆ. ಕಲ್ಲನ್ನು ಹೊರ ಹಾಕುತ್ತಿದ್ದಂತೆ ಅದರಲ್ಲಿದ್ದ ಗಾಜಿನ ಲೋಟದ ತುಂಡು ಕೆಳಕ್ಕೆ ಬಿದ್ದಿದೆ.

ಅದನ್ನು ನೋಡಿ ಸ್ವತಃ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಕೆಲವು ವರ್ಷಗಳ ಹಿಂದೆ ಮಹಿಳೆಯ ಮೇಲೆ ಅತ್ಯಾಚಾರ ನಡೆದಿತ್ತು. ಆ ಸಂದರ್ಭದಲ್ಲಿ ಕಾಮಾಂಧರು ಗಾಜಿನ ತುಂಡನ್ನು ಖಾಸಗಿ ಅಂಗದೊಳಕ್ಕೆ ಹಾಕಿ ವಿಕೃತಿ ಮೆರೆದಿರಬಹುದೆಂದು ಹೇಳಲಾಗಿದೆ. ಕಲ್ಲು ಹಾಗೂ ಅದರೊಳಗಿದ್ದ ಗಾಜಿನ ತುಂಡು ಖಾಸಗಿ ಅಂಗದಿಂದ ಒಳತೂರಿಕೊಂಡು ಮಹಿಳೆಯ ಬ್ಲಾಡರ್‌ ನೊಳಕ್ಕೆ ಸೇರಿಹೋಗಿತ್ತು.

Leave a Comment

Your email address will not be published. Required fields are marked *