Ad Widget .

ನಾಳೆ(ಮಾ.17) ದೇಶಾದ್ಯಂತ ‘ಜೇಮ್ಸ್’ ಅಬ್ಬರ| ಪುನಿತ್ ಹುಟ್ಟುಹಬ್ಬಕ್ಕೆ ಅಪ್ಪು ಅಭಿನಯದ ಕೊನೆಯ ಚಿತ್ರ ರಿಲೀಸ್

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಮಾ.17ರಂದು ಪುನೀತ್​ ರಾಜ್​ ಕುಮಾರ್​ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇಶಾದ್ಯಂತ ಜೇಮ್ಸ್​ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಪ್ಪು ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

Ad Widget . Ad Widget .

ನಾಳೆ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​​ ಅವರ 47ನೇ ಹಟ್ಟುಹಬ್ಬವಾಗಿದ್ದು,ಅವರು ನಮ್ಮನ್ನಗಲಿ ನಾಲ್ಕು ತಿಂಗಳುಗಳೇ ಕಳೆದಿವೆ. ಈ ನೋವಿನಲ್ಲೂ ಅಪ್ಪು ಅಭಿಮಾನಿಗಳು ಅವರ ಹುಟ್ಟುಹಬ್ಬದ ಜೊತೆಗೆ ಜೇಮ್ಸ್ ಸಿನಿಮಾ ಬಿಡುಗಡೆ ಜಾತ್ರೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಜೇಮ್ಸ್ ಸಿನಿಮಾದ ಅದ್ಧೂರಿ ಸ್ವಾಗತಕ್ಕೆ ಅಭಿಮಾ‌ನಿಗಳು ಸಜ್ಜು
ಜೇಮ್ಸ್ ಚಿತ್ರದ ರಿಲೀಸ್ ದಿನವನ್ನು ಹಬ್ಬದಂತೆ ಆಚರಿಸಲು ರಾಜವಂಶದ ಅಭಿಮಾನಿಗಳು ನಿರ್ಧರಿಸಿದ್ದಾರೆ. ಮಾರ್ಚ್ 17ರಿಂದ 20ರವರೆಗೆ ನಾಲ್ಕು ದಿನಗಳು ಅಪ್ಪು ದಾಸೋಹ ಮಾಡಲು ಸಜ್ಜಾಗಿದ್ದಾರೆ.

ಇದು ಅಭಿಮಾನಿಗಳ ಅಭಿಮಾನದ ಆರಾಧನೆಯಾದರೆ, ಪುನೀತ್ ಇಲ್ಲ ಅನ್ನೋ ನೋವು ಅವರ ಅಭಿಮಾನಿಗಳಿಗೆ ಕಾಡದಿರಲಿ ಎಂದು ಅದ್ಧೂರಿ ಪ್ರಚಾರದ ಮೂಲಕ ಜೇಮ್ಸ್​​​ ಚಿತ್ರವನ್ನು ರಿಲೀಸ್ ಮಾಡಲು ನಿರ್ದೇಶಕ ಚೇತನ್ ಹಾಗೂ ನಿರ್ಮಾಪಕ ಕಿಶೋರ್ ಪ್ಲಾನ್ ಮಾಡಿದ್ದಾರೆ.

4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿರುವ ಜೇಮ್ಸ್​: ಜೇಮ್ಸ್​ ಸಿನಿಮಾ ಸುಮಾರು 4000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಆಂಧ್ರಪ್ರದೇಶದಲ್ಲಿ 200ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಬಿಡುಗಡೆ ಆಗಲಿದ್ದು, ಈ ಜವಾಬ್ದಾರಿಯನ್ನು ತೆಲುಗು ನಟ ಶ್ರೀಕಾಂತ್ ತೆಗೆದುಕೊಂಡಿದ್ದಾರೆ.

ಹೊರ ದೇಶಗಳಲ್ಲೂ ಮಿಂಚಿಲಿರುವ ಜೇಮ್ಸ್; ಕಟೌಟ್ ದಾಖಲೆ : ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು, ಅಪ್ಪು ಯೂತ್ ಬಿಗ್ರೇಡ್ ಅಭಿಮಾನಿಗಳು ಇದೇ ಮೊಟ್ಟ ಮೊದಲ ಬಾರಿಗೆ ಮಾಗಡಿ ರಸ್ತೆಯಲ್ಲಿರೋ ವೀರೇಶ್​ ಥಿಯೇಟರ್​ ಮುಂಭಾಗ ಬರೋಬ್ಬರಿ 30 ಕಟೌಟ್ಸ್​ಗಳನ್ನು ಹಾಕುವ ಮೂಲಕ ದಾಖಲೆ ಬರೆದಿದ್ದಾರೆ.

ಅಪ್ಪು ಸಮಾಧಿಗೆ ಹೆಲಿಕ್ಯಾಪ್ಟರ್​ನಿಂದ ಹೂ ಮಳೆ:

ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ನಾಲ್ಕು ಕಡೆ ಹೆಲಿಕಾಪ್ಟರ್​​​​​ನಿಂದ ಹೂ ಮಳೆ ಸುರಿಸಲು ರಾಜವಂಶದ ಅಭಿಮಾನಿಗಳು ಸಜ್ಜಾಗಿದ್ದಾರೆ. ಬೆಳಗ್ಗೆ 9.30ಕ್ಕೆ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಹೆಲಿಕಾಪ್ಟರ್​​​​ನಿಂದ ಹೂವಿನ ಸುರಿಮಳೆ ಮಾಡಲಿದ್ದಾರೆ.

ರಾಜ್ಯದಲ್ಲಿ ಸುಮಾರು 400ಕ್ಕೂ ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಎಲ್ಲ ಚಿತ್ರಮಂದಿರಗಳಲ್ಲಿ ಸೀಟು ನಂ.17 ಅನ್ನು ಖಾಲಿ ಬಿಡಲಾಗುತ್ತಿದೆ. ಆ ಸೀಟಿನಲ್ಲಿ ಪುನೀತ್ ಕುಳಿತು ನೋಡ್ತಾರೆ ಅನ್ನೋದು ಅಭಿಮಾನಿಗಳ ನಂಬಿಕೆಯಾಗಿದೆ.

ರಾಜವಂಶದ ಅಭಿಮಾನಿಗಳು ಕಮಲಾನಗರದ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ವಿಭಿನ್ನ ಊಟದ ವ್ಯವಸ್ಥೆ ಇದೆ. ಬೆಳಗ್ಗೆ 6 ಗಂಟೆಯ ಶೋ ನೋಡುವುದಕ್ಕೆ ಬರುವ ಜನರಿಗೆ ಕಾಫಿ ಬಿಸ್ಕೆಟ್, 10 ಗಂಟೆ ಶೋಗೆ ದೋಸೆ, 1 ಗಂಟೆ ಶೋಗೆ ಚಿಕನ್ ಬಿರಿಯಾನಿ ಊಟ, 4ನೇ ಶೋಗೆ ಸಮೋಸಾ, 7ನೇ ಶೋಗೆ ಗೋಬಿ ಮಂಚೂರಿಯನ್ನು ಸಿನಿಮಾ ಪ್ರೇಕ್ಷಕರಿಗೆ ನೀಡಲಿದ್ದಾರೆ.

Leave a Comment

Your email address will not be published. Required fields are marked *