Ad Widget .

ಪ್ರಬಲ ಭೂಕಂಪಕ್ಕೆ ತತ್ತರಿಸಿದ ಜಪಾನ್| ಸೂರ್ಯೋದಯದ ನಾಡಲ್ಲಿ ಜನಜೀವನ ದುಸ್ಥರ

Ad Widget . Ad Widget .

ಸಮಗ್ರ ನ್ಯೂಸ್: ಬುಧವಾರ ರಾತ್ರಿ ಉತ್ತರ ಜಪಾನ್‌ ನ ಫುಕುಶಿಮಾ ಕರಾವಳಿಯಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೂ 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Ad Widget . Ad Widget .

ಈ ಪ್ರಬಲ ಭೂಕಂಪದಿಂದ ಹಲವು ನಗರಗಳಲ್ಲಿ ವಿದ್ಯುತ್ ವ್ಯವಸ್ಥೆ ಕಡಿತಗೊಂಡಿದೆ ಎಂದು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಅಕ್ಷಾಂಶ 37.7 ಮತ್ತು ಪೂರ್ವ ರೇಖಾಂಶ 141.7ರ 60 ಕಿಮೀ ಆಳದಲ್ಲಿ, ಬುಧವಾರ ಸ್ಥಳೀಯ ಕಾಲಮಾನ ರಾತ್ರಿ 11.36ರ ಸುಮಾರಿಗೆ ಕಂಪನ ಸಂಭವಿಸಿದೆ.

ಇನ್ನು ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. 1 ಮೀಟರ್‌ ನಷ್ಟು ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದ್ದು, ತೀರ ಪ್ರದೇಶದಿಂದ ದೂರವಿರುವಂತೆ ಸೂಚಿಸಲಾಗಿದೆ.

11 ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ ಸೃಷ್ಟಿಯಾಗಿದ್ದ ಸುನಾಮಿಯಿಂದ ಭಾರಿ ಅನಾಹುತ ಸಂಭವಿಸಿತ್ತು. ಫುಕುಶಿಮಾ ಪರಮಾಣು ರಿಯಾಕ್ಟರ್‌ ತೀವ್ರವಾಗಿ ಹಾನಿಗೀಡಾಗಿ, ವಿಕಿರಣ ಸೋರಿಕೆಯಾಗಿತ್ತು.

Leave a Comment

Your email address will not be published. Required fields are marked *