ನೆಲ್ಯಾಡಿ: ನೆಲ್ಯಾಡಿಯ ಕೊಣಾಲು ಗ್ರಾಮದಲ್ಲಿ ರಬ್ಬರ್ ಟ್ಯಾಪಿಂಗ್‌ಗೆ ಹೋಗಿದ್ದ ವೇಳೆ ವಿಷಕಾರಿ ಹಾವು ಕಡಿದು ಗೋಳಿತ್ತೊಟ್ಟು ಮಾಜಿ ಗ್ರಾ.ಪಂ. ಸದಸ್ಯೆಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಕೊಣಾಲು ಗ್ರಾಮದ ಆರ್ಲ ನಿವಾಸಿ ರೋಸಮ್ಮ ಪಿ.ಡಿ.ಯಾನೆ ವಲ್ಸಮ್ಮ(52) ಎಂದು ಗುರುತಿಸಲಾಗಿದೆ.
ಮಾ.11ರಂದು ರೋಸಮ್ಮರವರು ರಾತ್ರಿ ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್‌ಗೆ ಹೋಗಿದ್ದ ವೇಳೆ ಅವರಿಗೆ ವಿಷಕಾರಿ ಹಾವೊಂದು ಕಡಿದಿದ್ದು, ತಕ್ಷಣ ರೋಸಮ್ಮರವರು ಅಲ್ಲಿಂದ ಪಕ್ಕದ ಮನೆಗೆ ಬಂದಿದ್ದು ಅಲ್ಲಿ ಕುಸಿದು ಬಿದ್ದರು.
ಇನ್ನು ತಕ್ಷಣ ಅವರನ್ನು ನೆಲ್ಯಾಡಿಯ ಆಸ್ಪತ್ರೆಯೊಂದಕ್ಕೆ ಕರೆತರಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.