Ad Widget .

ಮಾ.20: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ಮಡಂತ್ಯಾರು ಶಾಖೆ ಉದ್ಘಾಟನೆ

Ad Widget . Ad Widget .

ಸಮಗ್ರ ನ್ಯೂಸ್: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ 17ನೇ ಮಡಂತ್ಯಾರು ಶಾಖೆಯು ಮಡಂತ್ಯಾರಿನಲ್ಲಿ ಮಾ.20ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Ad Widget . Ad Widget .

1997ರಲ್ಲಿ ಗೌಡರ ಸೇವಾ ಸಂಘ ಸುಳ್ಯ ಇವರಿಂದ ಪ್ರವರ್ತಿಸಲ್ಪಟ್ಟ ಸಂಘವು 435 ಜನರಿಂದ ಪ್ರಾರಂಭವಾಗಿ, ಪ್ರಸ್ತುತ 14261 ಜನ ವಿವಿಧ ವರ್ಗದ ಸದಸ್ಯರಿದ್ದು, ರೂ.3.50 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ. ಸಂಘದಲ್ಲಿ ರೂ.120.00 .ಕೋಟಿಗೂ ಮಿಕ್ಕಿ ಠೇವಣಿಯದ್ದು, ರೂ.103.00 ಕೋಟಿಗೂ ಮಿಕ್ಕಿ ವಿವಿಧ ಸಾಲಗಳನ್ನು ಸದಸ್ಯರಿಗೆ ವಿತರಿಸಿ, ಪ್ರಾರಂಭದಿಂದಲೂ ಲಾಭದಲ್ಲಿ ನಡೆಯುತ್ತಿದೆ. 2020-21ನೇ ಸಹಕಾರ ವರ್ಷದಲ್ಲಿ 1.09 ಕೋಟಿ ನಿವ್ವಳ ಲಾಭ ಗಳಿಸಿ, ಸದಸ್ಯರುಗಳಿಗೆ ಶೇ.15 ರಷ್ಟು ಡಿವಿಡೆಂಡ್ ವಿತರಿಸಿ, ವಾರ್ಷಿಕ ರೂ.500 ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸಿದೆ. ಸದಸ್ಯರುಗಳ ಅನುಕೂಲಕ್ಕಾಗಿ ಇ ಸ್ಟಾಂಪಿಂಗ್ ವಿತರಣೆ, ಮಲ್ಟಿ ಸಿಟಿ ಚೆಕ್/ಡಿಡಿ ಸೌಲಭ್ಯ, ಆರ್‌ಟಿಜಿಎಸ್ (ನೆಫ್ಟ್ ಸೌಲಭ್ಯವನ್ನು ಸದಸ್ಯರುಗಳಿಗೆ ನೀಡುತ್ತಿರುವ ಸಂಸ್ಥೆಯ ಕಾರ್ಯವ್ಯಾಪ್ತಿಯು ರಾಜ್ಯಮಟ್ಟದಾಗಿದ್ದು, ಸಂಘವು ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ 16 ಶಾಖೆಗಳನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದೆ.

ಸಂಘದ ನೂತನ 17ನೇ ಶಾಖೆಯ ಮಡಂತ್ಯಾರಿನಲ್ಲಿ ಶುಭಾರಂಭಗೊಳ್ಳಲಿದ್ದು, ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಗಣಕೀಕರಣವನ್ನು   ದ.ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್‌ ಆರ್‌. ನಾಯಕ್ , ಭದ್ರತಾ ಕೊಠಡಿಯನ್ನು ವಿಧಾನ ಪರಿಷತ್‌ ಸದಸ್ಯ ಹರೀಶ್ ಕುಮಾರ್’ ಉದ್ಘಾಟಿಸಲಿದ್ದಾರೆ. ಪ್ರಥಮ ಠೇವಣಿ ಪತ್ರವನ್ನು ಮಡಂತ್ಯಾರು ಸಿ.ಎ ಬ್ಯಾಂಕ್‌  ಅಧ್ಯಕ್ಷ ಕೆ.ಅರವಿಂದ್ ಜೈನ್ , ಪ್ರಥಮ ಪಾಲು ಪತ್ರ ವಿತರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್   ಧರ್ಮಸ್ಥಳ ಇದರ ಪ್ರಾದೇಶಿಕ ನಿರ್ದೇಶಕ ವಿವೇಕ್’ ವಿನ್ಸೆಂಟ್ ಪಾಯಸ್, ಪ್ರಥಮ ಸಾಲ ಪತ್ರದ ಮಂಜೂರಾತಿಯನ್ನು ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕಿ(ಪ್ರಭಾರ)  ಶ್ರೀಮತಿ ಸುಕನ್ಯ, ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷೆ ಶಶಿಪ್ರಭ ವಿತರಿಸಲಿರುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೆಚ್ಚಿನ ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದುಗ್ಗಪ್ಪ ಗೌಡ ಪೊಸಂದೋಡಿ, ಜೆ.ಎಂಜೆ ಕಾಂಪ್ಲೆಕ್ಸ್ ಕಟ್ಟಡದ ಮಾಲಕ ಜಾನ್ ಕ್ರಾಸ್ತಾ  ಉಪಸ್ಥಿತರಿರುವರು.

ಜನರಲ್ಲಿ ಉಳಿತಾಯ ಮನೋಭಾವನೆಯನ್ನು ಬೆಳೆಸುತ್ತಿರುವ ನಮ್ಮ ಸಂಘವು, ಕೃಷಿಕರು, ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಒದಗಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ನೆರವಾಗುವ ಉದ್ದೇಶವನ್ನು ಹೊಂದಿದೆ.  ಜನರಿಗೆ ಆರ್ಥಿಕವಾಗಿ ನೆರವನ್ನು ನೀಡುವ ಮಹತ್ತರವಾದ ಸಂಘದ ಯೋಜನೆಗೆ ಮಡಂತ್ಯಾರಿನ ಸಹಕಾರಿ ಬಂಧುಗಳು ಈ ಶಾಖೆಯಲ್ಲಿ ವ್ಯವಹರಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕೆಂದು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಟಿ ವಿಶ್ವನಾಥ, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರುಗಳಾದ  ಪಿ.ಎಸ್ ಗಂಗಾಧರ, ದಿನೇಶ್‌ ಮಡಪ್ಪಾಡಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *