ಸಮಗ್ರ ನ್ಯೂಸ್: ರಾಷ್ಟ್ರೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಹೇಳಿಕೆ ಬೆನ್ನಲ್ಲೆ ರಾಜ್ಯ ಕೇಸರಿ ಪಡೆಯಲ್ಲಿ ತಣ್ಣನೆಯ ನಡುಕ ಶುರುವಾಗಿದೆ.
ಪಕ್ಷದಲ್ಲಿ ವಂಶ ರಾಜಕಾರಣಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟ ಸಂದೇಶ ರವಾನಿಸಿರುವ ಪ್ರಧಾನಿ ಮೋದಿ, ಸಂಸದೀಯ ಪಕ್ಷದ ಸಭೆಯಲ್ಲಿ ಕಠಿಣ ಸಂದೇಶ ರವಾನಿಸಿದ್ದಾರೆ. ಹೀಗಾಗಿ ರಾಜ್ಯ ಕೇಸರಿ ಪಡೆಯಲ್ಲಿ ಆತಂಕ ಶುರುವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದಲ್ಲಿ ವಂಶವಾದಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟ ಸಂದೇಶ ರವಾನಿಸಿರುವ ಕಾರಣ, ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಠಿಯಾಗಿದೆ. ಈ ಮೂಲಕ ಗುಜರಾತ್, ಕರ್ನಾಟಕ ರಾಜ್ಯಗಳಲ್ಲಿ ಚುನಾವಣೆಗೆ ಎದುರು ನೋಡಿತ್ತಿರುವ ಹೊತ್ತಲ್ಲೇ ಪ್ರಾಮುಖ್ಯತೆ ಪಡೆದುಕೊಂಡಿದೆ.
ಇದಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು, ಪಂಚರಾಜ್ಯ ಚುನಾವಣೆ ವೇಳೆ ವಂಶವಾದ ರಾಜಕಾರಣಕ್ಕೆ ಅವಕಾಶ ನೀಡಿಲ್ಲ. ಇದೀಗ ಮೋದಿ ಹೇಳಿಕೆ ಬೆನ್ನಲ್ಲೆ ರಾಜ್ಯ ಬಿಜೆಪಿ ನಾಯಕರಲ್ಲೂ ಆತಂಕ ಮನೆ ಮಾಡಿದೆ. ಅಲ್ಲದೇ ರಾಜ್ಯ ಬಿಜೆಪಿಯಲ್ಲಿ ಕುಟುಂಬದಿಂದ ಇಬ್ಬರು, ಮೂವರು ಟಿಕೆಟ್ ಬಯಸುವವರಿಗೆ ಟಿಕೆಟ್ ಕೈ ತಪ್ಪುವ ಆತಂಕ ಎದುರಾಗಿದೆ. ಜೊತೆಗೆ ತಮಗೆಲ್ಲಿ ಟಿಕೆಟ್ ತಪ್ಪಲಿದೆಯೋ ಎಂಬ ಭಯ ಕೂಡ ಶುರುವಾಗಿದೆ.