Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ರಾಶಿಗಳು ನಮ್ಮ ದಿನನಿತ್ಯದ ಆಗುಹೋಗುಗಳ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ದೈನಂದಿನ ಚಲನೆಗಳಿಗೆ ರಾಶಿ ಹಾಗೂ ನಕ್ಷತ್ರಗಳ‌ ಪ್ರಭಾವವೇ ಕಾರಣವಾಗಿವೆ. ಇವುಗಳ ಪೂರ್ವನಿರ್ಧರಿತ ಭವಿಷ್ಯದಿಂದ ನಾವು ನಿತ್ಯಕರ್ಮಗಳನ್ನು ಪೂರೈಸಬೇಕಿದೆ. ರಾಶಿಗಳ ಪ್ರಭಾವದಿಂದ ಒಳಿತು ಹಾಗೂ ಕೆಡುಕುಗಳು ಉಂಟಾಗುವುದರಿಂದ ನಾವು ಇದರ ಭವಿಷ್ಯ ತಿಳಿದುಕೊಳ್ಳುವುದು ಅವಶ್ಯಕ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಈ ವಾರದ ಭವಿಷ್ಯ ಇಲ್ಲಿ ನೀಡಲಾಗಿದ್ದು, ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಲಾಗಿದೆ. ನಿಮ್ಮ ರಾಶಿಗಳ ಭವಿಷ್ಯ ತಿಳಿದುಕೊಳ್ಳಿ.

Ad Widget . Ad Widget .

ಮೇಷ ರಾಶಿ: ಕೌಟುಂಬಿಕ ಸಮಸ್ಯೆಗಳಿಂದ ಸ್ವಲ್ಪಮಟ್ಟಿಗೆ ಮುಕ್ತಿ ಪಡೆಯಬಹುದು. ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಸುಧಾರಣೆ ಕಂಡುಕೊಳ್ಳುವಿರಿ. ಬಟ್ಟೆ ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ. ಹಣಕಾಸು ಸಂಸ್ಥೆಗಳಿಗೆ ಅಧಿಕಾರಿಗಳ ವ್ಯತಿರಿಕ್ತ ಸಲಹೆಗಳಿಂದ ನಷ್ಟ ಸಂಭವಿಸಬಹುದು.ಲೇವಾದೇವಿಗಾರರು ಸ್ವಲ್ಪ ಎಚ್ಚರದಿಂದ ಇರುವುದು ಒಳ್ಳೆಯದು. ಇಲ್ಲವಾದಲ್ಲಿ ಕಾನೂನಿನ ಹಿಡಿತಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಆಸ್ತಿ ನೋಂದಣಿ ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ಆಸ್ತಿ ಖರೀದಿ ಯತ್ನದಲ್ಲಿ ಯಶಸ್ಸನ್ನು ಕಾಣಬಹುದು. ಕೆಲವು ಮಹಿಳೆಯರಿಗೆ ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುವ ಅವಕಾಶ ಒದಗಿ ಬರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

Ad Widget . Ad Widget .

ವೃಷಭರಾಶಿ: ಹೊಸ ವ್ಯಕ್ತಿಗಳ ಪರಿಚಯವಾಗಿ ಮತ್ತು ಅವರ ಸಹಕಾರದಿಂದ ಕಲಾವಿದರುಗಳಿಗೆ ಗೌರವ ಪ್ರಾಪ್ತಿಯಾಗುತ್ತದೆ. ಅನಿರೀಕ್ಷಿತ ಮೂಲದಿಂದ ಧನಾಗಮನವಾಗಿ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ. ಕಣ್ಣಿನ ಸಮಸ್ಯೆಗಳ ಪರಿಹಾರಕ್ಕೆ ವೃದ್ಧರಿಗೆ ಸಾಮಾಜಿಕ ಕಾರ್ಯಕರ್ತರುಗಳಿಂದ ಸಹಾಯ ದೊರೆಯುತ್ತದೆ. ತರಕಾರಿ, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿ ಅದರ ವ್ಯಾಪಾರಸ್ಥರಿಗೆ ಲಾಭ ದೊರೆಯುತ್ತದೆ. ಸ್ತ್ರೀಯರಿಗೆ ಅತಿಯಾದ ಕೆಲಸದಿಂದ ದೇಹಾಲಸ್ಯ ಉಂಟಾಗುತ್ತದೆ. ಹಿರಿಯರಿಂದ ನಿಮಗೆ ಆಸ್ತಿ ಹಸ್ತಾಂತರ ಆಗುವ ಸಾಧ್ಯತೆ ಇದೆ. ದಿನಸಿ ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಹಿನ್ನಡೆ ಇರಲಿದೆ. ಸಾಲ ಮಾಡುವುದು ಮತ್ತು ಜಾಮೀನು ಕೊಡುವುದು ಸದ್ಯಕ್ಕೆ ಬೇಡ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ.

ಮಿಥುನ ರಾಶಿ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಕುಟುಂಬ ಜೀವನದಲ್ಲಿ ಸಂತೋಷವನ್ನು ಕಾಣುವಿರಿ. ಆಸ್ತಿ ವಿವಾದಗಳಲ್ಲಿ ನಿಮಗೆ ಹೆಚ್ಚು ಅನುಕೂಲ ಆಗುತ್ತದೆ. ನೆರೆಹೊರೆಯವರೊಂದಿಗೆ ವಿರಸ ಖಂಡಿತ ಬೇಡ. ಜಲ ಸಂಬಂಧಿ ಕೆಲಸಗಳನ್ನು ಮಾಡುವವರಿಗೆ ಉತ್ತಮ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಜಂಟಿ ವ್ಯವಹಾರಗಳಲ್ಲಿ ಹೆಚ್ಚಿನ ಕಿರಿಕಿರಿ ಮಾಡಿಕೊಳ್ಳದಿರುವುದು ಉತ್ತಮ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ವಿದ್ಯಾರ್ಥಿಗಳಿಗೆ ಗುರುಗಳಿಂದ‌ ಶ್ಲಾಘನೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಬಹಳ ಉತ್ತಮ. ಕೆಲವು ಮಹಿಳೆಯರ ಇಷ್ಟಾರ್ಥಗಳು ಈಡೇರುತ್ತವೆ.

ಕಟಕ ರಾಶಿ: ಗೃಹ ನಿರ್ಮಾಣ ಕಾರ್ಯಗಳಲ್ಲಿ ಯಶಸ್ಸು ದೊರೆತು ಇದಕ್ಕೆ ಬೇಕಾದ ಸಹಕಾರಗಳು ಮಿತ್ರರಿಂದ ದೊರೆಯುತ್ತವೆ. ಕೆಲವೊಂದು ತುರ್ತು ವಿಷಯಗಳ ಪರಿಹಾರಕ್ಕಾಗಿ ನಿಮ್ಮ ಸಂಬಂಧಿಗಳ ಸಹಾಯವನ್ನು ಪಡೆಯುವಿರಿ. ದೈನಂದಿನ ವ್ಯವಹಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳ ಓದಿನ ವಿಷಯದಲ್ಲಿ ಉತ್ತಮ ವಾರ್ತೆಗಳು ಕೇಳಿಬರುತ್ತವೆ. ಉದ್ದಿಮೆ ನಡೆಸುವವರಿಗೆ ಯಂತ್ರೋಪಕರಣಗಳ ತೊಂದರೆ ಆಗಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಮಾರ್ಗ ಗೋಚರಿಸುತ್ತದೆ. ಕ್ರೀಡಾಪಟುಗಳಿಗೆ ಅನಿರೀಕ್ಷಿತವಾಗಿ ಅವರ ಸಾಮರ್ಥ್ಯ ಹೊರಹೊಮ್ಮುವ ಸಾಧ್ಯತೆಗಳಿವೆ. ಆದಾಯದಷ್ಟೇ ಖರ್ಚು ಇರುತ್ತದೆ. ಹಣ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಳ್ಳಿ. ವಿದೇಶಿ ವ್ಯವಹಾರ ಮಾಡುವವರಿಗೆ ವ್ಯವಹಾರ ಹೆಚ್ಚುತ್ತದೆ. ತಂದೆಯ ವ್ಯವಹಾರದಲ್ಲಿ ನಿಮಗೆ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ.

ಸಿಂಹ ರಾಶಿ: ಬಂಧುಗಳಲ್ಲಿನ ಭಿನ್ನಾಭಿಪ್ರಾಯವನ್ನು ದೂರ ಮಾಡುವಲ್ಲಿ ಸಾಕಷ್ಟು ಸಫಲತೆ ಕಾಣುವಿರಿ. ಭೂ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ತೈಲ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ. ನಿಮ್ಮ ಲೆಕ್ಕಪತ್ರಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಸಂದರ್ಭ ಬರಬಹುದು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಕುಟುಂಬ ಸಮೇತ ಧಾರ್ಮಿಕ ಸ್ಥಳಗಳನ್ನು ನೋಡುವ ಯೋಗವಿದೆ. ತಾಳ್ಮೆಯಿಂದ ಮನೆಯಲ್ಲಿ ಉಂಟಾಗಬಹುದಾದ ಮನಃಸ್ತಾಪವನ್ನು ನಿವಾರಣೆ ಮಾಡಿಕೊಳ್ಳಿರಿ. ಆಪ್ತರು ಎನಿಸಿಕೊಂಡವರಿಂದ ನಿಮ್ಮ ವ್ಯವಹಾರಗಳಲ್ಲಿ ಸಾಕಷ್ಟು ಕಿರಿಕಿರಿ ಅನುಭವಿಸುವಿರಿ. ಆದಾಯ ಮತ್ತು ವೆಚ್ಚ ಸಮಾನವಾಗಿರುತ್ತದೆ.

ಕನ್ಯಾ ರಾಶಿ: ವಿದ್ಯಾರ್ಥಿಗಳಿಗೆ ಅವರ ಸಮಸ್ಯೆಗಳಿಂದ ಮುಕ್ತಿ ಹೊಂದುವ ಅವಕಾಶವಿದೆ. ಮಹಿಳಾ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆತು ಯಶಸ್ಸು ಸಿಗುತ್ತದೆ. ಸರ್ಕಾರಿ ಹುದ್ದೆಯಲ್ಲಿರುವವರಿಗೆ ಭ್ರಷ್ಟಾಚಾರದ ಆರೋಪ ಬರುವ ಸಾಧ್ಯತೆಗಳಿವೆ. ಕೈಗಾರಿಕೋದ್ಯಮಿಗಳಿಗೆ ಸರ್ಕಾರದ ಸಹಾಯಧನ ಬರುವ ಸಾಧ್ಯತೆ. ವೇದಿಕೆ ನಿರ್ಮಾಣ ಮತ್ತು ಒಳಾಂಗಣ ವಿನ್ಯಾಸಗಳನ್ನು ಮಾಡುವವರಿಗೆ ಉತ್ತಮ ಕೆಲಸ ದೊರೆಯುತ್ತದೆ. ನಿಮ್ಮ ಒಳಮನಸ್ಸಿನಲ್ಲಿ ಅವ್ಯಕ್ತ ಭೀತಿ ಇರುತ್ತದೆ. ಆಧ್ಯಾತ್ಮ ಮಾರ್ಗಗಳನ್ನು ಪಾಲನೆ ಮಾಡುವುದರಿಂದ ಮನಸ್ಸಿಗೆ ಸ್ವಲ್ಪ ಸಂತೋಷ ದೊರೆಯುತ್ತದೆ. ಮಕ್ಕಳ ನಡುವೆ ವಾಗ್ವಾದ ನಡೆದು ಭಿನ್ನಾಭಿಪ್ರಾಯಗಳು ಮೂಡಬಹುದು. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

ತುಲಾ ರಾಶಿ: ನಿರುದ್ಯೋಗಿಗಳಿಗೆ ಉದ್ಯೋಗದ ಬಾಗಿಲು ತೆರೆಯುತ್ತದೆ. ಆತುರದ ನಿರ್ಧಾರಗಳಿಂದ ಕೆಲಸ ಕಾರ್ಯಗಳಲ್ಲಿ ವಿಘ್ನವಾಗಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಆಮದು ಮತ್ತು ರಫ್ತು ವ್ಯವಹಾರ ಮಾಡುತ್ತಿರುವವರಿಗೆ ಕಾನೂನಿನ ಸಮಸ್ಯೆಗಳು ಬರಬಹುದು. ಗಣಕಯಂತ್ರ, ಫೋನ್, ಟಿ.ವಿ ಮೊದಲಾದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ಚೇತರಿಕೆಯನ್ನು ಕಾಣಬಹುದು. ನಿಮ್ಮ ಬಂಧುಗಳ ಆಸ್ತಿಯನ್ನು ಖರೀದಿ ಮಾಡುವಿರಿ. ಪಾಲುದಾರಿಕೆ ವ್ಯವಹಾರಗಳಲ್ಲಿ ನಿಮಗೆ ಸ್ವಲ್ಪಮಟ್ಟಿನ ಇರಿಸು ಮುರುಸು ಉಂಟಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಅನುಕೂಲಗಳು ಒದಗಿ ಬರುತ್ತವೆ. ಸಂಗಾತಿಗೆ ತವರುಮನೆಯಿಂದ ಆಸ್ತಿ ದೊರೆಯುವ ಸಾಧ್ಯತೆಗಳಿವೆ.

