Ad Widget .

“ನಾಯಕತ್ವ ಬದಲಿಸಿಕೊಳ್ಳಿ, ಇಲ್ಲದಿದ್ದರೆ ಕರ್ನಾಟಕದಲ್ಲೂ ಆಪ್ ನಿಮ್ಮನ್ನ ಗುಡಿಸುತ್ತೆ”| ಮೂರೂ ಪಕ್ಷಗಳಿಗೆ ಎಚ್ಚರಿಕೆ ಇತ್ತ ಲೆಹರ್ ಸಿಂಗ್

Ad Widget . Ad Widget .

ಸಮಗ್ರ ನ್ಯೂಸ್: ‘ರಾಜ್ಯದಲ್ಲಿ ಪ್ರಮುಖವಾಗಿರುವ ಮೂರೂ ಪಕ್ಷಗಳ ನಾಯಕತ್ವ ಬದಲಾವಣೆಯಾಗದಿದ್ದರೆ ಅವುಗಳು ಧೂಳಿಪಟವಾಗುತ್ತವೆ. ದೆಹಲಿ ರೀತಿಯಲ್ಲಿ ಆಮ್ ಆದ್ಮಿ ಪಕ್ಷವು ಎಲ್ಲರನ್ನೂ ಗುಡಿಸುತ್ತದೆ’ ಎಂದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ ಎಚ್ಚರಿಕೆ ನೀಡಿದರು.

Ad Widget . Ad Widget .

ವಿಧಾನ ಪರಿಷತ್‌ನಲ್ಲಿ ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೆಹರ್‌ ಸಿಂಗ್‌, ‘ನಾನು 12 ವರ್ಷಗಳಿಂದ ಸದನದಲ್ಲಿದ್ದೇನೆ. ಪಕ್ಷ ನನಗೆ ಎರಡು ಅವಧಿಗೆ ಅವಕಾಶ‌ ನೀಡಿದೆ. ‌ಮತ್ತೆ ನಾನು ಅವಕಾಶ ಕೇಳುವುದಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಹಾಗಾಗಿ, ಇದೇ ನನ್ನ ಕಡೆಯ ಭಾಷಣ’ ಎಂದು ಹೇಳಿದರು.

‘ಇವತ್ತು ಜಾತಿ ಆಧಾರದಲ್ಲಿ ನಿಗಮ-ಮಂಡಳಿಗೆ ನೇಮಕ ಮಾಡಲಾಗುತ್ತಿದೆ. ಅದೇ ರೀತಿ ಜಾತಿ ಆಧಾರದ ಮೇಲೆಯೇ ಬಜೆಟ್‌ ರೂಪಿಸಲಾಗುತ್ತಿದೆ. ಇಂತಹ ವ್ಯವಸ್ಥೆ ಬದಲಾಗಬೇಕು’ ಎಂದು ಸಲಹೆ ನೀಡಿದರು.‌

Leave a Comment

Your email address will not be published. Required fields are marked *