ಸಮಗ್ರ ನ್ಯೂಸ್: ಹಿಜಾಬ್ ಧಾರಣೆ ಕುರಿತಂತೆ ಕರ್ನಾಟಕ ಹೈಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದ್ದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ. ಇದರ ಜೊತೆಗೆ ಹಿಜಾಬ್ ಧರಿಸುವುದು ಇಸ್ಲಾಂನ ಕಡ್ಡಾಯ ಭಾಗವಲ್ಲ ಎಂಬ ತೀರ್ಪು ಕೆಲ ಮತಾಂಧ ಶಕ್ತಿಗಳಿಗೆ ಅರಗಿಸಿಕೊಳ್ಳಲಾಗದೇ ಜಾಲತಾಣಗಳಲ್ಲಿ ಕಿಡಿಕಾರುತ್ತಿರುವುದು ಕಂಡುಬಂದಿದೆ.
ಈ ತೀರ್ಪಿನ ವಿರುದ್ದ ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಮರುಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ನಡುವೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಮುಸ್ಲಿಂ ವ್ಯಕ್ತಿಯೋರ್ವ ಪೇಸ್ ಬುಕ್ ನಲ್ಲಿ ಗೀಚಿದ ತುಣುಕೊಂದು ವೈರಲ್ ಆಗಿದೆ.

ಅಬ್ದುಲ್ ಮುತಾಲಿಬ್ ಎಂಬ ಪೇಸ್ ಬುಕ್ ಬಳಕೆದಾರನೋರ್ವ ತೀರ್ಪು ವಿರೋದಿಸಿ ಕಮೆಂಟ್ ಹಾಕಿದ್ದು ಇದರಲ್ಲಿ ಆರ್ ಎಸ್.ಎಸ್ ಅನ್ನು ತುಚ್ಛವಾಗಿ ನಿಂದಿಸಿದ್ದಾನೆ. ಕೇಸರಿ ಶಾಲಿನ ಕುರಿತಾಗಿಯೂ ಪ್ರಸ್ತಾಪವೆತ್ತಿದ್ದು, ಈ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
