Ad Widget .

ಉಪ್ಪಿನಂಗಡಿ: ಹೈಕೋರ್ಟ್ ತೀರ್ಪಿಗಿಲ್ಲ ಮನ್ನಣೆ| ಹಿಜಾಬ್ ತೆಗೆಯದೇ ತರಗತಿ ಬಹಿಷ್ಕರಿಸಿದ ಮುಸ್ಲಿಂ ವಿದ್ಯಾರ್ಥಿಗಳು

Ad Widget . Ad Widget .

ಸಮಗ್ರ ನ್ಯೂಸ್: ಹಿಜಾಬ್ ತೆಗೆದು ತರಗತಿಗೆ ಹಾಜರಾಗಲ್ಲ ಎಂದು ತರಗತಿಯಿಂದ ವಿದ್ಯಾರ್ಥಿಗಳು ಹೊರನಡೆದ ಪ್ರಸಂಗ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿನ್ನೆ ನಡೆದಿದೆ.

Ad Widget . Ad Widget .

ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಪಾಲಿಸಿ ತರಗತಿಯೊಳಗಡೆ ಹಿಜಾಬ್ ಗೆ ಅವಕಾಶವಿಲ್ಲ ಎಂದು ಪ್ರಿನ್ಸಿಪಾಲ್ ವಿದ್ಯಾರ್ಥಿಗಳಿಗೆ ತಿಳಿಸಿದ್ದು ಹಿಜಾಬ್ ತೆಗೆದು ತರಗತಿಗೆ ಹಾಜರಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ತರಗತಿಯಿಂದ ಹೊರಬರುತ್ತಿದ್ದಂತೆ ಹಿಜಾಬ್ ಇವರನ್ನು ಬೆಂಬಲಿಸಿ ಹಲವಾರು ವಿದ್ಯಾರ್ಥಿಗಳು ಇವರ ಹೋರಾಟಕ್ಕೆ ಬೆಂಬಲ ಸೂಚಿಸಿ ತರಗತಿ ಬಹಿಷ್ಕರಿಸಿದ್ದಾರೆ.

ಬೆಳ್ತಂಗಡಿಯ ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲೂ ಇಂತಹುದೇ ಪ್ರತಿಭಟನೆ ನಡೆದಿದ್ದು ಐವರು ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕಾರ ಮಾಡಿ ತರಗತಿಯಿಂದ ಹೊರ ನಡೆದಿದ್ದಾರೆ. ಕಾಲೇಜಿನ ಮುಂದೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದು, ಹೈಕೋರ್ಟ್ ತೀರ್ಪನ್ನು ಧಿಕ್ಕರಿಸಿದ್ದಾರೆ.

Leave a Comment

Your email address will not be published. Required fields are marked *