ವೃಶ್ಚಿಕ ರಾಶಿ: ಕೃಷಿಕರಿಗೆ ಸರ್ಕಾರದಿಂದ ಸಹಾಯಧನದ ರೂಪದಲ್ಲಿ ಕೃಷಿ ಉಪಕರಣಗಳು ದೊರೆಯಬಹುದು. ಉದ್ಯೋಗ ಕ್ಷೇತ್ರದಲ್ಲಿರುವವರಿಗೆ ಒಂದು ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಹಣಕಾಸಿನ ವ್ಯವಹಾರ ನಡೆಸುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಸಾಂಪ್ರದಾಯಿಕ ಕೃಷಿಯನ್ನು ಮಾಡುವವರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಮತ್ತು ಅವರು ಬೆಳೆದ ವಸ್ತುಗಳಿಗೆ ಹೆಚ್ಚಿನ ಹಣ ದೊರೆಯುತ್ತದೆ. ಮಹಿಳಾ ರಾಜಕಾರಣಿಗಳಿಗೆ ರಾಜಕೀಯದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗುವ ಸಂದರ್ಭವಿದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಖರ್ಚು ಹೆಚ್ಚಾಗುವುದರಿಂದ ಹಣದ ಸಮತೋಲನ ಅಗತ್ಯ. ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ಅಭಿವೃದ್ಧಿ ಇರುತ್ತದೆ. ಕುಟುಂಬದಲ್ಲಿ ಇದ್ದ ಅಶಾಂತಿ ತಾಳ್ಮೆಯಿಂದ ಇದ್ದಲ್ಲಿ ಕರಗಿಹೋಗುತ್ತದೆ.

ಧನಸ್ಸು ರಾಶಿ: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುವುದು ಕಡಿಮೆ. ಮಹಿಳೆಯರಿಗೆ ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಸಹಕಾರ ದೊರೆಯುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವಾದರಗಳು ದೊರೆಯುವ ಸಾಧ್ಯತೆ ಇದೆ. ಪ್ರಗತಿಯಲ್ಲಿರುವ ಮನೆ ಕೆಲಸಗಳಿಗೆ ಬೇಕಾದ ಹಣದ ಸಹಾಯ ದೊರೆಯುತ್ತದೆ. ಉದ್ದಿಮೆದಾರರು ಬಹಳ ದಿನಗಳಿಂದ ಕಾಯುತ್ತಿದ್ದ ಸರ್ಕಾರಿ ಆದೇಶ ಮತ್ತು ಸರ್ಕಾರದ ಮಂಜೂರಾತಿ ದೊರೆಯಬಹುದು. ದಕ್ಷತೆಯಿಂದ ಕಾರ್ಯನಿರ್ವಹಿಸಿ ಉದ್ದಿಮೆಯನ್ನು ಯಶಸ್ಸಿನತ್ತ ತರುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ವೃತ್ತಿಯಲ್ಲಿದ್ದ ಹಿತಶತ್ರುಗಳು ದೂರವಾಗುವರು. ಸಂಸಾರದಲ್ಲಿ ಸಂತೋಷ ಮೂಡಿ ಆನಂದಿಸುವಿರಿ. ದೊಡ್ಡಮಟ್ಟದ ಹೂಡಿಕೆ ಸದ್ಯಕ್ಕೆ ಬೇಡ.

ಮಕರ ರಾಶಿ: ಸಾಕಷ್ಟು ಅಡೆತಡೆಗಳ ನಡುವೆಯೂ ಶುಭ ಕಾರ್ಯವೊಂದನ್ನು ಮಾಡಿ ಮುಗಿಸುವಿರಿ. ಔಷಧಿ ತಯಾರಕರಿಗೆ ಹೆಚ್ಚಿನ ತಯಾರಿಕಾ ಆದೇಶಗಳು ದೊರೆತು ಮುಂಗಡ ಹಣ ದೊರೆಯುತ್ತದೆ. ನ್ಯಾಯವಾದಿಗಳು ತಮ್ಮ ಕೋರ್ಟ್ ಕೇಸುಗಳಲ್ಲಿ ಯಶಸ್ಸನ್ನೂ ಕಾಣುವರು. ಉದ್ಯೋಗಿಗಳಿಗೆ ಅವರ ಉದ್ಯೋಗದಲ್ಲಿ ಅಭಿವೃದ್ಧಿಯಾಗಿ ಹೆಚ್ಚಿನ ಹಣ ದೊರೆಯುತ್ತದೆ. ಸಗಟು ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಬೇಡಿಕೆ ಬಂದು ಹೆಚ್ಚಿನ ದಾಸ್ತಾನು ಸಹ ದೊರೆಯುತ್ತದೆ. ನಿಮ್ಮ ಆದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಇದ್ದ ಒತ್ತಡವನ್ನು ನಿವಾರಿಸಿ ಕೊಳ್ಳುವಿರಿ. ಸರ್ಕಾರದ ಕಡೆಯಿಂದ ಬರಬೇಕಾಗಿದ್ದ ಹಣ ಈಗ ಬರುತ್ತದೆ. ಧಾರ್ಮಿಕ ಕೆಲಸಗಳನ್ನು ಮಾಡುವವರಿಗೆ ಬೇಕಾದ ಸಹಕಾರ ಸಮಾಜದಿಂದ ದೊರೆಯುತ್ತದೆ.

ಕುಂಭ ರಾಶಿ: ಹಿರಿಯರು ಬಂಧುಗಳ ಗೌರವಕ್ಕೆ ಪಾತ್ರರಾಗುವರು. ಮನರಂಜನಾ ಕಲೆಯನ್ನು ಪ್ರದರ್ಶಿಸುವವರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಏರಿಕೆ ಕಾಣಬಹುದು. ಒಂದು ನೂತನ ವ್ಯವಹಾರದಲ್ಲಿ ಹಣ ತೊಡಗಿಸುವ ಸಾಧ್ಯತೆಯಿದೆ. ಎಚ್ಚರದಿಂದ ಪರಿಶೀಲಿಸಿ ಹಣ ತೊಡಗಿಸಿರಿ. ಕೆಲವರಿಗೆ ಉದ್ಯೋಗ ನಷ್ಟ ಆಗಬಹುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅತಿ ಅಗತ್ಯ. ವಿದ್ಯಾರ್ಥಿಗಳಿಗೆ ಉತ್ತಮ ಸಹಾಯದ ಜೊತೆಗೆ ಉತ್ತಮ ಫಲಿತಾಂಶವನ್ನು ಪಡೆಯುವ ಯೋಗವಿದೆ. ಮಹಿಳೆಯರಿಗೆ ಅಭಿವೃದ್ಧಿ ಯೋಗವಿದೆ. ಹಣದ ಒಳಹರಿವು ನಿಮ್ಮ ಅಗತ್ಯ ಮತ್ತು ಅಪೇಕ್ಷೆಯಷ್ಟಿರುತ್ತದೆ. ಆರೋಗ್ಯದಲ್ಲಿ ಇದ್ದ ವ್ಯತ್ಯಾಸಗಳು ಸರಿಯಾಗುತ್ತವೆ.

ಮೀನ ರಾಶಿ: ಉದ್ಯೋಗದಲ್ಲಿರುವ ಮಹಿಳೆಯರು ಅವರ ನಡವಳಿಕೆಗಳಿಂದ ಟೀಕೆಗೊಳಗಾಗುವರು. ಅಧಿಕಾರಿಗಳ ಅಸಹಕಾರದಿಂದ ಕೆಲವು ಕೆಲಸಗಳಲ್ಲಿ ಹಿನ್ನಡೆಯನ್ನು ಕಾಣಬಹುದು. ಸರ್ಕಾರಿ ಉದ್ಯೋಗದಲ್ಲಿರುವವರು ವರ್ಗಾವಣೆಯನ್ನು ನಿರೀಕ್ಷಿಸಬಹುದು. ನಿಮ್ಮ ಕೆಲವು ಕೆಲಸಗಳಿಂದ ನೆರೆ ಹೊರೆಯವರ ವಿರೋಧ ಕಟ್ಟಿಕೊಳ್ಳುವಿರಿ. ಧನ ಆದಾಯವು ಉತ್ತಮವಾಗಿರುತ್ತದೆ. ಅನ್ಯರ ಕಿವಿ ಮಾತಿಗೆ ಅತಿ ಮಾನ್ಯತೆ ಬೇಡ. ವಿನಾಕಾರಣ ಬೇರೆಯವರನ್ನು ದೂಷಿಸಲು ಹೋಗಬೇಡಿರಿ. ನಿಂತುಹೋಗಿದ್ದ ವೃತ್ತಿ ಜೀವನವು ಪುನಃ ಆರಂಭವಾಗಬಹುದು. ಗುತ್ತಿಗೆದಾರರು ಕಾರ್ಮಿಕರ ಸಮಸ್ಯೆಯನ್ನು ಕಾಣಬಹುದು. ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ ಸಫಲವಾಗಲಿವೆ. ಬೀಜೋತ್ಪಾದನೆ ಮಾಡುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ.

Leave a Comment

Your email address will not be published. Required fields are marked *