Ad Widget .

ಸುಳ್ಯ: ನ್ಯಾಯಾಂಗ ತೀರ್ಪು ನಿಂದಿಸಿ ಜಾಲತಾಣಗಳಲ್ಲಿ ಬರವಣಿಗೆ| ಸಂಪಾಜೆಯ ಯುವಕ ಅರೆಸ್ಟ್

Ad Widget . Ad Widget .

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣದಲ್ಲಿ ಹೈಕೋರ್ಟ್ ಹಿಜಾಬ್ ಕುರಿತು ನೀಡಿದ್ದ ಆದೇಶವನ್ನು ಅಸಭ್ಯ ಪದಗಳಿಂದ ಟೀಕಿಸಿದ್ದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

Ad Widget . Ad Widget .

ಬಂಧಿತನನ್ನು ಅಬ್ದುಲ್ ಮುತಾಲಿಬ್ (24)ಎಂದು ಗುರುತಿಸಲಾಗಿದೆ. ಹಿಜಾಬ್ ಶಾಲಾ-ಕಾಲೇಜುಗಳಲ್ಲಿ ನಿಷೇಧ ಕುರಿತಂತೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈ ಕೋರ್ಟ್ ನಿನ್ನೆ ಎತ್ತಿ ಹಿಡಿಯುತ್ತಿದ್ದಂತೆ ಈತ ತೀವ್ರ ಅಸಮಾಧಾನಗೊಂಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ನಿಂದನಾತ್ಮಕ ಪದಗಳನ್ನು ಪ್ರಕಟಿಸಿ ಬೈದಿದ್ದ. ಇದು ವೈರಲ್ ಆಗಿತ್ತು. ಈತನ ವಿರುದ್ಧ ಕೊಡಗು ಸಂಪಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಿನ್ನೆ ರಾತ್ರಿ ಪೊಲೀಸರು ಮುತಾಲಿಬ್ ಅನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿ ಕೊಂಡಿದ್ದಾರೆ. ಆತನನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *